ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ರಸ್ತೆಯಲ್ಲಿ ಏರ್‌ಪೋರ್ಟ್‌ಗೆ ಹೋದ್ರೆ ಟೋಲ್ ಇಲ್ಲ, ಪ್ರಾಣವನ್ನೇ ತೆರಬೇಕಾದೀತು

|
Google Oneindia Kannada News

ಬೆಂಗಳೂರು, ಜೂನ್ 18: ಹೆಣ್ಣೂರು-ಬಾಗಲೂರು ರಸ್ತೆ ಮೂಲಕ ಹೋದರೆ ಕೆಂಪೇಗೌಡ ಏರ್‌ಪೋರ್ಟ್‌ ಬೇಗ ತಲುಪಬಹುದು, ಟೋಲ್ ಕೂಡ ಕಟ್ಟುವುದು ಬೇಡ...ಪ್ರಾಣವನ್ನೇ ತೆರಬೇಕಾದೀತು.

ವೈಟ್‌ಫೀಲ್ಡ್, ಕೆಆರ್‌ಪುರಂ, ಬಾಣಸವಾಡಿ ಜನರು ಆ ಮಾರ್ಗದಿಂದಲೇ ಏರ್‌ಪೋರ್ಟ್‌ಗೆ ಸಂಚರಿಸುತ್ತಾರೆ. ಹೌದು ಟೋಲ್ ಕಟ್ಟುವುದು ಬೇಡ ಬದಲಾಗಿ ಪ್ರಯಾಣಿಕರ ಜೀವವನ್ನೇ ತೆರಬೇಕಾಗುತ್ತದೆ.

 ಏರ್‌ಪೋರ್ಟ್‌ ಫ್ಲೈಓವರ್ ಮೇಲೆ ವಾಹನಗಳ ನಿಷೇಧ? ಏರ್‌ಪೋರ್ಟ್‌ ಫ್ಲೈಓವರ್ ಮೇಲೆ ವಾಹನಗಳ ನಿಷೇಧ?

ರಸ್ತೆ ಗುಂಡಿಗಳಿಂದ ತುಂಬಿದೆ.ಮಳೆ ಬಂದರೆ ಸಾಕು ನೀರು ತುಂಬಿಕೊಂಡು ಈಜುಕೊಳದಂತಾಗಿಬಿಡುತ್ತದೆ. ನಿತ್ಯ ಎರಡರಿಂದ ಮೂರು ಅಪಘಾತಗಳು ಸಂಭವಿಸುತ್ತಲೇ ಇರುತ್ತದೆ. ಈಗ ಪ್ರಯಾಣಿಕರು ಹೆಬ್ಬಾಳ ಮೂಲಕ ಏರ್‌ಪೋರ್ಟ್ ಎಕ್ಸ್‌ಪ್ರೆಸ್ ವೇ ಸಂಪರ್ಕಿಸುತ್ತಾರೆ. ಇದರಿಂದ ಟ್ರಾಫಿಕ್‌ನಿಂದ ಕೊಂಚ ಬಿಡುಗಡೆ ಪಡೆಯುವುದರ ಜೊತೆಗೆ ಸಮಯವೂ ಉಳಿತಾಯವಾಗಲಿದೆ.

Need Not to pay toll but It is sure to take a commuters lives

ಕಳೆದ ಕೆಲ ತಿಂಗಳ ಹಿಂದೆ ರಸ್ತೆಯನ್ನು ನಿರ್ಮಿಸಲಾಗಿತ್ತು ತುಂಬಾ ಚೆನ್ನಾಗಿಯೂ ಕಾಮಗಾರಿ ನಡೆದಿತ್ತು ಆದರೆ ಕಾವೇರಿ ನೀರಿನ ಪೈಪ್ ಅಳವಡಿಕೆ ನೆಪ ಹೇಳಿ ಜಲಮಂಡಳಿಯು ಇಡೀ ರಸ್ತೆಯನ್ನು ಅಗೆದು ಗುಂಡಿಗಳನ್ನು ಮಾಡಿ ಬಿಟ್ಟಿದೆ.

ರಿಂಗ್ ರಸ್ತೆಯಿಂದ ಬಾಗಲೂರಿಗೆ ತೆರಳುವ ಮಾರ್ಗದಲ್ಲಿ ಏಳು ಕಿ.ಮೀ ದೂರದವರೆಗೆ ರಸ್ತೆ ನಿರ್ಮಿಸಲಾಗಿತ್ತು ಆದರೆ ಜಲಮಂಡಳಿ ಕಾಮಗಾರಿಯಿಂದಾಗಿ ಮತ್ತದೇ ಸ್ಥಿತಿಗೆ ತಲುಪಿದೆ ಎಂದು ಬಿಬಿಎಂಪಿ ಎಂಜಿನಿಯರ್ ಒಬ್ಬರು ತಿಳಿಸಿದ್ದಾರೆ.

ಐದನೇ ಹಂತದ ಕಾವೇರಿ ಯೋಜನೆಯಲ್ಲಿ 110 ಹಳ್ಳಿಗಳಿಗೆ ಕಾವೇರಿ ನೀರು ಒದಗಿಸಲು ಯೋಜನೆ ರೂಪಿಸಲಾಗಿದೆ. ಮೊದಲು 2017ರಲ್ಲಿ ಈ ಯೋಜನೆ ಆರಂಭಿಸಲಾಗಿತ್ತು. 2023ರ ಹೊತ್ತಿಗೆ ಎಲ್ಲಾ ಕಡೆಗಳಲ್ಲೂ ಕಾವೇರಿ ನೀರು ಲಭ್ಯವಾಗಲಿದೆ.

English summary
In Bengaluru you need not pay toll and you will reach the Airport, but sure it will take a commuters lives.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X