ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೂವರಿಗೆ ಪಿತ್ತಜನಕಾಂಗ ಅಂಗ ಕಸಿ, ನಾರಾಯಣ ಆಸ್ಪತ್ರೆ ಸಾಧನೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 16: ಪಿತ್ತಜನಕಾಂಗದ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ಮೂವರು ರೋಗಿಗಳಿಗೆ ಅವರ ಸಂಬಂಧಿಗಳೇ ಆಗಿದ್ದ ದಾನಿಗಳ ಅಂಗಕಸಿ ಮೂಲಕ ನಾರಾಯಣ ಹೆಲ್ತ್ ಸಿಟಿಯು ಯಶಸ್ವಿ ಚಿಕಿತ್ಸೆ ನೀಡಿದೆ.

ಹೋಲಿಕೆಯಾಗುವ ಅಂಗವನ್ನು ದಾನ ಪಡೆದಿದ್ದು, ನಾರಾಯಣ ಹೆಲ್ತ್ ಸಿಟಿಯಲ್ಲಿ ಕಸಿ ಚಿಕಿತ್ಸೆ ನೆರವೇರಿಸಲಾಯಿತು. ರೋಗಿಗಳಲ್ಲಿ 39 ವರ್ಷ ವಯಸ್ಸಿನ ಸತೀಶ್ ಬಾಬು, 44 ವರ್ಷ ವಯಸ್ಸಿನ ವೆಂಕಟಸ್ವಾಮಿ, 12 ವರ್ಷ ವಯಸ್ಸಿನ ಸುಗಿತಾ ಸತಿಯಸೀಲನ್ ಅವರು ಸೇರಿದ್ದಾರೆ.

ಪಾರ್ಶ್ವವಾಯುಪೀಡಿತ 102 ವರ್ಷದ ವ್ಯಕ್ತಿ ರಕ್ಷಿಸಿದ ನಾರಾಯಣ ಆಸ್ಪತ್ರೆ ಪಾರ್ಶ್ವವಾಯುಪೀಡಿತ 102 ವರ್ಷದ ವ್ಯಕ್ತಿ ರಕ್ಷಿಸಿದ ನಾರಾಯಣ ಆಸ್ಪತ್ರೆ

ಮೊದಲ ಪ್ರಕರಣ: ಆನೇಕಲ್ ತಾಲ್ಲೂಕು ದೊಮ್ಮಸಂದ್ರ ಮೂಲದ 39 ವರ್ಷ ವಯಸ್ಸಿನ ಸತೀಶ್ ಬಾಬು ಅವರು ಮದ್ಯವ್ಯಸನಿಯಾಗಿದ್ದ ಕಾರಣದಿಂದ ಪಿತ್ತಜನಕಾಂಗದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಿಗೆ ನಾರಾಯಣ ಹೆಲ್ತ್ ಸಿಟಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ವೈದ್ಯರು ಅಂಗಾಂಗ ಕಸಿಚಿಕಿತ್ಸೆಗೆ ಒಳಗಾಗಲು ಸಲಹೆ ಮಾಡಿದ್ದರು. ಇವರಿಗೆ ಅವರ ಸಹೋದರಿಯೇ ಅಂಗದಾನ ಮಾಡಿದ್ದು, ಸಹೋದರಿಯ ಅಂಗ ಇವರಿಗೆ ಹೋಲಿಕೆಯಾಯಿತು.

ಎರಡನೇ ಪ್ರಕರಣ: 44 ವರ್ಷ ವಯಸ್ಸಿನ ವೆಂಟಕಸ್ವಾಮಿ ರೆಡ್ಡಿ ಅವರು ರೈತರಾಗಿದ್ದು, ಪಿತ್ತಜನಕಾಂಗದ ಕ್ಯಾನ್ಸರ್‍ನಿಂದ ಬಳಲುತ್ತಿದ್ದು, ನಾರಾಯಣ ಹೆಲ್ತ್ ಸಿಟಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಸ್ಥಿತಿ ಸುಧಾರಿಸದ ಕಾರಣ ಅವರಿಗೆ ಅಂಗಾಂಗ ಕಸಿ ಚಿಕಿತ್ಸೆಗೆ ಶಿಫಾರಸು ಮಾಡಿದ್ದು, ಅದೃಷ್ಟವಶಾತ್ ಅವರ ಸಹೋದರನ ಅಂಗವೇ ಸರಿಯಾಗಿ ಹೋಲಿಕೆಯಾಯಿತು.

ಮೈಸೂರು ದಸರಾ - ವಿಶೇಷ ಪುರವಣಿ

ಮೂರನೇ ಪ್ರಕರಣ: ಮೂರನೇ ಪ್ರಕರಣದಲ್ಲಿ 12 ವರ್ಷದ ಸುಗಿತಾ ಸತಿಯಸೀಲನ್ ಅವರು ಶ್ರೀಲಂಕಾ ಮೂಲದ ವಿದ್ಯಾರ್ಥಿನಿ. ಇವರು ಗಂಭೀರ ಸ್ವರೂಪದ ಪಿತ್ತಜನಕಾಂಗ ಸಮಸ್ಯೆಯಿಂದ ಬಳಲುತ್ತಿದ್ದು, ಕುಟುಂಬ ಸದಸ್ಯರೊಂದಿಗೆ ಚಿಕಿತ್ಸೆಗೆ ನಾರಾಯಣ ಹೆಲ್ತ್‍ಗೆ ಬಂದಿದ್ದರು. ಸುದೀರ್ಘ ವೈದ್ಯಕೀಯ ನಿರ್ವಹಣೆಯ ಬಳಿಕ ಅವರಿಗೆ ಪಿತ್ತಜನಕಾಂಗ ಕಸಿ ಚಿಕಿತ್ಸೆಗೆ ಶಿಫಾರಸು ಮಾಡಿದ್ದು, ಇವರಿಗೆ ಅವರ ತಂದೆಯ ಪಿತ್ತಜನಕಾಂಗನ್ನು ಕಸಿ ಮಾಡಲಾಯಿತು.

ಡಾ.ಸಂಜಯ್ ಕುಮಾರ್ ಗೋಜಾ

ಡಾ.ಸಂಜಯ್ ಕುಮಾರ್ ಗೋಜಾ

ಸಿಎಲ್‍ಡಿ ಚಿಕಿತ್ಸೆ ಕುರಿತು ಮಾತನಾಡಿದ ನಾರಾಯಣ ಹೆಲ್ತ್ ಸಿಟಿಯ ಅಂಗಾಂಗ ಕಸಿ ಚಿಕಿತ್ಸೆ ವಿಭಾಗದ ಮುಖ್ಯಸ್ಥ, ಹಿರಿಯ ಕನ್ಸಲ್ಟಂಟ್ ಡಾ.ಸಂಜಯ್ ಕುಮಾರ್ ಗೋಜಾ ಅವರು, 'ಪಿತ್ತಜನಕಾಂಗದ ಗಂಭೀರ ಸಮಸ್ಯೆಯು (ಸಿಎಲ್‍ಡಿ) ಜಾಂಡೀಸ್, ತುರಿಕೆ, ಅಧಿಕ ರಕ್ತಸ್ರಾವ, ಇರಿಸುಮುರಿಸು, ರಕ್ತವಾಂತಿ ಇದ್ಯಾದಿ ಸಮಸ್ಯೆಗಳಿಗೆ ಕಾರಣವಾಗಲಿದೆ. ಅಂದಾಜು 8-20% ಮದ್ಯವ್ಯಸನಿಗಳು ಸಮಸ್ಯೆಯಿಂದ ಬಳಲುತ್ತಿದ್ದಾರೆ ಹಾಗು 70-80% ಪ್ರಕರಣಗಳು ಇತರೆÀ ಪಿತ್ತಜನಕಾಂಗದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪಿತ್ತಜನಕಾಂಗ ಸಮಸ್ಯೆಯು ಸಾಮಾನ್ಯವಾಗಿ ಅಧಿಕ ಮದ್ಯವ್ಯಸನಿಗಳಲ್ಲಿ ಮಾತ್ರವಲ್ಲದೇ, ಮದ್ಯವ್ಯಸನಿಯೇತರ ಜನರಲ್ಲೂ ಕಾಣಬಹುದು ಇದಕ್ಕೆ ಮುಖ್ಯ ಕಾರಣ ಬಿಎಂಐ (ಬಾಡಿ ಮಾಸ್ ಇಂಡೆಕ್ಸ್)' ಎಂದು ಹೇಳಿದರು.

ಬೆಂಗಳೂರಿನಲ್ಲಿ ಹೊಸ ಬದುಕು ಪಡೆದ ನೈಜೀರಿಯಾದ ಸಯಾಮಿ ಅವಳಿ ಬೆಂಗಳೂರಿನಲ್ಲಿ ಹೊಸ ಬದುಕು ಪಡೆದ ನೈಜೀರಿಯಾದ ಸಯಾಮಿ ಅವಳಿ

ಪಿತ್ತಜನಕಾಂಗ ಕಸಿ ಚಿಕಿತ್ಸೆ ದುಬಾರಿ ಆಗಿದೆ

ಪಿತ್ತಜನಕಾಂಗ ಕಸಿ ಚಿಕಿತ್ಸೆ ದುಬಾರಿ ಆಗಿದೆ

ಗಂಭೀರ ಸ್ವರೂಪದ ಸಮಸ್ಯೆಯಿಂದ (ಸಿಎಲ್‍ಡಿ) ವಿವಿಧ ಸ್ವರೂಪಗಳಿವೆ. ಇದರಲ್ಲಿ ಇನ್‍ಪ್ಲೇಮೇಷನ್ (ಕ್ರೋನಿಕ್ ಹೆಪಟೈಟಿಸ್), ಲಿವರ್ ಸಿರೋಸಿಸ್, ಹೆಪಟೊಸೆಲ್ಯುಲರ್ ಕಾರ್ಸಿನೊಮಾ ಸೇರಿದೆ. ಭಾರತದಲ್ಲಿ ಅಂದಾಜು 20000 ಜನರಿಗೆ ಯಕೃತ್ತಿನ ಕಸಿಯ ಅಗತ್ಯವಿದೆ, ಆದರೆ ಕೇವಲ 800-1000 ಪ್ರಕರಣಗಳು ಮಾತ್ರ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಪಿತ್ತಜನಕಾಂಗ ಕಸಿ ಚಿಕಿತ್ಸೆ ದುಬಾರಿ ಆಗಿರುವುದು ಹಾಗೂ ಈ ಕುರಿತು ಜಾಗೃತಿಯ ಕೊರತೆಯು ಬಹುತೇಕ ಕುಟುಂಬಗಳು ಅಂಗಾಂಗ ಕಸಿ ಚಿಕಿತ್ಸೆಗೆ ಮುಂದಾಗುತ್ತಿಲ್ಲ.

ಆಂಧ್ರದ ವ್ಯಕ್ತಿಗೆ ಮರು ಜೀವ ನೀಡಿದ ಹಾಸನದ ವ್ಯಕ್ತಿಯ ಹೃದಯ ಆಂಧ್ರದ ವ್ಯಕ್ತಿಗೆ ಮರು ಜೀವ ನೀಡಿದ ಹಾಸನದ ವ್ಯಕ್ತಿಯ ಹೃದಯ

ಅಂಗಾಂಗ ದಾನ ಮಾಡಬಹುದಾದ ಸಂಬಂಧಿಗಳು

ಅಂಗಾಂಗ ದಾನ ಮಾಡಬಹುದಾದ ಸಂಬಂಧಿಗಳು

ಅಂಗಾಂಗ ದಾನ ಮಾಡಬಹುದಾದ ಸಂಬಂಧಿಗಳಲ್ಲಿ ತಾಯಿ, ತಂದೆ, ಸಹೋದರರು, ಸಹೋದರಿ, ಮಗ, ಪುತ್ರಿ, ಪತ್ನಿ ಸೇರಿದ್ದಾರೆ. ಇತ್ತೀಚೆಗೆ ನೂತನ ಗೆಜೆಟ್ ಪ್ರಕಾರ, ಮೊಮ್ಮಕ್ಕಳನ್ನು ದಾನ ಮಾಡಬಹುದಾದ ಸಂಬಂಧಿಗಳ ಪಟ್ಟಿಗೆ ಸೇರಿಸಲಾಗಿದೆ. ಬಹುತೇಕ ಪ್ರಕರಣಗಳ್ಲಿ ದಾನಿಗಳು ಸಾಮಾನ್ಯವಾಗಿ ತಂದೆ-ತಾಯಿಯೇ ಆಗಿರುತ್ತಾರೆ. ಮೂರನೇ ಎರಡರಷ್ಟು ಪ್ರಕರಣಗಳಲ್ಲಿ ತಾಯಿ ಆಗಿದ್ದು, ಉಳಿದ ಪ್ರಕರಣಗಳಲ್ಲಿ ತಂದೆ ದಾನಿ ಆಗಿರುತ್ತಾರೆ.

ನಾರಾಯಣ ಹೆಲ್ತ್ ಸಿಟಿ, ಬೆಂಗಳೂರು ಕುರಿತು

ನಾರಾಯಣ ಹೆಲ್ತ್ ಸಿಟಿ, ಬೆಂಗಳೂರು ಕುರಿತು

ನಾರಾಯಣ ಹೆಲ್ತ್ ಸಿಟಿ, ಬೆಂಗಳೂರು ಕುರಿತು: ನಾರಾಯಣ ಹೆಲ್ತ್ ಸಿಟಿ ಬೆಂಗಳೂರಿನ ಬೊಮ್ಮಸಂದ್ರದಲ್ಲಿ ಇದೆ. ಇಲ್ಲಿ ನಾರಾಯಣ ಇನ್‍ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸ್ (ಎನ್‍ಐಸಿಎಸ್), ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್‍ಗಳು ಹೃದ್ರೋಗ ಮತ್ತು ಹೃದ್ರೋಗ ಶಸ್ತ್ರಚಿಕಿತ್ಸೆಗೆ ಪೂರಕವಾಗಿ ನಡೆಸಲಾಗುತ್ತಿದೆ. ಇಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಆರೈಕೆ ಮಾಡುವ ಮಜುಂದಾರ್ ಶಾ ಮೆಡಿಕಲ್ ಸೆಂಟರ್ (ಎಂಎಸ್‍ಎಂಸಿ) ಕೂಡಾ ಇದ್ದು, ಭಾರತದ ಅತಿದೊಡ್ಡ ಬೋನ್ ಮಾರೊ ಕಸಿ ಘಟಕವು ಕೂಡಾ ಇಲ್ಲಿಯೇ ಇದೆ. ಎನ್‍ಎಚ್ ಹೆಲ್ತ್ ಸಿಟಿಯಲ್ಲಿ ಸ್ಟೆಮ್ ಸೆಲ್ ಬ್ಯಾಂಕ್ ಕೂಡಾ ಇದೆ.

English summary
Narayana Health City successfully treated three patients suffering from chronic liver disease through related donor liver transplant. The doctors sourced matching livers from the recipients’ family members and carried out the transplants at Narayana Health City. Patients included 39 year old Sathish Babu, 44 year old Venkata Swamy Reddy and 12 year old Sugita Sathiyaseelan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X