ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗರೇ ಎಚ್ಚರ; ಮಾರುಕಟ್ಟೆ ಹೊಸ ಕೊರೊನಾ ಹಾಟ್‌ಸ್ಪಾಟ್!

|
Google Oneindia Kannada News

ಬೆಂಗಳೂರು, ಜುಲೈ 29; ಬೆಂಗಳೂರು ನಗರದಲ್ಲಿ 376 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಬಿಬಿಎಂಪಿ ಹೊಸ ಪ್ರಕರಣಗಳ ಮೂಲ ಪತ್ತೆ ಹಚ್ಚಲು ಅಧ್ಯಯನವನ್ನು ನಡೆಸಿದೆ. ಹೆಚ್ಚು ಜನಸಂದಣಿ ಇರುವ ಮಾರುಕಟ್ಟೆಗಳು ಸೋಂಕು ಹರಡುವ ಪ್ರದೇಶವಾಗಿದೆ.

ವಾರ್ಡ್‌ ನಂಬರ್ 57ರ ಸಿ. ವಿ. ರಾಮನ್ ನಗರ ಆರು ಕ್ಲಸ್ಟರ್‌ನಲ್ಲಿ 25 ರಿಂದ 27 ಹೊಸ ಕೋವಿಡ್ ಪ್ರಕರಣ ದಾಖಲಾಗಿತ್ತು. ಈ ಜನರ ಟ್ರಾವೆಲ್ ಹಿಸ್ಟರಿ ಹುಡುಕಿ ಹೊರಟ ಬಿಬಿಎಂಪಿ ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿದ್ದನ್ನು ಪತ್ತೆ ಹಚ್ಚಿದೆ.

 ಕೇರಳದಲ್ಲಿ ಕೋವಿಡ್ ಪರಿಸ್ಥಿತಿ ಕೈ ಮೀರಿದೆಯೇ, ಸರ್ಕಾರದ ತಜ್ಞರು ಹೇಳಿದ್ದೇನು? ಕೇರಳದಲ್ಲಿ ಕೋವಿಡ್ ಪರಿಸ್ಥಿತಿ ಕೈ ಮೀರಿದೆಯೇ, ಸರ್ಕಾರದ ತಜ್ಞರು ಹೇಳಿದ್ದೇನು?

ಹೊಸ ಪ್ರಕರಣಗಳ ಹಬ್ಬುವಿಕೆ ಮಾಹಿತಿ ಶೀಟ್‌ನಲ್ಲಿ ನೋಡಿದಾಗ ಎಲ್ಲರ ಟ್ರಾವೆಲ್ ಹಿಸ್ಟರಿ ಮಾರುಕಟ್ಟೆಯಾಗಿದೆ. ಆದ್ದರಿಂದ ಮಾರುಕಟ್ಟೆ ಪ್ರದೇಶದಲ್ಲಿ ಹೆಚ್ಚಿನ ಕಣ್ಗಾವಲು ಇಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೇಶದಲ್ಲಿ ಮತ್ತೆ 4 ಲಕ್ಷ ದಾಟಿದ ಕೊರೊನಾ ಸಕ್ರಿಯ ಪ್ರಕರಣದೇಶದಲ್ಲಿ ಮತ್ತೆ 4 ಲಕ್ಷ ದಾಟಿದ ಕೊರೊನಾ ಸಕ್ರಿಯ ಪ್ರಕರಣ

New Covid Cases In Bengaluru Has Travel History To Market

ಸಿಬ್ಬಂದಿ ಕೊರತೆಯ ಕಾರಣ ಹೊಸ ಮತ್ತು ಹಳೆಯ ಮಾರುಕಟ್ಟೆಗಳಲ್ಲಿ ಕಣ್ಗಾವಲು ಇಡುವುದು ಬಿಬಿಎಂಪಿಗೆ ಸವಾಲು ಆಗಿದೆ. ಕೆ. ಆರ್. ಮಾರುಕಟ್ಟೆ, ಕಲಾಸಿಪಾಳ್ಯ, ಯಶವಂತಪುರದಲ್ಲಿ ಮಾತ್ರ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗುತ್ತಿದೆ.

ಕೋವಿಡ್ ಸಂಖ್ಯೆ ಕುಸಿತ; ಕೇರ್ ಸೆಂಟರ್‌ ಮುಚ್ಚಿದ ಬಿಬಿಎಂಪಿ ಕೋವಿಡ್ ಸಂಖ್ಯೆ ಕುಸಿತ; ಕೇರ್ ಸೆಂಟರ್‌ ಮುಚ್ಚಿದ ಬಿಬಿಎಂಪಿ

ಬಿಬಿಎಂಪಿ ಒಟ್ಟು 54 ತಂಡಗಳನ್ನು ಮಾಡಿದೆ, ಒಂದು ತಂಡದಲ್ಲಿ 4 ಮಾರ್ಷಲ್‌ಗಳಿದ್ದಾರೆ. ಬೆಳಗ್ಗೆ 6 ರಿಂದ ಮಧ್ಯಾಹ್ನ 2, ಮಧ್ಯಾಹ್ನ 2 ರಿಂದ ರಾತ್ರಿ 8 ಗಂಟೆಯ ತನಕ ಪ್ರತಿ ವಿಭಾಗದಲ್ಲೂ ತಂಡ ಕಾರ್ಯ ನಿರ್ವಹಣೆ ಮಾಡುತ್ತಿದೆ.

ಹೊಸ ಪ್ರಕರಣ ಏರಿಕೆ; ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಬೆಂಗಳೂರು ನಗರದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಕಳೆದ 7 ದಿನಗಳಲ್ಲಿ 2731 ಹೊಸ ಪ್ರಕರಣ ನಗರದಲ್ಲಿ ದಾಖಲಾಗಿದೆ.

ಅನ್‌ಲ್‌ಕ್ ಘೋಷಣೆ ಬಳಿಕ ಮಾರುಕಟ್ಟೆಗಳಿಗೆ ಭೇಟಿ ನೀಡುವ ಜನರ ಸಂಖ್ಯೆಯೂ ಹೆಚ್ಚಾಗುತ್ತಿದೆ. ವಾರಂತ್ಯದಲ್ಲಿ ಶೇ 40ರಷ್ಟು ಜನರು ಮಾರುಕಟ್ಟೆಗಳಿಗೆ ಭೇಟಿ ನೀಡುತ್ತಿದ್ದಾರೆ.

Recommended Video

Ind vs SL ಅಂತಿಮ ಟಿ20 ಪಂದ್ಯಗಳಿಗೆ ಲಭ್ಯ ಆಟಗಾರರ ಪಟ್ಟಿ | Oneindia Kannada

ಜೂನ್ 28ರ ಹೆಲ್ತ್ ಬುಲೆಟಿನ್ ಪ್ರಕಾರ ಬೆಂಗಳೂರು ನಗರದಲ್ಲಿ 376 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 8,176 ಆಗಿದೆ.

English summary
BBMP found that people in the city newly infected with Covid-19 has recently visited the market. Take care before movement in local markets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X