ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು : ನೀರಿನ ಸಂಪರ್ಕ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಹಾಕಿ

|
Google Oneindia Kannada News

ಬೆಂಗಳೂರು, ಜನವರಿ 21 : ಬೆಂಗಳೂರು ನಗರದಲ್ಲಿ ಕಾವೇರಿ ನೀರು ಹಾಗೂ ಒಳಚರಂಡಿ ಸಂಪರ್ಕ ಪಡೆಯಲು ಇನ್ನು ಮುಂದೆ ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಬೇಕಾಗಿದೆ. ಸದ್ಯ, ಕಚೇರಿಯಲ್ಲಿ ಅರ್ಜಿ ಸಲ್ಲಿಸುವ ಪದ್ಧತಿ ಇದ್ದು, ಅದನ್ನು ಜನವರಿ 31ರಂದು ಸ್ಥಗಿತಗೊಳಿಸಲಾಗುತ್ತದೆ ಎಂದು ಜಲಮಂಡಳಿ ಪ್ರಕಟಣೆಯಲ್ಲಿ ಹೇಳಿದೆ.

ಬೆಂಗಳೂರು ಜಲಮಂಡಳಿ ತನ್ನ www.mybwssb.org ವೆಬ್‌ಸೈಟ್‌ ಅನ್ನು ಗ್ರಾಹಕ ಸ್ನೇಹಿಯಾಗಿ ಪರಿವರ್ತಿಸಿದೆ. ಹೊಸ ನೀರಿನ ಸಂಪರ್ಕ, ಬಿಲ್, ಪಾವತಿ, ದೂರು ಮುಂತಾದ ಸೇವೆಗಳು ಈಗ ಆನ್‌ಲೈನ್ ಮೂಲಕವೇ ಲಭ್ಯವಾಗಲಿವೆ. [ಹೊಸದಾಗಿ ನೀರಿನ ಸಂಪರ್ಕ ಪಡೆಯುವುದು ಹೇಗೆ?]

online

ನೀರಿನ ಸಂಪರ್ಕ ಪಡೆಯುವುದು : ಜನವರಿ 25ರಿಂದ ಹೊಸದಾಗಿ ನೀರಿನ ಸಂಪರ್ಕ ಪಡೆಯಲು ಸಾರ್ವಜನಿಕರು ಆನ್‌ಲೈನ್ ಮೂಲಕವೇ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. www.mybwssb.org ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್‌ ಸಂಪರ್ಕದ ಲಿಂಕ್‌ ಕ್ಲಿಕ್‌ ಮಾಡಿ ನೋಂದಣಿ ಮಾಡಿಕೊಳ್ಳಬೇಕು. [ಪ್ರೋರೇಟಾ ಶುಲ್ಕ ಹೆಚ್ಚಿಸಿದ ಬೆಂಗಳೂರು ಜಲಮಂಡಳಿ]

ಗ್ರಾಹಕರು ನೀಡಿದ ಇಮೇಲ್‌ ಐಡಿಗೆ ಬಳಕೆದಾರರ ಐಡಿ ಹಾಗೂ ಪಾಸ್‌ವರ್ಡ್‌ ಅನ್ನು ರವಾನಿಸಲಾಗುತ್ತದೆ. ಅದನ್ನು ಬಳಸಿಕೊಂಡು ಅರ್ಜಿ ಭರ್ತಿ ಮಾಡಬಹುದು. ಸಂಪರ್ಕ ಮಂಜೂರಾತಿವರೆಗಿನ ಎಲ್ಲಾ ಪ್ರಕ್ರಿಯೆಗಳು ಆನ್‌ಲೈನ್‌ ಮೂಲಕವೇ ನಡೆಯಲಿವೆ ಎಂದು ಜಲಮಂಡಳಿ ಸ್ಪಷ್ಟಪಡಿಸಿದೆ. [ಕುಡಿಯುವ ನೀರಿಗೆ ಪ್ರಧಾನಿಗೆ ಪತ್ರ ಬರೆದ ಬೆಂಗಳೂರಿಗ]

ಸದ್ಯ ಕಚೇರಿಗಳಿಗೆ ತೆರಳಿ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬೇಕಾಗಿದೆ. ಜನವರಿ 31ರಿಂದ ಈ ಸೇವೆ ಸ್ಥಗಿತಗೊಳಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ [email protected] ಸಂಪರ್ಕಿಸಬಹುದಾಗಿದೆ.

English summary
Now its mandatory to apply for Bangalore Water Supply And Sewerage Board (BWSSB)new connection through online. For details visit www.mybwssb.org website.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X