ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ರಮವೆಸಗುವ ಪ್ರವೃತ್ತಿಗೆ ತಡೆ: ಹೊಸ ರೂಪದಲ್ಲಿ 108 ಆಂಬ್ಯುಲೆನ್ಸ್

|
Google Oneindia Kannada News

Recommended Video

ಅಕ್ರಮ ತಡೆಯಲು ಹೊಸ ರೂಪದಲ್ಲಿ ಬರುತ್ತಿದೆ 108 ಆಂಬುಲೆನ್ಸ್ | Oneindia Kannada

ಬೆಂಗಳೂರು, ನವೆಂಬರ್ 16: ಇನ್ನುಮುಂದೆ ರೋಗಿಗಳನ್ನು ಪೀಡಿಸುವ, ಅಕ್ರಮವೆಸಗುವ, ಹಣ ಕೀಳುವ ಪ್ರವೃತ್ತಿಗೆ ಬ್ರೇಕ್ ಬೀಳಲಿದೆ. 108 ಆಂಬ್ಯುಲೆನ್ಸ್ ಹೊಸ ರೂಪದಲ್ಲಿ ನಿಮ್ಮೆಲ್ಲರೆದುರು ಬಂದು ನಿಲ್ಲಲಿದೆ.

ಆಂಬ್ಯುಲೆನ್ಸ್ ಹೆಸರಲ್ಲಿ ಹಣ ಸಾಗಿಸುವುದು ಅಕ್ರಮ ನಡೆಸುವುದು, ರೋಗಿಗಳ ಬಳಿ ಹಣ ಕೀಳುವುದು, ನಿರ್ದಿಷ್ಟ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿರುವುದು ಇಂತಹ ಅಕ್ರಮಗಳಿಗೆ ಇನ್ನು ತಡೆ ಬೀಳಲಿದೆ.

108 ಆಂಬ್ಯಲೆನ್ಸ್ ಸೇವೆಗೆ 400 ಹೊಸ ವಾಹನ ಸೇರ್ಪಡೆ108 ಆಂಬ್ಯಲೆನ್ಸ್ ಸೇವೆಗೆ 400 ಹೊಸ ವಾಹನ ಸೇರ್ಪಡೆ

ಪ್ರತಿ ವಾಹನದಲ್ಲೂ ಎಲೆಕ್ಟ್ರಾನಿಕ್ ಹೆಲ್ತ್ ರೆಕಾರ್ಡರ್ ಅಳವಡಿಕೆಯಾಗಲಿದೆ. ಇದರಿಂದ ಆಂಬ್ಯುಲೆನ್ಸ್‌ನ ಸಂಪೂರ್ಣ ಮಾಹಿತಿ ತಕ್ಷಣದಲ್ಲೇ ಸರ್ವರ್‌ನಲ್ಲಿ ದಾಖಲಾಗುತ್ತದೆ. ರೋಗಿಯ ತುರ್ತು ಚಿಕಿತ್ಸೆ ಈಡಲು ಆಕ್ಸಿಜನ್ ಸಿಲಿಂಡರ್, ವೆಂಟಿಲೇಟರ್, ಡ್ರಿಪ್ಸ್‌ ಸ್ಟ್ಯಾಂಡ್, ಫಸ್ಟ್ ಏಡ್ ಬಾಕ್ಸ್ ಕಿಟ್ ಲಭ್ಯತೆ ಅರಿಯಲು ಎಕ್ಯುಪ್‌ ಮೆಂಟ್ ಮಾನಿಟರಿಂಗ್ ವ್ಯವಸ್ಥೆ ಆಂಬ್ಯುಲೆನ್ಸ್‌ನಲ್ಲಿರುತ್ತದೆ.

 ಆರೋಗ್ಯ ಕವಚ ಬಲಪಡಿಸಲು ನಗು ಮಗು ವಿಲೀನ

ಆರೋಗ್ಯ ಕವಚ ಬಲಪಡಿಸಲು ನಗು ಮಗು ವಿಲೀನ

ಈಗಾಗಲೇ ಸುಸ್ಥಿತಿಯಲ್ಲಿ ಇಲ್ಲದ ಆಂಬ್ಯುಲೆನ್ಸ್‌ಗಳನ್ನು ತೆರವುಗೊಳಿಸಿ 108 ಆರೋಗ್ಯ ಕವಚ ಬಲಪಡಿಸಲಾಗುತ್ತಿದೆ. ಇದರ ಜತೆಗೆ ಆರೋಗ್ಯ ಇಲಾಖೆಗೆ ಸೇರಿದ 200 ಆಂಬ್ಯುಲೆನ್ಸ್ ಗಳನ್ನು ವಿಲೀನಗೊಳಿಸಿ ಅವುಗಳ ಜಿಪಿಎಸ್ ಸೇರಿದಂತೆ ಇತರೆ ತಂತ್ರಜ್ಞಾನಗಳನ್ನು ಅಳವಡಿಸಲಾಗುತ್ತದೆ. ಒಟ್ಟು 911 ಆಂಬ್ಯುಲೆನ್ಸ್‌ಗಳು ಹೊಸ ರೂಪದಲ್ಲಿ ಸೇವೆಗೆ ಸಿದ್ಧವಾಗಲಿದೆ.

ಪ್ರಕೃತಿ ಚಿಕಿತ್ಸೆ, ವಿಶ್ರಾಂತಿಗಾಗಿ ಜಿಂದಾಲ್‌ಗೆ ಯಡಿಯೂರಪ್ಪ ದಾಖಲುಪ್ರಕೃತಿ ಚಿಕಿತ್ಸೆ, ವಿಶ್ರಾಂತಿಗಾಗಿ ಜಿಂದಾಲ್‌ಗೆ ಯಡಿಯೂರಪ್ಪ ದಾಖಲು

 ಹೊಸ ಸೇವೆಯಲ್ಲಿರುವ ನೂತನ ವ್ಯವಸ್ಥೆಗಳೇನೇನು?

ಹೊಸ ಸೇವೆಯಲ್ಲಿರುವ ನೂತನ ವ್ಯವಸ್ಥೆಗಳೇನೇನು?

ಆಂಬ್ಯುಲೆನ್ಸ್ ಸೇವೆಯಲ್ಲಿ ಪಾರದರ್ಶಕತೆ ಹಾಗೂ ಗುಣಮಟ್ಟ ಕಾಯ್ದುಕೊಳ್ಳಲು ಆನ್‌ಲೈನ್ ಮಾನಿಟರಿಂಗ್, ವಾಹನ ಸಂಚರಿಸುವ ಮಾರ್ಗ ತಿಳಿಯಲು ಜಿಪಿಎಸ್, ಚಾಲಕ ಹಾಗೂ ಸಿಬ್ಬಂದಿ ಹಾಜರಾತಿಗಾಗಿ ಬಯೋಮೆಟ್ರಿಕ್ ವ್ಯವಸ್ಥೆ, ರೋಗಿಗಳಿಗೆ ನೀಡುವ ಸೇವೆ ಮಾಹಿತಿಗಾಗಿ ಟ್ಯಾಬ್ ಅಳವಡಿಕೆ, ಪ್ರತಿ ಸೇವೆ ಕುರಿತು ತಕ್ಷಣವೇ ಮಾಹಿತಿ ಪಡೆಯಲು ಎಲೆಕ್ಟ್ರಾನಿಕ್ ಕ್ರಿಯೇಟರ್ ಅಳವಡಿಸಲಾಗುತ್ತದೆ.

ಕರ್ನಾಟಕ :ಹರಿಯುತ್ತಿದೆ ಆಮಿಷದ ಹೊಳೆ, ರೂ. 128 ಕೋಟಿ ಮೌಲ್ಯದ ವಸ್ತುಗಳು ವಶಕರ್ನಾಟಕ :ಹರಿಯುತ್ತಿದೆ ಆಮಿಷದ ಹೊಳೆ, ರೂ. 128 ಕೋಟಿ ಮೌಲ್ಯದ ವಸ್ತುಗಳು ವಶ

 ವಾಹನಗಳ ನಿರ್ವಹಣೆ ಹೇಗೆ

ವಾಹನಗಳ ನಿರ್ವಹಣೆ ಹೇಗೆ

ರೋಗಿಗಳನ್ನು ಎಲ್ಲಿಂದ ಕರೆದುಕೊಂಡು ಹೋಗಿದ್ದಾರೆ, ಯಾವ ಆಸ್ಪತ್ರೆಗೆ ಸೇರಿಸಲಾಯಿತು, ಅವರೊಂದಿಗೆ ಸಿಬ್ಬಂದಿಯ ವರ್ತನೆ ಹೇಗಿತ್ತು, ವಾಹನದ ನಿರ್ವಹಣೆ ಯಾವ ರೀತಿ ಮಾಡಲಾಗುತ್ತಿದೆ. ರೋಗಿಗಳ ಕರೆ ಬಂದ ಎಷ್ಟು ಸಮಯಕ್ಕೆ ವಾಹನ ತಲುಪಿತು ಕಚೇರಿಯಲ್ಲೇ ಕುಳಿತು ನೋಡಬಹುದಾಗಿದೆ.

 ಹತ್ತು ವರ್ಷಗಳ ಸಮಸ್ಯೆಗಳ ವಿಶ್ಲೇಷಣೆ

ಹತ್ತು ವರ್ಷಗಳ ಸಮಸ್ಯೆಗಳ ವಿಶ್ಲೇಷಣೆ

ಕಳೆದ ಹತ್ತು ವರ್ಷಗಳಲ್ಲಿ ಆಂಬ್ಯುಲೆನ್ಸ್ ಸೇವೆಯಲ್ಲಿ ಕಂಡು ಬಂದ ನ್ಯೂನತೆಗಳನ್ನು ದಾಖಲಿಸಿಕೊಂಡು ಮುಂದೆ ಅಂತಹ ಸಮಸ್ಯೆಗಳು ಪುನರಾವರ್ತನೆಯಾಗದಂತೆ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಕಲ್ಪಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

English summary
State government planning to launch new avtar of 108 Ambulance services across the state. According to officers it will be more transperent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X