{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"https://kannada.oneindia.com/news/bengaluru/narendra-modi-seek-blessing-from-lk-advani-s-guru-079259.html" }, "headline": "ಆಡ್ವಾಣಿ 'ಗುರು'ಗಳ ಬಳಿಗೆ ನರೇಂದ್ರ ಮೋದಿ ", "url":"https://kannada.oneindia.com/news/bengaluru/narendra-modi-seek-blessing-from-lk-advani-s-guru-079259.html", "image": { "@type": "ImageObject", "url": "http://kannada.oneindia.com/img/1200x60x675/2013/11/13-modi610.jpg", "width": "1200", "height":"675" }, "thumbnailUrl":"http://kannada.oneindia.com/img/128x50/2013/11/13-modi610.jpg", "datePublished": "2013-11-13 19:44:45", "dateModified": "2013-11-13T19:44:45+05:30", "author": { "@type": "Person", "name": "Mahesh" }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"Bangalore", "description": "BJP Prime Minister candidte Narendra Modi scheduled to meet LK Advani's Guru Udupi Pejawar Seer Vishveshathirtha during his visit to Bangalore. Modi is to seek blessing of the seer in the early morning on Nov.17", "keywords": "Narendra Modi to seek blessing from LK Advani's Guru,ಆಡ್ವಾಣಿ 'ಗುರು'ಗಳ ಬಳಿಗೆ ನರೇಂದ್ರ ಮೋದಿ ", "articleBody":"ಬೆಂಗಳೂರು, ನ.13: ನಗರದ ತುಂಬಾ ಭಾರತ ಗೆಲ್ಲಿಸಿ ಬ್ಯಾನರ್, ಪೋಸ್ಟರ್ ತುಂಬಿಸುವಲ್ಲಿ ಬಿಜೆಪಿ ಕಾರ್ಯಕರ್ತರು, ಶಾಸಕರು ನಿರತರಾಗಿದ್ದಾರೆ. ಪೊಲೀಸರಿಗೆ ಭದ್ರತಾ ವ್ಯವಸ್ಥೆ ಚಿಂತೆಯಾಗಿದೆ. ಈ ನಡುವೆ ಮೋದಿ ಅವರು ಅಡ್ವಾಣಿ ಅವರ ಗುರು ಗಳ ಆಶೀರ್ವಾದ ಬೇಡಿ ಬರುತ್ತಾರೆ ಎಂಬ ಸುದ್ದಿ ಹೊರ ಬಿದ್ದಿದೆ.ನಗರದ ಅರಮನೆ ಮೈದಾನದಲ್ಲಿ ನಡೆಯುವ ಭಾರತ ಗೆಲ್ಲಿಸಿ ಸಮಾವೇಶಕ್ಕೆ ಬಿಜೆಪಿ ಪ್ರಧಾನಿ ಅಭ್ಯರ್ಥಿ, ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ನ.17 ರಂದು ಬೆಳಗ್ಗೆ ಖಾಸಗಿ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಲಿದ್ದಾರೆ.ಬೆಳಗ್ಗೆ ಸುಮಾರು 10 ಗಂಟೆ ಎಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ಮೋದಿ ಅವರು ಬಿಗಿ ಭದ್ರತೆ ನಡುವೆ ಮೊದಲಿಗೆ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ಕೊಟ್ಟು ರವಿಶಂಕರ್ ಗುರೂಜಿ ಅವರ ಆಶೀರ್ವಾದ ಪಡೆಯಲಿದ್ದಾರೆ.ಅಲ್ಲಿಂದ ನೇರವಾಗಿ ಶ್ರೀನಿವಾಸನಗರ ಬಳಿ ಇರುವ ವಿದ್ಯಾಪೀಠಕ್ಕೆ ಆಗಮಿಸಿ ಉಡುಪಿಯ ಪೇಜಾವರ ಮಠ ಶ್ರೀಗಳಾದ ವಿಶ್ವೇಶತೀರ್ಥ ಶ್ರೀಪಾದಂಗಳವರಲ್ಲಿ ಆಶೀರ್ವಾದ ಬೇಡಲಿದ್ದಾರೆ. ಕನಿಷ್ಠ ಒಂದು ಗಂಟೆಗಳ ಕಾಲ ಪೇಜಾವರ ಶ್ರೀಗಳ ಜತೆ ಮಾತುಕತೆಗೆ ಮೋದಿ ಅವರು ಸಮಯವನ್ನು ಮೀಸಲಿಟ್ಟಿದ್ದಾರೆ.ಮಧ್ಯಾಹ್ನ 12ಕ್ಕೆ ಅರಮನೆ ಮೈದಾನಕ್ಕೆ ಆಗಮಿಸಿ, 1 ಗಂಟೆ ನಂತರ ಭಾರತ ಗೆಲ್ಲಿಸಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಮಾವೇಶದ ನಂತರ ಎಚ್ ಎಎಲ್ ವಿಮಾನ ನಿಲ್ದಾಣದ ಮೂಲಕವೇ ನವದೆಹಲಿಗೆ ತೆರಳಲಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.ಶಾದಿ ಭಾಗ್ಯ ಯೋಜನೆ ವಿಸ್ತರಣೆ ಮತ್ತು ಎಪಿಎಲ್ ಕಾರ್ಡ್ ದಾರರಿಗೂ ಪಡಿತರ ವಿತರಣೆ ಬೇಡಿಕೆ ಈಡೇರಿಸುವಂತೆ ಅಹೋರಾತ್ರಿ ಧರಣಿ ಕೂತಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪೋಸ್ಟರ್ ಗಳು ಮೋದಿ ಸಮಾವೇಶದ ಪ್ರವೇಶ ದ್ವಾರದ ಬಳಿ ಕಾಣಿಸಿಕೊಂಡು ಕುತೂಹಲ ಕೆರಳಿಸಿದೆ. ವಿವರ ಇಲ್ಲಿ ಓದಿಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಬೆಂಗಳೂರಿನ ಭಾರತ ಗೆಲ್ಲಿಸಿ ಸಮಾವೇಶಕ್ಕಾಗಿ ಆನ್ ಲೈನ್ ಮೂಲಕ ಇದುವರೆಗೂ 41,000 ಜನರು ನೋಂದಣಿ ಮಾಡಿಕೊಂಡಿದ್ದಾರೆ. ಸಮಾವೇಶಕ್ಕೆ ಆಗಮಿಸುವ ಜನರಿಗಾಗಿ ಬಿಜೆಪಿ 5000 ಬಸ್ ಮತ್ತು 10 ರೈಲುಗಳನ್ನು ಬಿಜೆಪಿ ಬುಕ್ ಮಾಡಿದೆ. ವಿವರ ಇಲ್ಲಿ ಓದಿ" }
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಡ್ವಾಣಿ 'ಗುರು'ಗಳ ಬಳಿಗೆ ನರೇಂದ್ರ ಮೋದಿ

By Mahesh
|
Google Oneindia Kannada News

ಬೆಂಗಳೂರು, ನ.13: ನಗರದ ತುಂಬಾ 'ಭಾರತ ಗೆಲ್ಲಿಸಿ' ಬ್ಯಾನರ್, ಪೋಸ್ಟರ್ ತುಂಬಿಸುವಲ್ಲಿ ಬಿಜೆಪಿ ಕಾರ್ಯಕರ್ತರು, ಶಾಸಕರು ನಿರತರಾಗಿದ್ದಾರೆ. ಪೊಲೀಸರಿಗೆ ಭದ್ರತಾ ವ್ಯವಸ್ಥೆ ಚಿಂತೆಯಾಗಿದೆ. ಈ ನಡುವೆ ಮೋದಿ ಅವರು ಅಡ್ವಾಣಿ ಅವರ 'ಗುರು' ಗಳ ಆಶೀರ್ವಾದ ಬೇಡಿ ಬರುತ್ತಾರೆ ಎಂಬ ಸುದ್ದಿ ಹೊರ ಬಿದ್ದಿದೆ.

ನಗರದ ಅರಮನೆ ಮೈದಾನದಲ್ಲಿ ನಡೆಯುವ 'ಭಾರತ ಗೆಲ್ಲಿಸಿ' ಸಮಾವೇಶಕ್ಕೆ ಬಿಜೆಪಿ ಪ್ರಧಾನಿ ಅಭ್ಯರ್ಥಿ, ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ನ.17 ರಂದು ಬೆಳಗ್ಗೆ ಖಾಸಗಿ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಬೆಳಗ್ಗೆ ಸುಮಾರು 10 ಗಂಟೆ ಎಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ಮೋದಿ ಅವರು ಬಿಗಿ ಭದ್ರತೆ ನಡುವೆ ಮೊದಲಿಗೆ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ಕೊಟ್ಟು ರವಿಶಂಕರ್ ಗುರೂಜಿ ಅವರ ಆಶೀರ್ವಾದ ಪಡೆಯಲಿದ್ದಾರೆ.

Narendra Modi to seek blessing from LK Advani's Guru

ಅಲ್ಲಿಂದ ನೇರವಾಗಿ ಶ್ರೀನಿವಾಸನಗರ ಬಳಿ ಇರುವ ವಿದ್ಯಾಪೀಠಕ್ಕೆ ಆಗಮಿಸಿ ಉಡುಪಿಯ ಪೇಜಾವರ ಮಠ ಶ್ರೀಗಳಾದ ವಿಶ್ವೇಶತೀರ್ಥ ಶ್ರೀಪಾದಂಗಳವರಲ್ಲಿ ಆಶೀರ್ವಾದ ಬೇಡಲಿದ್ದಾರೆ. ಕನಿಷ್ಠ ಒಂದು ಗಂಟೆಗಳ ಕಾಲ ಪೇಜಾವರ ಶ್ರೀಗಳ ಜತೆ ಮಾತುಕತೆಗೆ ಮೋದಿ ಅವರು ಸಮಯವನ್ನು ಮೀಸಲಿಟ್ಟಿದ್ದಾರೆ.

ಮಧ್ಯಾಹ್ನ 12ಕ್ಕೆ ಅರಮನೆ ಮೈದಾನಕ್ಕೆ ಆಗಮಿಸಿ, 1 ಗಂಟೆ ನಂತರ 'ಭಾರತ ಗೆಲ್ಲಿಸಿ' ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಮಾವೇಶದ ನಂತರ ಎಚ್ ಎಎಲ್ ವಿಮಾನ ನಿಲ್ದಾಣದ ಮೂಲಕವೇ ನವದೆಹಲಿಗೆ ತೆರಳಲಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.

'ಶಾದಿ ಭಾಗ್ಯ ಯೋಜನೆ ವಿಸ್ತರಣೆ ಮತ್ತು ಎಪಿಎಲ್' ಕಾರ್ಡ್ ದಾರರಿಗೂ ಪಡಿತರ ವಿತರಣೆ ಬೇಡಿಕೆ ಈಡೇರಿಸುವಂತೆ ಅಹೋರಾತ್ರಿ ಧರಣಿ ಕೂತಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪೋಸ್ಟರ್ ಗಳು ಮೋದಿ ಸಮಾವೇಶದ ಪ್ರವೇಶ ದ್ವಾರದ ಬಳಿ ಕಾಣಿಸಿಕೊಂಡು ಕುತೂಹಲ ಕೆರಳಿಸಿದೆ. ವಿವರ ಇಲ್ಲಿ ಓದಿ

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಬೆಂಗಳೂರಿನ ಭಾರತ ಗೆಲ್ಲಿಸಿ ಸಮಾವೇಶಕ್ಕಾಗಿ ಆನ್ ಲೈನ್ ಮೂಲಕ ಇದುವರೆಗೂ 41,000 ಜನರು ನೋಂದಣಿ ಮಾಡಿಕೊಂಡಿದ್ದಾರೆ. ಸಮಾವೇಶಕ್ಕೆ ಆಗಮಿಸುವ ಜನರಿಗಾಗಿ ಬಿಜೆಪಿ 5000 ಬಸ್ ಮತ್ತು 10 ರೈಲುಗಳನ್ನು ಬಿಜೆಪಿ ಬುಕ್ ಮಾಡಿದೆ. ವಿವರ ಇಲ್ಲಿ ಓದಿ

English summary
BJP Prime Minister candidte Narendra Modi scheduled to meet LK Advani's Guru Udupi Pejawar Seer Vishveshathirtha during his visit to Bangalore. Modi is to seek blessing of the seer in the early morning on Nov.17
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X