ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂದಿನಿ ಮಿನಿ ಟ್ರಕ್ ಮೂಲಕ ಮನೆ ಮನೆಗೆ ಹಾಲು ಸರಬರಾಜು

|
Google Oneindia Kannada News

ಬೆಂಗಳೂರು,ಡಿಸೆಂಬರ್ 18:ಮಿನಿ ಟ್ರಕ್ ಮೂಲಕ ಮನೆ ಮನೆಗೆ ನಂದಿನಿ ಹಾಲು ಸರಬರಾಜು ಮಾಡಲು ಕೆಎಂಎಫ್ ಮುಂದಾಗಿದೆ. ಕೆಎಂಎಫ್ ಮನೆ ಬಾಗಿಲಿಗೇ ಹಾಲಿನ ಪ್ಯಾಕ್ ಗಳನ್ನು ತಲುಪಿಸಲು ಮದರ್ ಡೈರಿಯ ಜೊತೆ ಪಾಲುದಾರಿಗೆ ಮಾಡಿಕೊಂಡಿದ್ದು ನಂದಿನಿ ಆನ್ ವ್ಹೀಲ್ಸ್ ಸೇವೆಯನ್ನು ಪ್ರಾರಂಭಿಸಿದೆ.

ಇದರಿಂದಾಗಿ ಜನತೆ ಮಿಲ್ಕ್ ಬೂತ್ ಗೆ ಹೋಗುವುದು ತಪ್ಪಲಿದೆ. ಪ್ರಾಯೋಗಿಕವಾಗಿ ಈ ಯೋಜನೆಯನ್ನು ಯಲಹಂಕ ಝೋನ್ ನಲ್ಲಿ ಜ.18 ರಿಂದ ಜಾರಿಗೆ ಬಂದಿದೆ. ಎಲೆಕ್ಟ್ರಾನಿಕ್ ವಸ್ತುಗಳಿಂದ ಹಿಡಿದು ದಿನ ನಿತ್ಯದ ಪದಾರ್ಥಗಳವರೆಗೆ ಮನೆ ಬಾಗಿಲಿಗೇ ತಲುಪಿಸುವ ಸೇವೆಗಳ ಕೊರತೆ ಇಲ್ಲ. ಈಗ ಕೆಎಂಎಫ್ ಸಹ ಇಂಥಹದ್ದೇ ಸೇವೆಯನ್ನು ಪ್ರಾರಂಭಿಸಲು ಸಜ್ಜುಗೊಂಡಿದೆ.

ವಿಶ್ವದ 8ನೇ ಅತಿದೊಡ್ಡ ಹಾಲು ಸಂಸ್ಕಾರಕವಾಗಿ ಹೊರಹೊಮ್ಮಿದ ಅಮುಲ್ವಿಶ್ವದ 8ನೇ ಅತಿದೊಡ್ಡ ಹಾಲು ಸಂಸ್ಕಾರಕವಾಗಿ ಹೊರಹೊಮ್ಮಿದ ಅಮುಲ್

ಈಗಾಗಲೇ ಇಂತಹ 8 ಮಿನಿ ಟ್ರಕ್ ಗಳು ನಗರ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ಸಂಚರಿಸುತ್ತಿವೆ. ಆದರೆ ಅವುಗಳನ್ನು ಮಂಡ್ಯ, ಬೆಂಗಳೂರು ಡೈರಿ, ಮಂಗಳೂರು ಹಾಗೂ ಇತರ ಹಾಲಿಕ ಒಕ್ಕೂಟಗಳು ಮುನ್ನಡೆಸುತ್ತಿವೆ. ಯಲಹಂಕದಲ್ಲಿನ ಸೇವೆಗಳು ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಈ ರೀತಿಯ ಹೆಚ್ಚಿನ ಟ್ರಕ್ ಗಳನ್ನು ಪರಿಚಯಿಸಲು ನಿರ್ಧರಿಸಲಾಗಿದೆ ಎಂದು ಕೆಎಂಎಫ್ ಅಧಿಕಾರಿಗಳು ತಿಳಿಸಿದ್ದಾರೆ.

 Nandini On Wheels Mini-Trucks Will Bring Milk To Your Doorsteps

ಕೆಎಂಎಫ್ ನ ಹಾಲಿನ ವಾಹನಗಳು ಬೆಳಿಗ್ಗೆ 9 ರಿಂದ ರಾತ್ರಿ 8 ವರೆಗೆ ಹೊತ್ತು ಆ ಭಾಗಗಳಲ್ಲಿ ಸಂಚರಿಸಲಿವೆ, ದಾಸ್ತಾನು ಖಾಲಿಯಾದರೆ ಹತ್ತಿರದ ಪಾರ್ಲರ್ ಗಳಿಂದ ತುಂಬಿಸಿಕೊಂಡು ಸಾರ್ವಜನಿಕರಿಗೆ ವಿತರಣೆ ಮಾಡಲಿವೆ.

Recommended Video

karkala , nippani , ಬೆಳಗಾವಿ ಮಹಾರಾಷ್ಟ್ರ ಗೆ ಸೇರಬೇಕಂತೆ !! | Oneindia Kannada

ಪ್ರಾಯೋಗಿಕವಾಗಿ ಪ್ರತಿ ಜಿಲ್ಲೆಯಲ್ಲೂ ಇಂತಹ ವಾಹನಗಳು ಸಂಚರಿಸುತ್ತಿವೆ ಎಂದು ಮದರ್ ಡೈರಿಯ ಮಾರ್ಕೆಟಿಂಗ್ ಮ್ಯಾನೇಜರ್ ಯಲಹಂಕ ಝೋನ್ ಹೇಳಿದ್ದಾರೆ.

English summary
In this age of home delivery — when anything from televisions, furniture, vegetables to cigarettes is dropped home — the milkman is not the only one to bring milk sachets to your doorstep
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X