ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಾಂಜಾ ಸಾಗಟಕ್ಕೆ ವಾಹನ ವಿನ್ಯಾಸ ಮಾಡಿದ್ದ ಕಿಲಾಡಿಗಳು

|
Google Oneindia Kannada News

ಬೆಂಗಳೂರು, ಜು. 19 : ಯಾರ ಕಣ್ಣಿಗೂ ಬೀಳದಂತೆ ಅಶೋಕ್ ಲೈ ಲ್ಯಾಂಡ್ ವಾಹನದಲ್ಲಿ ಗಾಂಜಾ ಸಾಗಣೆ ಮಾಡಲು ಟ್ಯಾಂಕ್ ನಿರ್ಮಿಸಿದ್ದರು. ಈ ಟ್ಯಾಂಕ್‌ಗೆ ಹೊಂದಿಕೊಳ್ಳುವಂತೆ ಗಾಂಜಾ ಮೂಟೆಗಳನ್ನು ಸಿದ್ಧಪಡಿಸಿ ಆಂಧ್ರ ಪ್ರದೇಶದಿಂದ ಕೇರಳಕ್ಕೆಸಾಗಿಸುತ್ತಿದ್ದ ದೊಡ್ಡ ಗಾಂಜಾ ಜಾಲವನ್ನು ಎನ್‌ಸಿಬಿ ಚೆನ್ನೈ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿ ಕೋಟ್ಯಂತರ ಮೌಲ್ಯದ 327 ಕೆ.ಜಿ. ತೂಕದ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಜು. 17 ರಂದು ಎನ್‌ಸಿಬಿ ಚೆನ್ನೈ ಘಟಕದ ಅಧಿಕಾರಿಗಳಿಗೆ ಮಹತ್ವದ ಮಾಹಿತಿ ಸಿಕ್ಕಿತ್ತು. ಆಂಧ್ರ ಪ್ರದೇಶದ ಅನ್ನಾವರಂ ನಿಂದ ಕೇರಳದ ತಿರುವನಂತಪುರಂಗೆ ಅಶೋಕಾ ಲೈಲ್ಯಾಂಡ್ ದೋಸ್ತ ವಾಹನದಲ್ಲಿ 327 ಕೆ.ಜಿ. ತೂಕದ ಗಾಂಜಾವನ್ನು ಸಾಗಿಸುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಪಡೆದ ಎನ್ ಸಿಬಿ ಅಧಿಕಾರಿಗಳು ತಮಿಳುನಾಡಿನ ತಿರುವಳ್ಳೂರು ಸಮೀಪ ವಾಹನವನ್ನು ಸುತ್ತುವರೆದು ಗಾಂಜಾ ವಶಪಡಿಸಿಕೊಂಡಿದ್ದಾರೆ. ಗಾಂಜಾ ಸಾಗಿಸುತ್ತಿದ್ದ ವಾಹನವನ್ನು ತಪಾಸಣೆ ಮಾಡಿದಾಗ ಗಾಂಜಾ ಸಾಗಣೆಗೆಕೆ ವಿನೂತನವಾಗಿ ಅಭಿವೃದ್ಧಿ ಪಡಿಸಿದ್ದ ಜಾಗದಲ್ಲಿ ಗಾಂಜಾ ಇರುವುದು ಗೊತ್ತಾಗಿದೆ. ಅಷ್ಟೋ ಗಾಂಜಾ ಜಪ್ತಿ ಮಾಡಿದ್ದಾರೆ. ಈ ಸಂಬಂಧ ದುಬಾಶ್ ಶಂಕರ್ ಕೇರಳ ಮೂಲದ ಶ್ರೀನಾಥ್ ಎಂಬವನ್ನು ಬಂಧಿಸಿದ್ದಾರೆ.

NCB Chennai zone Officials Busted drug Racket and seized 327 kilogram Ganja

Recommended Video

Prithvi Shaw ಆಟ ಹೀಗೆ ಇದ್ದರೆ ಸಾಕು ಎಂದ ಮಾಜಿ ಕ್ರಿಕೆಟಿಗ | Oneindia Kannada

ನಕ್ಸಲ್ ಪೀಡಿತ ಅಂಧ್ರ ಹಾಗೂ ಒಡಿಶಾ ಗಡಿ ಭಾಗದಲ್ಲಿ ಗಂಜಾವನ್ನು ಅಕ್ರಮವಾಗಿ ಯಥೇಚ್ಛವಾಗಿ ಬೆಳೆಯುತ್ತಾರೆ. ಅಲ್ಲಿಂದಲೇ ದೆಹಲಿ, ರಾಜಸ್ಥಾನ, ಮುಂಬಯಿ ತಮಿಳುನಾಡು, ಕೇರಳ, ಕರ್ನಾಟಕ ರಾಜ್ಯಗಳಿಗೆ ಅಕ್ರಮವಾಗಿ ಸಾಗಣೆಯಾಗುತ್ತಿದೆ. ಸಮುದ್ರದ ಮುಖೇನ ಶ್ರೀಲಂಕಾಗೂ ಯಥೇಚ್ಛವಾಗಿ ಗಾಂಜಾವನ್ನು ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದೆ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

English summary
NCB Busted Ganja racket and arrested 2 persons who involved in Illegal trafficking of Ganja
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X