ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈದ್ಯಕೀಯ ಪ್ರವೇಶದ 'ಕ್ಯಾಪಿಟೇಶನ್' ಪಿಡುಗಿಗೆ ರಾಮಬಾಣ NEET

ನೀಟ್ ಪರೀಕ್ಷೆಯಿಂದ ವಿದ್ಯಾರ್ಥಿಗಳಿಗೆ ಲಾಭ. ಕ್ಯಾಪಿಟೇಷನ್ ಶುಲ್ಕಕ್ಕೆ ರಾಮಬಾಣ.

|
Google Oneindia Kannada News

ವೈದ್ಯಕೀಯ ಪ್ರವೇಶಾತಿಯಲ್ಲಿನ ಸಂಕೀರ್ಣ ವ್ಯವಸ್ಥೆ ಹಾಗೂ ದುಬಾರಿ ಶುಲ್ಕದಂಥ ಅವ್ಯವಸ್ಥೆಗಳನ್ನು ತೊಡೆದು ಹಾಕಿ ಅರ್ಹ ವಿದ್ಯಾರ್ಥಿಗಳು ವೈದ್ಯರಾಗುವ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಆಲೋಚಿಸಿದ ಕೇಂದ್ರ ಸರ್ಕಾರ 'ನ್ಯಾಷನಲ್ ಎಲಿಜಿಬಿಲಿಟಿ -ಕಮ್- ಎಂಟ್ರೆಂನ್ಸ್ ಟೆಸ್ಟ್' (ನೀಟ್) ಜಾರಿಗೆ ತಂದಿದೆ. ಈ ಪರೀಕ್ಷೆಯ ಲಾಭಗಳ ಬಗ್ಗೆ ಬೆಂಗಳೂರಿನ ಮಲ್ಲೇಶ್ವರಂ ಶಾಸಕ ಡಾ. ಸಿ.ಎನ್. ಅಶ್ವಥ ನಾರಾಯಣ್ ಇಲ್ಲಿ ವಿವರಿಸಿದ್ದಾರೆ.

ವೈದ್ಯಕೀಯ ಕಾಲೇಜುಗಳಲ್ಲಿ ನೀಟ್ ಪರೀಕ್ಷೆಯು ಭಾರತೀಯ ವೈದ್ಯಕೀಯ ವ್ಯಾಸಂಗದಲ್ಲಿ ಒಂದು ಮಹತ್ತರ ಮನ್ವಂತರಕ್ಕೆ ಕಾರಣವಾಗಲಿದೆ ಎಂಬುದು ಸುಳ್ಳಲ್ಲ. 'ಒಂದು ದೇಶ, ಒಂದು ಪರೀಕ್ಷೆ' ಎಂಬ ತತ್ವದಡಿ ಜಾರಿಗೊಂಡಿರುವ ಈ ಪರೀಕ್ಷೆಯಲ್ಲಿರುವ ಲಾಭಗಳ ಬಗ್ಗೆ ಇಲ್ಲಿ ಕೂಲಂಕಷವಾಗಿ ಹೇಳುವುದಾದರೆ, ಬಹುಮುಖ್ಯವಾಗಿ, ಈ ಪರೀಕ್ಷೆಯಿಂದ ವಿದ್ಯಾರ್ಥಿಗಳ ಒತ್ತಡ ಕಡಿಮೆಯಾಗಲಿದೆ.

NEET Exam brings beneficiary for students

ಹಲವಾರು ರಾಜ್ಯಗಳಲ್ಲಿ ಹಲವಾರು ಖಾಸಗಿ ಕಾಲೇಜುಗಳು ನಡೆಸುವ ವೈದ್ಯಕೀಯ ಪ್ರವೇಶ ಪರೀಕ್ಷೆಗಾಗಿ ಆಯಾ ರಾಜ್ಯಗಳ ವಿದ್ಯಾರ್ಥಿಗಳು ಹಗಲಿರುಳೂ ಶ್ರಮಿಸಬೇಕಿತ್ತು. ಇದು ವಿದ್ಯಾರ್ಥಿಗಳ ಮೇಲೆ ಸಾಕಷ್ಟು ಒತ್ತಡ ಉಂಟು ಮಾಡುತ್ತಿತ್ತು.

ಪ್ರಾದೇಶಿಕ ಭಾಷೆಗಳಿಗೆ ಭಿನ್ನ ಪ್ರಶ್ನೆ ಪತ್ರಿಕೆ, ಸಿಬಿಎಸ್ಇಗೆ ಸುಪ್ರಿಂ ತರಾಟೆಪ್ರಾದೇಶಿಕ ಭಾಷೆಗಳಿಗೆ ಭಿನ್ನ ಪ್ರಶ್ನೆ ಪತ್ರಿಕೆ, ಸಿಬಿಎಸ್ಇಗೆ ಸುಪ್ರಿಂ ತರಾಟೆ

ಈಗ ನೀಟ್ ಪರೀಕ್ಷೆಯ ಮೂಲಕ ದೇಶಾದ್ಯಂತ ಒಂದೇ ಪಠ್ಯ ಇರುವುದರಿಂದ ಹಾಗೂ ಒಂದೇ ಪರೀಕ್ಷೆ ನಡೆಯುವುದರಿಂದ ವಿದ್ಯಾರ್ಥಿಗಳು ಹೆಚ್ಚು ಒತ್ತಡವಿಲ್ಲದೆ, ಈ ನೀಟ್ ಪರೀಕ್ಷೆ ಕಡೆಗೆ ಮಾತ್ರ ತಮ್ಮೆಲ್ಲಾ ಗಮನ ಕೇಂದ್ರೀಕರಿಸಿ, ತಮ್ಮೆಲ್ಲಾ ಶಕ್ತಿ , ಸಾಮರ್ಥ್ಯವನ್ನು ಧಾರೆಯೆರೆದು ಪರೀಕ್ಷೆಗೆ ತಯಾರಿ ನಡೆಸಲು ಅನುಕೂಲವಾಗುತ್ತದೆ.

ಮೊದಲಾದರೆ, ವಿವಿಧ ರಾಜ್ಯಗಳ ಮೆಡಿಕಲ್ ಕಾಲೇಜುಗಳ ಪ್ರವೇಶ ಪರೀಕ್ಷೆಗಾಗಿ ಅರ್ಜಿ ಸಲ್ಲಿಸುವುದು, ಪ್ರತ್ಯೇಕವಾಗಿ ಶುಲ್ಕ ಕಟ್ಟುವುದು ಸೇರಿದಂತೆ ವಿವಿಧ ರಾಜ್ಯಗಳ ಮೆಡಿಕಲ್ ಪರೀಕ್ಷೆಗಳ ದಿನಾಂಕಗಳು ಒಂದೇ ಅವಧಿಯಲ್ಲಿ ನಡೆಯುವುದು. ಇಂಥ ಎಲ್ಲಾ ಗೊಂದಲಗಳಿಗೆ ನೀಟ್ ಪರೀಕ್ಷೆಗಳು ಇತಿಶ್ರೀ ಹಾಡಿವೆ. ಹೀಗೆ, ಒಂದೇ ಪರೀಕ್ಷೆಯ ಕಡೆಗೆ ವಿದ್ಯಾರ್ಥಿಗಳು ತೊಡಗುವುದರಿಂದ ಪ್ರವೇಶ ಪರೀಕ್ಷೆಯಲ್ಲಿಉತ್ತಮ ಅಂಕಪಡೆಯಲು ಅವರಿಗೆ ಸಾಧ್ಯವಾಗುತ್ತಿದೆ.

NEET Exam brings beneficiary for students

ಪಾರದರ್ಶಕತೆ
ನೀಟ್ ಪರೀಕ್ಷೆಯ ಮತ್ತೊಂದು ಅನುಕೂಲವೆಂದರೆ ಇದರಲ್ಲಿ ಏಕಪ್ರಕಾರದ ಶ್ರೇಯಾಂಕ (ರ್ಯಾಂಕಿಂಗ್) ವ್ಯವಸ್ಥೆ. ಇದು ಪಾರದರ್ಶಕವಾಗಿದ್ದು, ಇಲ್ಲಿ ಪಡೆಯುವ ರ್ಯಾಂಕ್ ಮೂಲಕ ಯಾವುದೇ ರಾಜ್ಯದ ವಿದ್ಯಾರ್ಥಿಯು ಮತ್ಯಾವುದೇ ರಾಜ್ಯದಲ್ಲಿನ ಮೆಡಿಕಲ್ ಕಾಲೇಜಿಗೆ ತನ್ನ ರ್ಯಾಕಿಂಗ್ ಆಧಾರದ ಮೇಲೆ ಪ್ರವೇಶ ಪಡೆಯಲು ಸಾಧ್ಯವಾಗಿದೆ. ಇಂಥ ವ್ಯವಸ್ಥೆ ಮತ್ತಷ್ಟು ಸರಾಗವಾಗಿ ನಡೆಯಬೇಕೆಂದರೆ, ವೈದ್ಯಕೀಯ ಪ್ರವೇಶ ಪಡೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸಲಹಾ ಮಂಡಳಿ (ಎಂಸಿಸಿ), ಎಲ್ಲಾ ವೈದ್ಯಕೀಯ ಕಾಲೇಜುಗಳು ಹಾಗೂ ರಾಜ್ಯ ಸರ್ಕಾರಗಳು ಪರಸ್ಪರ ಸಹಕಾರ ನೀಡಬೇಕು.

NEET: ಕನ್ನಡ ಭಾಷಾ ಪರೀಕ್ಷೆ ಜುಲೈ 15ಕ್ಕೆ ಮುಂದೂಡಿಕೆNEET: ಕನ್ನಡ ಭಾಷಾ ಪರೀಕ್ಷೆ ಜುಲೈ 15ಕ್ಕೆ ಮುಂದೂಡಿಕೆ

ಅಲ್ಲದೆ, ಈ ಪರೀಕ್ಷೆಯನ್ನು 10 ಪ್ರಾಂತೀಯ ಭಾಷೆಗಳಲ್ಲಿ ಬರೆಯಲು ಅವಕಾಶವಿರುವುದರಿಂದ ಪ್ರಾದೇಶಿಕ ವಿದ್ಯಾರ್ಥಿಗಳಿಗೆ ಇದು ಹೆಚ್ಚು ಅನುಕೂಲವಾಗುತ್ತದೆ.

NEET Exam brings beneficiary for students

ನೀಟ್ ಪರೀಕ್ಷೆಯ ಮತ್ತೊಂದು ಲಾಭವೆಂದರೆ, ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಇದ್ದ ಕ್ಯಾಪಿಟೇಶನ್ ಎಂಬ ಪೆಡಂಭೂತವನ್ನು ಮಟ್ಟ ಹಾಕಲು ಸಾಧ್ಯವಾಗುವುದು. ನೀಟ್ ಪರೀಕ್ಷೆಯಲ್ಲಿ ಮೆರಿಟ್ ಆಧಾರದಲ್ಲಿ ಮಾತ್ರವೇ ವಿದ್ಯಾರ್ಥಿಗಳು ಪ್ರವೇಶ ಪಡೆಯಬೇಕಿರುವುದರಿಂದ ಕಳಪೆ ವಿದ್ಯಾರ್ಥಿಗಳು, ಧನಬಲ ವಿದ್ಯಾರ್ಥಿಗಳು ಸೀಟು ಗಿಟ್ಟಿಸಿಕೊಂಡು ವೈದ್ಯರಾಗುವ ಅಪಾಯವನ್ನು ತಪ್ಪಿಸಬಹುದಾಗಿದೆ. ಅಲ್ಲದೆ, ಕೇವಲ ಅರ್ಹ ವಿದ್ಯಾರ್ಥಿಗಳು ಮಾತ್ರವೇ ಭಾರತದ ಭವಿಷ್ಯದ ವೈದ್ಯರಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ.

ಆದರೆ, ಈ ನೀಟ್ ಪರೀಕ್ಷೆಯ ಬಗ್ಗೆ ಈಗಲೂ ಖಾಸಗಿ ಕಾಲೇಜುಗಳು ವಿರೋಧ ತೋರುತ್ತಲೇ ಇವೆ. ಏಕೆಂದರೆ, ನೀಟ್ ಪರೀಕ್ಷೆಯು ಅವರ ಅಕ್ರಮ ಆದಾಯವನ್ನು ಕಸಿದುಕೊಂಡಿದೆ.

NEET Exam brings beneficiary for students

ಅಕ್ರಮಗಳಿಗೆ ಕಡಿವಾಣ
ನೇರ ಪ್ರವೇಶಾತಿ ಹೆಸರಿನಲ್ಲಿ ಕೋಟಿ ಕೋಟಿ ರು. ದೋಚುತ್ತಿದ್ದ ಅವರ ಧನಬಾಕ ಸಂಸ್ಕೃತಿಗೆ ಈಗ ಅಡ್ಡಿಯಾಗಿದೆ. ಕೆಲವು ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ನಂಬುವುದಾದರೆ, ದೇಶದಲ್ಲಿ ಪ್ರತಿ ವರ್ಷ ಖಾಸಗಿ ಕಾಲೇಜುಗಳ ವೈದ್ಯಕೀಯ ಸೀಟು ದಂಧೆಯಡಿ ಸುಮಾರು 12,000 ಕೋಟಿ ರು. ವಹಿವಾಟು ನಡೆಯುತ್ತದೆ ಎಂದರೆ ಇದರ ಕರಾಳತೆ ಎಷ್ಟಿರಬಹುದೆಂದು ಯಾರಾದರೂ ಊಹಿಸಬಹುದು.

ನಿಜ ಹೇಳಬೇಕೆಂದರೆ, ಖಾಸಗಿ ಕಾಲೇಜುಗಳಲ್ಲಿ ನಡೆಯುತ್ತಿರುವ ವೈದ್ಯಕೀಯ ಪ್ರವೇಶ ಪರೀಕ್ಷೆಗಳು ಕೇವಲ ಕಣ್ಣೊರೆಸುವ ತಂತ್ರ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಈ ಕಾಲೇಜುಗಳಲ್ಲಿನ ಸೀಟುಗಳಿಗೆ ವಿದ್ಯಾರ್ಥಿಯು ಪರೀಕ್ಷೆಯಲ್ಲಿ ತೋರಿದ ದಕ್ಷತೆಗಿಂತ, ಆತ ಎಷ್ಟು ಹಣ ನೀಡುತ್ತಾನೆಂಬುದರ ಮೇಲೆ ಅವಲಂಬಿತ. ಹಾಗಾಗಿ, ಈ ವಿದ್ಯಾ ಸಂಸ್ಥೆಗಳು ಕೇಳಿದಷ್ಟು ಹಣವನ್ನು ವಿದ್ಯಾರ್ಥಿಗಳ ಪೋಷಕರು ಕಕ್ಕಿದರಷ್ಟೇ ಸೀಟು ಲಭ್ಯ ಎಂದಾಗಿದೆ.

ಇದೀಗ, ನೀಟ್ ಪರೀಕ್ಷೆಯು, ಲಕ್ಷಾಂತರ ಅರ್ಹ ವಿದ್ಯಾರ್ಥಿಗಳಿಗೆ ಆಗುತ್ತಿದ್ದ ಅನ್ಯಾಯವು ತಪ್ಪಿದೆ. ಲಕ್ಷಾಂತರ ವಿದ್ಯಾರ್ಥಿಗಳ ಪೋಷಕರು ನಿಶ್ಚಿಂತೆಯಿಂದ ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸಲು ಸಹಾಯವಾಗಿದೆ. ಇದರಿಂದ, ಭಾರತದ ವೈದ್ಯಕೀಯ ವ್ಯಾಸಂಗ ಕ್ಷೇತ್ರದಲ್ಲಿ ಹೊಸ ಸುಧಾರಣೆಯನ್ನು ತರಲು ಸಾಧ್ಯವಾಗಿದೆ.

- ಡಾ. ಸಿ.ಎನ್. ಅಶ್ವಥ ನಾರಾಯಣ್,
ಬಿಜೆಪಿ ಶಾಸಕರು,
ಮಲ್ಲೇಶ್ವರಂ, ಬೆಂಗಳೂರು.

English summary
All India Entrance Exams (NEET) will bring reformations in medical admission field, preventing evil of capitation, becomes beneficiary for deserved students to get medical seat in any of the colleges across the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X