ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಬೀದಿ ನಾಯಿ ಹಾವಳಿ: 7 ತಿಂಗಳಲ್ಲಿ 10 ಸಾವಿರ ಜನರ ಮೇಲೆ ದಾಳಿ

|
Google Oneindia Kannada News

ಬೆಂಗಳೂರು, ಆಗಸ್ಟ್ 12: ಬೆಂಗಳೂರಿನಲ್ಲಿ 2020 ರಿಂದ ಬೀದಿ ನಾಯಿಗಳ ದಾಳಿಯು ಗಮನಾರ್ಹ ಕುಸಿತ ಕಂಡಿದೆ, ಆದರೆ ನಗರದಲ್ಲಿ ವೇಗವಾಗಿ ಹೆಚ್ಚುತ್ತಿರುವ ಬೀದಿ ನಾಯಿಗಳ ಸಂಖ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಹಿಡಿಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ರಯತ್ನ ಮಾಡುತ್ತಿದೆ.

ಬಿಬಿಎಂಪಿ ಡೇಟಾ ಪ್ರಕಾರ, 2020 ರಿಂದ ಬೆಂಗಳೂರಿನಲ್ಲಿ ಬೀದಿನಾಯಿಗಳಿಂದ 50,000 ಕ್ಕೂ ಹೆಚ್ಚು ದಾಳಿಗಳು ನಡೆದಿವೆ. 2022ರ ವರ್ಷದಲ್ಲಿ ಜುಲೈವರೆಗೆ ಸುಮಾರು 10,000 ಜನರಿಗೆ ಬೀದಿ ನಾಯಿಗಳು ಕಚ್ಚಿವೆ.

ಬೆಂಗಳೂರಿಗರಿಗೆ ಬೀದಿನಾಯಿ ಕಾಟ: ಎರಡು ವರ್ಷದಲ್ಲಿ 52,262 ಮಂದಿಗೆ ಕಡಿತ!ಬೆಂಗಳೂರಿಗರಿಗೆ ಬೀದಿನಾಯಿ ಕಾಟ: ಎರಡು ವರ್ಷದಲ್ಲಿ 52,262 ಮಂದಿಗೆ ಕಡಿತ!

2020ರ ವರ್ಷದಲ್ಲಿ ಅತಿ ಹೆಚ್ಚು ಬೀದಿನಾಯಿ ದಾಳಿ ಮಾಡಿದ ಘಟನೆಗಳು ಬಿಬಿಎಂಪಿಯ ಪೂರ್ವ, ದಕ್ಷಿಣ ಮತ್ತು ಪಶ್ಚಿಮ ವಲಯಗಳಲ್ಲಿ ನಡೆದಿದ್ದವು. 2021ರಲ್ಲಿ ಈ ಪ್ರದೇಶಗಳಲ್ಲಿ ಬೀದಿ ನಾಯಿ ದಾಳಿಗಳು ಗಣನೀಯವಾಗಿ ಕಡಿಮೆಯಾಗಿದೆ. ಆದರೆ 2022ರ ಜುಲೈವರೆಗಿನ ಅಂಕಿಅಂಶಗಳು ದಾಳಿಗಳ ಹೆಚ್ಚಳವನ್ನು ತೋರಿಸಿದೆ.

ಈ ವರ್ಷ ಮಾರ್ಚ್ ಮತ್ತು ಮೇ ತಿಂಗಳಲ್ಲಿ ನಗರದಲ್ಲಿ ಅತಿ ಹೆಚ್ಚು ಬೀದಿ ನಾಯಿಗಳ ದಾಳಿ ವರದಿಯಾಗಿದೆ. ಇತರೆ ತಿಂಗಳ ಅವಧಿಯಲ್ಲಿ 1,000 ಕ್ಕೂ ಹೆಚ್ಚು ದಾಳಿಗಳು ವರದಿಯಾಗಿವೆ ಜುಲೈ ತಿಂಗಳಲ್ಲಿ ಬೀದಿ ನಾಯಿಗಳ ದಾಳಿ ಘಟನೆಯಲ್ಲಿ ಇಳಿಕೆಯಾಗಿದ್ದು, 483 ಘಟನೆಗಳು ವರದಿಯಾಗಿದೆ.

 ಬೀದಿ ನಾಯಿ ಪತ್ತೆ ಹಚ್ಚಲು ಬಿಬಿಎಂಪಿ ಹೆಣಗಾಟ

ಬೀದಿ ನಾಯಿ ಪತ್ತೆ ಹಚ್ಚಲು ಬಿಬಿಎಂಪಿ ಹೆಣಗಾಟ

ಬಿಬಿಎಂಪಿಯ ಪಶುಸಂಗೋಪನಾ ಇಲಾಖೆಯು ನಗರದಲ್ಲಿ ಬೀದಿ ನಾಯಿಗಳ ಸಮಸ್ಯೆಗಳನ್ನು ನಿಭಾಯಿಸುತ್ತದೆ. ನಾಯಿಗಳನ್ನು ಸಂತಾನಹರಣ ಮಾಡುವ ಅನಿಮಲ್ ಬರ್ತ್ ಕಂಟ್ರೋಲ್ (ಎಬಿಸಿ) ನಂತಹ ವಿಧಾನಗಳನ್ನು ಅಳವಡಿಸಿಕೊಂಡಿದ್ದರೂ, ಇಲಾಖೆಯು ಬೀದಿನಾಯಿಗಳನ್ನು ಪತ್ತೆಹಚ್ಚಲು ಮತ್ತು ಹಿಡಿಯಲು ಇನ್ನೂ ಹೆಣಗಾಡುತ್ತಿದೆ.

ಪಶುಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕ ಡಾ.ಕೆ.ಪಿ.ರವಿಕುಮಾರ್ ಮಾತನಾಡಿ, ಬೀದಿನಾಯಿಗಳನ್ನು ಹಿಡಿಯುವುದು ಮತ್ತು ಅವುಗಳ ಸಂತಾನೋತ್ಪತ್ತಿ ಸಾಮರ್ಥ್ಯ ಬಿಬಿಎಂಪಿಗೆ ಸಾಕಷ್ಟು ಸಮಸ್ಯೆ ಎದುರಾಗಿದೆ.

 ಕಾರ್ಯಾಚರಣೆ ವೇಳೆ ತಪ್ಪಿಸಿಕೊಳ್ಳುವ ನಾಯಿಗಳು

ಕಾರ್ಯಾಚರಣೆ ವೇಳೆ ತಪ್ಪಿಸಿಕೊಳ್ಳುವ ನಾಯಿಗಳು

"ನಿರ್ದಿಷ್ಟ ಪ್ರದೇಶದಲ್ಲಿ 10 ನಾಯಿಗಳ ಒಂದು ಗುಂಪು ಇದ್ದರೆ, ನಮ್ಮ ನಾಯಿ ಹಿಡಿಯುವ ತಂಡ ಅವುಗಳಲ್ಲಿ ಕೆಲವನ್ನು ಮಾತ್ರ ಹಿಡಿಯುತ್ತಾರೆ. ಬೀದಿ ನಾಯಿಗಳು ತುಂಬಾ ವೇಗವಾಗಿ ಮತ್ತು ಚುರುಕಾಗಿರುತ್ತವೆ ಮತ್ತು ಚರಂಡಿಗಳ ಕೆಳಗೆ ಅಡಗಿಕೊಳ್ಳುತ್ತವೆ ಅಥವಾ ಸ್ಥಳದಿಂದ ತಪ್ಪಿಸಿಕೊಳ್ಳುತ್ತವೆ. ಎರಡು ನಾಯಿಗಳು ಸಿಕ್ಕಿಬಿದ್ದರೂ ಸಹ. ತಪ್ಪಿಸಿಕೊಂಡ ನಾಯಿಗಳು ಸಂತಾನೋತ್ಪತ್ತಿ ಮಾಡುತ್ತವೆ. ಇದರ ಪರಿಣಾಮವಾಗಿನಾಯೊಗಳ ಸಂಖ್ಯೆ ಹೆಚ್ಚಾಗುತ್ತದೆ. ಇದು ನಾವು ಎದುರಿಸುತ್ತಿರುವ ದೊಡ್ಡ ಸಮಸ್ಯೆಗಳಲ್ಲಿ ಒಂದಾಗಿದೆ" ಎಂದು ರವಿಕುಮಾರ್ ಹೇಳಿದ್ದಾರೆ.

 ಬೆಂಗಳೂರಿನಲ್ಲಿವೆ 3 ಲಕ್ಷಕ್ಕೂ ಅಧಿಕ ಬೀದಿ ನಾಯಿಗಳು

ಬೆಂಗಳೂರಿನಲ್ಲಿವೆ 3 ಲಕ್ಷಕ್ಕೂ ಅಧಿಕ ಬೀದಿ ನಾಯಿಗಳು

ಬಿಬಿಎಂಪಿಯ ಅಂದಾಜಿನ ಪ್ರಕಾರ, ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ 3 ಲಕ್ಷಕ್ಕಿಂತ ಹೆಚ್ಚಿದೆ. ಇದರಲ್ಲಿ, ಬಿಬಿಎಂಪಿ 1,42,544 ಬೀದಿ ನಾಯಿಗಳ ಸಂತಾನಹರಣ ಮಾಡಿದೆ. 57,481 ನಾಯಿಗಳಿಗೆ ಜೂನ್ 2022 ರವರೆಗೆ ಸಂತಾನಹರಣ ಮಾಡಲಾಗಿದೆ. ಆದರೂ, ಬೀದಿ ನಾಯಿಗಳ ಸಂಖ್ಯೆಯ ಅರ್ಧದಷ್ಟು ನಾಯಿಗಳಿಗೆ ಇನ್ನೂ ಸಂತಾನಹರಣ ಮಾಡಲಾಗಿಲ್ಲ.

ಈ ವರ್ಷ ಜೂನ್‌ವರೆಗೆ 1,67,368 ನಾಯಿಗಳಿಗೆ ರೇಬಿಸ್‌ ಲಸಿಕೆ ಹಾಕಲಾಗಿದೆ ಎಂದು ಬಿಬಿಎಂಪಿ ಅಂಕಿ ಅಂಶ ತಿಳಿಸಿದೆ. ಸುಲಭವಾಗಿ ಗುರುತಿಸಲು, ನಾಯಿಗೆ ಸಂತಾನಹರಣ ಮತ್ತು ಲಸಿಕೆ ಹಾಕಿದ ನಂತರ, ಬಿಬಿಎಂಪಿ ಅಂತನ ನಾಯಿಗಳ ಎರಡು ಕಿವಿಗಳನ್ನು ಕ್ಲಿಪ್ ಮಾಡುತ್ತದೆ.

 ಬಿಬಿಎಂಪಿಗೆ ಕಾನೂನು ತೊಡಕು

ಬಿಬಿಎಂಪಿಗೆ ಕಾನೂನು ತೊಡಕು

"ಬಿಬಿಎಂಪಿ ಆಯುಕ್ತರು ಸೇರಿದಂತೆ ಉನ್ನತ ಅಧಿಕಾರಿಗಳು ಈ ಸಮಸ್ಯೆಗಳನ್ನು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಗೆ (ಎಡಬ್ಲ್ಯುಬಿಐ) ತಿಳಿಸಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ" ಎಂದು ಅವರು ಹೇಳಿದರು.

"ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ನಿಯಮಗಳ ಪ್ರಕಾರ, ಪ್ರಾಣಿಗಳ ಸಂತಾನ ಹರಣ ಮಾಡಲು ಸರ್ಕಾರಿ ಸಂಸ್ಥೆಗಳಿಗೆ ಯಾವುದೇ ಅನುಮತಿ ಇಲ್ಲ. ಈ ಕೆಲಸಕ್ಕಾಗಿ ಕಲ್ಯಾಣ ಮತ್ತು ಸರ್ಕಾರೇತರ ಸಂಸ್ಥೆಗಳು ಮಾತ್ರ ನೋಂದಾಯಿಸಿಕೊಳ್ಳಬಹುದು. ಇಲಾಖೆಯು ಪರಿಣಿತ ಪಶುವೈದ್ಯರನ್ನು ಹೊಂದಿದ್ದರೂ ಎಡಬ್ಲ್ಯೂಬಿಐ ನಿಯಮಗಳ ಪ್ರಕಾರ ಬಿಬಿಎಂಪಿ ಸಿಬ್ಬಂದಿ ಬೀದಿ ನಾಯಿಗಳಿಗೆ ಸಂತಾನಹರಣ ಮಾಡಲು ಅನುಮತಿಸುವುದಿಲ್ಲ" ಎಂದು ಹೇಳಿದರು.

ಪ್ರಸ್ತುತ, ನಾಲ್ಕು ಸಂಸ್ಥೆಗಳು ಪಶುಸಂಗೋಪನೆ ಇಲಾಖೆಯ ಜನನ ನಿಯಂತ್ರಣ ಕಾರ್ಯಕ್ರಮದ ಭಾಗವಾಗಿದೆ. ಸಿಯುಪಿಎ (CUPA) ಅಂತಹ ಸಂಸ್ಥೆಗಳಲ್ಲಿ ಒಂದಾಗಿದೆ, ಇದು ಬಿಬಿಎಂಪಿಯ ದಕ್ಷಿಣ ವಲಯದಲ್ಲಿ ಜನನ ನಿಯಂತ್ರಣ ಕಾರ್ಯಕ್ರಮದ ಭಾಗವಾಗಿ ಕಾರ್ಯನಿರ್ವಹಿಸುತ್ತಿದೆ, ಆದರೆ ಪ್ರಸ್ತುತ ಅದು ಕಾರ್ಯಕ್ರಮದಿಂದ ಹೊರಗುಳಿದಿದೆ.

"ನಾವು ಕಾರ್ಯನಿರ್ವಹಿಸುತ್ತಿದ್ದ ಪ್ರದೇಶದಲ್ಲಿ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣದಲ್ಲಿದೆ ಎಂದು ನಾವು ಕಾರ್ಯಕ್ರಮದಿಂದ ಹೊರನಡೆಯಲು ನಿರ್ಧರಿಸಿದ್ದೇವೆ. ಆದರೆ ಕೆಲವು ಪ್ರದೇಶಗಳಲ್ಲಿ ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ನಾಯಿಗಳನ್ನು ಹಿಡಿಯಲು ಸಮಸ್ಯೆಗಳಿವೆ." ಎಂದು ಸಿಯುಪಿಎ ಸಹ-ಸಂಸ್ಥಾಪಕಿ ಡಾ. ಶೀಲಾ ರಾವ್ ಹೇಳಿದ್ದಾರೆ.

ಹಣ ಪಾವತಿ ಮಾಡಲು ಬಿಬಿಎಂಪಿ ವಿಳಂಬ ಮಾಡುತ್ತಿರುವುದು ಕೂಡ ಕಾರ್ಯಕ್ರಮದಿಂದ ಹೊರಗುಳಿಯಲು ಕಾರಣ ಎಂದು ಅವರು ಹೇಳಿದ್ದಾರೆ.

Recommended Video

World Elephant Day SPECIAL: cute baby elephant entered home because of flood | *India | Oneindia

English summary
This year, till July, nearly 10,000 people were bitten by stray dogs in Bengaluru. As per the BBMP data Bengaluru has seen over 50,000 attacks from stray dogs since 2020. This year, in March and May, the highest number of stray dog attacks were reported in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X