ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಟ್ರಾಫಿಕ್‌ ಸಮಸ್ಯೆ; ಮೋದಿ ಕೊಟ್ಟ ಗಡುವು ಏನು?

|
Google Oneindia Kannada News

ಬೆಂಗಳೂರು, ಜೂ. 21: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬೆಂಗಳೂರಿಗೆ ಆಗಮಿಸಿದ್ದರು. ನಗರದ ಟ್ರಾಫಿಕ್‌ ಸಮಸ್ಯೆ ನಿವಾರಣೆಗೆ ಅವರು 40 ತಿಂಗಳುಗಳ ಗಡುವನ್ನು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ 28,000 ಕೋಟಿ ರೂ.ಗಳ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಪ್ರಧಾನಿ ಮೋದಿ, "ಬೆಂಗಳೂರನ್ನು ಸುಗಮ ಸಂಚಾರ ಮುಕ್ತಗೊಳಿಸಲು ಮೆಟ್ರೋ, ರೈಲು, ಅಂಡರ್‌ಪಾಸ್, ಫ್ಲೈಓವರ್ ಮತ್ತು ರಸ್ತೆ ಯೋಜನೆಗಳನ್ನು ಕೈಗೊಳ್ಳುವ ಮೂಲಕ ಸಾರ್ವಜನಿಕ ಸಂಪರ್ಕವನ್ನು ಸುಧಾರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಧ್ಯವಿರುವ ಎಲ್ಲ ವಿಧಾನಗಳಲ್ಲಿ ಕಾರ್ಯನಿರ್ವಹಿಸುತ್ತಿವೆ" ಎಂದರು.

ಡಿಜಿಟಲ್ ಯೋಗ ಪ್ರದರ್ಶನ ವೀಕ್ಷಿಸಿದ ಪ್ರಧಾನಿ ನರೇಂದ್ರ ಮೋದಿಡಿಜಿಟಲ್ ಯೋಗ ಪ್ರದರ್ಶನ ವೀಕ್ಷಿಸಿದ ಪ್ರಧಾನಿ ನರೇಂದ್ರ ಮೋದಿ

"ಈ ಯೋಜನೆಗಳು ಸುಲಭವಾಗಿ ಜೀವನ ನಡೆಸಲು ಮತ್ತು ಸುಲಭವಾಗಿ ವ್ಯಾಪಾರ ವಹಿವಾಟು ನಡೆಸಲು ಸಹಾಯ ಮಾಡುತ್ತದೆ" ಎಂದು ಅವರು ಹೇಳಿದರು.

 ಉಪನಗರ ರೈಲು ಸಂಪರ್ಕ ಒದಗಿಸುವ ಬಗ್ಗೆ ಚರ್ಚೆ

ಉಪನಗರ ರೈಲು ಸಂಪರ್ಕ ಒದಗಿಸುವ ಬಗ್ಗೆ ಚರ್ಚೆ

ದೇಶದಲ್ಲಿ 40 ವರ್ಷಗಳ ಆಡಳಿತದಲ್ಲಿ ಕಾಂಗ್ರೆಸ್ ನಗರದ ಅಭಿವೃದ್ಧಿಯನ್ನು ನಿರ್ಲಕ್ಷಿಸಿದೆ. ಆದರೆ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರವು ಕಳೆದ ಕೆಲವು ವರ್ಷಗಳಲ್ಲಿ ನಗರ ಆಡಳಿತಕ್ಕೆ ಹೊಸ ಆಲೋಚನೆಗಳು ಮತ್ತು ವಿಧಾನಗಳನ್ನು ತಂದಿದೆ. 1980 ರ ದಶಕದಿಂದಲೂ ಬೆಂಗಳೂರಿನ ಕೆಲವು ಭಾಗಗಳಿಗೆ ಉಪನಗರ ರೈಲು ಸಂಪರ್ಕವನ್ನು ಒದಗಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ ಅದನ್ನು ಕಾರ್ಯಗತಗೊಳಿಸಲು ಯಾವುದೇ ಪ್ರಯತ್ನಗಳು ನಡೆದಿಲ್ಲ. ಸುಮಾರು 40 ವರ್ಷಗಳು ಚರ್ಚೆಯಲ್ಲಿಯೇ ಕಳೆದಿವೆ. ಈ ಯೋಜನೆಯು 16 ವರ್ಷಗಳಿಂದ ಕಡತಗಳಲ್ಲಿ ಸಿಲುಕಿಕೊಂಡಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಆದರೆ ಈ ಯೋಜನೆಗಳನ್ನು 40 ತಿಂಗಳಲ್ಲಿ ಪೂರ್ಣಗೊಳಿಸಲು ನಾನು ಶ್ರಮಿಸುತ್ತೇನೆ ಎಂದು ನಾನು ಬೆಂಗಳೂರಿನ ಜನರಿಗೆ ಭರವಸೆ ನೀಡುತ್ತೇನೆ. ಅವರ ಕನಸನ್ನು ನನಸು ಮಾಡಿ ಎಂದು ಮೋದಿ ಸೂಚನೆ ನಿಡಿದರು.

Breaking; ಮೋದಿ ಪ್ರವಾಸ ಮುಕ್ತಾಯ, ಮಂಡಕಳ್ಳಿಯಿಂದ ದೆಹಲಿಗೆ ವಾಪಸ್Breaking; ಮೋದಿ ಪ್ರವಾಸ ಮುಕ್ತಾಯ, ಮಂಡಕಳ್ಳಿಯಿಂದ ದೆಹಲಿಗೆ ವಾಪಸ್

 ಏಕ್ ಭಾರತ್, ಶ್ರೇಷ್ಠ್ ಭಾರತ'ದ ಮನೋಭಾವ

ಏಕ್ ಭಾರತ್, ಶ್ರೇಷ್ಠ್ ಭಾರತ'ದ ಮನೋಭಾವ

ತೂಗುಯ್ಯಾಲೆಯಲ್ಲಿದ್ದ ಈ ಯೋಜನೆಯನ್ನು ಪೂರ್ಣಗೊಳಿಸುವ ಅವಕಾಶ ಸಿಕ್ಕಿದೆ ಎಂದ ಅವರು, 40 ವರ್ಷಗಳ ಹಿಂದೆಯೇ ಈ ಯೋಜನೆ ಅನುಷ್ಠಾನಗೊಂಡಿದ್ದರೆ ಬೆಂಗಳೂರು ನಗರ ಇನ್ನಷ್ಟು ಉತ್ತಮ ಹಾಗೂ ಬಲಿಷ್ಠವಾಗುತ್ತಿತ್ತು. ಬೆಂಗಳೂರು ದೇಶದ ಲಕ್ಷಾಂತರ ಯುವಕರ ಕನಸಿನ ನಗರವಾಗಿದೆ. ಇದು 'ಏಕ್ ಭಾರತ್, ಶ್ರೇಷ್ಠ್ ಭಾರತ'ದ ಮನೋಭಾವದ ಪ್ರತಿಬಿಂಬವಾಗಿದೆ. ಬೆಂಗಳೂರಿನ ಅಭಿವೃದ್ಧಿಯು ಲಕ್ಷಾಂತರ ಕನಸುಗಳ ಪೋಷಣೆಯಾಗಿದೆ. ಅದಕ್ಕಾಗಿಯೇ ಕಳೆದ ಎಂಟು ವರ್ಷಗಳಲ್ಲಿ, ಬೆಂಗಳೂರಿನ ಸಾಮರ್ಥ್ಯವನ್ನು ಹೆಚ್ಚಿಸಲು ಕೇಂದ್ರವು ಅವಿರತವಾಗಿ ಶ್ರಮಿಸುತ್ತಿದೆ ಎಂದು ಮೋದಿ ಹೇಳಿದರು.

 ಆರ್ಥಿಕ ಅಭಿವೃದ್ಧಿಗೆ ಅದರ ಕೊಡುಗೆ

ಆರ್ಥಿಕ ಅಭಿವೃದ್ಧಿಗೆ ಅದರ ಕೊಡುಗೆ

ಬೆಂಗಳೂರಿನ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯ ಕುರಿತು ಮಾತನಾಡಿದ ಪ್ರಧಾನಿ, ನಗರವು ಆತ್ಮನಿರ್ಭರ ಭಾರತಕ್ಕೆ ಸ್ಫೂರ್ತಿ ನೀಡಿದ 21 ನೇ ಶತಮಾನದ ಯಶಸ್ಸಿನ ಕಥೆಯಾಗಿದೆ. ಈ ನಗರವು ಯುವಕರು, ಉದ್ಯಮಶೀಲತೆ, ನಾವೀನ್ಯತೆ ಮತ್ತು ಖಾಸಗಿ ವಲಯದ ಒಳಗೊಳ್ಳುವಿಕೆಯ ಸಾಮರ್ಥ್ಯವನ್ನು ತೋರಿಸಿದೆ. ಇದು ಖಾಸಗಿ ವಲಯದ ಬಗ್ಗೆ ಮತ್ತು ಆರ್ಥಿಕ ಅಭಿವೃದ್ಧಿಗೆ ಅದರ ಕೊಡುಗೆಯ ಬಗ್ಗೆ ಅವರ ಮನಸ್ಥಿತಿಯನ್ನು ಬದಲಾಯಿಸಲು ಜನರಿಗೆ ಕಲಿಸುತ್ತದೆ. ಕಳೆದ ಎಂಟು ವರ್ಷಗಳಲ್ಲಿ 100 ಬಿಲಿಯನ್ ಡಾಲರ್ ಕಂಪನಿಗಳನ್ನು ರಚಿಸಲಾಗಿದೆ ಮತ್ತು ಪ್ರತಿ ತಿಂಗಳು ಹೊಸದನ್ನು ಸೇರಿಸಲಾಗುತ್ತಿದೆ ಎಂದರು.

 ಸುವರ್ಣಾಕ್ಷರಗಳಲ್ಲಿ ಬರೆಯಬೇಕಾದ ದಿನ

ಸುವರ್ಣಾಕ್ಷರಗಳಲ್ಲಿ ಬರೆಯಬೇಕಾದ ದಿನ

ಇದಕ್ಕೂ ಮುನ್ನ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೋದಿ ಅವರು ಆರಂಭಿಸಿರುವ ಯೋಜನೆಗಳಿಂದ ಕರ್ನಾಟಕದ ಜಿಎಸ್‌ಡಿಪಿ (ಒಟ್ಟು ರಾಜ್ಯದ ಆಂತರಿಕ ಉತ್ಪನ್ನ) ಶೇ.2ರಷ್ಟು ಏರಿಕೆಯಾಗಲಿದೆ. ರಾಜ್ಯದ ಅಭಿವೃದ್ಧಿ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಬೇಕಾದ ದಿನ ಇದಾಗಿದೆ. ಇದು ವಾಸ್ತವದಲ್ಲಿ ನಗರದ ಹೃದಯ ಭಾಗದಿಂದ ಹೊರವಲಯದ ವಿವಿಧ ಪ್ರದೇಶಗಳಿಗೆ ಸಂಪರ್ಕವನ್ನು ಒದಗಿಸುತ್ತದೆ ಎಂದು ಹೇಳಿದರು.

Recommended Video

ಮೈಸೂರಿನಲ್ಲಿ ಡಿಜಿಟಲ್‌ ಯೋಗ ಕೇಂದ್ರ ಉದ್ಘಾಟಿಸಿದ‌ ಮೋದಿ | OneIndia Kannada

English summary
Prime Minister Narendra Modi who visited Bengaluru on June 21st has given a 40-day deadline to address the city's traffic woes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X