ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ಸಾಧ್ಯತೆ

|
Google Oneindia Kannada News

ಬೆಂಗಳೂರು, ಜನವರಿ 19: ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಯ ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ನೆರವೇರಿಸುವ ಸಾಧ್ಯತೆ ಇದೆ.

ಇದು 15,657 ಕೋಟಿಯ ಯೋಜನೆಯಾಗಿದ್ದು, ಫೆಬ್ರವರಿಯಲ್ಲಿ ಶಂಕುಸ್ಥಾಪನೆ ನೆರವೇರಲಿದೆ.2019ರ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರವು ಸಬರ್ಬನ್ ರೈಲು ಯೋಜನೆಗೆ ಹಸಿರು ನಿಶಾನೆ ತೋರಿತ್ತು.

ಬೆಂಗಳೂರು ಉಪನಗರ ರೈಲು ಯೋಜನೆ, 6 ವರ್ಷಗಳಲ್ಲಿ ಪೂರ್ಣ ಬೆಂಗಳೂರು ಉಪನಗರ ರೈಲು ಯೋಜನೆ, 6 ವರ್ಷಗಳಲ್ಲಿ ಪೂರ್ಣ

ಬಳಿಕ ಚುನಾವಣೆ ನೀತಿ ಸಂಹಿತೆಯಿದ್ದ ಕಾರಣ ಮುಂದೂಡಲಾಗಿತ್ತು, ನಂತರ ಕೊರೊನಾದಿಂದಾಗಿ ಕಾಮಗಾರಿ ವಿಳಂಬವಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಬಗ್ಗೆ ಖಚಿತ ಮಾಹಿತಿ ಇನ್ನೂ ದೊರೆತಿಲ್ಲ.

Narendra Modi To Lay Foundation Stone For Suburban Rail Project In February

ಬಿಬಿಎಂಪಿ ಚುನಾವಣೆಗೂ ಮುನ್ನ ಶಂಕುಸ್ಥಾಪನೆ ನೆರವೇರಿಸಬೇಕು ಎಂದು ಸರ್ಕಾರ ಆಲೋಚಿಸಿದೆ. ಕರ್ನಾಟಕ ರೈಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಾಪ್‌ಮೆಂಟ್ ಎಂಟರ್‌ಪ್ರೈಸಸ್ ರೈಲ್ವೆ ಸಚಿವಾಲಯ, ಹಾಗೂ ರಾಜ್ಯ ಸರ್ಕಾರದ ಜತೆ ಸೇರಿ ಯೋಜನೆ ಪೂರ್ಣಗೊಳಿಸಲಿದೆ.

ಮುಂದಿನ ಕೆಲವು ತಿಂಗಳೊಳಗೆ ಕೆ ರೈಡ್ 60ಕ್ಕೂ ಹೆಚ್ಚು ಮಂದಿ ಸಿಬ್ಬಂದಿಗೆ ಕೆಲಸ ನೀಡಲಿದೆ. ಕರ್ನಾಕ ಸರ್ಕಾರವು ಜಮೀನುನನ್ನು ಖರೀದಿಸುವ ಸಲುವಾಗಿ ಕರ್ನಾಟಕ ಇಂಡಸ್ಟ್ರಿಯಲ್ ಏರಿಯಾ ಡೆವಲಾಪ್‌ಮೆಂಟ್ ಬೋರ್ಡನ್ನು ನೇಮಿಸಿಕೊಂಡಿದೆ.

ಇದು 148 ಕಿ.ಮೀ ಯೋಜನೆಯಾಗಿದ್ದು, ನಾಲ್ಕು ಕಾರಿಡಾರ್‌ಗಳು ಬರಲಿವೆ. ಬೆಂಗಳೂರು ನಗರ ಹಾಗೂ ಸುತ್ತಲಿನ ಜಿಲ್ಲೆಗಳಿಗೆ ಸುಲಭವಾಗಿ ಹೋಗಿಬರಲು ಯೋಜನೆ ಸಹಾಯಕವಾಗಲಿದೆ. ಒಟ್ಟು 148 ಕಿ.ಮೀ. ಉದ್ದದ ಮಾರ್ಗಕ್ಕೆ ಕೇಂದ್ರ ಸಂಪುಧಿಟದ ಒಪ್ಪಿಗೆ ದೊರೆತಿದೆ.

ನಾಲ್ಕು ಕಾರಿಡಾರ್‌ಗಳಡಿ ವ್ಯಾಪಿಸಿರುವ ಈ ಮಾರ್ಗಗಳ ಮೂಲಕ ನಗರದ ವಾಹನ ದಟ್ಟಣೆ ನಿವಾರಣೆ ಜತೆಗೆ ಸಾರಿಗೆ ಸೌಲಭ್ಯ ಹೆಚ್ಚಳವಾಗಲಿದೆ. ಬೆಂಗಳೂರು ಸಿಟಿ-ದೇವನಹಳ್ಳಿ, ಚಿಕ್ಕಬಾಣಾವರ-ಬೈಯಪ್ಪನಹಳ್ಳಿ, ಕೆಂಗೇರಿ-ವೈಟ್‌ಫೀಲ್ಡ್‌ ಹಾಗೂ ಹೀಲಲಿಗೆ-ರಾಜಾನುಕುಂಟೆ ಮಾರ್ಗಗಳು ಅಂತಿಮಗೊಂಡಿವೆ. ಒಟ್ಟು 57 ನಿಲ್ದಾಣಗಳು ಅಸ್ತಿತ್ವಕ್ಕೆ ಬರಲಿಧಿವೆ (ಹಾಲಿಯಿರುವ ಕೆಲ ನಿಲ್ದಾಣ ಸೇರಿ). ಆದರೆ, ಈ ಹಿಂದೆ ನಗರದೊಳಗಿನ ಎಲ್ಲಾಮೆಟ್ರೊ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸಬೇಕೆಂಬ ಪ್ರಸ್ತಾಪಕ್ಕೆ ಬದಲು ಪ್ರಮುಖ 10 ಕೇಂದ್ರಗಳನ್ನು ಜೋಡಿಸಲು ಮಾತ್ರ ಆದ್ಯತೆ ದೊರೆತಿದೆ. ಇದರಿಂದ ಒಟ್ಟಾರೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇನ್ನಷ್ಟು ಮೇಲ್ದರ್ಜೆಗೇರಲಿದೆ.

English summary
The city's much awaited suburban Rail Project seems to be on the right track. Prime minister Narendra Modi is likely tolay Foundation stone in February.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X