ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ ಕಾಮಗಾರಿ: 1342 ಮರಗಳನ್ನು ಕತ್ತರಿಸಲು ಹೈಕೋರ್ಟ್ ಗ್ರೀನ್ ಸಿಗ್ನಲ್

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು, ಏ.20: ಬೆಂಗಳೂರು ಮೆಟ್ರೊ ರೈಲು ಮಾರ್ಗದ ಕಾಮಗಾರಿ ನಡೆಸಲು ಒಟ್ಟು 1,342 ಮರಗಳನ್ನು ಕಡಿಯಲು ಹೈಕೋರ್ಟ್ ಬುಧವಾರ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತಕ್ಕೆ ಹಸಿರು ನಿಶಾನೆ ತೋರಿದೆ.

ಈ ಮರಗಳು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಎರಡನೇ ಹಂತದ ಕಸ್ತೂರಿ ನಗರ ಮತ್ತು ಕೆಂಪಾಪುರ ಹೊರವರ್ತುಲ ರಸ್ತೆ ಹಾಗೂ ವೆಲ್ಲಾರ ಜಂಕ್ಷನ್ನಿಂದ ರಾಷ್ಟ್ರೀಯ ಮಿಲಿಟರಿ ಶಾಲೆಯ ನಡುವಿನ ಮೆಟ್ರೋ ಮಾರ್ಗದಲ್ಲಿ ಬರುತ್ತವೆ.

ಬೆಂಗಳೂರು ಪರಿಸರ ಟ್ರಸ್ಟ್ ಮತ್ತು ಪರಿಸರವಾದಿ ಟಿ ದತ್ತಾತ್ರೇಯ ದೇವರೆ ಮರಗಳನ್ನು ಕಡಿಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು.

ಎಲ್ಲೆಲ್ಲಿ ಮರಗಳಿಗೆ ಕತ್ತರಿ?: ಸಾಕಷ್ಟು ವಾದ- ಪ್ರತಿವಾದದ ಬಳಿಕ ನ್ಯಾಯಪೀಠ, ಕಸ್ತೂರಿ ನಗರ ಮತ್ತು ಕೆಂಪಾಪುರ ಹೊರವರ್ತುಲ ರಸ್ತೆ ನಡುವೆ ಎರಡನೇ ಹಂತದ ನಮ್ಮ ಮೆಟ್ರೊ ಕಾಮಗಾರಿಗೆ 1,334 ಮರ ಕಡಿಯಲು, 163 ಸ್ಥಳಾಂತರಿಸಲು, 26 ಮರ ಉಳಿಸಿಕೊಳ್ಳಲು ಒಪ್ಪಿಗೆ ನೀಡಿತು.

Namma Metro work: Karnataka HC permitted BMRCL to cut 1342 trees to under take work

ಅಲ್ಲದೆ, ವೆಲ್ಲಾರ ಜಂಕ್ಷನ್ ನಿಂದ ರಾಷ್ಟ್ರೀಯ ಮಿಲಿಟರಿ ಶಾಲೆಯ ನಡುವಿನ ಅಂಡರ್ ಗ್ರೌಂಡ್ ಮೆಟ್ರೊ ರೈಲು ಕಾಮಗಾರಿಗೆ 8 ಮರ ಕಡಿಯಲು, 2 ಮರ ಹಾಗೆ ಉಳಿಸಿಕೊಳ್ಳಲು ಸಮ್ಮಿತಿ ಸೂಚಿಸಿತು. ಒಟ್ಟಾರೆ 1,342 ಮರ ಕಡಿಯಲು, 163 ಮರಗಳ ಸ್ಥಳಾಂತರ ಮತ್ತು 28 ಮರ ಹಾಗೆ ಉಳಿಸಿಕೊಳ್ಳಲು ಬೆಂಗಳೂರು ಮೆಟ್ರೊ ರೈಲು ನಿಗಮವು ಸಲ್ಲಿಸಿದ್ದ ಎರಡು ಮಧ್ಯಂತರ ಅರ್ಜಿಗಳನ್ನು ನ್ಯಾಯಾಲಯ ಮಾನ್ಯ ಮಾಡಿತು.

ನ್ಯಾಯಪೀಠ ವಿಚಾರಣೆ ವೇಳೆ "ಮೆಟ್ರೊ ಮಾರ್ಗದ ಕಾಮಗಾರಿ ನಡೆಸಲು ಎರಡು ಮಧ್ಯಂತರ ಅರ್ಜಿ ಸಲ್ಲಿಸಿದ್ದೀರಿ. ಹಿಂದೆ ಮರ ಕಡಿಯಲು ನೀಡಲಾಗಿತ್ತು, ಅಲ್ಲಿ ಕಾಮಗಾರಿ ನಡೆದಿದೆಯೇ?" ಎಂದು ಪ್ರಶ್ನಿಸಿತು. ನಿಗಮದ ಪರ ವಕೀಲರು ಕಾಮಗಾರಿ ನಿರಂತರವಾಗಿ ನಡೆಯುತ್ತಿದೆ ಎಂದರು.

ವಕೀಲರ ಆಕ್ಷೇಪ: ಈ ಮಧ್ಯೆ ಅರ್ಜಿದಾರರ ಪರ ವಕೀಲರು, ಮರಗಳನ್ನು ಕಡಿಯಲು ಅಧಿಕೃತ ಒಪ್ಪಿಗೆ ನೀಡಿರುವ ಅಧಿಕಾರಿಯು ಮರಗಳ ಸಮಿತಿಯಲ್ಲೂ ಸ್ಥಾನ ಪಡೆದಿದ್ದಾರೆ. ಮರಗಳ ಅಧಿಕಾರಿಯು ತಜ್ಞರ ಸಮಿತಿಯ ಭಾಗವಾಗಿರಬಾರದು. ಆದ್ದರಿಂದ, ಅಧಿಕಾರಿ ಭಾಗವಾಗಿರುವ ಮರ ತಜ್ಞರ ಸಮಿತಿ ಹಾಗೂ ಮರ ಅಧಿಕಾರಿ ನೀಡುವ ಅಧಿಕೃತ ಒಪ್ಪಿಗೆಯನ್ನು ಆಧರಿಸಿ ಮರ ತೆರವು ಅಥವಾ ಸ್ಥಳಾಂತರ ಮಾಡಲು ಅನುಮತಿ ಕೋರಬಾರದು ಎಂದು ಆಕ್ಷೇಪ ಎತ್ತಿದರು.

Recommended Video

ಚಹಲ್, ಕುಲದೀಪ್ ಫುಲ್ ಮಿಂಚಿಂಗ್...ಅಶ್ವಿನ್ ಕೆರಿಯರ್ ಖತಂ | Oneindia Kannada
Karnataka HC

ಬಿಎಂಆರ್ ಸಿಎಲ್ ಪರ ವಕೀಲರು ಆ ಆಕ್ಷೇಪವನ್ನು ಬಲವಾಗಿ ತಳ್ಳಿಹಾಕಿದರು. ಬಿಬಿಎಂಪಿಯ ಮರ ಅಧಿಕಾರಿಯಲ್ಲದೇ ಇತರೆ ಸದಸ್ಯರು ಮರ ತಜ್ಞರ ಸಮಿತಿಯಲ್ಲಿದ್ದಾರೆ. ಸದಸ್ಯ ಕಾರ್ಯದರ್ಶಿಯಾಗಿ ಮರಗಳ ಅಧಿಕಾರಿ ಸಮಿತಿಯಲ್ಲಿದ್ದಾರೆ ಎಂಬ ಅರ್ಜಿದಾರರ ವಾದವನ್ನು ಒಪ್ಪಲಾಗದು. ಸಮಿತಿಯ ಎಲ್ಲಾ ಸದಸ್ಯರೂ ಸರ್ವಸಮ್ಮತದಿಂದ ತೀರ್ಮಾನ ಕೈಗೊಂಡಿರುವುದು ಮತ್ತು ಅಧಿಕೃತ ಒಪ್ಪಂದವನ್ನು ತಿರಸ್ಕರಿಸಲಾಗದು ಎಂದರು.

ಅಲ್ಲದೆ, 2022ರ ಮಾ.8ರ ಮರ ತಜ್ಞರ ಸಮಿತಿಯ ವರದಿ ಆಧರಿಸಿ ಕಸೂರಿ ನಗರ ಮತ್ತು ಕೆಂಪಾಪುರದ ಹೊರವರ್ತುಲ ರಸ್ತೆಯಲ್ಲಿನ ಮೆಟ್ರೊ ಮಾರ್ಗದಲ್ಲಿ ಬರುವ ಮರಗಳ ಸ್ಥಳಾಂತರ ಮತ್ತು ತೆರವಿಗೆ ಸಂಬಂಧಿಸಿದಂತೆ 2022ರ ಮಾ. 10ರಂದು ಮರಗಳ ಅಧಿಕಾರಿ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಗಳ ಸ್ಥಳಾಂತರಕ್ಕೆ ಅನುಮತಿಸಿದ್ದಾರೆ ಎಂದು ಹೇಳಿದರು.

English summary
The Bengaluru Metro Rail Corporation Limited(BMRCL) was permitted to cut 1342 trees to continue construction of the Namma Metro Rail Project which connects KIAL.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X