ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಟ ಸಂಚಾರಿ ವಿಜಯ್ ಮೆದುಳು ನಿಷ್ಕ್ರಿಯ: ಡಾ. ಅರುಣ್ ನಾಯ್ಕ್

|
Google Oneindia Kannada News

ಬೆಂಗಳೂರು, ಜೂನ್ 14: ''ಪ್ರತಿಭಾವಂತ ನಟ ಸಂಚಾರಿ ವಿಜಯ್ ಮೆದುಳು ಬೆಳಗ್ಗೆ 10 ಗಂಟೆಗೆ ನಿಷ್ಕ್ರಿಯವಾಗಿದೆ'', ಎಂದು ಅಪೋಲೋ ಆಸ್ಪತ್ರೆಯ ನ್ಯೂರೋ ಸರ್ಜನ್ ಡಾ. ಶೈಲೇಂದ್ರ ಕುಮಾರ್ ಘೋಷಿಸಿದ್ದಾರೆ. ಜೊತೆಗೆ ಮಾತನಾಡಿದ ಡಾ. ಅರುಣ್ ನಾಯ್ಕ್, "ನಾವು ಮೆದುಳು ನಿಷ್ಕ್ರಿಯವಾಗಿದೆ ಎಂದು ಮಾತ್ರ ಹೇಳಿದ್ದೇವೆ. ಇನ್ನೂ ಅಧಿಕೃತವಾಗಿ ಸಾವು ಎಂದು ಪ್ರಕಟಿಸಿಲ್ಲ, ಚಿಕಿತ್ಸೆ ಜಾರಿಯಲ್ಲಿದೆ'' ಎಂದು ಸ್ಪಷ್ಟಪಡಿಸಿದ್ದಾರೆ.

Recommended Video

ಸಂಚಾರಿ ವಿಜಯ್ ಮಾಡಿದ ಈ ಒಂದು ತಪ್ಪು ನಿರ್ಧಾರ ಈ ಸ್ಥಿತಿಗೆ ಕಾರಣವಾಯ್ತು!! | Oneindia Kannada

''ಒಮ್ಮೆ ಮೆದುಳು ನಿಷ್ಕ್ರಿಯಗೊಂಡ ಬಳಿಕ 6-8 ಗಂಟೆಗಳ ಕಾಲ ಸುಧಾರಣೆಗಾಗಿ ನಿರೀಕ್ಷಿಸಲಾಗುತ್ತದೆ. ಲೈಫ್ ಸಪೋರ್ಟ್ ಇಲ್ಲದೆ ಉಸಿರಾಟವಿದ್ದರೆ, ಬ್ರೈನ್ ಡೆಡ್ ಆದರೂ ಕೋಮಾದಲ್ಲಿರಬಹುದು. ಆದರೆ, ವಿಜಯ್ ವೆಂಟಿಲೇಟರ್ ನಲ್ಲಿದ್ದು, ಬಿಪಿ, ಹಾರ್ಡ್ ಬೀಟ್ ಸಮಸ್ಥಿತಿಯಲ್ಲಿಲ್ಲ, ಬೆಳಗ್ಗೆ ಒಮ್ಮೆ ಕಾರ್ಡಿಯೋ ಅಟ್ಯಾಕ್ ಆಗಿದೆ. ವೆಂಟಿಲೇಟರ್ ತೆಗೆದರೆ ಅಲ್ಲಿಗೆ ಎಲ್ಲವೂ ಮುಗಿಯುತ್ತದೆ. ಈ ಬಗ್ಗೆ ಕುಟುಂಬಕ್ಕೆ ತಿಳಿಸಲಾಗಿದೆ.

''ಮೆದುಳು, ತಲೆಗೆ ಪೆಟ್ಟು ಬಿದ್ದಾಗ ಅಪಘಾತವಾದ 1 ಗಂಟೆಯೊಳಗೆ ಆಪರೇಟ್ ಮಾಡಿದರೆ ಬದುಕಿಸುವ ಸಾಧ್ಯತೆ ಹೆಚ್ಚಿರುತ್ತದೆ. ವಿಜಯ್ ಅವರ ಕೇಸಿನಲ್ಲಿ 20ನಿಮಿಷಕ್ಕೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು, 1 ಗಂಟೆಯೊಳಗೆ ಸರ್ಜರಿ ಪ್ರಕ್ರಿಯೆ ಶುರುಮಾಡಿ ಮೆದುಳಿನ ರಕ್ತಸ್ರಾವವನ್ನು ಸ್ವಚ್ಛಗೊಳಿಸಿದೆವು, ಮೇಜರ್ ಸರ್ಜರಿ ಮಾಡಲಾಗಿದೆ. ಆದರೆ, ಉಸಿರಾಟ ಇರುವ ತನಕ ಡೆತ್ ಎಂದು ಹೇಳಲು ಸಾಧ್ಯವಿಲ್ಲ, 1 ಲಿವರ್ 2 ಕಿಡ್ನಿ ದಾನಕ್ಕೆ ಕುಟುಂಬದವರು ಒಪ್ಪಿದ್ದಾರೆ. ಈ ಬಗ್ಗೆ ಸಂಪೂರ್ಣ ಸಮ್ಮತಿ ಸಿಕ್ಕಬಳಿಕವಷ್ಟೇ ಅಂಗಾಂಗ ದಾನ ಪ್ರಕ್ರಿಯೆ ನಡೆಸಲಾಗುತ್ತದೆ. ಸರ್ಕಾರಕ್ಕೆ ಈ ಬಗ್ಗೆ ತಿಳಿಸಬೇಕಾಗುತ್ತದೆ'' ಎಂದು ಡಾ. ಶೈಲೇಶ್ ವಿವರಿಸಿದರು.

National award winner Sanchari Vijay brain failure

ಶನಿವಾರ ತಡರಾತ್ರಿ ಬೆಂಗಳೂರಿನ ಜೆ.ಪಿ ನಗರದ ಸ್ನೇಹಿತ ನಿವಾಸದಿಂದ ಬೈಕಿನಲ್ಲಿ ತೆರಳುತ್ತಿದ್ದ ಸಂಚಾರಿ ವಿಜಯ್ ಅವರು ಅಪಘಾತಕ್ಕೊಳಗಾಗಿದ್ದರು. ತಲೆಗೆ ತೀವ್ರಪೆಟ್ಟು ಬಿದ್ದ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆ ಸಂದರ್ಭದಲ್ಲಿ ಉಸಿರಾಟ ಸಹಜವಾಗಿತ್ತು ಎಂದು ಅಧಿಕೃತ ಪ್ರಕಟಣೆಯಿಂದ ತಿಳಿದು ಬಂದಿದೆ.

English summary
National award winner Sanchari Vijay brain failure and not yet clincally dead as per Neuro Surgeon of Apollo Hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X