ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂದಿನಿ ಹಾಲೂ ದುಬಾರಿ: ಗ್ರಾಹಕರಿಗೆ ಆಘಾತ ಪಕ್ಕಾ...

|
Google Oneindia Kannada News

Recommended Video

ಗ್ರಾಹಕರಿಗೆ ಶಾಕ್ ಕೊಟ್ಟ KMF | KMF | NANDINI MILK | ONEINDIA KANNADA

ಬೆಂಗಳೂರು, ಜನವರಿ 16: ನಂದಿನಿ ಹಾಲಿನ ದರ ಮತ್ತೆ ಹೆಚ್ಚಳವಾಗಲಿದೆ ಎಂಬುದು ಖಾತ್ರಿಯಾಗಿದ್ದು, ಈ ವಿಷಯವನ್ನು ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರೇ ಖಚಿತಪಡಿಸಿದ್ದಾರೆ.

ಗುರುವಾರ ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ಅವರು, ""ಕಳೆದ ಹಲವು ದಿನಗಳಿಂದ ನಂದಿನಿ ಹಾಲಿನ ದರ ಹೆಚ್ಚಳ ಮಾಡಬೇಕು ಎಂಬ ಪ್ರಸ್ತಾವನೆ ಮಹಾಮಂಡಳದ ಎದುರು ಇತ್ತು. ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ಲೀಟರ್‌ಗೆ 2 ರಿಂದ 3 ರುಪಾಯಿ ಹೆಚ್ಚಳವಾಗಲಿದೆ'' ಎಂದು ಹೇಳಿದರು.

ನಂದಿನಿಯಿಂದ 4 ಹೊಸ ಉತ್ಪನ್ನಗಳ ಬಿಡುಗಡೆನಂದಿನಿಯಿಂದ 4 ಹೊಸ ಉತ್ಪನ್ನಗಳ ಬಿಡುಗಡೆ

""ರಾಜ್ಯದ 14 ಹಾಲು ಒಕ್ಕೂಟಗಳು ವೆಚ್ಚ ಹೆಚ್ಚಳದ ಹಿನ್ನಲೆಯಲ್ಲಿ ಹಾಲಿನ ದರ ಹೆಚ್ಚಳ ಮಾಡಬೇಕು ಎಂದು ಕೆಎಂಎಎಫ್‌ಗೆ ಪ್ರಸ್ತಾವನೆ ಸಲ್ಲಿಸಿದ್ದವು. ಇದನ್ನು ಗಮನದಲ್ಲಿಟ್ಟುಕೊಂಡು ಹಾಲಿನ ದರ ಹೆಚ್ಚಳ ಮಾಡಲಾಗುತ್ತದೆ. ಮುಖ್ಯಮಂತ್ರಿಯವರು ಒಪ್ಪಿಗೆ ಕೊಟ್ಟ ತಕ್ಷಣ ಅಧಿಕೃತವಾಗಿ ದರ ಹೆಚ್ಚಳವಾಗಲಿದೆ'' ಎಂದು ಅವರು ಹೇಳಿದರು.

Nandini Milk Price Will Be Hike Shortly

ಸದ್ಯ ಮಾರುಕಟ್ಟೆಯಲ್ಲಿ ಒಂದು ಲೀಟರ್ ಕೆನೆ ಹಾಲಿನ ದರ 33 ರಿಂದ 35 ರುಪಾಯಿ ಇದ್ದು, ಹೊಸ ಆದೇಶ ಬಂದರೆ 35 ರಿಂದ 38 ರುಪಾಯಿ ಹೆಚ್ಚಳವಾಗಲಿದೆ.

ಪ್ರತಿದಿನ ಕರ್ನಾಟಕದಲ್ಲಿ 1.6 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಇದರಲ್ಲಿ 84 ಲಕ್ಷ ಲೀಟರ್‌ನಷ್ಟು ಹಾಲು, ದೇಶದಲ್ಲೇ ಎರಡನೇ ಅತಿದೊಡ್ಡ ಹಾಲು ಮಾರಾಟ ಸಂಸ್ಥೆಯಾಗಿರುವ ಕೆಎಂಎಫ್ ಸೇರುತ್ತದೆ. ಕೆಎಂಎಫ್‌ ಸೇರುವ ಹಾಲಿನಲ್ಲಿ ಶೇ 70 ರಷ್ಟು ಹಾಲು ನೇರವಾಗಿ ಮಾರುಕಟ್ಟೆಗೆ ಹೋದರೆ, ಉಳಿದ ಶೇ 30 ರಷ್ಟು ಹಾಲು, ಹಾಲಿನ ಉತ್ಪನ್ನಗಳಾಗಿ ಮಾರಾಟವಾಗುತ್ತಿದೆ.

English summary
Nandini Milk Price Will Be Hike Shortly. KMF President Balachandra Jarakiholi Confirm It.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X