ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೀಸಲು ಪಡೆಗಳಲ್ಲಿ ಮಹಿಳೆಯರ ಅಗತ್ಯವಿದೆ: ಐಜಿಪಿ ಪ್ರವೀಣ್ ಸೂದ್

|
Google Oneindia Kannada News

ಬೆಂಗಳೂರು, ಸೆ. 23: ಇತ್ತೀಚಿನ ವರ್ಷಗಳಲ್ಲಿ ರಾಜ್ಯದಾದ್ಯಂತ ಹಿಜಾಬ್ ವಿವಾದ ಸೇರಿದಂತೆ ಹಲವಾರು ಪ್ರತಿಭಟನೆಗಳಲ್ಲಿ ಮಹಿಳೆಯರು ಮುಂಚೂಣಿಯಲ್ಲಿ ಇರುವುದರಿಂದ ಮೀಸಲು ಪಡೆಗಳಲ್ಲಿ ಮಹಿಳೆಯರ ಅಗತ್ಯವಿದೆ ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ.

ಈ ಹಿನ್ನೆಲೆ ರಾಜ್ಯ ಪೊಲೀಸರು ಅದರ ಮೀಸಲು ಪಡೆಗಳ ಲಿಂಗ ಸಂಯೋಜನೆಯನ್ನು ಮರುಪರಿಶೀಲಿಸುತ್ತಿದ್ದಾರೆ ಎಂದು ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ತಿಳಿಸಿದ್ದಾರೆ.

ಜಪ್ತಿ ಮಾಡಿದ ಚಿನ್ನಾಭರಣವನ್ನು ಪೊಲೀಸರು ವರ್ಷಾನುಗಟ್ಟಲೆ ವಶದಲ್ಲಿಟ್ಟುಕೊಳ್ಳುವಂತಿಲ್ಲಜಪ್ತಿ ಮಾಡಿದ ಚಿನ್ನಾಭರಣವನ್ನು ಪೊಲೀಸರು ವರ್ಷಾನುಗಟ್ಟಲೆ ವಶದಲ್ಲಿಟ್ಟುಕೊಳ್ಳುವಂತಿಲ್ಲ

ಕರ್ನಾಟಕ ರಾಜ್ಯ ಮೀಸಲು ಪೊಲೀಸರ ಗಲಭೆ ನಿಯಂತ್ರಣ ವಿಭಾಗದಲ್ಲಿ, 90% ಉದ್ಯೋಗಿಗಳು ಪುರುಷರಿದ್ದಾರೆ. ಐಜಿಪಿ ಪ್ರವೀಣ್ ಸೂದ್ ಪ್ರಕಾರ, ಇತ್ತೀಚಿನ ಆಂದೋಲನಗಳು ಅದರಲ್ಲೂ ವಿಶೇಷವಾಗಿ ಹಿಜಾಬ್ ವಿವಾದದ ಸಮಯದಲ್ಲಿ ಹೆಚ್ಚಿನ ಮಹಿಳಾ ಮೀಸಲು ಪೊಲೀಸರನ್ನು ನಿಯೋಜಿಸಲು ಪೊಲೀಸರು ಹೆಣಗಾಡಿದ್ದಾರೆ.

ಹಿಜಾಬ್ ವಿವಾದ ಆರಂಭವಾದಾಗಿನಿಂದ ಮಹಿಳಾ ಪೊಲೀಸರಿಗೆ ವಿರಾಮವಿಲ್ಲ!

ಹಿಜಾಬ್ ವಿವಾದ ಆರಂಭವಾದಾಗಿನಿಂದ ಮಹಿಳಾ ಪೊಲೀಸರಿಗೆ ವಿರಾಮವಿಲ್ಲ!

"ರಾಜ್ಯವು ಪ್ರಸ್ತುತ ಎರಡು ಕೆಎಸ್‌ಆರ್‌ಪಿ ಮಹಿಳಾ ಬೆಟಾಲಿಯನ್‌ಗಳನ್ನು ಹೊಂದಿದೆ. ರಾಜ್ಯದಲ್ಲಿ ಹಿಜಾಬ್ ವಿವಾದ ಪ್ರಾರಂಭವಾದಾಗಿನಿಂದ ಅವರು ವಿರಾಮವನ್ನು ಪಡೆಯಲು ಸಾಧ್ಯವಾಗಿಲ್ಲ" ಎಂದು ಪ್ರವೀಣ್ ಸೂದ್ ಹೇಳಿದ್ದಾರೆ.

"ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿರುವ ಪ್ರವೃತ್ತಿ ಹೆಚ್ಚಾಗಿರುವುದನ್ನು ನಾವು ನೋಡಿದ್ದೇವೆ. ಹಿಜಾಬ್ ವಿವಾದದ ಸಂದರ್ಭದಲ್ಲಿ ಹೆಚ್ಚಿನ ಪ್ರತಿಭಟನಾಕಾರರು ಮಹಿಳೆಯರಾಗಿದ್ದರು. ಹೀಗಾಗಿ, ಹೆಚ್ಚುವರಿ ಮಹಿಳೆಯರನ್ನು ಪಡೆಗಳಲ್ಲಿ ನೀಡುವಂತೆ ನಾವು ಸರ್ಕಾರಕ್ಕೆ ಒತ್ತಾಯಿಸಿದ್ದೇವೆ" ಎಂದು ಪ್ರವೀಣ್ ಸೂದ್ ತಿಳಿಸಿದ್ದಾರೆ.

3ನೇ ಮಹಿಳಾ ಬೆಟಾಲಿಯನ್: ಘೋಷಣೆ, ಶೀಘ್ರದಲ್ಲೇ ನೇಮಕಾತಿ

3ನೇ ಮಹಿಳಾ ಬೆಟಾಲಿಯನ್: ಘೋಷಣೆ, ಶೀಘ್ರದಲ್ಲೇ ನೇಮಕಾತಿ

ಕಳೆದ ವರ್ಷ ಡಿಸೆಂಬರ್‌ನಲ್ಲಿ ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎಂಟು ಮುಸ್ಲಿಂ ವಿದ್ಯಾರ್ಥಿನಿಯರು ತಲೆಗೆ ಸ್ಕಾರ್ಫ್ ಧರಿಸಲು ಪ್ರಾರಂಭಿಸಿದ ನಂತರ ತರಗತಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಆರೋಪಿಸಿ ಹಿಜಾಬ್ ವಿವಾದ ಸ್ಫೋಟಗೊಂಡಿತ್ತು. ಇದರ ನಂತರ, ಹಲವಾರು ಇತರ ಕಾಲೇಜುಗಳು ಕೂಡ ಹಿಜಾಬ್ ಧರಿಸಿರುವ ಮುಸ್ಲಿಂ ವಿದ್ಯಾರ್ಥಿನಿಯರ ಪ್ರವೇಶವನ್ನು ನಿಷೇಧಿಸಿವೆ, ಇದು ರಾಜ್ಯಾದ್ಯಂತ ಪ್ರತಿಭಟನೆಗೆ ಕಾರಣವಾಯಿತು.

"ಈ ವರ್ಷದ ರಾಜ್ಯ ಬಜೆಟ್‌ನಲ್ಲಿ, ಕರ್ನಾಟಕ ಸರ್ಕಾರವು ಮೂರನೇ ಮಹಿಳಾ ಬೆಟಾಲಿಯನ್ ಅನ್ನು ಘೋಷಿಸಿದೆ. ಅದಕ್ಕಾಗಿ ನೇಮಕಾತಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ" ಎಂದು ಹೇಳಿದ್ದಾರೆ. "ಮಹಿಳಾ ನೇತೃತ್ವದ ರ್‍ಯಾಲಿಗಳು ಮತ್ತು ಪ್ರತಿಭಟನೆಗಳನ್ನು ನಿರ್ವಹಿಸಲು ನಾವು ಮೀಸಲು ಪೊಲೀಸ್‌ನಲ್ಲಿ ಮಹಿಳೆಯರನ್ನು ಹೊಂದಿರಲಿಲ್ಲ. ಹಾಗಾಗಿ ಸಂಪೂರ್ಣ ಮಹಿಳಾ ಕೆಎಸ್‌ಆರ್‌ಪಿ ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದು, ಅದೃಷ್ಟವಶಾತ್ ಮಂಜೂರು ಮಾಡಿದೆ. ಹೊಸ ಬೆಟಾಲಿಯನ್ ಅಸ್ತಿತ್ವದಲ್ಲಿರುವ ಮಹಿಳಾ ಬೆಟಾಲಿಯನ್‌ಗಳ ಕೆಲಸದ ಹೊರೆಯನ್ನು ಕಡಿಮೆ ಮಾಡುತ್ತದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೆಚ್ಚು ಮಹಿಳಾ ಪೊಲೀಸ್ ಸಿಬ್ಬಂದಿ ಹೊಂದಿರುವ 36 ಠಾಣೆಗಳು

ಹೆಚ್ಚು ಮಹಿಳಾ ಪೊಲೀಸ್ ಸಿಬ್ಬಂದಿ ಹೊಂದಿರುವ 36 ಠಾಣೆಗಳು

ಇದಲ್ಲದೆ, ಸರ್ಕಾರವು ಈಗಾಗಲೇ ರಾಜ್ಯಾದ್ಯಂತ 36 ಮಹಿಳಾ ಪೊಲೀಸ್ ಠಾಣೆಗಳನ್ನು ನಿಯೋಜಿಸಿದೆ. ಈ ಪೊಲೀಸ್ ಠಾಣೆಗಳು ಪ್ರಾಥಮಿಕವಾಗಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ತೆಗೆದುಕೊಳ್ಳುತ್ತವೆ. ಎಲ್ಲಾ ಮಹಿಳಾ ಪೊಲೀಸ್ ಠಾಣೆಗಳಲ್ಲಿ ಹೆಚ್ಚಿನ ಮಹಿಳಾ ಪೊಲೀಸ್ ಸಿಬ್ಬಂದಿ ಇರುತ್ತಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಸಮಸ್ಯೆ ಏನೆಂದರೆ 36 ಮಹಿಳಾ ಪೊಲೀಸ್ ಠಾಣೆಗಳನ್ನು ಘೋಷಿಸಲಾಗಿದ್ದರೂ, ಕೇವಲ 10 ಮಹಿಳಾ ಸ್ಟೇಷನ್ ಹೌಸ್ ಆಫೀಸರ್‌ಗಳನ್ನು (ಎಸ್‌ಎಚ್‌ಒ) ಹೊಂದಿರುತ್ತಾರೆ. ಉಳಿದ 26 ಮಹಿಳಾ ಪೊಲೀಸ್ ಠಾಣೆಗಳಿಗೆ ಪುರುಷ ಎಸ್‌ಎಚ್‌ಒಗಳು ಮುಖ್ಯಸ್ಥರಾಗಿದ್ದಾರೆ. ಹಾಗಾಗಿ ವಿವಿಧ ಶ್ರೇಣಿಗಳಲ್ಲಿ ಹೆಚ್ಚಿನ ಮಹಿಳೆಯರನ್ನು ನೇಮಕ ಮಾಡಿಕೊಳ್ಳುವ ಅಗತ್ಯವಿದೆ' ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿ ಹೇಳಿದ್ದಾರೆ.

ಕಾನ್‌ಸ್ಟೆಬಲ್‌ ನೇಮಕಾತಿಯಲ್ಲಿ ಮಹಿಳೆಯರಿಗೆ 25% ಮೀಸಲಾತಿ

ಕಾನ್‌ಸ್ಟೆಬಲ್‌ ನೇಮಕಾತಿಯಲ್ಲಿ ಮಹಿಳೆಯರಿಗೆ 25% ಮೀಸಲಾತಿ

ಈ ವರ್ಷದ ಫೆಬ್ರವರಿಯಲ್ಲಿ, ಮಾಜಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ನೇತೃತ್ವದ ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಗೃಹ ಇಲಾಖೆಯಲ್ಲಿ ಕಾನ್‌ಸ್ಟೆಬಲ್ ಮತ್ತು ಗೆಜೆಟೆಡ್ ಅಲ್ಲದ ಸಿಬ್ಬಂದಿ ನೇಮಕಾತಿಯಲ್ಲಿ ಮಹಿಳೆಯರಿಗೆ 33% ಅಡ್ಡ ಮೀಸಲಾತಿಯನ್ನು ಶಿಫಾರಸು ಮಾಡಿತ್ತು.

ಆಯೋಗವು ತನ್ನ ಎರಡನೇ ಮತ್ತು ಮೂರನೇ ವರದಿಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿತು. ರಾಜ್ಯದಲ್ಲಿ 2020 ರ ವೇಳೆಗೆ ಗೆಜೆಟೆಡ್ ಅಲ್ಲದ ಪೊಲೀಸ್ ಸಿಬ್ಬಂದಿಯಲ್ಲಿ ಮಹಿಳಾ ಪ್ರಾತಿನಿಧ್ಯವು ಕೇವಲ 8.3% ಇದೆ ಎಂಬುದನ್ನು ಆಯೋಗ ಗಮನಿಸಿದೆ. ರಾಜ್ಯವು ಕಾನ್‌ಸ್ಟೆಬಲ್‌ಗಳು ಮತ್ತು ಇತರ ಪೋಸ್ಟ್‌ಗಳ ನೇಮಕಾತಿಯಲ್ಲಿ ಮಹಿಳೆಯರಿಗೆ 25% ಮೀಸಲಾತಿಯನ್ನು ಕಡ್ಡಾಯಗೊಳಿಸಿದೆ.

English summary
Need for more women in reserve forces to control protesters, police are taking a re-look at the gender composition says Karnataka DG and IGP Praveen Sood. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X