ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂದಿ ಬೆಟ್ಟ: 32 ವರ್ಷಗಳ ನಂತರ ರೋಪ್ ವೇ ಯೋಜನೆಗೆ ಮರುಜೀವ

|
Google Oneindia Kannada News

ಬೆಂಗಳೂರು, ಫೆಬ್ರವರಿ 13: ನಂದಿ ಹಿಲ್ಸ್‌ನಲ್ಲಿ ರೋಪ್ ವೇ ರಚಿಸಲು ರಾಜ್ಯ ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದ್ದು, ಇದರಿಂದ ಇಲ್ಲಿನ ಪ್ರವಾಸೋದ್ಯಮಕ್ಕೆ ಸಾಕಷ್ಟು ಉತ್ತೇಜನಗಳು ದೊರಕಲಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಹಿಲ್ಸ್, ತುಮಕೂರಿನ ಮಧುಗಿರಿ ಮತ್ತು ಯಾದಗಿರಿ ಜಿಲ್ಲೆಯ ಯಾದಗಿರಿ ಹಿಲ್ಸ್‌ಗೆ ರೋಪ್ ವೇಗಳನ್ನು ನಿರ್ಮಿಸುವ ಯೋಜನೆ ರಾಜ್ಯದ ಮುಂದಿದೆ.

ನಂದಿ ಬೆಟ್ಟಕ್ಕೆ ರೈಡಿಂಗ್ ಹೋದರೆ ಬೀಳುತ್ತೆ ಗೂಸಾ!ನಂದಿ ಬೆಟ್ಟಕ್ಕೆ ರೈಡಿಂಗ್ ಹೋದರೆ ಬೀಳುತ್ತೆ ಗೂಸಾ!

ಮೂರು ರೋಪ್ ವೇ ಪ್ರಾಜೆಕ್ಟ್‌ಗಳಲ್ಲಿ ಮಧುಗಿರಿ ಮತ್ತು ನಂದಿ ಹಿಲ್ಸ್‌ನ 2 ರೋಪ್ ವೇಗಳು ಪುರಾತತ್ವ ಇಲಾಖೆಯ ಅಧೀನದಲ್ಲಿ ಬರುತ್ತದೆ. ಹೀಗಾಗಿ ಯೋಜನೆಗೆ ಅವರಿಂದ ಸಮ್ಮತಿ ಪಡೆಯುವುದು ಅತ್ಯಗತ್ಯ ಎಂದು ಪ್ರವಾಸೊದ್ಯಮ ನಿರ್ದೇಶಕ ಎನ್.ಮಂಜುಳ ತಿಳಿಸಿದ್ದಾರೆ.

Nandi Hills ropeway a pipe dream after 32 years

ನಟ ಶಂಕರ್ ನಾಗ್ ಅವರು 32 ವರ್ಷದ ಹಿಂದೆ ನಂದಿ ಹಿಲ್ಸ್ ನಲ್ಲಿ ರೋಪ್ ವೇ ಅಳವಡಿಸುವ ಕುರಿತಾಗಿ ಸರ್ಕಾರಕ್ಕೆ ಸಲಹೆ ನೀಡಿದ್ದರು. ಆದರೂ ಕೂಡ ಯೋಜನೆ ಪ್ರಾರಂಭವಾಗಿರಲಿಲ್ಲ. ಇದೀಗ ಯೋಜನೆಗೆ ಮತ್ತೆ ಜೀವ ಬಂದಿದ್ದು ಅದಕ್ಕೆ ಸರ್ಕಾರವು ಟ್ರಾನ್ಸಾಕ್ಷನ್ ಅಡ್ವೈಸರ್ ಅನ್ನು ನೇಮಕ ಮಾಡಲು ತೀರ್ಮಾಣಿಸಿದೆ.

ಈ ಯೋಜನೆಯನ್ನು 94.33 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ. ಖಾಸಗಿ ಸಹಭಾಗಿತ್ವದಲ್ಲಿ ರೋಪ್ ವೇ ನಿರ್ಮಿಸಲಾಗುತ್ತಿದ್ದು, ಶೀಘ್ರದಲ್ಲಿ ಡಿಪಿಆರ್ ತಯಾರಿಸಲಾಗುತ್ತದೆ. ನಂದಿ ಬೆಟ್ಟದಲ್ಲಿ 9 ಎಕರೆ ಜಾಗಕ್ಕೆ ಅನುಮತಿ ದೊರೆತಿದೆ. ನಂದಿ ಬೆಟ್ಟದ ಕೊನೆಯಲ್ಲಿ ಬೇಕಾಗಿರುವ ಜಾಗಕ್ಕೆ ಕೂಡ ಶೀಘ್ರ ಅನುಮತಿ ದೊರೆಯಲಿದೆ ಎಂದು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

English summary
The ropeway to Nandi hills, a project that has remained a mirage for the past 32 years after it was proposed by actor Shankar Nag, seems to be making some slow moves. The latest is the government decision to appoint a Transaction Adviser for the project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X