ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ಯಾನ್ಸರ್ ಗುಣಮುಖರಿಗೆ ನಾರಾಯಣ ಹೆಲ್ತ್ ಸಿಟಿ ನಮನ

By Mahesh
|
Google Oneindia Kannada News

ಬೆಂಗಳೂರು, ಫೆಬ್ರವರಿ 04: ಕ್ಯಾನ್ಸರ್ ರೋಗದಿಂದ ಗುಣಮುಖರಾಗಿ ಬದುಕುಳಿದವರ ಧೈರ್ಯ ಹಾಗೂ ಮಾನಸಿಕ ಸ್ಥೈರ್ಯವನ್ನು ಗೌರವಿಸುತ್ತಾ ನಾರಾಯಣ ಹೆಲ್ತ್ ಸಿಟಿ ಇಂದು ನಗರದಲ್ಲಿ 60ಕ್ಕೂ ಜನರನ್ನು ಗೌರವಿಸಿತು.

ಕಾರ್ಯಕ್ರಮದಲ್ಲಿ ನಾರಾಯಣ ಹೆಲ್ತ್ ಸಿಟಿಯ ವೈದ್ಯರು ಮತ್ತು ಕ್ಯಾನ್ಸರ್ ರೋಗದ ವಿರುದ್ಧ ಯಶಸ್ವಿಯಾಗಿ ಹೋರಾಡಿ ಸಂಪೂರ್ಣವಾಗಿ ಗುಣಮುಖರಾದ ಮಕ್ಕಳು ಹಾಗೂ ವಯಸ್ಕರು ಪಾಲ್ಗೊಂಡಿದ್ದರು.

ಈ ಸಂವಾದದಲ್ಲಿ 60ಕ್ಕೂ ಅಧಿಕ ಕ್ಯಾನ್ಸರ್ ರೋಗಿಗಳು ಹಾಗೂ ಅವರ ಕುಟುಂಬದ ಸದಸ್ಯರು ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಜನಪ್ರಿಯ ನಟಿ ಹರ್ಷಿಕಾ ಪೂಣಚ್ಚ ಅವರು "ಸಮಗ್ರ ಕ್ಯಾನ್ಸರ್ ತಪಾಸಣಾ ಪ್ಯಾಕೇಜ್' ಅನ್ನು ಬಿಡುಗಡೆ ಮಾಡಿದರು.

World Cancer day 2018 : Narayana Health City Salutes indomitable courage of Cancer Survivors

ಕ್ಯಾನ್ಸರ್ ರೋಗದ ಚಿಕಿತ್ಸೆಗೆ ಒಳಗಾಗುತ್ತಿರುವ ರೋಗಿಗಳಲ್ಲಿ ಜೀವನೋತ್ಸಾಹವನ್ನು ಮೂಡಿಸುವ ಗುರಿಯನ್ನು ಹೊಂದಿದ್ದ ಈ ಕಾರ್ಯಕ್ರಮದಲ್ಲಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಯಶಸ್ವಿಯಾಗಿ ಚೇತರಿಸಿಕೊಂಡ ರೋಗಿಗಳು ತಮ್ಮ ಅನುಭವವನ್ನು ಹಂಚಿಕೊಂಡರು.

'ಈ ಕಾರ್ಯಕ್ರಮದ ಭಾಗಿಯಾಗಲು ನನಗೆ ಹೆಮ್ಮೆಯಾಗಿದೆ. ಕ್ಯಾನ್ಸರ್ ರೋಗದ ವಿರುದ್ಧ ಹೋರಾಟ ನಡೆಸಲು ಚಿಕಿತ್ಸೆ ಅಷ್ಟೇ ಅಲ್ಲ, ಧೈರ್ಯವೂ ಅಗತ್ಯ. ವಾಸ್ತವವಾಗಿ, ಕ್ಯಾನ್ಸರ್ ವಿರುದ್ಧ ಯಶಸ್ವಿಯಾಗಿ ಹೋರಾಡಿ ಗೆದ್ದಿರುವ ನೀವು ಎಲ್ಲರೂ ನಮ್ಮೆಲ್ಲರ ನಡುವಿನ ನಾಯಕರು' ಎಂದು ನಟಿ ಹರ್ಷಿಕಾ ಪೂಣಚ್ಚ ಹೇಳಿದರು. ಇವರ ಸಂಬಂಧಿಯೊಬ್ಬರು ಕ್ಯಾನ್ಸರ್‍ ಗೆ ತುತ್ತಾಗಿದ್ದರು.

ಸಂವಾದವನ್ನು ಹೊರತುಪಡಿಸಿ ಕಾರ್ಯಕ್ರಮದಲ್ಲಿ ನಗೆ ಕಾರ್ಯಕ್ರಮ, ಮ್ಯಾಜಿಕ್ ಶೋ, ಕ್ಯಾರಿಕೇಚರ್ ಆರ್ಟ್, ಚಿತ್ರಕಲೆ, ರಸಪ್ರಶ್ನೆ ಸ್ಪರ್ಧೆ ನಡೆಯಿತು.

World Cancer day 2018 : Narayana Health City Salutes indomitable courage of Cancer Survivors

ಕ್ಯಾನ್ಸರ್ ಒಂದು ಗಂಭೀರ ಸ್ವರೂಪದ ಕಾಯಿಲೆ, ಹೆಚ್ಚಿನ ಸಾವುಗಳಿಗೆ ಕಾರಣವಾಗಲಿದೆ. ಅನೇಕ ರೀತಿಯ ಕ್ಯಾನ್ಸರ್ ರೋಗಗಳಿವೆ. ಇದರಲ್ಲಿ ಚರ್ಮದ ಕ್ಯಾನ್ಸರ್, ಬ್ಲಡ್ ಕ್ಯಾನ್ಸರ್, ಗಂಟಲು ಕ್ಯಾನ್ಸರ್, ಶ್ವಾಸಕೋಸದ ಕ್ಯಾನ್ಸರ್ ಸೇರಿವೆ.

ಈ ಪ್ರಕಾರದ ಕ್ಯಾನ್ಸರ್‍ನಿಂದ ಬಳಲುತ್ತಿರುವ ರೋಗಿಗಳು ಅಗತ್ಯ, ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಕ್ಯಾನ್ಸರ್ ಕುರಿತು ನಕಾರಾತ್ಮಕ ಅಭಿಪ್ರಾಯಗಳೂ ಬದುಕಿನ ಮೇಲೆ ಭರವಸೆ ಕಳೆದುಕೊಳ್ಳಲು ಕಾರಣವಾಗಲಿದೆ.. ಕ್ಯಾನ್ಸರ್‍ ಗೆ ತುತ್ತಾದ ಜನರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಆಗಬೇಕಿರುವುದು ಅಗತ್ಯ.

ನಾರಾಯಣ ಹೆಲ್ತ್ ಸಿಟಿ: ನಾರಾಯಣ ಹೆಲ್ತ್ ಸಿಟಿ ಬೆಂಗಳೂರಿನ ಬೊಮ್ಮಸಂದ್ರದಲ್ಲಿದೆ. ಇಲ್ಲಿ ನಾರಾಯಣ ಇನ್‍ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸ್ (ಎನ್‍ಐಸಿಎಸ್), ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್‍ಗಳು ಹೃದ್ರೋಗ ಮತ್ತು ಹೃದ್ರೋಗ ಶಸ್ತ್ರಚಿಕಿತ್ಸೆಗೆ ಪೂರಕವಾಗಿ ನಡೆಸಲಾಗುತ್ತಿದೆ. ಇಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಆರೈಕೆ ಮಾಡುವ ಮಜುಂದಾರ್ ಶಾ ಮೆಡಿಕಲ್ ಸೆಂಟರ್ ಕೂಡಾ ಇದ್ದು, ಭಾರತದ ಅತಿದೊಡ್ಡ ಬೋನ್ ಮಾರೊ ಕಸಿ ಘಟಕವು ಕೂಡಾ ಇಲ್ಲಿಯೇ ಇದೆ. ಎನ್‍ಎಚ್ ಹೆಲ್ತ್ ಸಿಟಿಯಲ್ಲಿ ಸ್ಟೆಮ್ ಸೆಲ್ ಬ್ಯಾಂಕ್ ಕೂಡಾ ಇದೆ.

English summary
Narayana Health City, they had organised a Cancer World Cancer day 2018 : Survivors Meet in the city today. The meet was attended by more than 90 patients who have successfully battled cancer. Popular actress Ms. Harshika Poonacha also had graced the occasion with her presence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X