ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾರಾಯಣ ಹೃದಯಾಲಯ ಕಮ್ಯುನಿಟಿ ರೇಡಿಯೊಗಾಗಿ ನೇಮಕಾತಿ

By Mahesh
|
Google Oneindia Kannada News

ಬೆಂಗಳೂರು, ಜೂನ್ 21: ನಾರಾಯಣ ಹೃದಯಾಲಯ ಫೌಂಡೇಷನ್, ತನ್ನ ಸಮುದಾಯ ರೇಡಿಯೋಗಾಗಿ ರಾಜ್ಯವ್ಯಾಪಿ ನೇಮಕಾತಿ ಮತ್ತು ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದೆ.

ಈ ಕಾರ್ಯಕ್ರಮದಡಿ ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ರೇಡಿಯೊ ನಿರ್ವಹಣೆಗಾಗಿ ಅತ್ಯುತ್ತಮ ತರಬೇತಿ ನೀಡಲಾಗುತ್ತದೆ. ಇದು, ಫೌಂಡೇಷನ್‍ನ ಸಮುದಾಯ ಸೇವೆ ಅನ್ವಯ ನಡೆಯಲಿದ್ದು, ಯಾವುದೇ ವೆಚ್ಚ ಇರುವುದಿಲ್ಲ.

Narayana Hrudayalaya Foundation recruitment and training for Community radio

2008ರಿಂದಲೂ ಮೊದಲ ಸಮುದಾಯ ಆಧಾರಿತ ರೇಡಿಯೊ ಕೇಂದ್ರವನ್ನು ಒಂದು ಎನ್‍ಜಿಒ ಆಗಿ ಆರಂಭಿಸಿದಾಗ ಅನೇಕ ಸರ್ಕಾರೇತರ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಸಮುದಾಯ ರೇಡಿಯೊ ಕೇಂದ್ರವನ್ನು ಆರಂಭಿಸಿದವು.

179 ಸಿಆರ್ ಎಸ್ ‍ಗಳು ದೇಶದಲ್ಲಿ ಈಗ ಕಾರ್ಯ ನಿರ್ವಹಿಸುತ್ತಿದ್ದು, ಬಹುತೇಕ ರೇಡಿಯೊ ಕೇಂದ್ರಗಳನ್ನು ಶೈಕ್ಷಣಿಕ ಸಂಸ್ಥೆಗಳು ಹೊಂದಿವೆ. ಕೆಲವನ್ನು ಸರ್ಕಾರೇತರ ಸಂಸ್ಥೆಗಳು ಹೊಂದಿವೆ.

ತನ್ನ ಸಮುದಾಯ ರೇಡಿಯೊ ಮೂಲಕ ನಾರಾಯಣ ಹೃದಯಾಲಯ ಫೌಂಡೇಷನ್ ಆನೇಕಲ್ ಆಸುಪಾಸಿನಲ್ಲಿ ಇರುವ ಜನರಿಗೆ ವೈಯಕ್ತಿಕ, ಸಮೂಹ ಮತ್ತು ಸಮುದಾಯಗಳ ಅಗತ್ಯಗಳಿಗೆ ಸ್ಪಂದಿಸಲಿದೆ. ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸುವ ಚಿಂತನೆಗಳ ವಿನಿಮಯ, ಸಾರ್ವಜನಿಕ ಹಿತಾಸಕ್ತಿಗೆ ಒತ್ತು ನೀಡಲಿದೆ. ಆರೋಗ್ಯ, ಮೂಲಸೌಕರ್ಯ, ಸುರಕ್ಷತೆ ಮತ್ತು ಭದ್ರತೆ, ಶಿಕ್ಷಣ, ಆಹಾರ, ಸಂಸ್ಕøತಿ, ಸಮುದಾಯ ಭಾಗಿತ್ವ, ಇತರೆ ಸಾಕಾರದ ಕಲ್ಯಾಣ ಕಾರ್ಯಕ್ರಮಗಳು ಸೇರಿವೆ.

ನಾರಾಯಣ ಹೆಲ್ತ್ : 2000ರಲ್ಲಿ ಬೆಂಗಳೂರಿನಲ್ಲಿ ಮೊದಲ ಹಂತದಲ್ಲಿ 225 ಹಾಸಿಗೆ ಸಾಮರ್ಥ್ಯದ ಸೌಲಭ್ಯದೊಂದಿಗೆ ಆರಂಭವಾದ ಸಂಸ್ಥೆ ಈಗ 54 ಕಡೆ ಸೇವೆಯನ್ನು ವಿಸ್ತರಿಸಿದೆ.ವಿಶ್ವದರ್ಜೆ ಗುಣಮಟ್ಟದ ಸೂಪರ್ ಸ್ಪೆಷಾಲಿಟಿ ಸೌಲಭ್ಯವನ್ನು ಹೊಂದಿದೆ.

English summary
Narayana Hrudayalaya Foundation, announced the launch of their recruitment and training program for its Community radio in Karnataka. Founded by Dr. Devi Shetty and headquartered in Bengaluru, Narayana Health group is the second largest health care provider in the country in terms of operational bed count.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X