ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಚಾರ ದಟ್ಟಣೆ ತಗ್ಗಿಸಲು ಬನಶಂಕರಿ ರಿಂಗ್ ರಸ್ತೆ ಮೇಲೆ ಫ್ಲೈಓವರ್?

|
Google Oneindia Kannada News

ಬೆಂಗಳೂರು, ಜೂನ್ 19: ಸಂಚಾರ ದಟ್ಟಣೆಯನ್ನು ತಗ್ಗಿಸಲು ಬನಶಂಕಿ ರಿಂಗ್ ರಸ್ತೆ ಮೇಲೆ ಫ್ಲೈಓವರ್ ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ.ವೀರಭದ್ರನಗರ ಜಂಕ್ಷನ್‌ನಲ್ಲಿ ಗ್ರೇಡ್ ಸಪರೇಟರ್ ನಿರ್ಮಿಸಲಾಗುತ್ತಿದೆ.

ಮೈಸೂರು ರಸ್ತೆ ಕಡೆಯಿಂದ ಹೊರಡುವ ಈ ಹೊರ ವರ್ತುಲ ರಸ್ತೆಯು ನೈಸ್ ಹೆದ್ದಾರಿ ಮೇಲಿನ ಸೇತುವೆ ಇಳಿದರೆ ಕವಲುದಾರಿಗಳು ಆರಂಭವಾಗುತ್ತವೆ. ಈ ಮಾರ್ಗದಲ್ಲಿ ಸಾಕಷ್ಟು ಟ್ರಾಫಿಕ್ ಸಿಗ್ನಲ್‌ಗಳಿವೆ. ಇಲ್ಲಿ ಉಂಟಾಗುವ ಟ್ರಾಫಿಕ್ ಜಾಮ್‌ನಿಂದ ಜನರು ಪರದಾಡುವಂತಾಗಿದೆ.

ಬೆಂಗಳೂರಿನ ಈ ವೃತ್ತಗಳಲ್ಲಿ ಅತಿ ಹೆಚ್ಚು ಮಾಲಿನ್ಯ, ಕಾರಣಗಳೇನು? ಬೆಂಗಳೂರಿನ ಈ ವೃತ್ತಗಳಲ್ಲಿ ಅತಿ ಹೆಚ್ಚು ಮಾಲಿನ್ಯ, ಕಾರಣಗಳೇನು?

ಕೆಇಬಿ ಜಂಕ್ಷನ್, ಕಿತ್ತೂರು ರಾಣಿ ಚೆನ್ನಮ್ಮ ಮೇಲ್ಸೇತುವೆ, ಕದಿರೇನಹಳ್ಳಿ ಅಂಡರ್ ಪಾಸ್, ವಿಶ್ವನಾಥ ಅಂಡರ್ ಪಾಸ್, ದಾಲ್ಮಿಯಾ ಜಂಕ್ಷನ್ ಮೇಲ್ಸೇತುವೆಗಳು ನಿರ್ಮಾಣವಾದ ಬಳಿಕ ಸವಾರರಿಗೆ ಸ್ವಲ್ಪ ನೆಮ್ಮದಿ ತಂದಿದೆ.

New flyover at Banashankari ring road

ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಲ್ಲಿ ಮೈಸೂರು ರಸ್ತೆಯಿಂದ ಸಿಲ್ಕ್‌ಬೋರ್ಡ್ ಜಂಕ್ಷನ್‌ವರೆಗೆ 7.5 ಕಿ.ಮೀ ಉದ್ದದ ಹೊರವರ್ತುಲ ರಸ್ತೆಯನ್ನು 153.42 ಕೋಟಿ ವೆಚ್ಚದಲ್ಲಿ ಸಿಗ್ನಲ್‌ ಮುಕ್ತ ಕಾರಿಡಾರ್‌ ಆಗಿ ಪರಿವರ್ತಿಸಲಾಗುತ್ತಿದೆ.

ಒಂದು ಕಿಲೋಮೀಟರ್ ಉದ್ದದ ಮೇಲ್ಸೇತುವೆ ನಿರ್ಮಾಣಕ್ಕೆ 80-100 ಕೋಟಿ ರೂ ವೆಚ್ಚವಾಗಲಿದೆ. ಕತ್ತರಿಗುಪ್ಪೆ ಜಂಕ್ಷನ್‌ನಲ್ಲಿ ಕೆಳ ಸೇತುವೆ ನಿರ್ಮಾಣಕ್ಕೆ ಒದಗಿಸಿದ್ದ 17.82 ಕೋಟಿ ರೂ ಮತ್ತು ಜೆಡಿ ಮರ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ನೀಡಿದ್ದ 24.03 ಕೋಟಿ ರೂಗಳನ್ನು ಒಂದು ಕಿ.ಮೀ ಮೇಲ್ಸೇತುವೆ ನಿರ್ಮಾಣಕ್ಕೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಉಳಿದ 50 ಕೋಟಿ ರೂ ಅನುದಾನ ಕೋರಿ ಸರ್ಕಾರಕ್ಕ ಮನವಿಯನ್ನೂ ಸಲ್ಲಿಸಲಾಗಿದೆ.

ಹೊಸಕೆರೆಹಳ್ಳಿಯ ನೈಸ್ ರಸ್ತೆ ಸಮೀಪದ ವೀರಭದ್ರನಗರ ಸಿಗ್ನಲ್‌ನಲ್ಲಿ ಗ್ರೇಡ್ ಸಪರೇಟರ್ ನಿರ್ಮಾಣಕ್ಕೆ ಪಾಲಿಕೆಯು ವಿಸ್ತೃತ ಯೋಜನೆ ವರದಿಯನ್ನು ಸಿದ್ಧಪಡಿಸುತ್ತಿದೆ.

English summary
BBMP want to construct new flyover at Banashankari ring road to over come the traffic jam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X