ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಮಾರ್ಚ್‌ನಲ್ಲಿ ಕೊರೊನಾ ಸೋಂಕಿಗೆ ತುತ್ತಾದ ಮಕ್ಕಳೆಷ್ಟು?

|
Google Oneindia Kannada News

ಬೆಂಗಳೂರು, ಏಪ್ರಿಲ್ 1: ಕರ್ನಾಟಕದಲ್ಲಿ ನಿತ್ಯ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ 2928 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಬೆಂಗಳೂರಲ್ಲಿ ಕಳೆದ ಒಂದು ತಿಂಗಳಲ್ಲಿ ಬರೋಬ್ಬರಿ 500 ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ ಎಂಬುದು ತಿಳಿದುಬಂದಿದೆ.

ಸಿಹಿಸುದ್ದಿ: 12-15 ವರ್ಷದೊಳಗಿನ ಮಕ್ಕಳಿಗೂ ಬಂತು ಕೊರೊನಾ ಲಸಿಕೆ!ಸಿಹಿಸುದ್ದಿ: 12-15 ವರ್ಷದೊಳಗಿನ ಮಕ್ಕಳಿಗೂ ಬಂತು ಕೊರೊನಾ ಲಸಿಕೆ!

ಬುಧವಾರ 10 ವರ್ಷದೊಳಿಗಿರುವ ಸುಮಾರು 50 ಮಕ್ಕಳಿಗೆ ಸೋಂಕು ತಗುಲಿದೆ. ಮಾರ್ಚ್ ಆರಂಭದಿಂದ 32 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಪರೀಕ್ಷೆ ನಡೆಸಲಾಗಿದೆ. ಬೆಂಗಳೂರಿನಲ್ಲಿ ಸಾಕಷ್ಟು ಮಕ್ಕಳು ಕೊರೊನಾ ಸೋಂಕಿಗೆ ಒಳಗಾಗಿಲ್ಲ ಆದರೆ ನಿತ್ಯ ಈ ಸಂಖ್ಯೆ ಹೆಚ್ಚಾಗುತ್ತಿದೆ.

 Nearly 500 Children Tested Positive For COVID-19 In Bengaluru

ಬೆಂಗಳೂರಿನಲ್ಲಿ 20 ರಿಂದ 40 ವರ್ಷದೊಳಗಿನವರು ಕೊರೊನಾ ಸೋಂಕಿಗೆ ಹೆಚ್ಚು ತುತ್ತಾಗುತ್ತಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೊರೊನಾ ಮೊದಲ ಅಲೆಯ ನಂತರ ಹಲವು ಶಾಲಾ ಕಾಲೇಜುಗಳು ಪುನರಾರಂಭಗೊಂಡಿದ್ದು, ಕೊರೊನಾ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವ ಉದ್ದೇಶದಿಂದ 12 ರಿಂದ 15 ವರ್ಷದೊಳಗಿನ ಮಕ್ಕಳ ಮೇಲೆ ತಮ್ಮ ಸಂಸ್ಥೆಯ ಲಸಿಕೆಯು ಶೇ.100ರಷ್ಟು ಪರಿಣಾಮಕಾರಿ ಆಗಿದೆ ಎಂದು ಬಯೋಎನ್‌ಟೆಕ್ ಮತ್ತು ಫೈಜರ್ ಸ್ಪಷ್ಟಪಡಿಸಿದೆ.

ಮುಂದಿನ ಶೈಕ್ಷಣಿಕ ವರ್ಷದ ಆರಂಭಕ್ಕೂ ಮೊದಲೇ ಈ ಲಸಿಕೆಗೆ ಅನುಮೋದನೆ ಪಡೆಯುವತ್ತ ಸಂಸ್ಥೆಯು ಲಕ್ಷ್ಯ ನೆಟ್ಟಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ 2,260 ಮಕ್ಕಳ ಮೇಲೆ ನಡೆಸಿದ 3 ಹಂತದ ಪ್ರಯೋಗಗಳು ಶೇ.100ರಷ್ಟು ಪರಿಣಾಮಕಾರಿಯಾಗಿವೆ ಎಂದು ಕಂಪನಿ ತಿಳಿಸಿವೆ.

Recommended Video

ಕರ್ನಾಟಕ: ಇಂದಿನಿಂದ 45 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ವಿತರಣೆ | Oneindia Kannada

ಮುಂದಿನ ವರ್ಷ ಶಾಲೆ ಪ್ರಾರಂಭಕ್ಕೂ ಮೊದಲು ಈ ವಯಸ್ಸಿನವರಿಗೆ ಲಸಿಕೆ ನೀಡಬೇಕಿದೆ. ಹೊಸ ಭರವಸೆಯೊಂದಿಗೆ ಮುಂಬರುವ ವಾರಗಳಲ್ಲಿ ನಮ್ಮ ತುರ್ತು ಬಳಕೆ ದೃಢೀಕರಣ ಹಾಗೂ ವಿಶ್ವದ ಇತರ ನಿಯಂತ್ರಕರಿಗೆ ಪ್ರಸ್ತಾವಿತ ತಿದ್ದುಪಡಿಗಾಗಿ ಈ ದತ್ತಾಂಶವನ್ನು (ಯುಎಸ್ ನಿಯಂತ್ರಕ) ಎಫ್‌ಡಿಎಗೆ ಸಲ್ಲಿಸುವದಕ್ಕೆ ಯೋಜಿಸುತ್ತಿದ್ದೇವೆ ಎಂದು ಫೈಜರ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಲ್ಬರ್ಟ್ ಬೌರಿಯಾ ತಿಳಿಸಿದ್ದಾರೆ.

English summary
Around 500 children have tested positive for the highly contagious virus so far this month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X