ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇ 4ರಂದು ಹನುಮಂತನಗರದಲ್ಲಿ ಬೀಚಿಯವರ 'ನನ್ನ ಭಯಾಗ್ರಫಿ'

By Dhananjay N
|
Google Oneindia Kannada News

ಲಿಯೋ ಟಾಲ್ಸ್ಟಾಯ್ ರ ಒಂದು ಮಾತು... "ಇಡೀ ಜಗತ್ತಿಗೆಲ್ಲ ಒಳ್ಳೆಯದೆಂದರೆ ಯಾವುದು ಎನ್ನುವುದು ನಮಗೆ ಗೊತ್ತಿಲ್ಲವೆನ್ನುವುದು ನಿಜ. ಆದರೂ ನಾವೆಲ್ಲರೂ ಮನುಷ್ಯನ ವಿವೇಕ ಮತ್ತು ನಮ್ಮೆಲ್ಲರ ಹೃದಯಗಳಲ್ಲಿ ನೆಲೆಸಿರುವ ಒಳ್ಳೆಯತನವನ್ನು ಅನುಸರಿಬೇಕೆನ್ನುವುದನ್ನು ಮಾತ್ರ ಬಲ್ಲವರಾಗಿದ್ದೇವೆ".

ಈ ಒಳ್ಳೆತನವನ್ನ ಅನುಸರಿಸುವುದು ಅಂದರೆ ಏನು? ಆ ಅನುಸರಿಸುವಿಕೆಯನ್ನ ಪಾಲಿಸಲು ಮೊದಲ ಕೈಗನ್ನಡಿಯಾದರೂ ಏನು? ಎಂದು ಹುಡುಕ ಹೊರಟರೆ... ನನ್ನ ಅನಿಸಿಕೆಯಲ್ಲಿ ಒಂದು ದಾರಿ, ಅದು "ಸ್ವ ವಿಮರ್ಶೆ ".

ಈ ದಾರಿಯಲ್ಲಿ ಬಂದವರೆಲ್ಲಾ ಒಂದೊಂದು ಆಟೋಬಯಾಗ್ರಫಿಯನ್ನ ಬರೆದವರೇ ಆಗಿದ್ದಾರೆ, ಕೆಲವು ಪ್ರಕಟವಾದರೆ ಮತ್ತೂ ಕೆಲವು ಅಪ್ರಕಟಿತವಷ್ಟೇ. ಅಂಥಾ ಹಲವು ಆಟೋಬಯಾಗ್ರಫಿಗಳಲ್ಲಿ "ಬ" ಎಂಬ ಪದಕ್ಕೆ ನಾವು ಒತ್ತು ಕೊಟ್ಟರೆ ಅದು ಸೀದಾ ನಮ್ಮನ್ನು ಬೀಚಿಯವರೆಡೆಗೆ ತಂದು ನಿಲ್ಲಿಸುತ್ತದೆ. ಅಂದರೆ ಸದಾ ಹಾಸ್ಯ ಪ್ರವೃತ್ತಿಯವರಾದ ಅವರಲ್ಲೂ ಸಹ ಭಯ ಎಂಬುದು ಕಾಡಿತ್ತೇ? ಸ್ವತಃ ಅವರೇ ಹೇಳಿಕೊಂಡಂತೆ ಹೌದು.

Nanna Bhayagraphy - Kannada play on writer Beechi

ಇಲ್ಲಿ ನಮಗೆ ಚಾಪ್ಲಿನ್ ಮಾತೂ ಕೂಡಾ ನೆನಪಾಗತ್ತೆ ನೋಡಿ, "ಜೀವನವನ್ನು ಹತ್ತಿರದಿಂದ ನೋಡಿದರೆ ದುರಂತ, ದೂರದಿಂದ ನೋಡಿದರೆ ತಮಾಷೆ" ಅತೀ ಹೆಚ್ಚು ನಗಿಸುವವನ ಬೆನ್ನ ಹಿಂದೆ ಅಳಿಸಲೇ ಆಗದ ನೆನಪುಗಳು ಗೀಚಿರುತ್ತವೆ, ಅತೀ ಹೆಚ್ಚು ಗೀಚಿಸಿಕೊಂಡರೆ ಅದೇ ಒಂದು ಕಲಾಕೃತಿ.

ನಾಟಕದ ನಡುವೆ ಪರೀಕ್ಷೆ ಬರೆದು ರಾಜ್ಯಕ್ಕೆ 7ನೇ Rank ಪಡೆದ ಸಿಂಚನಾ ನಾಟಕದ ನಡುವೆ ಪರೀಕ್ಷೆ ಬರೆದು ರಾಜ್ಯಕ್ಕೆ 7ನೇ Rank ಪಡೆದ ಸಿಂಚನಾ

ಅಂತಹ ಕೃತಿಯ ರೇಖೆಗಳಿಗೆಲ್ಲಾ ಜೀವ ಕೊಟ್ಟು ಅವಕ್ಕಾಗಿಯೇ ಒಂದು ವೇದಿಕೆ ಸಿದ್ಧಪಡಿಸಿಬಿಟ್ಟರೆ, ಹೇಗಿರಬಹುದು? ಹಾಗೆ ಜೀವ ತುಂಬಿದವೆಲ್ಲಾ ಒಂದೊಂದು ಮಾತನಾಡಿದರೆ, ಓದುಗನಿಗೆ ಕಾಲ್ಪನಿಕವಾದದ್ದು ವಾಸ್ತವದಲ್ಲಿ ನಿಂತಂತಾದರೆ ಇನ್ನೂ ಚೆಂದ. ಈ ವಾಸ್ತವ ಮತ್ತು ಕಾಲ್ಪನಿಕ ಜಗತ್ತಿನ ನಡುವೆ ಕೊಂಡಿಯಾಗುವುದೇ ರಂಗಭೂಮಿ.

Nanna Bhayagraphy - Kannada play on writer Beechi

ಬನ್ನಿ, ಬೀಚಿಯವರ ಆ ಕಲಾಕೃತಿಗೆ ಜೀವ ತುಂಬಿದ ಮಾತುಗಳು ಹೇಗೆ ನಮ್ಮನ್ನು ವಾಸ್ತವದಲ್ಲಿ ಜೊತೆಯಾಗುತ್ತವೆ ನೋಡೋಣ. ಮೊದಲಿಗೆ ಬೀಚಿಯವರ ಅನುಭವಗಳನ್ನ ವಿಡಂಬನೆಯಾಗಿ ತೋರಿಸುವ ಈ ನಾಟಕದ ಹೆಸರು, "ಮಾನಸ ಪುತ್ರ".

ನಿರ್ದೇಶಕರು ಹೇಳುತ್ತಾರೆ... "ಪುಸ್ತಕದ ಮುಖಪುಟ ವಿನ್ಯಾಸ ಮತ್ತು ಶೀರ್ಷಿಕೆ ಇಷ್ಟವಾದರೆ ಕೈಗೆತ್ತಿಕೊಂಡು ಓದುವ ರೂಢಿಯು ಬೀಚಿಯವರ ಆತ್ಮಚರಿತ್ರೆಯನ್ನು ಓದುವಹಾಗೆ ಮಾಡಿತು. ಮೊದಲು ಕೈಗೆತ್ತಿಕೊಂಡ ಪುಸ್ತಕ "ಅಮ್ಮಾವ್ರ ಕಾಲ್ಗುಣ" ನಂತರ "ನನ್ನ ಭಯಾಗ್ರಫಿ". ಬೀಚಿಯವರ ಆತ್ಮಚರಿತ್ರೆ ದಿನೆ ದಿನೆ ಮನಸಿಗೆ ತುಂಬಾ ಹತ್ತಿರವಾಯಿತು ಮತ್ತು ಮನಸ್ಸಿನಲ್ಲಿ ಮಾಸದೆ ಉಳಿದ ಪುಸ್ತಕದ ವಿಷಯಗಳು ಮುಂದೆ ನಾಟಕ ರಚಿಸಲು ಪ್ರೇರೇಪಣೆಯಾದವು" ಎಂದು.

Nanna Bhayagraphy - Kannada play on writer Beechi

ಆ ಆತ್ಮಚರಿತ್ರೆಯಲ್ಲಿ ಮೊದಲ ಅಧ್ಯಾಯ "ಅಂತೆ" "ಮಾನಸ ಪುತ್ರ" ನಾಟಕದ ಜೀವಾಳು ಎಂದೇ ಹೇಳಬಹುದು. ಬೀಚಿಯವರ ಹುಟ್ಟಿದಾಗ ಅವರ ಮನೆಯ ಸ್ಥಿತಿಯನ್ನು ಅವರಿವರು ಹೇಳಿದಂತೆ ಉಲ್ಲೇಖಿಸಲಾಗಿದೆ. ಆತ್ಮಚರಿತ್ರೆಯ ಹೂರಣ, ನಗು ಅಳುವಿನ ಮೂಲಕ ಓದುಗರ ಮುಂದೆ ಬೆತ್ತಲೆ ರೂಪವಾಗಿ ನಿಲ್ಲುತ್ತದೆ. ಬೀಚಿಯವರು ಗಂಭೀರ ವಿಷಯನ್ನು ಹೇಳಲು ಹಾಸ್ಯವನ್ನು ಆಯ್ಕೆ ಮಾಡಿಕೊಂಡು ರಂಜನೆಯ ಮೂಲಕ ಹೇಳತೊಡಗುತ್ತಾರೆ. ಸುಲಭವಾಗಿ ದಕ್ಕುವ ಹಾಸ್ಯ ಅದರ ಹಿಂದಿನ ಅಪಾರ ನೋವನ್ನು ಒರೆಹಚ್ಚುವ ಪ್ರಮುಖ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

ಈ ಪ್ರಯತ್ನವನ್ನು ಯಶಸ್ವಿಯಾಗಿ ಮಾಡಿದ ತಂಡ "ಕಲಾವಿಲಾಸಿ" ವಿವಿಧ ಕ್ಷೇತ್ರಗಳಲ್ಲಿ ವೃತ್ತಿಪರರಾಗಿದ್ದುಕೊಂಡು ಕಲೆಯ ಕಡೆಗೆ ಅಪಾರ ಒಲವುಳ್ಳ, ರಂಗಭೂಮಿ ಮತ್ತು ದೃಶ್ಯ ಮಾಧ್ಯಮದಲ್ಲಿ ಸುಮಾರು ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿರುವ ನಾಡಿನ ವಿವಿಧ ಭಾಗದ ಯುವಕರು ಸೇರಿ ಕಟ್ಟಿರುವ ತಂಡ ಇದು. ಈಗಾಗಲೇ ಯಶಸ್ವಿಯಾಗಿ ನಾಲ್ಕು ಪ್ರದರ್ಶನಗಳನ್ನೂ ಸಹ ಪೂರೈಸಿದ್ದಾರೆ. ತಂಡದ ಮಾಹಿತಿ ಮುಂದಿನ ಪ್ರದರ್ಶನ ಇಂತಿದೆ, ತಪ್ಪದೇ ನೋಡಿ.

Nanna Bhayagraphy - Kannada play on writer Beechi

ನಾಟಕದ ಹೆಸರು : ಮಾನಸಪುತ್ರ.
ಆಧಾರ : ಬೀಚಿಯವರ 'ನನ್ನ ಭಯಾಗ್ರಫಿ' ಮತ್ತು ಇತರೆ ಅನುಭವಗಳು
ರಚನೆ - ನಿರ್ದೇಶನ : ಬಸವರಾಜ ಎಮ್ಮಿಯವರ
ಅಭಿನಯಿಸುವ ತಂಡ : ಕಲಾವಿಲಾಸಿ
ದಿನಾಂಕ ಮತ್ತು ಸಮಯ : 04 ಮೇ 2019, ಶನಿವಾರ. ಸಂಜೆ 7.30 ಕ್ಕೆ
ಸ್ಥಳ : ಕೆ ಎಚ್ ಕಲಾಸೌಧ. ರಾಮಾಂಜನೇಯ ಗುಡ್ಡದ ಬಳಿ. ಹನುಮಂತ ನಗರ ಬೆಂಗಳೂರು.
ನಾಟಕದ ಅವಧಿ : 80 ನಿಮಿಷಗಳು.
ಪ್ರವೇಶ ದರ : 100/-

English summary
Nanna Bhayagraphy - Kannada play on writer Beechi at KH Kalasoudha, Hanumanth Nagar, Bengaluru on May 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X