• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

15 ಕೋಟಿ ರೂ. ಮೌಲ್ಯದ 2 ಸಾವಿರ ಕೆ.ಜಿ. ಗಾಂಜಾ ಜಪ್ತಿ ಮಾಡಿದ NCB

|
Google Oneindia Kannada News

ಬೆಂಗಳೂರು, ಜೂ. 21: ಸುಮಾರು ಹದಿನೈದು ಕೋಟಿ ಮೌಲ್ಯದ ಎರಡು ಸಾವಿರ ಕೆ.ಜಿ. ಗಾಂಜಾ ಸಾಗಣೆ ಮಾಡುತ್ತಿದ್ದ ಅತಿ ದೊಡ್ಡ ಜಾಲವನ್ನು ಬೆಂಗಳೂರು ಘಟಕದ ಎನ್‌ ಸಿಬಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಮಹಾರಾಷ್ಟ್ರ ಮೂಲದ ನಾಲ್ವರನ್ನು ಬಂಧಿಸಿದ್ದು, ಗಾಂಜಾ ಸಾಗಿಸುತ್ತಿದ್ದ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಆಧರಿಸಿ ಬೆಂಗಳೂರಿನ ಎನ್ ಸಿಬಿ ಅಧಿಕಾರಿಗಳು ಹೈದರಾಬಾದ್ ನ ಪೆದ್ದ ಅಮೀರ್ ಪೇಟ್ ಟೋಲ್ ಪ್ಲಾಜಾ ಬಳಿ ಕಾರ್ಯಾಚರಣೆ ನಡೆಸಿದ್ದಾರೆ. ಒಡಿಶಾ ಗಡಿ ಭಾಗದಿಂದ ಪೂನಾಗೆ ಲಾರಿಯಲ್ಲಿ ಗಾಂಜಾ ಸಾಗಣೆ ಮಾಡಲಾಗುತ್ತಿತ್ತು. ಎರಡು ಕೆ.ಜಿ. ತೂಕದ ಸುಮಾರು 1080 ಪಾಕೆಟ್ ಗಾಂಜಾ ಪೊಟ್ಟಣಗಳನ್ನು ಗೂಡ್ಸ್ ಲಾರಿಯಲ್ಲಿ ಸಾಗಣೆ ಮಾಡಲಾಗುತ್ತಿತ್ತು.

ಖಚಿತ ಮಾಹಿತಿ ಆಧರಿಸಿ ಪೆದ್ದ ಅಮೀರ್ ಪೇಟ್ ಟೋಲ್ ಬಳಿ ಎನ್ ಸಿಬಿ ಅಧಿಕಾರಿಗಳು ಗಾಂಜಾ ಸಾಗಿಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಗಾಂಜಾ ಸಾಗಣೆ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಕೆ. ಕಾಳೆ, ಎಸ್. ಕಾಳೆ ಸಿ. ಕಾಳೆ ಹಾಗೂ ಬಿ. ಧೋರಲ್ಕರ್ ಎಂಬುವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಹದಿನೈದು ಕೋಟಿ ಮೌಲ್ಯದ ಎರಡು ಸಾವಿರ ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಈ ಕಾರ್ಯಾಚರಣೆಯನ್ನು ಎನ್‌ಸಿಬಿ ಬೆಂಗಳೂರು ಘಟಕದ ವಲಯ ನಿರ್ದೇಶಕ ಅಮಿತ್ ಗವಾಟೆ ವಹಿಸಿದ್ದರು. ಇದು ದೇಶದಲ್ಲಿಯೇ ಅತಿದೊಡ್ಡ ಗಾಂಜಾ ಪತ್ತೆ ಪ್ರಕರಣವಾಗಿದೆ ಎಂದು ಎನ್ ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ನಕ್ಸಲ್ ಸಮಸ್ಯೆ ಬಾಧಿತ ಆಂಧ್ರ ಪ್ರದೇಶ ಹಾಗೂ ಒಡಿಶಾ ಗಡಿ ಭಾಗದಲ್ಲಿ ಅತಿ ಹೆಚ್ಚು ಗಾಂಜಾ ಅಕ್ರಮವಾಗಿ ಬೆಳೆಯಲಾಗುತ್ತದೆ.

   Rohini Sindhuri ಮೇಲೆ Prathap Simha ಅವರಿಗೆ ಈಗಲೂ ಸಿಟ್ಟು ಕಡಿಮೆಯಾಗಿಲ್ಲ | Oneindia Kannada

   ಇಲ್ಲಿ ಬೆಳೆದ ಗಾಂಜಾವನ್ನು ಅಕ್ರಮವಾಗಿ ಕರ್ನಾಟಕ, ಮಹಾರಾಷ್ಟ್ರ , ತಮಿಳುನಾಡು ರಾಜ್ಯಗಳಿಗೆ ಸಾಗಣೆ ಮಾಡಲಾಗುತ್ತದೆ. ಬಂಧಿತ ಆರೋಪಿಗಳು ಒಡಿಶಾ ಮತ್ತು ಆಂಧ್ರ ಪ್ರದೇಶದ ಗಡಿ ಭಾಗದಲ್ಲಿ ಗಾಂಜಾ ಖರೀದಿಸಿದ್ದು, ಅದನ್ನು ಪೂನಾ ಮೂಲಕ ಮಹಾರಾಷ್ಟ್ರಕ್ಕೆ ಸಾಗಣೆ ಮಾಡುತ್ತಿದ್ದರು. ಆನಂತರ ಮುಂಬೈ ಸೇರಿದಂತೆ ಇತರೆ ಪ್ರಮುಖ ನಗರಗಳಿಗೆ ಸಾಗಣೆಯಾಗುತ್ತಿತ್ತು. ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸುವ ಮೂಲಕ ದೇಶದ ಅತಿದೊಡ್ಡ ಗಾಂಜಾ ಜಾಲವನ್ನು ಎನ್‌ ಸಿಬಿ ಅಧಿಕಾರಿಗಳು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

   English summary
   NCB Bengaluru zonal officers Busted largest Ganja trafficking network in Hyderabad and seized 2 thousand K.G Ganja know more
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X