ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೆಲಮಂಗಲ-ಮಹಾರಾಷ್ಟ್ರ ರೋ ರೋ ಸೇವೆ ಆ.30ಕ್ಕೆ ಆರಂಭ

|
Google Oneindia Kannada News

ಬೆಂಗಳೂರು, ಆಗಸ್ಟ್ 26 : ನೈಋತ್ಯ ರೈಲ್ವೆ ನೆಲಮಂಗಲ ಮತ್ತು ಬೇಲ್‌ ನಡುವಿನ ರೋ ರೋ ಸೇವೆಗೆ ಆಗಸ್ಟ್ 30ರಂದು ಚಾಲನೆ ನೀಡಲಿದೆ. ಏಪ್ರಿಲ್‌ನಲ್ಲಿ ಈ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಈ ಸೇವೆಯನ್ನು ಆರಂಭಿಸಲು ರೈಲ್ವೆ ಬೋರ್ಡ್ ಒಪ್ಪಿಗೆ ನೀಡಿತ್ತು.

Recommended Video

ಕೊನೆಗೂ Africa , Polioದಿಂದ ಮುಕ್ತ | Oneindia Kannada

ಆಗಸ್ಟ್ 30ರಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ನೆಲಮಂಗಲ ರೈಲು ನಿಲ್ದಾಣದಲ್ಲಿ ಈ ರೋಲ್ ಆನ್ ರೋಲ್ ಆಫ್ ಸೇವೆಗೆ ಚಾಲನೆ ನೀಡಲಿದ್ದಾರೆ. ನೈಋತ್ಯ ರೈಲ್ವೆ ಇದೇ ಮೊದಲ ಬಾರಿಗೆ ಇಂತಹ ಸೇವೆ ಆರಂಭಿಸಲಿದೆ.

10 ಹೊಸ ಮಾರ್ಗದಲ್ಲಿ ರೈಲು ಓಡಿಸಲಿದೆ ನೈಋತ್ಯ ರೈಲ್ವೆ 10 ಹೊಸ ಮಾರ್ಗದಲ್ಲಿ ರೈಲು ಓಡಿಸಲಿದೆ ನೈಋತ್ಯ ರೈಲ್ವೆ

ಬೆಂಗಳೂರು ಹೊರವಲಯದ ನೆಲಮಂಗಲದಿಂದ ಹೊರಡಲಿರುವ ರೈಲು ಮಹಾರಾಷ್ಟ್ರದ ಸೊಲ್ಹಾಪುರ ಸಮೀಪದ ಬೇಲ್‌ ತಲುಪಲಿದೆ. 1260 ಟನ್ ಕೃಷಿ, ರಾಸಾಯನಿಕ, ಕಾರ್ಖನೆಗೆ ಅಗತ್ಯವಿರುವ ವಸ್ತುಗಳನ್ನು ಹೊತ್ತ ಲಾರಿಗಳು ರೈಲಿನಲ್ಲಿ ಸಂಚಾರ ನಡೆಸಲಿವೆ.

ಕೆಐಎಎಲ್ ರೈಲು ನಿಲ್ದಾಣ ಸಿದ್ಧ; ರೈಲು ಸಂಚಾರ ಯಾವಾಗ? ಕೆಐಎಎಲ್ ರೈಲು ನಿಲ್ದಾಣ ಸಿದ್ಧ; ರೈಲು ಸಂಚಾರ ಯಾವಾಗ?

Nelamangala And Bale Ro Ro Service From August 30

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ಕನಸಿನ ಯೋಜನೆ ಇದಾಗಿದೆ. ವಿವಿಧ ರಾಜ್ಯಗಳ ನಡುವೆ ತುರ್ತಾಗಿ ಸರಕು ಸಾಗಣೆ ಮಾಡಲು ರೈಲನ್ನು ಬಳಕೆ ಮಾಡಿಕೊಳ್ಳುವುದು ಈ ಯೋಜನೆಯ ಉದ್ದೇಶ. ಏಪ್ರಿಲ್ 2ರಂದು ರೋ ರೋ ಸೇವೆ ಆರಂಭಿಸಲು ಒಪ್ಪಿಗೆ ಸಿಕ್ಕಿತ್ತು.

ಓಡಲಿದೆ ದೇಶದ ಮೊದಲ 'ಕಿಸಾನ್ ರೈಲು' ಓಡಲಿದೆ ದೇಶದ ಮೊದಲ 'ಕಿಸಾನ್ ರೈಲು'

ಕೊಂಕಣ ರೈಲು ಮಾರ್ಗದಲ್ಲಿ ಈಗಾಗಲೇ ಈ ಸೇವೆ ಜಾರಿಯಲ್ಲಿದೆ. ನೈಋತ್ಯ ರೈಲ್ವೆ ಇದೇ ಮೊದಲ ಬಾರಿಗೆ ಇಂತಹ ಸೇವೆ ಆರಂಭಿಸುತ್ತಿದೆ. ರೋ ರೋ ಸೇವೆಯಲ್ಲಿ 43 ಓಪನ್ ವ್ಯಾಗನ್‌ಗಳು ಇರಲಿವೆ. 682 ಕಿ. ಮೀ. ಮಾರ್ಗದಲ್ಲಿ ಈ ರೈಲು ಸಂಚಾರ ನಡೆಸಲಿದೆ.

ಲಾರಿಗಳ ಗಾತ್ರದ ಆಧಾರದ ಮೇಲೆ 43ಕ್ಕೂ ಅಧಿಕ ಲಾರಿಗಳನ್ನು ರೈಲು ವ್ಯಾಗನ್‌ನಲ್ಲಿ ನಿಲ್ಲಿಸಬಹುದಾಗಿದೆ. ಒಮ್ಮೆ ಈ ರೈಲು ಸಂಚಾರ ನಡೆಸಲು ಆರು ದಿನಗಳು ಬೇಕಾಗುತ್ತದೆ. ರೈಲುಗಳ ಮೇಲೆ ಲಾರಿಗಳನ್ನು ಸಾಗಣೆ ಮಾಡುವುದರಿಂದ ಸಾಗಣೆ ವೆಚ್ಚವೂ ಕಡಿತವಾಗಲಿದೆ.

ಕೊಂಕಣ ರೈಲ್ವೆ ಸುರತ್ಕಲ್-ಕೋಲಾಡ್ (143 ಕಿ. ಮೀ.) ಮಾರ್ಗದಲ್ಲಿ ಈಗಾಗಲೇ ರೋ ರೋ ಸೇವೆಯನ್ನು ನಡೆಸುತ್ತಿದೆ. ಈ ಸೇವೆಯಿಂದಾಗಿ ಬೆಂಗಳೂರು-ಪುಣೆ ನಡುವೆ ಸಂಚಾರ ನಡೆಸುವ ಲಾರಿಗಳ ಸಂಖ್ಯೆ ಕಡಿಮೆಯಾಗಲಿದೆ.

English summary
Roll On-Roll Off (RO-RO) service between Nelamangala and Bale will make its debut this on Sunday, August 30. This is the 1st Ro Ro train of the south western railway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X