ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲೆಹಂಗಾದಲ್ಲಿ ಮಾದಕವಸ್ತು ಇಟ್ಟು ಬೆಂಗಳೂರಿನಿಂದ ಆಸ್ಟ್ರೇಲಿಯಾಗೆ ರವಾನೆ !

|
Google Oneindia Kannada News

ಬೆಂಗಳೂರು ಅ. 23: ಲೆಹಂಗಾದಲ್ಲಿ ಬಚ್ಟಿಟ್ಟು ಆಸ್ಟ್ರೇಲಿಯಾಗೆ ಮಾದಕ ವಸ್ತು ಸಾಗಣೆ ಮಾಡುತ್ತಿದ್ದ ಜಾಲ ಪತ್ತೆ. ಬಾಯಲ್ಲಿ ಚಿನ್ನದ ತುಣಕು ಇಟ್ಟುಕೊಂಡು ಅಕ್ರಮ ಸಾಗಣೆ ಮಾಡಲು ಹೋಗಿ ಸಿಕ್ಕಿಬಿದ್ದ ಪ್ರಯಾಣಿಕ. ಲಾರಿಯ ಅಪಘಾತದಲ್ಲಿ ಸಾವನ್ನಪ್ಪಿದ ಜಿಂಕೆಯ ದಯನೀಯ ಸ್ಥಿತಿ. ಇವಿಷ್ಟು ಬೆಂಗಳೂರಿನಲ್ಲಿ ವರದಿಯಾದ ಪ್ರಮುಖ ಅಪರಾಧ ಸುದ್ದಿಗಳು.

ಲೆಹಂಗಾದಲ್ಲಿ ಮಾದಕ ವಸ್ತು ಸಾಗಣೆ:

ಲೆಹಂಗಾ ಬಟ್ಟೆಯಲ್ಲಿಟ್ಟು ವಿದೇಶಕ್ಕೆ ಡ್ರಗ್ ಸಾಗಣೆ ಮಾಡುತ್ತಿದ್ದ ಮಾದಕ ಜಾಲವನ್ನು ಎನ್‌ಸಿಬಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಬೆಂಗಳೂರು ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಕಾರಿನಲ್ಲಿ ಡ್ರಗ್ ಸಾಗಣೆ ಮಾಡುತ್ತಿದ್ದ ಬಿಹಾರ ಮೂಲದ ಡ್ರಗ್ ಪೆಡ್ಲರ್‌ಗಳನ್ನು ಎನ್ ಸಿಬಿ ಅಧಿಕಾರಿಗಳು ಬಂಧಿಸಿ ಲಕ್ಷಾಂತರ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಹಣೆಗೆ ಪಿಸ್ತೂಲು ಇಟ್ಟು ರಾಬರಿ ಮಾಡುತ್ತಿದ್ದ ಬಾಂಬೆ ಸಲೀಮನ ತಮ್ಮ ಬಂಧನಹಣೆಗೆ ಪಿಸ್ತೂಲು ಇಟ್ಟು ರಾಬರಿ ಮಾಡುತ್ತಿದ್ದ ಬಾಂಬೆ ಸಲೀಮನ ತಮ್ಮ ಬಂಧನ

ಲೆಹಂಗಾದಲ್ಲಿ ಪೆಸುಡೋಫೆಡ್ರೈನ್ ಎಂಬ ಮಾದಕ ವಸ್ತುಗಳನ್ನು ಇಟ್ಟು ಆಸ್ಟ್ರೇಲಿಯಾಗೆ ಸಾಗಣೆ ಮಾಡುತ್ತಿದ್ದ ಡ್ರಗ್ ಮಾರಾಟ ಜಾಲವನ್ನು ಎನ್‌ಸಿಬಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಇನ್ನೇನು ಆಸ್ಟ್ರೇಲಿಯಾಗೆ ರವಾನೆಯಾಗುತ್ತಿದ್ದ ಡ್ರಗ್ ಲೆಹಂಗಾಗಳನ್ನು ಎನ್‌ಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಈ ಸಂಬಂದ ಬೆಂಗಳೂರು ಮೂಲದ ಡ್ರಗ್ ಪೆಡ್ಲರ್ ನನ್ನು ಬಂಧಿಸಿದ್ದಾರೆ. ತನಿಖಾ ಸಂಸ್ಥೆಗಳ ಕಣ್ಣು ತಪ್ಪಿಸುವ ಸಲುವಾಗಿ ಲೆಹಂಗಾದಲ್ಲಿ ಮಾದಕ ವಸ್ತುಗಳನ್ನು ಇಟ್ಟು ವಿದೇಶಕ್ಕೆ ಸಾಗಣೆ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದಾಗ ನಕಲಿ ವಿಳಾಸ ನೀಡಿ ಡ್ರಗ್ ಸಾಗಣೆ ಮಾಡುತ್ತಿದ್ದ ಬೆಂಗಳೂರು ಮೂಲದ ಡ್ರಗ್ ಪೆಡ್ಲರ್ ಸಿಕ್ಕಿ ಬಿದ್ದಿದ್ದಾನೆ.

NCB officials busted international Drug racket

ಮತ್ತೊಂದು ಪ್ರಕರಣದಲ್ಲಿ ಆಂಧ್ರ ಪ್ರದೇಶದಿಂದ ಬೆಂಗಳೂರಿಗೆ ಬರುತ್ತಿದ್ದ ಸ್ವಿಫ್ಟ್ ಕಾರನ್ನು ವಶಪಡಿಸಿಕೊಂಡಿರುವ ಬೆಂಗಳೂರು ಎನ್ ಸಿಬಿ ಘಟಕದ ಅಧಿಕಾರಿಗಳು, ಮಾದಕ ವಸ್ತು ಸಾಗಣೆ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಲಕ್ಷಾಂತರ ಮೌಲ್ಯದ ಎಂಡಿಎಂಎ ಸೇರಿದಂತೆ ನಾನಾ ಮಾದರಿಯ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ವಿಶಾಖಪಟ್ಟಣಂ ಮೂಲದ ಒರ್ವ ವ್ಯಕ್ತಿ ಹಾಗೂ ಮೂವರು ಬಿಹಾರ ಮೂಲದ ಯುವಕರನ್ನು ಎನ್ ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಬೆಂಗಳೂರಿನಲ್ಲಿ ಹೈಡ್ರೋ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವನನ್ನು ಬಂಧಿಸಿದ್ದು, ಮೂರು ಪ್ರತ್ಯೇಕ ಪ್ರಕರಣದಲ್ಲಿ ಆರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ.

NCB officials busted international Drug racket

ಬಾಯಲ್ಲಿ ಇಟ್ಟುಕೊಂಡು ಚಿನ್ನ ಅಕ್ರಮ ಸಾಗಣೆ:

ಬಾಯಲ್ಲಿ ಚಿನ್ನದ ತುಣುಕು ಇಟ್ಟುಕೊಂಡು ಅಕ್ರಮ ಸಾಗಣೆ ಮಾಡಲು ಹೋಗಿ ಚೆನ್ನೈ ಮೂಲದ ಪ್ರಯಾಣಿಕ ಬೆಂಗಳೂರಿನ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ದುಬೈನಿಂದ ಬೆಂಗಳೂರಿಗೆ ಬರುತ್ತಿದ್ದ ಪ್ರಯಾಣಿಕನ್ನು ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ತಪಾಸಣೆ ವೇಳೆ ಬಾಯಲ್ಲಿ ಚಿನ್ನದ ತುಣುಕು ಇಟ್ಟುಕೊಂಡಿರುವುದು ಪತ್ತೆಯಾಗಿದ್ದು, ಎರಡು ಚಿನ್ನದ ತುಣುಕು ಸಿಕ್ಕಿಬಿದ್ದಿವೆ. ಅವರನ್ನು ವಶಪಡಿಸಿಕೊಂಡಿದ್ದು ಕಸ್ಟಮ್ಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ನಾಲ್ಕು ಲಕ್ಷ ರೂ. ಮೌಲ್ಯದ ಚಿನ್ನದ ತುಣುಕು ವಶಪಡಿಸಿಕೊಂಡಿದ್ದಾರೆ.

ಯ ನರಕಯಾಥನೆ !:

ಲಾರಿ ಡಿಕ್ಕಿ ಹೊಡೆದು ಜಿಂಕೆ ಸಾವನ್ನಪ್ಪಿರುವ ಘಟನೆ ಮಾಲೂರಿನಲ್ಲಿ ನಡೆದಿದೆ. ಮಾಲೂರಿನ ಐಟಿಸಿ ಕಂಪನಿ ಬಳಿ ವೇಗವಾಗಿ ಬಂದ ಲಾರಿಯ ಚಕ್ರಕ್ಕೆ ಸಿಲುಕಿ ಜಿಂಕೆ ಗಾಯಗೊಂಡಿದೆ. ಸ್ಥಳೀಯರು ಹಾರೈಕೆ ಮಾಡಿದರೂ ಸಾವನ್ನಪ್ಪಿದೆ. ಆಹಾರ ಹರಿಸಿ ರಸ್ತೆಗೆ ಬಂದಿದ್ದ ಜಿಂಕೆ ರಸ್ತೆ ದಾಟುವಾಗ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಮಾಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಯುವಕನ ಬರ್ಬರ ಕೊಲೆ:

ಬ್ಯಾಟರಾಯನಪುರದ ವೀರಭದ್ರೇಶ್ವರ ಗುಡ್ಡದ ಬಳಿ ಯುವಕನಿಗೆ ಚಾಕುವಿನಿಂದ ತಿವಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಚಂದ್ರಶೇಖರ್ ಕೊಲೆಯಾದ ಯುವಕ. ಹಣಕಾಸಿನ ವಿಚಾರವಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹೂವಿನ ವ್ಯಾಪಾರ ಮಾಡುತ್ತಿದ್ದ ಚಂದ್ರಶೇಖರ್ ಆಟೋ ಚಾಲನೆ ಮಾಡುತ್ತಿದ್ದ. ಹಣಕಾಸು ವಿಚಾರವಾಗಿ ಸ್ನೇಹಿತರ ಜತೆ ಜಗಳ ಮಾಡಿಕೊಂಡಿದ್ದ. ಚಾಕುವಿನಿಂದ ಚುಚ್ಚಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ. ಈ ಸಂಬಂಧ ಬ್ಯಾಟರಾಯನ ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Recommended Video

ಡೊಳ್ಳು ಹೊಟ್ಟೆ ಇರೋ ಪೊಲೀಸರಿಗೆ ಅಲೋಕ್ ಕುಮಾರ್ ಖಡಕ್ ಎಚ್ಚರಿಕೆ | Oneindia Kannada

English summary
Inside story of international drug rakcet: deer killed in lorry accident at Maluru road know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X