ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಗಾಂಧಿ ಹತ್ಯೆಗೂ ಮುನ್ನ ಆರೆಸ್ಸೆಸ್ ಸಮಾವೇಶಕ್ಕೆ ಬೆಂಗಳೂರಿಗೆ ಬಂದಿದ್ದ ಗೋಡ್ಸೆ'

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 29: ಆರೆಸ್ಸೆಸ್ ನ ಸಮಾವೇಶವೊಂದು ಬೆಂಗಳೂರಿನಲ್ಲಿ ನಡೆದಿತ್ತು. ಅದು ಗಾಂಧಿ ಹತ್ಯೆಗೂ ಹದಿನೈದು ದಿನಕ್ಕೆ ಮುಂಚಿತವಾಗಿ ನಡೆದ ಸಮಾವೇಶ. ಅದರಲ್ಲಿ ಭಾಗವಹಿಸುವುದಕ್ಕೆ ನಾಥೂರಾಂ ಗೋಡ್ಸೆ ಬೆಂಗಳೂರಿಗೆ ಬಂದು, ಆ ಸಮಾವೇಶದ ಸ್ವಾಗತ ಸಮಿತಿಗೆ ಅಧ್ಯಕ್ಷರಾಗಿದ್ದವರ ಮನೆಯಲ್ಲೇ ಉಳಿದಿದ್ದರು ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್. ಎಸ್. ದೊರೆಸ್ವಾಮಿ ಹೇಳಿದ್ದಾರೆ.

ಗಾಂಧೀಜಿ ಆರೋಗ್ಯ ಹೇಗಿತ್ತು ಗೊತ್ತೇ? ಮೊದಲ ಬಾರಿಗೆ ದಾಖಲೆ ಬಹಿರಂಗಗಾಂಧೀಜಿ ಆರೋಗ್ಯ ಹೇಗಿತ್ತು ಗೊತ್ತೇ? ಮೊದಲ ಬಾರಿಗೆ ದಾಖಲೆ ಬಹಿರಂಗ

ಬೆಂಗಳೂರಿನಲ್ಲಿ ಭಾನುವಾರ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿ, ನಮಗೂ ಗೋಡ್ಸೆಗೂ ಸಂಬಂಧವಿಲ್ಲ ಎಂಬ ಮಾತನ್ನು ಗಾಂಧಿ ಹತ್ಯೆಯ ನಂತರ ಆರೆಸ್ಸೆಸ್ ನವರು ಹೇಳುತ್ತಾರೆ. ಆದರೆ ಗೋಡ್ಸೆ ಆರೆಸ್ಸೆಸ್ ಗೆ ಸೇರಿದ ವ್ಯಕ್ತಿಯೇ ಎನ್ನುವುದಕ್ಕೆ ಹಲವಾರು ಸಾಕ್ಷ್ಯಗಳಿವೆ ಎಂದು ಹೇಳಿದ್ದಾರೆ.

Nathuram Godse Came To RSS Bengaluru Convention Before Gandhi Assassination

ಇನ್ನು ಸ್ವಾತಂತ್ರ್ಯ ಪಡೆದ ನಂತರ ಕಾಂಗ್ರೆಸ್ ಅನ್ನು ವಿಸರ್ಜನೆ ಮಾಡಬೇಕು ಎಂಬ ಮಾತನ್ನು ಗಾಂಧಿ ಹೇಳಿದ್ದು ಸತ್ಯ. ಆದರೆ ಅದರ ಬದಲು ಲೋಕಸೇವಾ ದಳವನ್ನು ರಚಿಸಿಕೊಂಡು, ಆಳುವ ಸರ್ಕಾರಗಳನ್ನು ತಿದ್ದುವ ಕೆಲಸ ಆಗಬೇಕು ಎಂಬುದು ಅವರಿಗೆ ಇರುತ್ತದೆ. ಆದರೆ ಪ್ರಧಾನಿ ಮೋದಿಯವರು ಗಾಂಧಿ ಹೇಳಿದ್ದ ಕಾಂಗ್ರೆಸ್ ವಿಸರ್ಜನೆ ಬಗ್ಗೆ ಮಾತನಾಡುತ್ತಾರೆ. ಆದರೆ ವಾಕ್ಯವನ್ನು ಪೂರ್ತಿ ಮಾಡುವುದಿಲ್ಲ ಎಂದು ದೊರೆಸ್ವಾಮಿ ಹೇಳಿದ್ದಾರೆ.

English summary
Freedom fighter H. S. Doreswamy said, Nathuram Godse came to RSS convention held in Bengaluru before Gandhi assassination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X