ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೈಸ್ ರಸ್ತೆ ಮೂಲಕ ಎಲೆಕ್ಟ್ರಾನಿಕ್ ಸಿಟಿಗೆ ಬಿಎಂಟಿಸಿ ಬಸ್

|
Google Oneindia Kannada News

ಬೆಂಗಳೂರು, ಮಾ.5 : ಎಲೆಕ್ಟ್ರಾನಿಕ್ ಸಿಟಿ ತಲುಪಲು ಕಷ್ಟಪಡುವವರಿಗೆ ಸಿಹಿಸುದ್ದಿ. ಸದ್ಯ, ಇರುವ ಪ್ರಯಾಣದರದ ಜೊತೆಗೆ 15 ರೂ. ಹೆಚ್ಚು ಪಾವತಿ ಮಾಡಿದರೆ 45 ನಿಮಿಷಗಳಲ್ಲಿ ನಿಗದಿತ ಸ್ಥಳದಿಂದ ನೈಸ್ ರಸ್ತೆ ಮೂಲಕ ಎಲೆಕ್ಟ್ರಾನಿಕ್ ಸಿಟಿ ತಲುಪಬಹುದು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನೈಸ್ ರಸ್ತೆಯಲ್ಲಿ ತನ್ನ ಸೇವೆಯನ್ನು ಆರಂಭಿಸಿದೆ. ನೈಸ್ ರಸ್ತೆ ಮೂಲಕ ಎಲೆಕ್ಟ್ರಾನಿಕ್ ಸಿಟಿ ತಲುಪುವ ನೂತನ ಬಸ್ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಬುಧವಾರ ಚಾಲನೆ ನೀಡಿದ್ದಾರೆ. [ಬಿಎಂಟಿಸಿ ಆಪ್: ಬೆರಳ ತುದಿಯಲ್ಲೇ ಮಾಹಿತಿ]

BMTC

ಸದ್ಯ, ಪೀಕ್‌ ಅವರ್‌ನಲ್ಲಿ ಎಲೆಕ್ಟ್ರಾನಿಕ್‌ ಸಿಟಿ ತಲುಪಲು ಒಂದು ಗಂಟೆಗೂ ಹೆಚ್ಚು ಸಮಯಬೇಕು. ಆದರೆ, 15 ರೂ. ಹೆಚ್ಚುವರಿ ಪ್ರಯಾಣದರ ಪಾವತಿ ಮಾಡಿದರೆ, 45 ನಿಮಿಷದಲ್ಲಿ ನಿಗದಿತ ಸ್ಥಳದಿಂದ ಎಲೆಕ್ಟ್ರಾನಿಕ್ ಸಿಟಿ ತಲುಪಬಹುದು. ತ್ವರಿತವಾಗಿ ಬಸ್ ಸೇವೆ ಒದಗಿಸಲು ಈ ಸೇವೆ ಆರಂಭಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. [ವೈಟ್ ಫೀಲ್ಡ್ ನಲ್ಲಿ ಚಕ್ರ ಸಾರಿಗೆ ಸೇವೆ]

ಎಲ್ಲಿಂದ ಈ ಸೇವೆ : ನೈಸ್ ರಸ್ತೆ ಮೂಲಕ ಎಲೆಕ್ಟ್ರಾನಿಕ್ ಸಿಟಿ ತಲುಪುವ ಸೇವೆ ಜಯದೇವ, ಬನಶಂಕರಿ, ಶ್ರೀನಗರ, ವಿಜಯನಗರ ಟಿಟಿಎಂಸಿ, ಬಿಇಎಂಎಲ್‌ 5ನೇ ಹಂತ, ಸುಮನಹಳ್ಳಿ, ಯಶವಂತಪುರ, ಬಸವೇಶ್ವರನಗರದಿಂದ ಲಭ್ಯವಿದೆ.

ಈ ಮಾರ್ಗದಲ್ಲಿ ಪ್ರಯಾಣಿಸುವವರು ಮಾಸಿಕ ಪಾಸು, ವಾರ್ಷಿಕ ಪಾಸು ಸೇರಿದಂತೆ ಎಲ್ಲ ರೀತಿಯ ಪಾಸುಗಳಿಗೂ ಹೆಚ್ಚುವರಿ 15 ರೂ. ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಹೆಚ್ಚು ಶುಲ್ಕ ಪಾವತಿ ಮಾಡಿ ಸಂಚಾರ ದಟ್ಟಣೆ ಇಲ್ಲದೇ ಎಲೆಕ್ಟ್ರಾನಿಕ್ ಸಿಟಿ ತಲುಪಬಹುದು.

ಮಾರ್ಗದ ವಿವರಗಳು

* ಜಯದೇವ-ಎಲೆಕ್ಟ್ರಾನಿಕ್ ಸಿಟಿ : ಹುಲಿಮಾವು ಗೇಟ್‌, ಗೊಟ್ಟಿಗೆರೆ, ನೈಸ್‌ ರಸ್ತೆ
* ಬನಶಂಕರಿ-ಎಲೆಕ್ಟ್ರಾನಿಕ್ ಸಿಟಿ : ಕೋಣನಕುಂಟೆ ಕ್ರಾಸ್‌, ತಲಘಟ್ಟಪುರ
* ಶ್ರೀನಗರ-ಎಲೆಕ್ಟ್ರಾನಿಕ್ ಸಿಟಿ : ಹೊಸಕೆರೆಹಳ್ಳಿ ಕ್ರಾಸ್‌, ಪಿಇಎಸ್‌ ಕಾಲೇಜು, ನೈಸ್‌ ರಸ್ತೆ
* ವಿಜಯನಗರ-ಎಲೆಕ್ಟ್ರಾನಿಕ್ ಸಿಟಿ : ಚಂದ್ರಲೇಔಟ್‌, ನಾಗರಬಾವಿ ಸರ್ಕಲ್‌, ನೈಸ್‌ ರಸ್ತೆ
* ಬಿಇಎಂಎಲ್‌ 5ನೇ ಹಂತ-ಎಲೆಕ್ಟ್ರಾನಿಕ್ ಸಿಟಿ : ರಾಜರಾಜೇಶ್ವರಿ ಗೇಟ್‌, ಕೆಂಗೇರಿ, ನೈಸ್‌ ರಸ್ತೆ
* ಸುಮನಹಳ್ಳಿ-ಎಲೆಕ್ಟ್ರಾನಿಕ್ ಸಿಟಿ : ಸುಂಕದಕಟ್ಟೆ, ಗೊಲ್ಲರಹಟ್ಟಿ, ನೈಸ್‌ ರಸ್ತೆ
* ಯಶವಂತಪುರ-ಎಲೆಕ್ಟ್ರಾನಿಕ್ ಸಿಟಿ : ಜಾಲಹಳ್ಳಿ ಕ್ರಾಸ್‌, ಅಂಚೆಪಾಳ್ಯ
* ಜಯನಗರ ಟಿಟಿಎಂಸಿ- ಎಲೆಕ್ಟ್ರಾನಿಕ್ ಸಿಟಿ : ಅತ್ತಿಗುಪ್ಪೆ, ಪಿಇಎಸ್‌ ಕಾಲೇಜು, ನೈಸ್‌ ರಸ್ತೆ
* ಬಸವೇಶ್ವರನಗರ- ಎಲೆಕ್ಟ್ರಾನಿಕ್ ಸಿಟಿ : ವಿಜಯನಗರ, ನಾಗರಬಾವಿ ಸರ್ಕಲ್‌, ನೈಸ್‌ ರಸ್ತೆ

English summary
From your locality to Electronic city via Nice road in just 45 minutes. A all new city bus services by the Bangalore Metropolitan Transport Corporation (BMTC).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X