ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿ. 24ರಂದು ಗ್ರಾಹಕರ ಹಿತರಕ್ಷಣೆಗಾಗಿ ಟ್ವೀಟ್ ಅಭಿಯಾನ

ರಾಷ್ಟ್ರೀಯ ಗ್ರಾಹಕ ದಿನವಾದ ಡಿಸೆಂಬರ್ 24 2016ರಂದು ಟ್ವಿಟರಿನಲ್ಲಿ ನಮ್ಮ ಭಾಷೆಗಳಲ್ಲಿ ಎಲ್ಲ ಹಂತದ ಗ್ರಾಹಕ ಸೇವೆಗೆ ಆಗ್ರಹಿಸಿ ಕನ್ನಡ ಗ್ರಾಹಕರ ಕೂಟ ಟ್ವಿಟ್ಟರ್ ಅಭಿಯಾನ ಹಮ್ಮಿಕೊಂಡಿದೆ.

By Mahesh
|
Google Oneindia Kannada News

ಬೆಂಗಳೂರು, ಡಿಸೆಂಬರ್ 22: ರಾಷ್ಟ್ರೀಯ ಗ್ರಾಹಕ ದಿನವಾದ ಡಿಸೆಂಬರ್ 24 2016ರಂದು ಟ್ವಿಟರಿನಲ್ಲಿ ನಮ್ಮ ಭಾಷೆಗಳಲ್ಲಿ ಎಲ್ಲ ಹಂತದ ಗ್ರಾಹಕ ಸೇವೆಗೆ ಆಗ್ರಹಿಸಿ ಕನ್ನಡ ಗ್ರಾಹಕರ ಕೂಟ ಟ್ವಿಟ್ಟರ್ ಅಭಿಯಾನ ಹಮ್ಮಿಕೊಂಡಿದೆ.

1986ರ ಡಿಸೆಂಬರ್ 24 ರಂದು 'ಗ್ರಾಹಕರ ಹಿತರಕ್ಷಣೆ/ಗ್ರಾಹಕರ ರಕ್ಷಣೆ ಕಾಯಿದೆ(ಕನ್ಸ್ಯುಮರ್ ಪ್ರೊಟೆಕ್ಷನ್ ಆಕ್ಟ್ ) ಯನ್ನು ಭಾರತದಲ್ಲಿ ಮಾಡಲಾಯಿತು. ಆದರಿಂದ ನಮ್ಮ ದೇಶದಲ್ಲಿ ಡಿಸೆಂಬರ್ 24ನ್ನು "ರಾಷ್ಟ್ರೀಯ ಗ್ರಾಹಕ ದಿನ" ವಾಗಿ ಆಚರಿಸಲಾಗುತ್ತದೆ. ಭಾರತದಲ್ಲಿ ರಾಷ್ಟ್ರೀಯ ಗ್ರಾಹಕ ದಿನವನ್ನು ಗ್ರಾಹಕರ ಹಕ್ಕುಗಳನ್ನು ಎತ್ತಿ ಹಿಡಿಯುವ ದಿನವೆಂದು ಪರಿಗಣಿಸಲಾಗುತ್ತದೆ.

National Consumer Day Kannada Grahakara Koota Twitter campaign

ಆದರೆ ಗ್ರಾಹಕರ ಹಕ್ಕುಗಳು ಕೇವಲ ಅಳತೆ, ತೂಕ, ಗುಣಮಟ್ಟಕ್ಕೆ ಸೀಮಿತವಲ್ಲ. ನಮ್ಮ ನಮ್ಮ ಭಾಷೆಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಸೇವೆ ಪಡೆಯುವುದು ಗ್ರಾಹಕರಾಗಿ ನಮ್ಮ ಹಕ್ಕೇ ಆಗಿದೆ. ಭಾರತದ ಗ್ರಾಹಕ ಸೇವೆಯ ಕಾನೂನುಗಳಲ್ಲಿ ಭಾಷಾ ಆಯಾಮ ಸೇರಿಕೊಳ್ಳಬೇಕಿದೆ.

ಮಾರುಕಟ್ಟೆಯಲ್ಲಿ ನಮ್ಮ ನುಡಿಗಳಲ್ಲಿ ಗ್ರಾಹಕಸೇವೆ ದೊರೆಯಬೇಕಿದೆ. ಈ ನಿಟ್ಟಿನಲ್ಲಿ ಗ್ರಾಹಕರಾಗಿ ನಮ್ಮ ದನಿ ಎತ್ತಬೇಕಿದೆ. ಮಾರುಕಟ್ಟೆಯಲ್ಲಿರುವ ಎಲ್ಲ ಸಂಸ್ಥೆಗಳಿಗೂ ಗ್ರಾಹಕರಾಗಿ ನಮ್ಮ ಒತ್ತಾಯವನ್ನು ಸಂಘಟಿತರಾಗಿ ತೋರಬೇಕಿದೆ.

ರಾಷ್ಟ್ರೀಯ ಗ್ರಾಹಕ ದಿನವಾದ ಡಿಸೆಂಬರ್ 24 2016ರಂದು ಕನ್ನಡ ಗ್ರಾಹಕರ ಕೂಟ ಹಮ್ಮಿಕೊಂಡಿರುವ ಟ್ವಿಟರ್ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಿಗೆ ಗ್ರಾಹಕ ಸೇವೆ ಪಡೆಯುವಲ್ಲಿ ಭಾಷಾ ಆಯಾಮದ ಬಗ್ಗೆ ಜಾಗೃತಿ ಮೂಡಿಸೋಣ ಮತ್ತು ಆ ಮೂಲಕ ನಮ್ಮ ನಮ್ಮ ಭಾಷೆಗಳಲ್ಲಿ ಎಲ್ಲ ಹಂತದ ಸೇವೆ ಪಡೆಯುವತ್ತ ಹೆಜ್ಜೆ ಹಾಕೋಣ.

English summary
On the eve of National Consumer Day - 24th December 2016, Kannada Grahakara Koota has organized a twitter campaign to create awareness on the importance of language in availing consumer services.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X