ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಆಫ್ರಿಕಾ ಮೂಲದ 9 ಡ್ರಗ್ಸ್ ಪೆಡ್ಲರ್ಸ್ ಬಂಧನ

|
Google Oneindia Kannada News

ಬೆಂಗಳೂರು, ಮೇ 27: ನೈಜಿರಿಯಾ ಹಾಗೂ ಆಫ್ರಿಕಾ ಮೂಲದ 9 ಜನ ಡ್ರಗ್ ಪೆಡ್ಲರ್ ಗಳನ್ನ ಬೆಂಗಳೂರು ಎನ್ ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ವಿವಿಧ ಭಾಗಗಳಲ್ಲಿ ಮಾಹಿತಿ ಆಧರಿಸಿ ಮೂರು ಕಡೆ ಎನ್ ಸಿಬಿ ಅಧಿಕಾರಿಗಳು ದಾಳಿ ಮಾಡಿದ್ದು, ಬೆಂಗಳೂರಿನಿಂದ ದೆಹಲಿಗೆ ಹೆರೋಯಿನ್ ಸಾಗಿಸುತ್ತಿದ್ದ ಡ್ರಗ್ ಪೆಡ್ಲರ್ ಗಳಿಂದ 52.5 ಕೋಟಿ ಬೆಲೆಬಾಳುವ 34 ಕೆಜಿ ಹೆರೋಯಿನ್ ಜೊತೆಗೆ 5.8 ಲಕ್ಷ ನಗದು ಸೀಜ್ ಮಾಡಲಾಗಿದೆ. ಸೂಟ್ ಕೇಸ್ ತಳಭಾಗದಲ್ಲಿ ಡ್ರಗ್ ಸಂಗ್ರಹಿಸಿ ಜಿಂಬಾಬ್ವೆಯಿಂದ ಬೆಂಗಳೂರಿಗೆ ಬರುತ್ತಿದ್ದ ಮಹಿಳೆಯೊಬ್ಬಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಉಳಿದ ಡ್ರಗ್ ಪೆಡ್ಲರ್ ಗಳು ಎನ್ ಸಿಬಿ ಪೊಲೀಸರ ಅತಿಥಿಯಾಗಿದ್ದಾರೆ.

ಜಿಂಬಾಬ್ವೆಯಿಂದ ಏಳು ಕೆ.ಜಿ ಹೆರಾಯಿನ್ ಬೆಂಗಳೂರು ಕೆಐಎಎಲ್ ತಂದಿದ್ದ ಓರ್ವ ಡ್ರಗ್ ಪೆಡ್ಲರ್ ಬಂಧಿಸಲಾಗಿತ್ತು. ಇನ್ನೂ ಡ್ರಗ್ ಪೆಡ್ಲರ್ ತಂಗಿದ್ದ ಲಾಡ್ಜ್ ಪರಿಶೀಲನೆ ವೇಳೆ 6 ಕೆಜಿ 890 ಗ್ರಾಂ ಹೆರಾಯಿನ್ ಸಿಕ್ಕಿದೆ. ಮೊದಲಿಗೆ ಸಿಕ್ಕಿಬಿದ್ದ ಮಹಿಳೆಯಿಮದ ಹೆಚ್ಚಿನ ವಿಚಾರಣೆ ನಡೆಸಿದಾಗ ಮತ್ತೋರ್ವ ವಿದೇಶಿ ಮಹಿಳೆ ಮನೆಮೇಲೆ ದಾಳಿ ಜೊತೆಗೆ ಬೆಂಗಳೂರಿನಿಂದ ದೆಹಲಿಗೆ ಹೆರಾಯಿನ್ (ಡ್ರಗ್) ಸಾಗಿಸುತ್ತಿದ್ದ ಮೂವರು ಮಹಿಳೆಯರನ್ನ ಬಂಧನ ಮಾಡಲಾಗಿದೆ. ವಿವಿಧ ಭಾಗಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದ ಎನ್ ಸಿಬಿ ಪೊಲೀಸರು ಅಂತರಾಷ್ಟ್ರೀಯ ಮಾದಕ ವಸ್ತು ಕಿಂಗ್ ಫಿನ್ ಸಮೇತ ಎಡೆಮುರಿ ಕಟ್ಟಿದ್ದಾರೆ.

ಫೇಸ್ ಬುಕ್ ಪ್ರಿಯಕರನೊಂದಿಗೆ ಹುಟ್ಟಿದ್ದು ಒಲವು, ಪತಿಗೆ ಕೊಟ್ಟಿದ್ದು ಸಾವು!ಫೇಸ್ ಬುಕ್ ಪ್ರಿಯಕರನೊಂದಿಗೆ ಹುಟ್ಟಿದ್ದು ಒಲವು, ಪತಿಗೆ ಕೊಟ್ಟಿದ್ದು ಸಾವು!

ಎನ್ ಸಿಬಿ ಪೊಲೀಸರಿಗೆ ಡ್ರಗ್ ಪೆಡ್ಲರ್ ಸಿಕ್ಕಿದ್ದು ಹೇಗೆ..?

ಎನ್‌ಸಿಬಿ ಅಧಿಕಾರಿಗಳು ಮೇ 24 ರಂದು ದೊರೆತ ಖಚಿತ ಮಾಹಿತಿ ಮೇರೆಗೆ ಜಿಂಬಾಂಬ್ವೆಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಮಹಿಳೆಯನ್ನು ವಶಕ್ಕೆ ಪಡೆದು ಆಕೆಯ ಸೂಟ್‌ಕೇಸ್ ಪರಿಶೀಲಿಸಿದಾಗ ಸೂಟ್‌ಕೇಸ್ ಕೆಳ ಭಾಗದಲ್ಲಿ 7 ಕೆ.ಜಿ.ಹೆರಾಯಿನ್ ಪತ್ತೆಯಾಗಿತ್ತು. ಬಳಿಕ ಈಕೆಗಾಗಿ ಹೊರಗಡೆ ಕಾಯುತ್ತಿದ್ದ ಮತ್ತೋರ್ವ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆಗೆ ಮಾಡಿದಾಗ ನಗರದ ಲಾಡ್ಜ್ ವೊಂದರಲ್ಲಿ ಮಾದಕವಸ್ತು ಇರಿಸಿರುವುದಾಗಿ ಮಾಹಿತಿ ನೀಡಿದ್ದಾಳೆ.

NCB police Arrest 9 Drug Peddlers in Bengaluru

ಈ ಮಾಹಿತಿ ಆಧರಿಸಿ ಲಾಡ್ಜ್ಗೆ ತೆರಳಿ ಪರಿಶೀಲಿಸಿದಾಗ ಸೂಟ್‌ಕೇಸ್‌ನಲ್ಲಿ 6.80 ಕೆಜಿ ಹೆರಾಯಿನ್ ಪತ್ತೆಯಾಗಿದೆ. ಈ ಇಬ್ಬರು ಮಹಿಳಾ ಪೆಡ್ಲರ್ ಗಳ ಮೊಬೈಲ್ ಕರೆಗಳನ್ನು ಆಧರಿಸಿ ತಾಂತ್ರಿಕ ವಿಶ್ಲೇಷಣೆ ಮಾಡಿದಾಗ, ಇವರ ಗ್ಯಾಂಗ್ ನ ಮೂವರು ಮಹಿಳೆಯರು ಬೆಂಗಳೂರಿನಿಂದ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ದೆಹಲಿಗೆ ತೆರಳುತ್ತಿರುವ ವಿಚಾರ ಗೊತ್ತಾಗಿದೆ. ಕೂಡಲೇ ಬೆಂಗಳೂರು ಎನ್‌ಸಿಬಿ ಅಧಿಕಾರಿಗಳು ಮಧ್ಯಪ್ರದೇಶದ ಇಂದೋರ್ ಎನ್‌ಸಿಬಿ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಬಳಿಕ ಇಂದೋರ್ ಎನ್‌ಸಿಬಿ ಅಧಿಕಾರಿಗಳು ಲಾಡ್ಜ್ ವೊಂದರಲ್ಲಿ ತಂಗಿದ್ದ ಮೂವರು ಮಹಿಳೆಯರನ್ನು ವಶಕ್ಕೆ ಪಡೆದು 21 ಕೆಜಿ ಹೆರಾಯಿನ್ ಜಪ್ತಿ ಮಾಡಿದ್ದರು.

ಕಲಬುರಗಿ ವೈದ್ಯನಿಗೆ ಹನಿಟ್ರ್ಯಾಪ್ ಮಾಡಿದ್ದ ಬೆಂಗಳೂರಿನ ಗ್ಯಾಂಗ್ ಬಂಧನಕಲಬುರಗಿ ವೈದ್ಯನಿಗೆ ಹನಿಟ್ರ್ಯಾಪ್ ಮಾಡಿದ್ದ ಬೆಂಗಳೂರಿನ ಗ್ಯಾಂಗ್ ಬಂಧನ

ಬಂಧಿತರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ದೆಹಲಿಯಲ್ಲಿ ಕುಳಿತ ನೈಜಿರಿಯಾ ಮೂಲದ ಪೆಡ್ಲರ್ ಈ ಡ್ರಗ್ ಜಾಲವನ್ನು ನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ. ಬಳಿಕ ದೆಹಲಿ ಎನ್‌ಸಿಬಿ ಅಧಿಕಾರಿಗಳ ಸಹಾಯ ಪಡೆದು ದಂಧೆಯ ಕಿಂಗ್‌ಪಿನ್ ನೈಜಿರಿಯಾ ಪ್ರಜೆ ಹಾಗೂ ಆಫ್ರಿಕಾ ಮೂಲದ ಮೂವರು ಮಹಿಳೆಯರನ್ನು ಬಂಧಿಸಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಡ್ರಗ್ಸ್ ದಂಧೆಯ ಸಣ್ಣ ಸುಳಿವು ಆಧರಿಸಿ ಬೆಂಗಳೂರು, ದೆಹಲಿ, ಮಧ್ಯಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಡ್ರಗ್ಸ್ ಪೆಡ್ಲಿಂಗ್ ದಂಧೆಯಲ್ಲಿ ತೊಡಗಿದ್ದ 9 ಮಂದಿಯನ್ನು ಬಂಧಿಸುವುದರ ಜತೆಗೆ ಭಾರೀ ಪ್ರಮಾಣದ ಡ್ರಗ್ಸ್ ಜಪ್ತಿ ಮಾಡಲಾಗಿದೆ.

NCB police Arrest 9 Drug Peddlers in Bengaluru

ಇನ್ನೂ ನೈಜಿರಿಯಾ ಮೂಲದ ಕಿಂಗ್‌ಪಿನ್ ವಿದೇಶದಿಂದ ಭಾರತಕ್ಕೆ ಡ್ರಗ್ ಸಾಗಣೆ ಮಾಡಲು ಮಹಿಳೆಯರನ್ನು ಬಳಸಿಕೊಂಡಿದ್ದಾನೆ. ಪ್ರಯಾಣಿಕರ ಸೋಗಿನಲ್ಲಿ ಸೂಟ್‌ಕೇಸ್, ಟ್ರಾಲಿ ಬ್ಯಾಗ್ ಕೆಳಗೆ ಡ್ರಗ್ಸ್ ಅಡಗಿಸಿಟ್ಟು ಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ. ಡ್ರಗ್ ದಂಧೆಯ ಹಿಂದೆ ವ್ಯವಸ್ಥಿತ ಜಾಲ ಕಾರ್ಯ ನಿರ್ವಹಿಸುತ್ತಿದೆ. ಈ ದಂಧೆಯಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಅವರ ಪತ್ತೆಗೆ ಎನ್‌ಸಿಬಿ ಅಧಿಕಾರಿಗಳು ಬಲೆ ಬೀಸಿದ್ದಾರೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಗಾಂಜಾ ಹಾಗೂ ಡ್ರಗ್ ಪೆಡ್ಲರ್ ಗಳ ಹಾವಳಿ ಹೆಚ್ಚಾಗಿದ್ದು, ಬಾಣಸವಾಡಿ, ಹೆಣ್ಣೂರು, ಸಂಪಿಗೆಹಳ್ಳಿ ಭಾಗಗಳಲ್ಲಿ ಹೆಚ್ಚಾಗಿ ಹಲವು ನೈಜೀರಿಯಾ ಪ್ರಜೆಗಳನ್ನ ಬಂಧ ಮಾಡಲಾಗಿತ್ತು.

(ಒನ್ಇಂಡಿಯಾ ಸುದ್ದಿ)

Recommended Video

IPL ಫೈನಲ್ ಮ್ಯಾಚ್ ಗೂ ಮುನ್ನ ಸ್ಟೇಡಿಯಂನಲ್ಲಿ ಮಾರ್ದನಿಸಿತು KGF ನ ವಯಲೆನ್ಸ್ ಡೈಲಾಗ್ | OneIndia Kannada

English summary
Bengalure: NCB police have arrested 9 drug peddlers, 52.5 crores worth 34 kg of heroin along with 5.8 lakh cash siege
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X