ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರ

|
Google Oneindia Kannada News

ಬೆಂಗಳೂರು, ಅ.13: ಹೃದಯ ಆರೋಗ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ನಾರಾಯಣ ಹೆಲ್ತ್‌ ಕೇರ್‌ ಇದೀಗ ಸ್ತನ ಕ್ಯಾನ್ಸರ್‌ ವಿರುದ್ಧ ಹೋರಾಟಕ್ಕೆ ಸಿದ್ಧವಾಗಿದೆ. ಅಕ್ಟೋಬರ್‌ 15ರಿಂದ 31ರವರೆಗೆ ಸ್ತನ ಕ್ಯಾನ್ಸರ್‌ ಪರೀಕ್ಷಾ ಶಿಬಿರ ಏರ್ಪಡಿಸಿದೆ.

ಹೆಣ್ಣು ಮಕ್ಕಳನ್ನು ಕಾಡಿ ಅವರ ಜೀವಕ್ಕೆ ಕಂಟಕ ತರುವ ಸ್ತನ ಕ್ಯಾನ್ಸರ್‌ಗೆ ಮುಕ್ತಿ ಕಾಣಿಸಲು ಶಿಬಿರ ಏರ್ಪಡಿಸಲಾಗಿದೆ. ನಗರದ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ರೋಗ ತಡೆಗೆ ಮುಂಜಾಗೃತಾ ಕ್ರಮ ಅವಶ್ಯ. ಇಲ್ಲಿ ಎಲ್ಲರೂ ಮುಕ್ತವಾಗಿ ಪರೀಕ್ಷೆ ಮಾಡಿಸಿಕೊಳ್ಳಬಹುದು ಎಂದು ಸಂಸ್ಥೆ ತಿಳಿಸಿದೆ.[ಹಿರಿಯ ನಾಗರಿಕರಿಗೆ ನಾರಾಯಣ ಹೆಲ್ತ್ ಕಾರ್ಡ್ ವಿತರಣೆ]

narayana

2012ರಲ್ಲಿ ಪ್ರಪಂಚದಾದ್ಯಂತ 70 ಸಾವಿರಕ್ಕೂ ಅಧಿಕ ಮಹಿಳೆಯರು ಈ ಮಾರಕ ರೋಗಕ್ಕೆ ಬಲಿಯಾಗಿದ್ದರು. ಭಾರತದ 28 ಮಹಿಳೆಯರಲ್ಲಿ ಒಬ್ಬರಿಗೆ ಸ್ತನ ಕ್ಯಾನ್ಸರ್‌ ಸಾಧ್ಯತೆಯಿದೆ. ಅಲ್ಲದೇ ನಗರ ಪ್ರದೇಶದಲ್ಲಿ ವಾಸಿಸುವ 22 ಮಹಿಳೆಯರಲ್ಲಿ ಒಬ್ಬರಿಗೆ ರೋಗ ಕಾಣಿಸಿಕೊಳ್ಳಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಹೇಳಿದೆ.[ಬೆಂಗಳೂರು, ಭಾರತದ ನೂತನ ಸ್ತನ ಕ್ಯಾನ್ಸರ್ ರಾಜಧಾನಿ!]

ಇಳಿ ವಯಸ್ಸಿನ ಮಹಿಳೆಯರನ್ನು ಪೀಡಿಸುವ ರೋಗಕ್ಕೆ ಅನೇಕ ಮುಂಜಾಗೃತಾ ಕ್ರಮಗಳು ಅಗತ್ಯ. ಜತೆಗೆ ಇಂಥ ತಪಾಸಣೆಗಳು ರೋಗವನ್ನು ಪ್ರಾಥಮಿಕ ಹಂತದಲ್ಲೇ ಪತ್ತೆ ಮಾಡಲು ನೆರವಾಗುತ್ತವೆ. ಇತ್ತೀಚೆಗೆ 30 ರಿಂದ 50 ವರ್ಷದ ನಡುವಿನ ಮಹಿಳೆಯರಲ್ಲೂ ರೋಗ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. mm

ನಗರದ ಮುಜುಂದಾರ್‌ ಕ್ಯಾನ್ಸರ್‌ ಕೇಂದ್ರದಲ್ಲಿ ಶಿಬಿರ ಆಯೋಜನೆ ಮಾಡಲಾಗಿದೆ. ಸ್ತನ ಗಡ್ಡೆ ಪರೀಕ್ಷೆ ಮತ್ತಿತರ ಕ್ಯಾನ್ಸರ್‌ ಸಂಬಂಧಿ ತಪಾಸಣೆಗಳನ್ನು ನಡೆಸಲಾಗುವುದು. ಹೆಚ್ಚಿನ ಮಾಹಿತಿಗೆ 080-67730096ನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

English summary
Bangalore: Narayana Health Care set up a programme about Breast Cancer screening at Mazundar shaw cancer center on 15th to 31th October.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X