ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಟ ದರ್ಶನ್‌ ವಿರುದ್ಧ ತನಿಖೆ ನಡೆಸಲಾಗುತ್ತಿದೆ: ಎಸಿಪಿ ಸಂದೀಪ್ ಪಾಟೀಲ್

|
Google Oneindia Kannada News

ಬೆಂಗಳೂರು, ಆಗಸ್ಟ್ 09: ನಟ ದರ್ಶನ್‌ ವಿರುದ್ದ ಎನ್‌ಸಿಆರ್ ದಾಖಲಾಗಿದೆ. ಪ್ರಕರಣ ಸಂಬಂಧ ತನಿಖೆಯನ್ನು ನಡೆಸಲಾಗುತ್ತಿದೆ. ಈ ಪ್ರಕರಣ ಸಂಬಂಧಪಟ್ಟವರ ಹೇಳಿಕೆ ಪಡೆಯಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.

ನಟ ದರ್ಶನ್‌ಗೂ ವಿವಾದಕ್ಕೂ ನಂಟು ಬೆಸೆದಂತಿದೆ. ಒಂದಲ್ಲ ಒಂದು ವಿವಾದದಲ್ಲಿ ನಟ ದರ್ಶನ್ ಸಿಲುಕಿ ಹಾಕಿಕೊಳ್ಳುತ್ತಿದ್ದಾರೆ. ನಿರ್ಮಾಪಕರಿಗೆ ಧಮ್ಕಿ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗು ಧ್ರುವನ್ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ.

ನಟ ದರ್ಶನ್ ಹಾಗು ಧ್ರುವನ್ ಎಂಬಾತ ಬೆದರಿಕೆ ಹಾಕಿದ್ದಾನೆಂದು ಆರೋಪಿಸಿ ನಿರ್ಮಾಪಕರೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಭರತ್ ಎಂಬ ನಿರ್ಮಾಪಕ ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಎಂಬ ಚಿತ್ರವನ್ನ ನಿರ್ಮಿಸಿದ್ದು ಹಣಕಾಸಿನ ತೊಂದರೆಯಿಂದಾಗಿ ಸ್ವಲ್ಪ ದಿನಗಳ ಕಾಲ ಚಿತ್ರೀಕರಣ ಸ್ಥಗಿತಗೊಳಿಸಿದ್ದರು.

ಈ ಹಿನ್ನಲೆ ಚಿತ್ರದ ನಾಯಕ ಧ್ರುವನ್ ಮತ್ತೊಬ್ಬ ನಟ ದರ್ಶನ್ ಬಳಿ ತೆರಳಿ ನಿರ್ಮಾಪಕ ಭರತ್‌ಗೆ ಕರೆ ಮೂಲಕ ಧಮ್ಕಿ ಹಾಕಿದ್ದಾರೆಂದು ಆರೋಪಿಸಿದ್ದಾರೆ. ಅದಕ್ಕೆ ಪೂರಕವಾಗಿ ಆಡಿಯೋ ರೆಕಾರ್ಡ್ ಕೂಡ ಭರತ್ ಬಳಿ ಇದೆ. ಆ ಆಡಿಯೋದಲ್ಲಿ ನಟ ದರ್ಶನ್ ನೀನ್ ಉಳಿಯಲ್ಲ ಎಂಬ ರೀತಿಯಲ್ಲಿ ಮಾತನಾಡಿರುವುದರಿಂದ ತನಗೆ ಜೀವ ಬೆದರಿಕೆ ಇದೆ ಎಂದು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ನಿರ್ಮಾಪಕ ಭರತ್ ದೂರು ದಾಖಲಿಸಿದ್ದಾರೆ.

 ಒಂದೂವರೆ ವರ್ಷದ ಹಿಂದಿನ ಘಟನೆ

ಒಂದೂವರೆ ವರ್ಷದ ಹಿಂದಿನ ಘಟನೆ

ಪಶ್ಚಿಮ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ "ಘಟನೆ ಸಂಬಂಧ ದೂರಿನ ಅನ್ವಯ ಎನ್‌ಸಿಆರ್ ದಾಖಲು ಮಾಡಿ ತನಿಖೆ ನಡೆಸಲಾಗುತ್ತಿದೆ. ಕಾನೂನು ಪ್ರಕಾರವಾಗಿ ತನಿಖೆ ನಡೆಸಲಾಗುತ್ತದೆ. ಅಗತ್ಯ ಇದ್ದವರ ಹೇಳಿಕೆ ಪಡೆಯಲಾಗುತ್ತಿದ್ದೂ ತನಿಖೆ ಮುಂದುವರೆಸಲಾಗುತ್ತದೆ. ಒಂದುವರೆ ವರ್ಷದ ಹಿಂದೆ ನಡೆದಿರೊ ಘಟನೆ ಈಗ ದೂರು ನೀಡಲಾಗಿದೆ" ಎಂದು ಹೇಳಿದ್ದಾರೆ.

 ಜೀವ ಬೆದರಿಕೆಯ ಆರೋಪ

ಜೀವ ಬೆದರಿಕೆಯ ಆರೋಪ

ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಎಂಬ ಚಿತ್ರವನ್ನು ನಿರ್ಮಿಸುತ್ತಿರುವ ನಿರ್ಮಾಪಕನಿಗೆ ಧಮ್ಕಿ ಹಾಕಿರುವ ಆರೋಪ ನಟ ದರ್ಶನ್ ಮೇಲೆ ಕೇಳಿಬಂದಿದೆ. ನಾಯಕ ಧ್ರುವನ್ ಮತ್ತೊಬ್ಬ ನಟ ದರ್ಶನ್ ಬಳಿ ತೆರಳಿ ನಿರ್ಮಾಪಕ ಭರತ್‌ಗೆ ಕರೆ ಮೂಲಕ ಧಮ್ಕಿ ಹಾಕಿದ್ದಾರೆಂದು ಆರೋಪಿಸಿದ್ದಾರೆ. ಅದಕ್ಕೆ ಪೂರಕವಾಗಿ ಆಡಿಯೋ ರೆಕಾರ್ಡ್ ಕೂಡ ಭರತ್ ಬಳಿ ಇದೆ. ಆ ಆಡಿಯೋದಲ್ಲಿ ನಟ ದರ್ಶನ್ ನೀನ್ ಉಳಿಯಲ್ಲ ಎಂಬ ರೀತಿಯಲ್ಲಿ ಮಾತನಾಡಿರುವುದರಿಂದ ತನಗೆ ಜೀವ ಬೆದರಿಕೆ ಇದೆ ಎಂದು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ನಿರ್ಮಾಪಕ ಭರತ್ ದೂರು ದಾಖಲಿಸಿದ್ದಾರೆ. ಇನ್ನು ಅದೇ ಆಡಿಯೋದಲ್ಲಿ , ಸಿನಿಮಾ ಬಿಟ್ಟುಕೊಡು ಅದರ ದುಡ್ಡೇನಿದ್ಯೋ ಅದನ್ನ ಸೆಟ್ಲ್ ಮಾಡ್ತಿನಿ ಎಂದು ಹೇಳಿದ್ದು ದರ್ಶನ್ ತನ್ನ ಚಿತ್ರದ ಚಿತ್ರೀಕರಣಕ್ಕೆ ಸ್ಥಳಕ್ಕೆ ಕರೆಸಿಕೊಂಡಿದ್ದಾರಂತೆ ಆದರೆ ಇಲ್ಲಿಯವರೆಗೆ ಯಾವುದೇ ಸೆಟ್ಲ್ ಮೆಂಟ್ ಮಾಡಿಲ್ಲ ಎಂದು ಭರತ್ ಆರೋಪವಾಗಿದೆ. ಸದ್ಯ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ನಟ ದರ್ಶನ್ ಹಾಗು ಧ್ರುವನ್ ವಿರುದ್ಧ ಎನ್‌ಸಿಆರ್ ದಾಖಲಾಗಿದೆ.

 ಅರ್ಧಕ್ಕೆ ನಿಂತಿದ್ದ ಸಿನಿಮಾ

ಅರ್ಧಕ್ಕೆ ನಿಂತಿದ್ದ ಸಿನಿಮಾ

"ನಾವು ಧ್ರುವನ್ ಜೊತೆಗೆ ಸಿನಿಮಾ ಮಾಡುತ್ತಿದ್ದೆವು. ಧ್ರುವನ್ ಸಹ ತನಗೆ ದರ್ಶನ್ ಮನೆಯಲ್ಲೆ ಪರಿಚಯ ಆಗಿದ್ದು. ಸಿನಿಮಾ ಮೊದಲ ಹಂತ ಶೂಟ್ ಆದ ಬಳಿಕ ನಮಗೆ ಹಣದ ಸಮಸ್ಯೆ ಆಯ್ತು. ಅದಕ್ಕೆ ಸಿನಿಮಾ ಶೂಟಿಂಗ್ ಲೇಟ್ ಮಾಡಿದ್ದೇವು. ಈ ನಡುವೆ ತನಗೆ ಕರೆ ಮಾಡಿಸಿ ಬೆದರಿಕೆ ಹಾಕಿದರು. ಸಿನಿಮಾ ಸೆಟ್‌ಗೆ ಕರೆಸಿ ನೀನು ನಿಸಿಮಾ ಮಾಡ್ಬೇಡ ಬೇರೆ ಸಿನಿಮಾ ಮಾಡಿ ಈ ಸಿನಿಮಾಗೆ ಎಷ್ಟು ಹಣ ಹಾಕಿದ್ದಿಯಾ ಅದನ್ನು ಸೆಟಲ್ ಮೆಂಟ್ ಮಾಡ್ಕೊ ಎಂದು ಹೇಳಿದರು. ಆದರೆ ಇದುವರೆಗೆ ಸೆಟಲ್ ಮೆಂಟ್ ಮಾಡಿಲ್ಲಾ, ನಾನು ದೂರು ಕೊಟ್ಟಿದ್ದೇನೆ. ಆಡಿಯೋ ಸಹ ನಾನು ಕೊಟ್ಟಿದ್ದೇನೆ" ಎಂದು ನಿರ್ಮಾಪಕ ಭರತ್ ಹೇಳಿದ್ದಾರೆ.

 ತಾಯಿ ಚಾಮುಂಡೇಶ್ವರಿ ಸನ್ನಿದಿಗೆ ಆಹ್ವಾನಿಸಿದ ನಿರ್ಮಾಪಕ

ತಾಯಿ ಚಾಮುಂಡೇಶ್ವರಿ ಸನ್ನಿದಿಗೆ ಆಹ್ವಾನಿಸಿದ ನಿರ್ಮಾಪಕ

"ಇನ್ನಷ್ಟು ಆಡಿಯೋ ಹಾಗು ವಿಡಿಯೋ ಇದೆ ಅದನ್ನು ಕೋರ್ಟ್ ಗೆ ಕೊಡ್ತಿನಿ. ನಾನು ಎಲ್ಲಿಯೂ ಸುಳ್ಳು ಹೇಳಿಲ್ಲಾ. ನಾನೇ ಸುಳ್ಳು ಹೇಳಿದ್ದಿನಿ ಅಂದರೆ ಎಲ್ಲರು ಬರಲಿ ತಾಯಿ ಚಾಮುಂಡೇಶ್ವರಿ ಹತ್ತಿರ ಸತ್ಯ ಮಾಡೋಣ, ಅವರು ಸೆಟಲ್ ಮಾಡಿದರೇ ನಾನು ಎನ್ಒಸಿ ಕೊಟ್ಟು ಸಿನಿಮಾ ಇಂದ ಹೊರ ಹೋಗುತ್ತೇನೆ. ತನಗೆ ಅವರು ಫೋನ್ ನಲ್ಲಿ ನೀನೆ ಇರಲ್ಲಾ ಅನ್ನೊ ಮಾತು ಹೇಳಿದ್ದಾರೆ ಅದರ ಅರ್ಥ ಬೇರೆ ರೀತಿ ಇದೆ. ಕಾನೂನು ಹೋರಾಟ ಮುಂದುವರೆಲಾಗುವುದು" ಎಂದು ನಿರ್ಮಾಪಕ ಭರತ್ ಹೇಳಿದ್ದಾರೆ.

Recommended Video

BJP ಈ 6 ಸಂಸದರಿಗೆ ಮುಂದಿನ ಚುನಾವಣೆಯಲ್ಲಿ ನೋ ಟಿಕೆಟ್? | *Politics | OneIndia Kannada

English summary
NCR has been registered against actor Darshan. An investigation into the case is underway. Additional Commissioner of Police Sandeep Patil said that the statement of those concerned in this case will be taken,Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X