ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎನ್‍ಐಟಿ-ಎಂಎಸ್ ನ ಕಲರ್ ಫುಲ್ 'ನಂದಿ ಉತ್ಸವ'

By Rajendra
|
Google Oneindia Kannada News

ಬೆಂಗಳೂರು, ಏಪ್ರಿಲ್ 4: ದಿ ನಂದಿ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ ಮೆಂಟ್ ಸೈನ್ಸಸ್ (ಎನ್‍ಐಟಿ-ಎಂಎಸ್) ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ನಂದಿ ಉತ್ಸವವನ್ನು ಆಚರಿಸಲಾಯಿತು. ಉತ್ಸವದ ಅಂಗವಾಗಿ ಅಂತರ್ ಕಾಲೇಜು ಮಟ್ಟದ ವಿವಿಧ ಸ್ಪರ್ಧಾತ್ಮಕ ಕಾರ್ಯಕ್ರಮಗಳು ನೋಡುಗರ ತನುಮನ ತಣಿಸಿದವು.

ಅಂತರ್ ಕಾಲೇಜು ಮಟ್ಟದ ಕಾರ್ಯಕ್ರಮಗಳನ್ನು ಬೆಳಗ್ಗೆ 9 ಗಂಟೆಗೆ ಪ್ಯಾರ್ ಗೆ ಆಗ್ಬಿಟ್ಟೈತೆ ಖ್ಯಾತಿಯ ತಾರೆ ಪಾರುಲ್ ಯಾದವ್ ಉದ್ಘಾಟಿಸಿದರು. ಸಂಜೆ 4 ಗಂಟೆಯವರೆಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ವರ್ಣರಂಜಿತವಾಗಿ ನಡೆದವು.

ಸಂಜೆ 5.00ಕ್ಕೆ ಎನ್‍ಐಟಿ-ಎಂಸ್ ಬಾಯ್ಸ್ ಹಾಸ್ಟೆಲನ್ನು ಬೆಂಗಳೂರಿನ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ ಉದ್ಘಾಟಿಸಿದರು. ವಿಟಿಯು ಉಪಕುಲಪತಿ ಡಾ. ಎಚ್.ಮಹೇಶಪ್ಪ ನಂದಿ ಉತ್ಸವದ ಮುಖ್ಯ ಅತಿಥಿಯಾಗಿದ್ದರು.

ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಅಭಿನಂದನೆ

ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಅಭಿನಂದನೆ

ಇದೇ ವೇಳೆ ಇತ್ತೀಚೆಗೆ ಸಿಸಿಎಲ್ ಪಂದ್ಯಾವಳಿ ಗೆದ್ದ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಅಭಿನಂದಿಸಲಾಯಿತು. ಈ ವೇಳೆ ತಂಡದ ನಾಯಕ ಕಿಚ್ಚ ಸುದೀಪ್, ದರ್ಶನ್ ಸೇರಿದಂತೆ ತಂಡದ ಎಲ್ಲಾ ಆಟಗಾರರು ಭಾಗಿಯಾಗಿದ್ದರು.

ಎನ್‍ಐಟಿ-ಎಂಎಸ್ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ

ಎನ್‍ಐಟಿ-ಎಂಎಸ್ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ

ಎನ್‍ಐಟಿ-ಎಂಎಸ್ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ನೈಸ್ ಹಾಗೂ ಎನ್‍ಐಟಿ-ಎಂಎಸ್ ಆಯೋಜಿಸಿದ್ದ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ವಿತರಿಸಿದರು.

ರಘು ದೀಕ್ಷಿತ್ ಮ್ಯೂಸಿಕಲ್ ನೈಟ್

ರಘು ದೀಕ್ಷಿತ್ ಮ್ಯೂಸಿಕಲ್ ನೈಟ್

ನಂದಿ ಉತ್ಸವದ ಅಂಗವಾಗಿ ಫ್ಯಾಷನ್ ಶೋ ಹಾಗೂ ಡಾನ್ಸ್ ಸಹ ನೋಡುಗರ ಕಣ್ಮನ ತಣಿಸಿದವು. ಸಂಜೆ 7 ಗಂಟೆಗೆ ಸಂಗೀತ ನಿರ್ದೇಶಕ ರಘು ದೀಕ್ಷಿತ್ ತಂಡದಿಂದ ಮ್ಯೂಸಿಕಲ್ ನೈಟ್ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ತಂದಿತು.

ಎನ್‍ಐಟಿ-ಎಂಎಸ್ ಮುಖ್ಯಸ್ಥ ಅಶೋಕ್ ಖೇಣಿ

ಎನ್‍ಐಟಿ-ಎಂಎಸ್ ಮುಖ್ಯಸ್ಥ ಅಶೋಕ್ ಖೇಣಿ

ಇದೇ ಸಂದರ್ಭದಲ್ಲಿ ನಂದಿ ಉತ್ಸವದ ಯಶಸ್ಸಿನ ಬಗ್ಗೆ ಮಾತನಾಡಿದ ಎನ್‍ಐಟಿ-ಎಂಎಸ್ ಮುಖ್ಯಸ್ಥ ಅಶೋಕ್ ಖೇಣಿ, ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಹಾಗೂ ಪ್ರಾಧ್ಯಾಪಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಯಿತು.

ಸೆಲೆಬ್ರಿಟಿಗಳು ವಿದ್ಯಾರ್ಥಿಗಳಿಂದ ಇನ್ನಷ್ಟು ರಂಗು

ಸೆಲೆಬ್ರಿಟಿಗಳು ವಿದ್ಯಾರ್ಥಿಗಳಿಂದ ಇನ್ನಷ್ಟು ರಂಗು

ವಿವಿಧ ಕ್ಷೇತ್ರಗಳಲ್ಲಿರುವ ಸೆಲೆಬ್ರಿಟಿಗಳು ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮಕ್ಕೆ ಇನ್ನಷ್ಟು ರಂಗು ತುಂಬಿದರು. ಇದರಿಂದಾಗಿ ಕ್ಯಾಂಪಸ್ ನಲ್ಲಿ ಜೀವಂತಿಕೆಯಿತ್ತು ಎಂದರು ಅಶೋಕ್ ಖೇಣಿ.

English summary
The Nandi Institute of Technology and Management Sciences (NIT-MS) celebrated its Annual Cultural Fest as Nandi Utsav on the day of NICE Foundation Day. This celebration saw a series of inter-collegiate competitive events being conducted, along with several other scintillating attractions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X