ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾನುವಾರದಿಂದಲೇ ಹೆಚ್ಚಳವಾಗಿದೆ ನವಯುಗ ಟೋಲ್ ದರ

|
Google Oneindia Kannada News

ಬೆಂಗಳೂರು, ಜುಲೈ 1: ಬೆಂಗಳೂರು-ನೆಲಮಂಗಲ ಎಕ್ಸ್‌ಪ್ರೆಸ್‌ ವೇ ಟೋಲ್ ಭಾನುವಾರದಿಂದ ದುಬಾರಿಯಾಗಿದೆ.

ನೆಲಮಂಗಲದ ಮೂಲಕ ತುಮಕೂರಿಗೆ ಹೋಗುವವರಿಗೆ ಬಿಸಿ ತಟ್ಟಿದೆ. ಕಾರು, ಜೀಪು, ಲಘು ವಾಹನಗಳು, ಮಿನಿ ಬಸ್ ಏಕಮುಖ ಪ್ರಯಾಣ ದರ ಅಷ್ಟೇ ಇರಲಿದೆ. ಆದರೆ ನಿತ್ಯದ ಬಸ್‌ ಪಾಸಿನ ದರ ಮಾತ್ರ ಐದು ರೂ ಹೆಚ್ಚಳವಾಗಿದೆ.

ಜುಲೈ 1 ರಿಂದ ಎಲೆಕ್ಟ್ರಾನಿಕ್ಸ್‌ಸಿಟಿ, ಅತ್ತಿಬೆಲೆ ಟೋಲ್ ಶುಲ್ಕ ಹೆಚ್ಚಳಜುಲೈ 1 ರಿಂದ ಎಲೆಕ್ಟ್ರಾನಿಕ್ಸ್‌ಸಿಟಿ, ಅತ್ತಿಬೆಲೆ ಟೋಲ್ ಶುಲ್ಕ ಹೆಚ್ಚಳ

ಕಾರು, ಜೀಪುಗಳ ತಿಂಗಳ ಪಾಸಿನ ದರ 50 , ಲಘು ವಾಹನಗಳು, ಮಿನಿಬಸ್ ಪಾಸಿನ ದರ 75 ರೂ, ಬಸ್, ಟ್ರಕ್‌ಗಳ ದರವೂ ಏರಿಕೆಯಾಗಿದೆ. ದ್ವಿಚಕ್ರ ವಾಹನಗಳಿಗೆ ಯಾವುದೇ ಟೋಲ್ ಇಲ್ಲ.

Navayuga toll price revised user pay more

ಬೆಂಗಳೂರಿನ ನವಯುಗ ಟೋಲ್ ಪ್ರೈವೇಟ್ ಲಿಮಿಟೆಡ್ ಭಾನುವಾರ ಟೋಲ್ ದರ ಪ್ರಕಟಿಸಿದೆ. 19.5 ಕಿ.ಮೀಗೆ ದರ ಪರಿಷ್ಕರಣೆ ಮಾಡಿದೆ. ನಿತ್ಯ 45,000 ವಾಹನಗಳು ಸಂಚರಿಸುತ್ತವೆ. ಇತ್ತೀಚೆಗೆ ಎಲೆಕ್ಟ್ರಾನಿಕ್ಸ್‌ಸಿಟಿ, ಅತ್ತಿಬೆಲೆ ಮಾರ್ಗದ ಟೋಲ್ ದರ ಹೆಚ್ಚಳ ಮಾಡಲಾಗಿತ್ತು.

ದ್ವಿಚಕ್ರ ವಾಹನ ಸವಾರರು ಎರಡೂ ಮಾರ್ಗಗಳಿಗ ಸೇರಿ 20-30 , ನಾಲ್ಕು ಚಕ್ರ ವಾಹನ ಸವಾರರು 45-70 ನೀಡಬೇಕಿದೆ.ಮಾಸಿಕ ಪಾಸಿನ ದರವನ್ನು ಕೂಡ ದ್ವಿಚಕ್ರ ವಾಹನ ಸವಾರರಿಗೆ 20 ರೂ ಹಾಗೂ ಕಾರಿಗೆ 40, ಎಸ್‌ಯುವಿಗೆ 60 ರೂ , ಟ್ರಕ್ಸ್‌, ಬಸ್‌ಗಗಳಿಗೆ 120 ರೂ ನೀಡಬೇಕಿದೆ. ಈಗ ದ್ವಿಚಕ್ರ ವಾಹನ ಸವಾರರು 620 ರೂ , ಕಾರಿಗೆ 1,405, ವಾಣಿಜ್ಯ ವಾಹನಗಳು 1,965 ಟ್ರಕ್ ಬಸ್‌ ಗಳು 3,930 ರೂ ಪಾವತಿಸುತ್ತಿದ್ದಾರೆ.

English summary
Navayuga toll price revised user pay more,fee for daily pass (multiple journeys within a day) has gone up by Rs 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X