ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇವರು ಶೂನ್ಯ ಆಸ್ತಿ ಹೊಂದಿರುವ ಅಭ್ಯರ್ಥಿಗಳು

By Mahesh
|
Google Oneindia Kannada News

ನವದೆಹಲಿ, ಏ.10: 16ನೇ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಂದನ್ ‌ನಿಲೇಕಣಿ ದೇಶದಲ್ಲೇ ಅತ್ಯಂತ ಸಿರಿವಂತ ಅಭ್ಯರ್ಥಿಯಾಗಿದ್ದಾರೆ. ದೆಹಲಿ ಮೂಲದ ಸಂಸ್ಥೆ ಎಡಿಎಆರ್ ನಡೆಸಿರುವ ಸಮೀಕ್ಷೆಯಲ್ಲಿ ಈ ಅಂಶ ಬಹಿರಂಗಗೊಂಡಿದೆ. ಇವರ ಜತೆಗೆ ಶೂನ್ಯ ಆಸ್ತಿ ಹೊಂದಿರುವವರು ಕರ್ನಾಟಕದ ಚುನಾವಣಾ ಕಣದಲ್ಲಿದ್ದಾರೆ.


ಕರ್ನಾಟಕದ ಚುನಾವಣಾ ಕಣದಲ್ಲಿ ಶೂನ್ಯ ಆಸ್ತಿ ಹೊಂದಿದ್ದೇವೆ ಎಂದು ಘೋಷಿಸಿರುವ ಅಭ್ಯರ್ಥಿಗಳು : ಬೀದರ್ ನ ಮೀರ್ಜಾ ಶಾಫಿ ಬೇಗ್(ಪಕ್ಷೇತರ), ಬಿಎಸ್ ಪಿ ರಾಮುಡು(ಬಳ್ಳಾರಿ), ಹಾವೇರಿಯ ಬಿ ಹೊನ್ನಪ್ಪ (ಸರ್ವ ಜನ ಪಕ್ಷ), ಉಡುಪಿ ಚಿಕ್ಕಮಗಳೂರಿನ ಜಿ ಮಂಜುನಾಥ್(ಪಕ್ಷೇತರ).

ಅತಿ ಕಡಿಮೆ ಆಸ್ತಿ ಹೊಂದಿರುವವರಲ್ಲಿ ಬೆಂಗಳೂರು ಕೇಂದ್ರ ಕ್ಷೇತ್ರದ ಅಭ್ಯರ್ಥಿ ಡಿ. ಆಂಬ್ರೋಸ್(575), ಎಂ.ಎಸ್ ಬಿಜೆಪಿಯ ನಾರಾಯಣಸ್ವಾಮಿ(1000 ರು). ಸುಮಾರು 133 ಅಭ್ಯರ್ಥಿಗಳು PAN ಕಾರ್ಡ್ ಸಂಖ್ಯೆ ನೀಡಿಲ್ಲ.

ಅಭ್ಯರ್ಥಿಯ ಒಟ್ಟಾರೆ ಅಸ್ತಿ: ಸತತ ಐದು ಬಾರಿ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಗೆದ್ದಿರುವ ಅನಂತ್‌ಕುಮಾರ್ ಎದುರಾಳಿಯಾಗಿರುವ ನಂದನ್ ನಿಲೇಕಣಿ ಅವರ ಒಟ್ಟು ಆಸ್ತಿ 7,700 ಕೋಟಿ. ಅಭ್ಯರ್ಥಿಯ ಒಟ್ಟಾರೆ ಅಸ್ತಿ ಎಂದರೆ ಅಭ್ಯರ್ಥಿಯ ಆಸ್ತಿ, ಪತ್ನಿ ಹಾಗೂ ಅವಲಂಬಿತರ ಆಸ್ತಿ ಕೂಡಾ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ದೇಶದ ಪ್ರತಿಷ್ಠಿತ ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ನಿಲೇಕಣಿ ಅವರೇ ಆಯೋಗಕ್ಕೆ ಸಲ್ಲಿಸಿರುವ ಅಫಿಡೆವಿಟ್ ‌ನಲ್ಲಿ ತಮ್ಮ ಆಸ್ತಿ ವಿವರವನ್ನು 7,700 ಕೋಟಿ ರು ಎಂದು ಘೋಷಿಸಿಕೊಂಡಿದ್ದಾರೆ.

ಹರಿಯಾಣದ ಕುರುಕ್ಷೇತ್ರದಿಂದ ಸ್ಪರ್ಧಿಸಿರುವ ಉದ್ಯಮಿ ನವೀನ್ ಜಿಂದಾಲ್ 900ಕೋಟಿ, ಬಿಹಾರದ ಜಹೆನಾಬಾದ್ ನಲ್ಲಿ ಸ್ಪರ್ಧಿಸಿರುವ ಅನಿಲ್ ಶರ್ಮ 815 ಕೋಟಿ, ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಎಎಪಿ ಅಭ್ಯರ್ಥಿ ವಿ.ಬಾಲಕೃಷ್ಣನ್ 190 ಕೋಟಿ ರೂ. ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಉದ್ಯಮಿ ಫರಾನ್ ಅಜ್ಮಿ , ಸಾಮ್ ಚರಣ್ ‌ಗುಪ್ತ, ಉದ್ಯಮಿ ಅಸ್ಪಕ್ ಅಹಮ್ಮದ್ ಮದಕಿ ಮತ್ತಿತರರು ಶ್ರೀಮಂತ ಕುಳಗಳಾಗಿದ್ದಾರೆ.

27 Congress candidates are billionaires in Karnataka; Nandan Nilekani tops the list

ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದವರಲ್ಲಿ ಪ್ರಮುಖರಾಗಿದ್ದ ದಿವಂಗತ ಪ್ರಮೋದ್ ಮಹಾಜನ್ ಅವರ ಪುತ್ರಿ ಹಾಗೂ ಬಿಜೆಪಿಯಿಂದ ಮುಂಬೈ ಉತ್ತರ ಕೇಂದ್ರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿರುವ ಪೂನಂ ಮಹಾಜನ್ ವರ ಆಸ್ತಿ 108 ಕೋಟಿ. ಅಲಹಾಬಾದ್ ‌ನಿಂದ ಸ್ಪರ್ಧಿಸಿರುವ ಶಾಮ್ ಶರಣ್ ಗುಪ್ತ 42 ಕೋಟಿ ಒಡೆಯರಾದರೆ, ಬಾಲಿವುಡ್ ನಟ ಸಂಜಯ್ ‌ದತ್ ತ್ತ್ ಸಹೋದರಿ ಪ್ರಿಯಾಂಕ ದತ್ತ್ 65 ಕೋಟಿ ರೂ.ಗೆ ಒಡತಿ. ಕೇಂದ್ರದ ಮಾಜಿ ಸಚಿವ ಮಿಲಿಂದ್ ದೇವೋರ ಅವರ ಎದುರು ಸ್ಪರ್ಧಿಸಿರುವ ಶಿವಸೇನೆ ಪಕ್ಷದ ಅಭ್ಯರ್ಥಿ ಅರವಿಂದ್ ಸಾವಂತ್ 43 ಕೋಟಿ ಒಡೆಯರು.

ಕರ್ನಾಟಕದಲ್ಲಿನ ಶ್ರೀಮಂತ ಅಭ್ಯರ್ಥಿಗಳು: ಕರ್ನಾಟಕದ ಒಟ್ಟಾರೆ ಕಾಂಗ್ರೆಸ್ ಅಭ್ಯರ್ಥಿಗಳ ಸರಾಸರಿ ಆಸ್ತಿ ಪ್ರಮಾಣ 294 ಕೋಟಿ ರು ಇದೆ ಎಂದು ಎಡಿಆರ್ ಸಂಸ್ಥೆಯ ತ್ರಿಲೋಚನ್ ಶಾಸ್ತ್ರಿ ನೀಡಿರುವ ವರದಿಯನ್ನು ಐಎಎನ್ಎಸ್ ಉಲ್ಲೇಖಿಸಿ ವರದಿ ಮಾಡಿದೆ. ದೇಡದಲ್ಲಿ ಒಟ್ಟು 118 ಕೋಟ್ಯಧಿಪತಿಗಳಿದ್ದರೆ, ಬಿಜೆಪಿಯಲ್ಲಿ 26, ಕಾಂಗ್ರೆಸ್ ನಲ್ಲಿ 21, ಜೆಡಿಎಸ್ ಹಾಗೂ ಎಎಪಿಯಲ್ಲಿ ತಲಾ 12 ಮಂದಿ ಶ್ರೀಮಂತರಿದ್ದಾರೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಭಾಕರ್ ರೆಡ್ಡಿ 224 ಕೋಟಿ ರು.ಕುಮಾರಸ್ವಾಮಿ 73 ಕೋಟಿ, ಬಿಜೆಪಿಯ ಸುರೇಶ್ ಅಂಗಡಿ 37 ಕೋಟಿ ಪ್ರಮುಖರಾಗಿದ್ದಾರೆ. ವಾರ್ಷಿಕ ಗಳಿಕೆಯಲ್ಲೂ ನಂದನ್ ಮುಂದಿದ್ದಾರೆ. ನಂದನ್ 168 ಕೋಟಿ ರು ಗಳಿಕೆ ಹೊಂದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎ . ಮಂಜು ವಾರ್ಷಿಕ 14 ಕೋಟಿ ರು, ಪ್ರಭಾಕರ್ ರೆಡ್ಡಿ 3.9 ಕೋಟಿ ರು ಗಳಿಸುತ್ತಿದ್ದಾರೆ.

English summary
Of the 28 Congress candidates in the Lok Sabha election in Karnataka, 27 are billionaires, led by its star nominee Nandan Nilekani (Bangalore South).Association for Democratic Reforms (ADR) state coordinator Trilochan Sastry told IANS in Banglore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X