ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದುಬಾರಿಯಾಯಿತು ನಂದಿನಿ ಹಾಲು; ದರ ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ

|
Google Oneindia Kannada News

ಬೆಂಗಳೂರು, ಜನವರಿ 30: ನಂದಿನಿ ಹಾಲಿನ ದರ ಹೆಚ್ಚಳ ಮಾಡಬೇಕು ಎಂದು ಬೇಡಿಕೆ ಸಲ್ಲಿಸಿದ್ದ ಕರ್ನಾಟಕ ಹಾಲು ಮಹಾ ಮಂಡಳದ (ಕೆಎಂಎಫ್) ಮನವಿಗೆ ರಾಜ್ಯ ಸರ್ಕಾರ ಸ್ಪಂದಿಸಿದೆ.

ಪ್ರತಿ ಲೀಟರ್ ನಂದಿನಿ ಹಾಲು ಹಾಗೂ ಮೊಸರಿನ ಬೆಲೆಯಲ್ಲಿ 2 ರುಪಾಯಿ ಹೆಚ್ಚಳ ಮಾಡುವುದಕ್ಕೆ ಕೆಎಂಎಫ್‌ಗೆ ಸರ್ಕಾರ ಒಪ್ಪಿಗೆ ನೀಡಿದೆ. ಗುರುವಾರ ನಡೆದ ಕೆಎಂಎಫ್ ಆಡಳಿತ ಮಂಡಳಿ ಸಭೆಯಿಂದ ಈ ಮಾಹಿತಿ ಹೊರ ಬಿದ್ದಿದೆ. ಫೆಬ್ರವರಿ 1 ರಿಂದ ಈ ನೂತನ ದರ ಜಾರಿಗೆ ಬರಲಿದೆ ಎಂದು ಕೆಎಂಎಫ್ ತಿಳಿಸಿದೆ.

ನಂದಿನಿಯಿಂದ 4 ಹೊಸ ಉತ್ಪನ್ನಗಳ ಬಿಡುಗಡೆನಂದಿನಿಯಿಂದ 4 ಹೊಸ ಉತ್ಪನ್ನಗಳ ಬಿಡುಗಡೆ

ಹೆಚ್ಚಳವಾದ ದರದಲ್ಲಿ 60 ರಿಂದ 70 ಪೈಸೆ ರೈತರಿಗೆ ಮೀಸಲಿಡುವುದಾಗಿ ಕೆಎಂಎಪ್ ಆಡಳಿತ ಮಂಡಳಿ ತಿಳಿಸಿದ್ದು, ದರ ಹೆಚ್ಚಳದಿಂದ ರೈತರಿಗೆ ಲಾಭವಾದರೆ, ಜನಸಾಮಾನ್ಯರ ಜೇಬಿಗೆ ಹೊರೆಯಾಗಲಿದೆ. ಹಾಲು ಮೊಸರು ಹೊರತುಪಡಿಸಿ ಇತರ ಉತ್ಪನ್ನಗಳ ದರದಲ್ಲಿ ಕೆಎಂಎಫ್ ಯಾವುದೇ ಬದಲಾವಣೆ ಮಾಡಿಲ್ಲ.

Nandini Milk Price Will Be Hike From February

ಸದ್ಯ ಮಾರುಕಟ್ಟೆಯಲ್ಲಿ ಒಂದು ಲೀಟರ್ ಕೆನೆ ಭರಿತ ಹಾಲಿನ ದರ 33 ರಿಂದ 35 ರುಪಾಯಿ ಹೊಸ ಆದೇಶದ ಪ್ರಕಾರ 35 ರಿಂದ 38 ರುಪಾಯಿ ಹೆಚ್ಚಳವಾಗಲಿದೆ. ರಾಜ್ಯಾದ್ಯಂತ ಪ್ರತಿನಿತ್ಯ 80 ಲಕ್ಷ ಲೀಟರ್‌ಗೂ ಹೆಚ್ಚು ಹಾಲು ಕೆಎಂಎಫ್ ಸೇರುತ್ತಿದೆ.

English summary
Nandini Milk Price Will Be Hike From February. per liter nandini milk and curd 2 rupees hike. Karnataka Government permission this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X