ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಕೋವಿಡ್ ಸೋಂಕು ಇಳಿಮುಖವೋ?, ಪರೀಕ್ಷೆ ಕಡಿಮೆಯೋ?

|
Google Oneindia Kannada News

ಬೆಂಗಳೂರು, ಮೇ 12; ಬೆಂಗಳೂರು ನಗರದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಕಳೆದ 24 ಗಂಟೆಯಲ್ಲಿ ನಗರದಲ್ಲಿ 16,286 ಪ್ರಕರಣಗಳು ದಾಖಲಾಗಿವೆ.

ಮಂಗಳವಾರ ಬೆಂಗಳೂರಿನಲ್ಲಿ 15,879 ಪ್ರಕರಣ ದಾಖಲಾಗಿತ್ತು. ಕಳೆದ ಮೂರು ದಿನಗಳಿಂದ ಸತತವಾಗಿ ಹೊಸ ಪ್ರಕರಣ ಇಳಿಮುಖವಾಗುತ್ತಿದೆ. ಪರೀಕ್ಷೆಗಳ ಸಂಖ್ಯೆ ಇಳಿಕೆಯಾಗಿದೆಯೇ? ಎಂಬ ಪ್ರಶ್ನೆ ಎದುರಾಗಿದೆ.

ಕರ್ನಾಟಕ; 39,998 ಹೊಸ ಕೋವಿಡ್ ಪ್ರಕರಣ ದಾಖಲು ಕರ್ನಾಟಕ; 39,998 ಹೊಸ ಕೋವಿಡ್ ಪ್ರಕರಣ ದಾಖಲು

ಏಪ್ರಿಲ್ 20ರ ಬಳಿಕ ಬೆಂಗಳೂರು ನಗರದಲ್ಲಿ ಕೋವಿಡ್ ಪರೀಕ್ಷೆಯಲ್ಲಿ ಇಳಿಮುಖವಾಗುತ್ತಿದೆ. ಏಪ್ರಿಲ್ 13 ರಿಂದ 20ರ ತನಕ ಪ್ರತಿದಿನ ಸರಾಸರಿ 85,829 ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ಆದರೆ ಕಳೆದ 7 ದಿನಗಳಲ್ಲಿ ಸರಾಸರಿ ಪರೀಕ್ಷೆ ನಡೆಸಿದ ಮಾದರಿಗಳ ಸಂಖ್ಯೆ 53,114.

ಕರ್ನಾಟಕ; 18-44 ಲಸಿಕೆ ಹಾಕುವ ಕಾರ್ಯ ಸ್ಥಗಿತ ಕರ್ನಾಟಕ; 18-44 ಲಸಿಕೆ ಹಾಕುವ ಕಾರ್ಯ ಸ್ಥಗಿತ

New Covid Cases Came Down In Bengaluru All Eyes On Lower Testing

ಏಪ್ರಿಲ್ 30ರಂದು ಬೆಂಗಳೂರಿನಲ್ಲಿ 26,756 ಹೊಸ ಪ್ರಕರಣ ದಾಖಲಾಗಿತ್ತು. ಮೇ 11ರಂದು 15,879 ಪ್ರಕರಣ ಪತ್ತೆಯಾಗಿದೆ. ಐಸಿಎಂಆರ್ ಪರೀಕ್ಷೆ ಕುರಿತು ಹೊಸ ಮಾರ್ಗಸೂಚಿ ನೀಡಿದೆ. ಇದರಿಂದಾಗಿ ಪರೀಕ್ಷೆ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಬಿಬಿಎಂಪಿ ಹೇಳಿದೆ.

ಬೆಂಗಳೂರಿನಿಂದ ಸಾಮೂಹಿಕ ವಲಸೆ; ಆತಂಕ ವ್ಯಕ್ತಪಡಿಸಿದ ತಜ್ಞರು ಬೆಂಗಳೂರಿನಿಂದ ಸಾಮೂಹಿಕ ವಲಸೆ; ಆತಂಕ ವ್ಯಕ್ತಪಡಿಸಿದ ತಜ್ಞರು

ಕೋವಿಡ್ 2ನೇ ಅಲೆ ಆರಂಭವಾದ ಬಳಿಕ ಆಂಟಿಜೆನ್ ಪರೀಕ್ಷೆಗಳನ್ನು ಗಣನೀಯವಾಗಿ ಇಳಿಸಲಾಗಿದೆ. ಈ ಪರೀಕ್ಷೆಯಲ್ಲಿ ಶೇ 67 ರಿಂದ 70ರಷ್ಟು ಮಾತ್ರ ಸೋಂಕು ಪತ್ತೆಯಾಗುವ ಸಾಧ್ಯತೆ ಇರುತ್ತದೆ. ನಗೆಟಿವ್ ಸಹ ಬರುವ ಸಾಧ್ಯತೆ ಇದೆ. ಐಸಿಎಂಆರ್ ಹೊಸ ಮಾರ್ಗಸೂಚಿಯಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದೆ.

ಬೆಂಗಳೂರು ನಗರದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾದ ಬಗ್ಗೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಟ್ವೀಟ್ ಮಾಡಿದ್ದಾರೆ. ಕಳೆದ 24 ಗಂಟೆಯಲ್ಲಿ 16,286 ಪ್ರಕರಣ ದಾಖಲಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3,60,619.

"60 ದಿನಗಳ ನಂತರ ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಹೊಸ ಪ್ರಕರಣಗಳನ್ನು ಮೀರಿಸಿದೆ. ಬುಧವಾರ ಬೆಂಗಳೂರಿನಲ್ಲಿ 16,286 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 18,089 ಜನ ಗುಣಮುಖ ಹೊಂದಿದ್ದಾರೆ" ಎಂದು ತಿಳಿಸಿದ್ದಾರೆ.

Recommended Video

Covishield ತೆಗೆದುಕೊಂಡು ಮೇಲೆ ಏನೆಲ್ಲಾ ಪರಿಣಾಮವಾಗಿದೆ | Oneindia Kannada

English summary
Bengaluru new Covid cases came down to 15,879. Question raised on lower testing. From last four weeks testing numbers have declined dramatically.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X