• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಂದಿ ಬೆಟ್ಟದ ಬೆರಗು: ನಂದಿ ಹಬ್ಬದಲ್ಲಿ ತೆರೆದುಕೊಳ್ಳಲಿದೆ ಇತಿಹಾಸ, ವಾಸ್ತವ

|

ಬೆಂಗಳೂರು, ಫೆಬ್ರವರಿ 27 : ಪ್ರಕೃತಿ ಮಾತೆ ಮೈದಳೆದು ನಿಂತಿರುವ ನಂದಿ ಬೆಟ್ಟವನ್ನು ಇನ್ನುಷ್ಟು ಮೆರುಗುಗೊಳಿಸುವ ನಿಟ್ಟಿನಲ್ಲಿ ನಂದಿ ಹಬ್ಬ ಎನ್ನುವ ವಿಶೇಷ ಕಾರ್ಯಕ್ರಮ ಜರುಗಲಿದೆ.

ಮಾನವನ ದಬ್ಬಾಳಿಕೆಯಿದ್ದರೂ ತನ್ನ ತನವನ್ನು ಹಿಡಿದಿಟ್ಟಿರುವ ನಂದಿ ಬೆಟ್ಟದಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆಯು ನಂದಿ ಹಬ್ಬವನ್ನು ಮಾರ್ಚ್4 ರಂದು ಆಯೋಜಿಸಿದೆ. ಇತಿಹಾಸವನ್ನು ಇನ್ನಷ್ಟು ಪ್ರಚುರಪಡಿಸಲು ಹಾಗೂ ಯುವ ಪೀಳಿಗೆಗೆ ಈ ಬಗ್ಗೆ ತಿಳಿಸಿಕೊಡಲು ನಂದಿ ಹಬ್ಬವನ್ನು ನಂದಿ ಬೆಟ್ಟದಲ್ಲಿ ಆಯೋಜಿಸಿದೆ. ಯುನೈಟೆಡ್ ವೇ ಬೆಂಗಳೂರು ಹಾಗೂ ನಮ್ಮ ನಿಮ್ಮ ಸೈಕಲ್ ಪ್ರತಿಷ್ಠಾನ ಸಹಯೋಗದಲ್ಲಿ ಹಮ್ಮಿಕೊಂಡಿದೆ.

ನಡಿಗೆ, ಮ್ಯಾರಥಾನ್, ಸೈಕ್ಲಿಂಗ್ ಹೀಗೆ ನಾನಾ ಚಟುವಟಿಕೆಗಳನ್ನು ನಡೆಸುವುದರ ಜತೆಗೆ ನಂದಿ ಬೆಟ್ಟದ ಪುರಾತನ ಕಟ್ಟಡ, ಸಸ್ಯರಾಶಿಗಳು, ಜೀವಸಂಕುಲ, ಸ್ಥಳೀಯ ಸಂಸ್ಕೃತಿ, ಆಹಾರ ಪದ್ಧತಿಯ ಸಮಗ್ರ ಪರಿಚಯ ಮಾಡಿಕೊಡುವುದು ಈ ಹಬ್ಬದ ವಿಶೇಷತೆಯಾಗಿದೆ.

ನಂದಿ ಹಬ್ಬದಲ್ಲಿ ಯೋಗ, ಆಹಾರದ ಕುರಿತ ತರಗತಿಗಳು

ನಂದಿ ಹಬ್ಬದಲ್ಲಿ ಯೋಗ, ಆಹಾರದ ಕುರಿತ ತರಗತಿಗಳು

ಎಲ್ಲಾ ವಯಸ್ಸಿನವರಿಗೂ ಯೋಗ ತರಗತಿ ನಡೆಯಲಿದ್ದು, ಪ್ರತಿನಿತ್ಯ ಮಕ್ಕಳು ಯಾವ ರೀತಿಯ ಆಹಾರವನ್ನು ಸೇವಿಸಬೇಕು, ವೃದ್ಧರು, ಹಾಗೂ ಯುವಕರು ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎನ್ನುವ ಕುರಿತು ಕಾರ್ಯಾಗಾರ ನಡೆಯಲಿದೆ.

ನಂದಿ ಬೆಟ್ಟ ಉಳಿಸಲು ಮ್ಯಾರಥಾನ್

ನಂದಿ ಬೆಟ್ಟ ಉಳಿಸಲು ಮ್ಯಾರಥಾನ್

ಚಾರಣಿಗರನ್ನು, ಪ್ರವಾಸಿಗರನ್ನು ನಂದಿ ಬೆಟ್ಟ ಕೈಬೀಸಿ ಕರೆಯುತ್ತಿದೆ. ನಂದಿ ಬೆಟ್ಟದಲ್ಲಿ ಸಸ್ಯರಾಶಿಗಳಿವೆ, ಪುರಾತನ ದೇವಾಲಯಗಳಿವೆ. ಇವೆಲ್ಲವನ್ನು ಉಳಿಸುವ ಉದ್ದೇಶದಿಂದ ನಂದಿ ಬೆಟ್ಟದಲ್ಲಿ ಮಾರ್ಚ್ ೪ ರಂದು ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ.

ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಕ್ರಮ

ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಕ್ರಮ

ನಂದಿ ಬೆಟ್ಟದ ಸ್ವಚ್ಛತೆಗೂ ಒತ್ತು ನೀಡಲಾಗಿದ್ದು, ಬೆಟ್ಟ ಹಾಗೂ ಸುತ್ತಮುತ್ತಲ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮ ಸಹ ಆಯೋಜಿಸಲಾಗಿದೆ. ಕಳೆದ ಸೆಪ್ಟೆಂಬರ್ ಆರಂಭದಲ್ಲೇ ನಡೆಯಬೇಕಿದ್ದ ಈ ಕಾರ್ಯಕ್ರಮ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿತ್ತು. ಪಾರಂಪರಿಕ ತಾಣಗಳ ಪರಿಚಯ: ನಂದಿ ಬೆಟ್ಟದ ಬಳಿಯ ವ್ಯಾಲಿ ಆಫ್ ವಿಂಡ್ ನಿಂದ ಆರಂಭವಾಗುವ ಅನೇಕ ಬಗೆಯ ನಡಿಗೆ ಹಾಗೂ ಮ್ಯಾರಥಾನ್ ಬೆಟ್ಟದ ಸುತ್ತಮುತ್ತಲ ಪ್ರದೇಶದಲ್ಲಿ ಸಾಗಲಿದೆ.

ನಂದಿ ಬೆಟ್ಟ ಸುತ್ತಮುತ್ತಲಿನ ಪಾರಂಪರಿಕ ತಾಣಗಳು

ನಂದಿ ಬೆಟ್ಟ ಸುತ್ತಮುತ್ತಲಿನ ಪಾರಂಪರಿಕ ತಾಣಗಳು

ಈ ವೇಳೆ ನಂದಿಯ ಸುತ್ತಮುತ್ತ ಗಿರಿಗಳು, ಚೋಳರ ಕಾಲದ ಭೋಗ ನಂದೀಶ್ವರ ದೇವಾಲಯ, ಕಲ್ಯಾಣಿ, ಟಿಪ್ಪು ಡ್ರಾಪ್, ಬೊಟಾನಿಕಲ್ ಗಾರ್ಡನ್, ಬ್ರಿಟಿಷ್ ಅಧಿಕಾರಿಗಳ ಸಮಾಧಿ ಸ್ಥಳ, ವಿಶ್ವೇಶ್ವರಯ್ಯನವರ ಜನ್ಮ ಸ್ಥಳ ಸೇರಿದಂತೆ ಸುತ್ತಮುತ್ತಲ ಪಾರಂಪರಿಕ ತಾಣಗಳ ಪರಿಚಯಮಾಡಿಕೊಡಲಾಗುತ್ತದೆ.

ನಂದಿ ಬೆಟ್ಟದ ಮಂಜು, ಸೊಗಸು ಕಾಣುವ ರೋಮಾಂಚಕ ಅನುಭವ

ನಂದಿ ಬೆಟ್ಟ: 32 ವರ್ಷಗಳ ನಂತರ ರೋಪ್ ವೇ ಯೋಜನೆಗೆ ಮರುಜೀವ

English summary
Unique place of including natural herbal, spot of rock climbing cycling zone, hilly terrain and many miret, Its one and only Nandi Hills. Department of tourism is organising Nandi Habba on March 4 in collaboration with United way Bengaluru and Namma ninna cyclone Foundation to promote the history and diversity of Nandi Hill.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X