ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾರಾಯಣ ಆಸತ್ರೆಯಿಂದ "ಸುರಕ್ಷಿತ ಶಾಲೆ, ಆರೋಗ್ಯಯುತ ಶಾಲೆ" ಅಭಿಯಾನ

|
Google Oneindia Kannada News

ಬೆಂಗಳೂರು, ಆಗಸ್ಟ್ 25: ತಂಬಾಕು ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಮಕ್ಕಳಲ್ಲಿ ಬಳಕೆಯ ಬೆಳವಣಿಗೆಯನ್ನು ತಡೆಯುವ ಪ್ರಯತ್ನದ ಸಲುವಾಗಿ ನಾರಾಯಣ ಹೆಲ್ತ್ ಇಂದು ಭಾರತೀಯ ಆರೋಗ್ಯ ಸಂಸ್ಥೆ ಬೆಂಬಲಿತ ತಂಬಾಕು ಮುಕ್ತ ಕರ್ನಾಟಕ ಒಕ್ಕೂಟ (ಸಿಎಫ್‍ಟಿಎಫ್‍ಕೆ)ದ ಸಹಯೋಗದೊಂದಿಗೆ ಸುರಕ್ಷಿತ ಶಾಲಾ ಯೋಜನೆ" ಎಂಬ ಕಾರ್ಯಕ್ರಮಡಿ ಅನೆಕಲ್ ತಾಲುಕಿನ ಚಂದಾಪುರ ವೃತ್ತದ ಬಳಿಯ ಇರುವ ವಿವೇಕಾನಂದ ಪ್ರೌಢ ಶಾಲೆಯಲ್ಲಿ "ಸುರಕ್ಷಿತ ಶಾಲೆ, ಆರೋಗ್ಯಯುತ ಶಾಲೆ" ಎಂಬ ಅಭಿಯಾನ ನಡೆಸಲಾಯಿತು.

ಗ್ಲೋಬಲ್ ಯೂತ್ ಟೊಬ್ಯಾಕೊ ಸರ್ವೆ (ಜಿವೈಟಿಎಸ್) ಪ್ರಕಾರ, ಹದಿಹರೆಯದವರಲ್ಲಿ 14.6% ರಷ್ಟು ಜನರು ಪ್ರಸ್ತುತ ಎಲ್ಲಾ ರೀತಿಯ ತಂಬಾಕನ್ನು ಬಳಸುತ್ತಾರೆ, ಅದರಲ್ಲಿ 19% ಹುಡುಗರು ಮತ್ತು 8.3% ಹುಡುಗಿಯರು ಒಳಗೊಂಡಿದ್ದಾರೆ.

ನೈಜೀರಿಯಾ ಸಹೋದರರಿಗೆ ಮರುಹುಟ್ಟು ನೀಡಿದ ನಾರಾಯಣ ಹೆಲ್ತ್ ಸಿಟಿನೈಜೀರಿಯಾ ಸಹೋದರರಿಗೆ ಮರುಹುಟ್ಟು ನೀಡಿದ ನಾರಾಯಣ ಹೆಲ್ತ್ ಸಿಟಿ

ತಂಬಾಕು ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಮಕ್ಕಳಲ್ಲಿ ಬಳಕೆಯ ಬೆಳವಣಿಗೆಯನ್ನು ತಡೆಯುವ ಪ್ರಯತ್ನದ ಸಲುವಾಗಿ ನಾರಾಯಣ ಹೆಲ್ತ್ ಇಂದು ಭಾರತೀಯ ಆರೋಗ್ಯ ಸಂಸ್ಥೆ ಬೆಂಬಲಿತ ತಂಬಾಕು ಮುಕ್ತ ಕರ್ನಾಟಕ ಒಕ್ಕೂಟ (ಸಿಎಫ್‍ಟಿಎಫ್‍ಕೆ)ದ ಸಹಯೋಗದೊಂದಿಗೆ ಸುರಕ್ಷಿತ ಶಾಲಾ ಯೋಜನೆ" ಎಂಬ ಕಾರ್ಯಕ್ರಮಡಿ ಅನೆಕಲ್ ತಾಲುಕಿನ ಚಂದಾಪುರ ವೃತ್ತದ ಬಳಿಯ ಇರುವ ವಿವೇಕಾನಂದ ಪ್ರೌಢ ಶಾಲೆಯಲ್ಲಿ "ಸುರಕ್ಷಿತ ಶಾಲೆ, ಆರೋಗ್ಯಯುತ ಶಾಲೆ" ಎಂಬ ಅಭಿಯಾನ ನಡೆಸಲಾಯಿತು.

ಕ್ರೈಸ್ಟ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ನಾಟಕ

ಕ್ರೈಸ್ಟ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ನಾಟಕ

ಈ ಕಾರ್ಯಕ್ರಮವು ಕ್ರೈಸ್ಟ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ನಾಟಕ ತಂಡವಾದ ವಾಜ್ ಡ್ರಾಮಾಟಿಕ್ಸ್ ಅಕಾಡೆಮಿಯಿಂದ ಬೀದಿ ನಾಟಕ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಈ ಕಾರ್ಯಕ್ರಮದಲ್ಲಿ ನಾರಾಯಣ ಹೆಲ್ತ್ ನ ಸಿ.ಎಸ್.ಆರ್ ವಿಭಾಗದ ಮುಖ್ಯಸ್ಥರಾದ ಡಾ.ಅನುಪಮಾ ಶೆಟ್ಟಿ, ನಾರಾಯಣ ಹೆಲ್ತ್ ಸಿಟಿಯಲ್ಲಿರುವ ಮಜೂಂದಾರ್ ಶಾ ಕ್ಯಾನ್ಸರ್ ಆಸ್ಪತ್ರೆಯ ಡಾ. ವಿವೇಕ್ ಶೆಟ್ಟಿ, ಕನ್ಸಲ್ಟೆಂಟ್ ಹೆಡ್ & ನೆಕ್ ಆಂಕೊ ಸರ್ಜನ್ ಮತ್ತು ಅನೇಕಲ್‍ನ ಬ್ಲಾಕ್ ಶಿಕ್ಷಣ ಅಧಿಕಾರಿಗಳು ಜಾಗೃತಿ ಮಾತುಕತೆ ನಡೆಸಿದರು.

ನಾರಾಯಣ ಹೆಲ್ತ್ ನ ಡಾ. ಅನುಪಮಾ ಶೆಟ್ಟಿ

ನಾರಾಯಣ ಹೆಲ್ತ್ ನ ಡಾ. ಅನುಪಮಾ ಶೆಟ್ಟಿ

ನಾರಾಯಣ ಹೆಲ್ತ್ ನ ಸಿ.ಎಸ್.ಆರ್ ವಿಭಾಗದ ಮುಖ್ಯಸ್ಥರು ಮತ್ತು ಜನರಲ್ ಮ್ಯಾನೇಜರ್ ಆದ ಡಾ. ಅನುಪಮಾ ಶೆಟ್ಟಿಯವರು ಈ ಉಪಕ್ರಮದ ಬಗ್ಗೆ ವಿವರಿಸುತ್ತಾ, "ತಂಬಾಕು ಚಟ, ವಿಶೇಷವಾಗಿ ದೇಶದ ಯುವಕರಲ್ಲಿ ಮತ್ತು ರಾಜ್ಯದಾದ್ಯಂತ ಒಂದು ಪ್ರಮುಖ ಕಾಳಜಿಯಾಗಿದೆ. ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ರಾಷ್ಟ್ರೀಯ ಆಯೋಗದ ಪ್ರಕಾರ, ಮಕ್ಕಳು ಧೂಮಪಾನವನ್ನು ಪ್ರಾರಂಭಿಸುವ ಸರಾಸರಿ ವಯಸ್ಸು 13 ರಿಂದ 15 ವರ್ಷಗಳು. ಇದಲ್ಲದೆ, ಅನೇಕ ಮಕ್ಕಳು 18 ವರ್ಷ ದಾಟುವ ಮೊದಲೇ ವ್ಯಸನಿಯಾಗಿದ್ದಾರೆ, ಆರಂಭಿಕ ಹಂತದಲ್ಲಿ ಜಾಗೃತಿ ಮತ್ತು ಮಧ್ಯಸ್ಥಿಕೆಗಳನ್ನು ಸೃಷ್ಟಿಸುವುದು ಕಡ್ಡಾಯವಾಗಿದೆ."

ನಾರಾಯಣ ಹೆಲ್ತ್- ಮಜೂಂದರ್ ಶಾ ಪ್ರತಿಷ್ಠಾನದಿಂದ ಸ್ಟಾರ್ಟ್‍ಅಪ್‍ಗಳಿಗೆ ನೆರವು ನಾರಾಯಣ ಹೆಲ್ತ್- ಮಜೂಂದರ್ ಶಾ ಪ್ರತಿಷ್ಠಾನದಿಂದ ಸ್ಟಾರ್ಟ್‍ಅಪ್‍ಗಳಿಗೆ ನೆರವು

 28 ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಪ್ರಯೋಗ

28 ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಪ್ರಯೋಗ

"ಪ್ರಸ್ತುತ ಉಪಕ್ರಮವು ಅದರ ಪ್ರಾಯೋಗಿಕ ಹಂತದಲ್ಲಿದೆ. ಪ್ರಾಯೋಗಿಕ ಹಂತದಲ್ಲಿ, ನಾವು ಅನೇಕಲ್ ಮತ್ತು ದೊಡ್ಡಬಳ್ಳಾಪುರದಾದ್ಯಂತ 28 ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ತಲುಪಲು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲು ಯೋಜಿಸಿದ್ದೇವೆ. ಆದಾಗ್ಯೂ, ನಾವು ಕಾರ್ಯಕ್ರವನ್ನು ಹೆಚ್ಚಿಸಲು ಮತ್ತು ರಾಜ್ಯದಾದ್ಯಂತ ಶಾಲೆಗಳೊಂದಿಗೆ ತೊಡಗಿಸಿಕೊಳ್ಳಲು ಉದ್ದೇಶಿಸಿದ್ದೇವೆ. ಮಾನಸಿಕ ಆರೋಗ್ಯವನ್ನು ನಮ್ಮ ಕಾರ್ಯಕ್ರಮಗಳಲ್ಲಿ ನಿರ್ಣಾಯಕ ಮತ್ತು ಕಡಿಮೆ ಕೇಂದ್ರೀಕೃತ ವಿಷಯವಾಗಿ ಸೇರಿಸಲು ನಾವು ಯೋಜಿಸಿದ್ದೇವೆ."

ಗ್ಲೋಬಲ್ ಯೂತ್ ಟೊಬ್ಯಾಕೊ ಸರ್ವೆ

ಗ್ಲೋಬಲ್ ಯೂತ್ ಟೊಬ್ಯಾಕೊ ಸರ್ವೆ

ಗ್ಲೋಬಲ್ ಯೂತ್ ಟೊಬ್ಯಾಕೊ ಸರ್ವೆ (ಜಿವೈಟಿಎಸ್) ಪ್ರಕಾರ, ಹದಿಹರೆಯದವರಲ್ಲಿ 14.6% ರಷ್ಟು ಜನರು ಪ್ರಸ್ತುತ ಎಲ್ಲಾ ರೀತಿಯ ತಂಬಾಕನ್ನು ಬಳಸುತ್ತಾರೆ, ಅದರಲ್ಲಿ 19% ಹುಡುಗರು ಮತ್ತು 8.3% ಹುಡುಗಿಯರು ಒಳಗೊಂಡಿದ್ದಾರೆ. ಈ ಸಮೀಕ್ಷೆ ಆಧಾರದ ಮೇಲೆ ತಂಬಾಕು ರಹಿತ ಪ್ರದೇಶ ಸುರಕ್ಷಿತ ಶಾಲೆ ವಾತಾವರಣದತ್ತ ನಾರಾಯಣ ಹೆಲ್ತ್ ಸಂಸ್ಥೆ ಈ ಅಭಿಯಾನ ಕೈಗೊಂಡಿದೆ.

ನಾರಾಯಣ ಆಸ್ಪತ್ರೆ ಉಳಿಸಿದ ಬೇಬಿ ಪ್ಯಾಪಿಲಾನ್ ವಿಶ್ವದ ಪವಾಡ ಶಿಶು ನಾರಾಯಣ ಆಸ್ಪತ್ರೆ ಉಳಿಸಿದ ಬೇಬಿ ಪ್ಯಾಪಿಲಾನ್ ವಿಶ್ವದ ಪವಾಡ ಶಿಶು

English summary
Narayana Health. As part of the CSR initiative Narayana Health in association with with Consortium For Tobacco Free Karnataka (CFTFK), supported by Indian Institute of Public Health today organised an awareness campaign titled ‘Safe School Project’.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X