ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮೂರ ಹಬ್ಬದಲ್ಲಿ ನಮ್ಮ ಕುಡ್ಲದ ಗೊಬ್ಬುಲು

By Mahesh
|
Google Oneindia Kannada News

ಬೆಂಗಳೂರು, ಫೆ. 12: ಅಭಿನಂದನಾ ಸಾಂಸ್ಕೃತಿಕ ಟ್ರಸ್ಟ್ ಮೂರನೇ ಬಾರಿಗೆ ಬೆಂಗಳೂರಿನಲ್ಲಿ ಆಯೋಜಿಸುತ್ತಿರುವ "ನಮ್ಮೂರ ಹಬ್ಬ - 2016" ಫೆಬ್ರವರಿ 13ನೇ ಶನಿವಾರ ಹಾಗು ಫೆಬ್ರವರಿ 14ನೇ ಭಾನುವಾರ ಬೆಳಿಗ್ಗೆ 10:30 ರಿಂದ ರಾತ್ರಿ 10 ಗಂಟೆಯವರೆಗೆ ಎರಡು ದಿನಗಳ ಕಾಲ ಬೆಂಗಳೂರಿನ ಜಯನಗರದ 5ನೇ ಹಂತದಲ್ಲಿರುವ ಚಂದ್ರಗುಪ್ತ ಮೌರ್ಯ ಕ್ರೀಡಾಂಗಣದಲ್ಲಿ (ಶಾಲಿನಿ ಗ್ರೌಂಡ್) ನಡೆಯಲಿದೆ.

ಇದು ಕರ್ನಾಟಕ ಕರಾವಳಿ ಭಾಗದ ಸಂಸ್ಕೃತಿ, ಜನಪದ ಆಚರಣೆ, ಕ್ರೀಡೆ, ಜೀವನ ಶೈಲಿಯ ಶ್ರೀಮಂತಿಕೆ ಮತ್ತು ಕರಾವಳಿಯ ಖಾದ್ಯಗಳ ವೈವಿಧ್ಯತೆಯನ್ನು ಬೆಂಗಳೂರಿಗರಿಗೆ ಪರಿಚಯಿಸುವುದರ ಜೊತೆಗೆ ಇಲ್ಲಿ ನೆಲೆಸಿರುವ ಕರಾವಳಿಗರ ಅಪರೂಪದ ಸಮ್ಮಿಲನಕ್ಕೆ ವೇದಿಕೆ ಕಲ್ಪಿಸುವ ಉತ್ಸವವಾಗಿರುತ್ತದೆ.

ಕಾರ್ಯಕ್ರಮದ ಮಾಹಿತಿ - ಫೆಬ್ರವರಿ 13

ಶನಿವಾರ ಬೆಳಿಗ್ಗೆ 10:30ಕ್ಕೆ ನಮ್ಮೂರ ಹಬ್ಬ ಚಾಲನೆ ಪಡೆಯಲಿದ್ದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಪುಂಡಲಿಕ ಹಾಲಂಬಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಖ್ಯಾತ ಕ್ರೀಡಾಪಟುವಾದ ಪದ್ಮಶ್ರೀ ಹೆಚ್.ಎನ್. ಗಿರೀಶ್ ಕ್ರೀಡೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಆ ಸಂದರ್ಭದಲ್ಲಿ ನಮ್ಮೊಡನೆ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಸ್ಥಳೀಯ ಶಾಸಕರಾದ ಬಿ. ಏನ್. ವಿಜಯಕುಮಾರ್, ಬಿ.ಬಿ.ಎಂ.ಪಿ ಸದಸ್ಯರಾದ ಶ್ರೀಮತಿ ಮಾಲತಿ ಸೋಮಶೇಖರ್ ಹಾಗು ಇನ್ನಿತರರು ಉಪಸ್ಥಿತರಿರಲಿದ್ದಾರೆ.

ಸಂಜೆ ಗಣ್ಯರ ಸಮ್ಮುಖದಲ್ಲಿ ಅಭಿನಂದನ ಸಾಂಸ್ಕೃತಿಕ ಟ್ರಸ್ಟ್ ನ ಪ್ರತಿಷ್ಠಿತ ಈ ವರ್ಷದ "ಕಿರೀಟ" ಪ್ರಶಸ್ತಿಯನ್ನು ಸಂಘ ಸಂಸ್ಥೆಗಳ ವಿಭಾಗದಲ್ಲಿ ಹೋಟೆಲ್ ಉದ್ಯಮದವರ ಶ್ರೆಯೋಭಿವೃದ್ದಿಗಾಗಿ ಕಳೆದ ನಲವತ್ತೊಂಭತ್ತು ವರ್ಷಗಳಿಂದ ದುಡಿಯುತ್ತಿರುವ "ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್ ನಿಯಮಿತ"ಕ್ಕೆ ಅವರಿಗೆ ನೀಡಲಿದ್ದೇವೆ.

ಫೆಬ್ರವರಿ 13 ಸಭಾ ಕಾರ್ಯಕ್ರಮದಲ್ಲಿ

ಫೆಬ್ರವರಿ 13 ಸಭಾ ಕಾರ್ಯಕ್ರಮದಲ್ಲಿ

ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೇಂದ್ರ ಸಚಿವ ಅನಂತ್ ಕುಮಾರ್, ಸಚಿವಯು. ಟಿ. ಖಾದರ್, ಕೀರ್ತನಕಾರ ವಿದ್ವಾನ್ ವಿದ್ಯಾಭೂಷಣ ಮತ್ತು ಸ್ಥಳೀಯ ಶಾಸಕ ಬಿ. ಏನ್. ವಿಜಯಕುಮಾರ್

ಚಿತ್ರನಟ ಶಿವರಾಜ್ ಕುಮಾರ್ ಸಂಜೆಯ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಬರಲಿದ್ದಾರೆ. ಜೊತೆಗೆ ನೆಹರು ಬಾಲಭವನದ ಅದ್ಯಕ್ಷ ನಟಿ ಭಾವನ, ನಟಿ ಶುಭಾ ಪೂಂಜಾ, ಸಂಗೀತ ನಿರ್ದೇಶಕ ರವಿ ಬಸ್ರೂರು, ಓಗಾರ ಗ್ರೂಪ್'ನ ಮುಖ್ಯಸ್ಥರಾದ ಶ್ರೀ ರಘುನಾಥ್ ಹಾಗು ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಸಾಂಸ್ಕೃತಿಕ ಸಡಗರಗಳಿಗೆ ವೇದಿಕೆ

ಸಾಂಸ್ಕೃತಿಕ ಸಡಗರಗಳಿಗೆ ವೇದಿಕೆ

ಹುಲಿವೇಷ ತಂಡದಿಂದ ವಿಶೇಷ ಹುಲಿವೇಷ ಕುಣಿತ, ಕರಾವಳಿಯ ಜನಪದ ವಾದ್ಯಗಳ ಮಹಾಮೇಳ, ನಾಡಿನ ಜನಪ್ರಿಯ ಗಾಯಕರಾದ ಸುಪ್ರಿಯಾ ರಘುನಂದನ್ ಹಾಗು ವಿನಯ್ ನಾಡಿಗ್ ಅವರಿಂದ ಆಯ್ದ ಜನಪ್ರಿಯ ಭಾವಗೀತೆಗಳನ್ನು ಗಾಯನ, "ಕರಾವಳಿ ವೈಭವ" ಎನ್ನುವ ವಿಶೇಷ ನೃತ್ಯ ರೂಪಕ ಈ ಬಾರಿಯೂ ನಮ್ಮೂರ ಹಬ್ಬ ಹಲವು ಸಾಂಸ್ಕೃತಿಕ ಸಡಗರಗಳಿಗೆ ವೇದಿಕೆಯಾಗಲಿದೆ.

ಕರಾವಳಿ ಉಡುಗೆ ತೊಡುಗೆಗಳ ಫ್ಯಾಶನ್ ಶೋ

ಕರಾವಳಿ ಉಡುಗೆ ತೊಡುಗೆಗಳ ಫ್ಯಾಶನ್ ಶೋ

ಕರಾವಳಿ ಉಡುಗೆ ತೊಡುಗೆಗಳ ಫ್ಯಾಶನ್ ಶೋ, ಸತೀಶ್ ಪೈ ನೇತೃತ್ವದ "ರೂಪಕಲಾ ಕುಂದಾಪುರ" ತಂಡದಿಂದ "ಮೂರು ಮುತ್ತು" ನಾಟಕದ ಆಯ್ದ ದೃಶ್ಯಗಳ ಅಭಿನಯ ನೆರೆದವರನ್ನು ರಂಜಿಸಲಿವೆ.

ಮೂರು ವರ್ಷದ ಒಳಗಿನ ಮಕ್ಕಳಿಗಾಗಿ ಮುದ್ದು ರಾಧಾ-ಮುದ್ದು ಕೃಷ್ಣ ಸ್ಪರ್ಧೆ ಹಾಗು ಚಪ್ಪರ ಎನ್ನುವ ಎರಡನೇ ವೇದಿಕೆಯಲ್ಲಿ ಕರಾವಳಿ ಅಡುಗೆ ಪ್ರಾತ್ಯಕ್ಷಿಕೆ ಹಾಗು ವಿಚಾರ ವಿನಿಮಯಗಳು ನಡೆಯಲಿವೆ.

ಭಾನುವಾರ ಬೆಳಿಗ್ಗೆ ಹತ್ತರಿಂದ ಕ್ರೀಡಾಕೂಟ

ಭಾನುವಾರ ಬೆಳಿಗ್ಗೆ ಹತ್ತರಿಂದ ಕ್ರೀಡಾಕೂಟ

ಚಪ್ಪರ ಎನ್ನುವ ಎರಡನೇ ವೇದಿಕೆಯಲ್ಲಿ ಕರಾವಳಿ ಅಡುಗೆ ಪ್ರಾತ್ಯಕ್ಷಿಕೆ ಹಾಗು ವಿಚಾರ ವಿನಿಮಯಗಳು ನಡೆಯಲಿವೆ. ಭಾನುವಾರ ಬೆಳಿಗ್ಗೆ ಹತ್ತರಿಂದ ದಂಪತಿಗಳಿಗಾಗಿ ಪ್ರತ್ಯೇಕ ಕ್ರೀಡೆ, ವಯಸ್ಕರರಿಗಾಗಿ ಲಗೋರಿ, ಹಗ್ಗ ಜಗ್ಗಾಟ ಹಾಗು ಇತರೇ ಕರಾವಳಿಯ ಗ್ರಾಮೀಣ ಕ್ರೀಡೆಗಳು ಹಾಗು ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಇರಲಿದೆ. ಕಳೆದ ಬಾರಿಯ ನಮ್ಮೂರ ಹಬ್ಬಕ್ಕೆ ನಲವತ್ತು ಸಾವಿರಕ್ಕೂ ಅಧಿಕ ಮಂದಿ ಆಗಮಿಸಿದ್ದರು, ಈ ಬಾರಿ ಎಪ್ಪತ್ತು ಸಾವಿರದಷ್ಟು ಜನರ ನೀರಿಕ್ಷೆಯಲ್ಲಿದೆ.

ಸ್ಥಳದಲ್ಲೇ ತಯಾರಿಸುವ ತಿಂಡಿ ತಿನಿಸುಗಳು

ಸ್ಥಳದಲ್ಲೇ ತಯಾರಿಸುವ ತಿಂಡಿ ತಿನಿಸುಗಳು

ನೀರು ದೋಸೆ, ಹಾಲುಬಾಯಿ, ಕಾಯಿ ಕಡುಬು, ಗೋಲಿಬಜೆ, ಪತ್ರೊಡೆ, ಉದ್ದಿನ ದೋಸೆ, ಕಡಲ ಏಡಿಯ ಸುಕ್ಕ, ಕೋರಿ ರೊಟ್ಟಿ, ಮೀನು ಹಾಗು ಸಿಗಡಿ ಬಳಸಿ ತಯಾರಿಸಿದ ಅಪರೂಪದ ಖಾದ್ಯಗಳು ಹಾಗು ಕರಾವಳಿಯಿಂದ ತಂದ ತಾಜಾ ತರಕಾರಿಗಳ ಮಾರಾಟದ ಜೊತೆಗೆ ಇನ್ನಿತರ ವಿಶೇಷ ವಸ್ತುಗಳಾದ ಓಲೆ ಬೆಲ್ಲ, ಮಂಡೆ ಹಾಳೆ, ಓಲೆ ಹಾಗು ಕಡ್ಡಿ ಚಾಪೆ ಹಾಗು ಕರಾವಳಿಯ ವಿಶೇಷ ತಿಂಡಿ ತಿನಿಸುಗಳು

ಕಾರ್ಯಕ್ರಮದ ಮಾಹಿತಿ - ಫೆಬ್ರವರಿ 14

ಕಾರ್ಯಕ್ರಮದ ಮಾಹಿತಿ - ಫೆಬ್ರವರಿ 14

ಬೆಳಿಗ್ಗೆ ಹತ್ತರಿಂದ ಕರಾವಳಿಯ ಜನಪದ ವಾದ್ಯ ಹಾಗು ಹುಲಿವೇಷದ ಕುಣಿತದೊಂದಿಗೆ ಕರಾವಳಿಯ ಗ್ರಾಮೀಣ ಕ್ರೀಡೆಗಳ ಸ್ಪರ್ಧೆ ನಡೆಯಲಿದೆ. ಆ ಸಂದರ್ಭದಲ್ಲಿ ವೇದಿಕೆಯ ಮೇಲೆ ಕೇಂದ್ರ ಸಚಿವರಾದ ಸದಾನಂದ ಗೌಡ, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಡಾ| ಹರೀಶ್ ಹಂದೆ ಸ್ಥಳೀಯ ಶಾಸಕ ಬಿ. ಎನ್. ವಿಜಯಕುಮಾರ್ ಹಾಗು ಇನ್ನಿತರರು ಉಪಸ್ಥಿತರಿರಲಿದ್ದಾರೆ.ಸಂಜೆಯ ಮನರಂಜನೆಯ ಕಾರ್ಯಕ್ರಮದಲ್ಲಿ ಹೆಸರಾಂತ ಗಾಯಕರಾದ ಅಜಯ್ ವಾರಿಯರ್, ಚೈತ್ರಾ, ದೀಪಕ್ ದೊಡ್ಡೇರ, ಗಗನ್ ಗಾಂವ್ಕರ್, ಅಭಿನವ್ ಭಟ್ ಹಾಗು ಸಾನ್ವಿ ಶೆಟ್ಟಿ ಆಯ್ದ ಸಿನೆಮಾ ಹಾಡುಗಳನ್ನು ಹಾಡುವುದರ ಮೂಲಕ ರಂಜಿಸಲಿದ್ದಾರೆ.

ಕರಾವಳಿಯ ಸಾಂಸ್ಕೃತಿಕ ಸಿರಿ

ಕರಾವಳಿಯ ಸಾಂಸ್ಕೃತಿಕ ಸಿರಿ

"ಅಗ್ನಿ ಫ್ಯೂಷನ್ ಬ್ಯಾಂಡ್" ತಂಡದಿಂದ ಪಾಶ್ಚಾತ್ಯ ಮತ್ತು ಕರಾವಳಿ ವಾದ್ಯಗಳ ವಿಭಿನ್ನ ಜುಗಲ್'ಬಂದಿ, ಕರಾವಳಿಯ ಸಾಂಸ್ಕೃತಿಕ ಸಿರಿಯ ದೊಂದಿ ಬೆಳಕಿನ ಮೆರವಣಿಗೆ, ಅಂತರರಾಷ್ಟ್ರೀಯ ಚಿತ್ರಕಲಾವಿದರಾದ ವಿಲಾಸ್ ನಾಯಕ್ ಅವರಿಂದ ಪ್ರದರ್ಶನ, ಯಕ್ಷಗಾನದ ವಿಭಿನ್ನ ವೇಷಗಳ ಯಕ್ಷ ವೈಭವ, ಹಾಗು ಇನ್ನಿತರ ಮನರಂಜನೀಯ ಕಾರ್ಯಕ್ರಮಗಳು ಈ ಬಾರಿಯ ನಮ್ಮೂರ ಹಬ್ಬವನ್ನು ಅವಿಸ್ಮರಣೀಯಗೊಳಿಸಲಿವೆ.

English summary
Abhinandana Cultural Trust organized Nammura Habba 2016 eventon February 13 and 14. Nammura Habba is a event which brings together Karavali flock residing in Bengaluru. Habba will be held at Chandragupta Maurya Ground Jayanagar 5th block, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X