ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

KMF ನಿಂದ "ಗುಡ್ ಲೈಫ್ ಬ್ರೆಡ್" ಬಿಡುಗಡೆ

|
Google Oneindia Kannada News

ಬೆಂಗಳೂರು, ಜನವರಿ 15: ನಂದಿನಿ ಹಾಲು, ಮೊಸಲು ತುಪ್ಪ ತಿನ್ನುವರಿಗೆ ಇನ್ನೊಂದು ಗುಡ್‌ ನ್ಯೂಸ್. ನಂದಿನಿ ಬ್ರಾಂಡ್ ನ ಕರ್ನಾಟಕ ಹಾಲು ಒಕ್ಕೂಟ ಇದೀಗ ತನ್ನದೇ ಬ್ರೆಡ್ ನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ

ಹೌದು ಗುಡ್ ಲೈಫ್ ಹಾಲಿನ ಮಾದರಿಯಲ್ಲಿ ಗುಡ್ ಲೈಫ್ ಹಾಲಿನ ಬ್ರೆಡ್ ನ್ನು ಮಾರುಕಟ್ಟೆಗೆ ಬಿಡುತ್ತಿರುವುದಾಗಿ ಕೆಎಂಎಫ್ ನ ವ್ಯವಸ್ಥಾಪಕ ನಿರ್ದೇಶಕ ಬಿ. ಸಿ. ಸತೀಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಂದಿನಿ ಉತ್ಕೃಷ್ಟ ಹಾಲಿನಿಂದ ಬ್ರೆಡ್ ನ್ನು ತಯಾರಿಸಲಾಗುತ್ತಿದೆ. ನಂದಿನಿ ಬ್ರಾಂಡ್‌ನ ಗುಡ್ ಲೈಫ್ ಮಿಲ್ಕ್ ಬ್ರೆಡ್, ಗುಡ್ ಲೈಫ್ ಸ್ಯಾಂಡ್ವಿಚ್ ಬ್ರೆಡ್, ಗುಡ್ ಲೈಫ್ ವ್ಹೀಟ್ ಬ್ರೆಡ್, ಗುಡ್ ಲೈಫ್ ಮಲ್ಟಿ ಗ್ರೈನ್ ಬ್ರೆಡ್ ಅವತರಣಿಕೆಯ ಬ್ರೆಡ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ. ಸದ್ಯದಲ್ಲಿ ಒಂದು ತಿಂಗಳು ಬೆಂಗಳೂರಿಲ್ಲಿ ಮಾತ್ರ ಬಿಡುಗಡೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕರ್ನಾಟಕ, ಹೊರ ರಾಜ್ಯಗಳಲ್ಲಿ ಬಿಡುಗಡೆ ಮಾಡುವುದಾಗಿ ಅವರು ತಿಳಿಸಿದ್ದಾರೆ.

Nandini Brand Launches Good Life Bread

ದಿನಕ್ಕೆ ಎರಡೂವರೆ ಲಕ್ಷ ಪೌಂಡ್ ಕೊಡುವ ಉದ್ದೇಶ ಹೊಂದಿದ್ದೇವೆ. ಇದರ ಭಾಗವಾಗಿ ಮೊದಲು ಐದು ಸಾವಿರ ಬ್ರೆಡ್ ಪೂರೈಕೆ ಮಾಡಿದ್ದು, ಐದರಿಂದ ಏಳು ದಿನಗಳ ಕಾಲ ಈ ಬ್ರೆಡ್ ನ್ನು ಗ್ರಾಹಕರು ಸವಿಯಬಹುದಾಗಿದೆ. ಮುಂಬರಲಿರುವ ಯುಗಾದಿ ವೇಳೆಗೆ ನಂದಿನಿ ಬ್ರಾಂಡ್ ನ ಚಾಕೋಲೆಟ್ ಮಾರುಕಟ್ಟೆಗೆ ಬಿಡಲು ಯೋಜನೆ ರೂಪಿಸಲಾಗಿದೆ. ಇದರಿಂದ ರೈತರಿಂದ ಒಕ್ಕೂಟ ಖರೀದಿಸುವ ಹಾಲನ್ನು ಸದ್ಬಳಕೆ ಮಾಡಿಕೊಳ್ಳುವ ಅವಕಾಶವಿದೆ ಎಂದು ಅವರು ಸ್ಪಷ್ಟಪಡಿಸಿದರು.

Nandini Brand Launches Good Life Bread

Recommended Video

83 Tejas ಯುದ್ಧ ವಿಮಾನ ರೆಡಿ ಆಗ್ತಿದೆ !! | Oneindia Kannada

ಬ್ರೆಡ್‌ ದರ: ಪ್ರತಿ 200 ಗ್ರಾಂ ಬ್ರೆಡ್‌ಗೆ 22 ರೂ‌.ನಿಂದ 30 ರೂ. ದರ ವಿಧಿಸಲಾಗುತ್ತಿದೆ. ಪ್ರತಿ 400 ಗ್ರಾ ಬ್ರೆಡ್‌ಗೆ 40 ರೂ.ನಿಂದ 50 ರೂ.ವರೆಗೆ ಮಾರಾಟ ದರ ಇಡಲಾಗಿದೆ. ಈಗಾಗಲೇ 170 ಕ್ಕೂ ಹೆಚ್ಚು ಹಾಲು ಹಾಗೂ ಹಾಲಿನ ಉತ್ಪನ್ನ ಹೊಂದಿರೋ ಹೆಗ್ಗಳಿಕೆ ಹೊಂದಿರುವ ನಂದಿನಿ ಬ್ರಾಂಡ್ ವ್ಯಾಪ್ತಿಗೆ ಬ್ರೆಡ್ ಸೇರ್ಪಡೆಯಾಗಿರುವುದು ಸಂತಸ ತಂದಿದೆ ಎಂದು ಅವರು ಹೇಳಿದರು.

English summary
Nandini brand launches good life bread to market. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X