ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ರಸ್ತೆ ಮೆಟ್ರೋ ಮಾರ್ಗ; ಪ್ರಯಾಣಿಕರಿಗೆ ಸಿಹಿ ಸುದ್ದಿ

|
Google Oneindia Kannada News

ಬೆಂಗಳೂರು, ಮಾರ್ಚ್ 17; ಮೈಸೂರು ರಸ್ತೆಯ 7 ಕಿ. ಮೀ. ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲು ಸಂಚಾರಕ್ಕೆ ದಿನಗಣನೆ ಆರಂಭವಾಗಿದೆ. ಪ್ರಾಯೋಗಿಕ ಸಂಚಾರ ಪೂರ್ಣಗೊಂಡು ಜೂನ್‌ನಲ್ಲಿ ಮಾರ್ಗ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ.

ಬಿಎಂಆರ್‌ಸಿಎಲ್ ಮಂಗಳವಾರದಿಂದ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಸಿದೆ. ನಮ್ಮ ಮೆಟ್ರೋ ಯೋಜನೆಯ 72 ಕಿ. ಮೀ. ಮಾರ್ಗದ ವಿಸ್ತರಿತ ಮಾರ್ಗವಿದು. 2018-19ರಲ್ಲಿಯೇ ಈ ಮಾರ್ಗ ಸಂಚಾರಕ್ಕೆ ಮುಕ್ತವಾಗಬೇಕಿತ್ತು.

ಹಂಪಿಗೆ ಬಂದು ಮೆಟ್ರೋ ರೈಲು ಮಾದರಿ ವಾಹನ ಹಂಪಿಗೆ ಬಂದು ಮೆಟ್ರೋ ರೈಲು ಮಾದರಿ ವಾಹನ

ನೇರಳೆ ಮಾರ್ಗದ ಪಶ್ಚಿಮ ವಿಸ್ತರಿತ ಮಾರ್ಗ ಎಂದು ಇದನ್ನು ಕರೆಯಲಾಗುತ್ತದೆ. ಒಟ್ಟು ಎಂಟು ನಿಲ್ದಾಣಗಳು ಈ ಮಾರ್ಗದಲ್ಲಿ ಬರಲಿದ್ದು, ಈಗ ರೈಲು ಮೈಸೂರು ರಸ್ತೆ (ನಾಯಂಡಹಳ್ಳಿ) ಇಂದ ಹೊರಟು ಕೆಂಗೇರಿ ಬಸ್ ನಿಲ್ದಾಣದ ತನಕ ಸಂಚಾರ ನಡೆಸಲಿದೆ.

ಬೆಂಗಳೂರಿಗರಿಗೆ ಶುಭ ಸುದ್ದಿ ಕೊಟ್ಟ ಬಿಎಂಆರ್‌ಸಿಎಲ್ ಬೆಂಗಳೂರಿಗರಿಗೆ ಶುಭ ಸುದ್ದಿ ಕೊಟ್ಟ ಬಿಎಂಆರ್‌ಸಿಎಲ್

ಮಾಹಿತಿಗಳ ಪ್ರಕಾರ ಬಿಎಂಆರ್‌ಸಿಎಲ್ ಅಧಿಕಾರಿಗಳು ಮೆಟ್ರೊ ರೈಲು ಸುರಕ್ಷತಾ ಆಯುಕ್ತ (ಸಿಎಂಆರ್‌ಎಸ್‌) ರನ್ನು ಇನ್ನೂ ಭೇಟಿ ಮಾಡಿಲ್ಲ. ಆಯುಕ್ತರು ಪ್ರಾಯೋಗಿಕ ಸಂಚಾರವನ್ನು ವೀಕ್ಷಣೆ ಮಾಡಲು ದಿನಾಂಕ ನಿಗದಿ ಮಾಡಲಿದ್ದಾರೆ.

ಏರ್‌ಪೋರ್ಟ್‌ ಮೆಟ್ರೋ ಮಾರ್ಗದಲ್ಲಿ ಕಸ್ತೂರಿನಗರ ಕೈಬಿಟ್ಟ ಬಿಎಂಆರ್‌ಸಿಎಲ್ ಏರ್‌ಪೋರ್ಟ್‌ ಮೆಟ್ರೋ ಮಾರ್ಗದಲ್ಲಿ ಕಸ್ತೂರಿನಗರ ಕೈಬಿಟ್ಟ ಬಿಎಂಆರ್‌ಸಿಎಲ್

ಒಟ್ಟು 8 ನಿಲ್ದಾಣಗಳು

ಒಟ್ಟು 8 ನಿಲ್ದಾಣಗಳು

ನೇರಳೆ ಮಾರ್ಗದ ಮೆಟ್ರೋ ಯೋಜನೆಯಲ್ಲಿ ಮೈಸೂರು ರಸ್ತೆಯ ಈ ಮಾರ್ಗ ಸೇರಿದೆ. ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನ ಭಾರತಿ, ಪಟ್ಟಣಗೆರೆ, ಮೈಲಸಂದ್ರ, ಕೆಂಗೇರಿ ಬಸ್ ನಿಲ್ದಾಣ ನಿಲ್ದಾಣಗಳಿವೆ. ಈ ಮಾರ್ಗದಲ್ಲಿ ಚೆಲ್ಲಘಟ್ಟ ನಿಲ್ದಾಣವೂ ಈ ಮಾರ್ಗದಲ್ಲಿ ಬರಲಿದ್ದು, ಇನ್ನೂ ಎರಡು ವರ್ಷದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಈ ಮಾರ್ಗದಲ್ಲಿ ಡಿಪೋ ಸಹ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ.

ಎರಡು ಕಂಪನಿಗಳಿಂದ ಟೆಂಡರ್

ಎರಡು ಕಂಪನಿಗಳಿಂದ ಟೆಂಡರ್

ಐಎಲ್‌&ಎಫ್‌ಎಸ್ ಕಂಪನಿ 327 ಕೋಟಿ ರೂ. ವೆಚ್ಚದಲ್ಲಿ ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನ ಭಾರತಿ, ಪಟ್ಟಣಗೆರೆ ನಡುವಿನ ಮಾರ್ಗ ನಿರ್ಮಾಣದ ಟೆಂಡರ್ ಪಡೆದಿತ್ತು. ಸೋಮ ಎಂಟರ್ ಪ್ರೈಸಸ್ ಮೈಲಸಂದ್ರದಿಂದ ಉಳಿದ ಮಾರ್ಗದ ನಿರ್ಮಾಣ ಕಾರ್ಯದ ಟೆಂಡರ್ ಪಡೆದಿದೆ. ಇದರ ಯೋಜನಾ ವೆಚ್ಚ 332 ಕೋಟಿ ರೂ. ಆಗಿದೆ.

ನಿಲ್ದಾಣಗಳ ಕಾರ್ಯ ಪೂರ್ಣಗೊಂಡಿಲ್ಲ

ನಿಲ್ದಾಣಗಳ ಕಾರ್ಯ ಪೂರ್ಣಗೊಂಡಿಲ್ಲ

ಈ ಮಾರ್ಗದ ನಿಲ್ದಾಣಗಳ ನಿರ್ಮಾಣ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಬಿಎಂಆರ್‌ಸಿಎಲ್ ಅಧಿಕಾರಿಗಳು ಕಾಮಗಾರಿ ಪೂರ್ಣಗೊಂಡ ಬಳಿಕ ಮೆಟ್ರೊ ರೈಲು ಸುರಕ್ಷತಾ ಆಯುಕ್ತ (ಸಿಎಂಆರ್‌ಎಸ್‌) ರನ್ನು ಭೇಟಿ ಮಾಡಲಿದ್ದಾರೆ. ಜೂನ್‌ನಲ್ಲಿ ಮಾರ್ಗದಲ್ಲಿ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.

Recommended Video

ಭಾರಿ ಮಳೆ ಸೂಚನೆ ಕೊಟ್ಟ ಹವಾಮಾನ ಇಲಾಖೆ | Rain Forcast
ಲಾಕ್‌ ಡೌನ್‌ನಿಂದ ವಿಳಂಬ

ಲಾಕ್‌ ಡೌನ್‌ನಿಂದ ವಿಳಂಬ

ಕೋವಿಡ್ ಲಾಕ್ ಡೌನ್ ಪರಿಣಾಮ, ಭೂ ಸ್ವಾಧೀನದ ಕಾರಣ ನಮ್ಮ ಮೆಟ್ರೋ ಕಾಮಗಾರಿ ವಿಳಂಬವಾಯಿತು. ಈ ವರ್ಷದ ಜನವರಿಯಲ್ಲಿ ನಮ್ಮ ಮೆಟ್ರೋ ಯಲಚೇನಹಳ್ಳಿ-ಕನಕಪುರ ಮಾರ್ಗದ ವಿಸ್ತರಿತ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭಿಸಿದೆ.

English summary
Bengaluru Metro Rail Corporation Limited (BMRCL) started testing the third rail installed between Nayandahalli and Kengeri. Western extension of the Purple Line have seven stations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X