ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಡ್ರಗ್ ಜಾಲ ಪತ್ತೆ

|
Google Oneindia Kannada News

ಬೆಂಗಳೂರು, ಜೂ. 07: ಬೆಂಗಳೂರಿನಿಂದ ವಿದೇಶಕ್ಕೆ ಕೊರಿಯರ್ ಮೂಲಕ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಇಬ್ಬರು ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ಗಳನ್ನು ಎನ್ ಸಿ ಬಿ ಅಧಿಕಾರಿಗಳು ಬಂಧಿಸಿದ್ದಾರೆ. ಕಿರಾತಕರು ಚಿಕ್ಕ ಬ್ಯಾಗ್ ಗಳಲ್ಲಿ ತುಂಬಿಸಿದ್ದ ಸುಮಾರು ಎರಡು ಕೆ.ಜಿ. ಚರಸ್ ನ್ನು ವಶಪಡಿಸಿಕೊಂಡಿದ್ದಾರೆ.

ಎಚ್‌. ಹುಸೇನ್ ಮತ್ತು ಆರ್. ಖಾನ್ ಬಂಧಿತ ಆರೋಪಿಗಳು. ಬಂಧಿತರಿಂದ ಸುಮಾರು 3.8 ಕೆ.ಜಿ. ಚರಸ್ ಪತ್ತೆಯಾಗಿದೆ. ಬೆಂಗಳೂರಿನಿಂದ ಕತಾರ್ ಗೆ ಕೊರಿಯರ್ ಮೂಲಕ ಮಾದಕ ವಸ್ತು ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಎನ್ ಸಿಬಿ ಅಧಿಕಾರಿಗಳಿಗೆ ಲಭ್ಯವಾಗಿತ್ತು. ಇದರ ಆಧಾರದ ಮೇಲೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕತಾರ್ ಗೆ ಕಳುಹಿಸಿದ್ದ ಕೊರಿಯರ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.

NCB Busted International Racket of chars in Bengaluru

Recommended Video

ಯಾವ Vaccine ಬೆಸ್ಟ್ ಅನ್ನೋದು ಗೊತ್ತಾಗಿದೆ! | Oneindia Kannada

ಈ ವೇಳೆ 1.5 ಕೆ.ಜಿ ತೂಕದ ಹಶಿಶ್ ಸಿಕ್ಕಿದೆ. ಇದರ ಜಾಡು ಹಿಡಿದು ಕೇರಳ ಮೂಲದ ಹುಸೇನ್ ಮತ್ತು ಖಾನ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸುಮಾರು 70 ಬ್ಯಾಗ್ ಗಳಲ್ಲಿ ತುಂಬಿಸಿದ್ದ ಚರಸ್ ನ್ನು ವಶಪಡಿಸಿಕೊಂಡಿದ್ದಾರೆ. ವಿದೇಶಕ್ಕೆ ಮಾದಕ ವಸ್ತು ರವಾನಿಸುವ ಸಕ್ರಿಯ ಜಾಲ ಹಿಡಿದು ಶೋಧ ನಡೆಸುತ್ತಿದ್ದಾರೆ.

English summary
The 3.8kg charas has been seized by NCB officials who have traced the international drug network in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X