ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೆ.7ರಿಂದ ಮೆಟ್ರೋ; 3 ಗಂಟೆ ಮಾತ್ರ ರೈಲು ಸಂಚಾರ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 02: ಅನ್ ಲಾಕ್ 4.0 ಮಾರ್ಗಸೂಚಿಯಲ್ಲಿ ನಮ್ಮ ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಸೆಪ್ಟೆಂಬರ್ 7ರಿಂದ ನಮ್ಮ ಮೆಟ್ರೋ ಸಂಚಾರ ಆರಂಭವಾಗಲಿದೆ. ಬೆಳಗ್ಗೆ ಮತ್ತು ಸಂಜೆ 3 ಗಂಟೆಗಳು ಮಾತ್ರ ರೈಲು ಸಂಚಾರ ನಡೆಸಲಿದೆ.

Recommended Video

Namma Metro ಸಾಮಾಜಿಕ ಅಂತರ ಕಾಯ್ದುಕೊಳ್ಳದ ನಿಲ್ದಾಣಗಳಲ್ಲಿ ನಿಲ್ಲಲ್ಲ | Oneindia Kannada

ನಮ್ಮ ಮೆಟ್ರೋ ರೈಲು ಸಂಚಾರಕ್ಕೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ. ಮೆಟ್ರೋ ಪ್ರಯಾಣದ ವೇಳೆ ಜನರು ಪಾಲನೆ ಮಾಡಬೇಕಾದ ನಿಯಮಗಳ ಮಾರ್ಗಸೂಚಿ ಗುರುವಾರ ಪ್ರಕಟವಾಗಲಿದೆ.

ಮೆಟ್ರೋ ಸಂಚಾರ; ಬರಲಿದೆ ಪ್ರತ್ಯೇಕ ಮಾರ್ಗಸೂಚಿ ಮೆಟ್ರೋ ಸಂಚಾರ; ಬರಲಿದೆ ಪ್ರತ್ಯೇಕ ಮಾರ್ಗಸೂಚಿ

ಸೆಪ್ಟೆಂಬರ್ 7ರಂದು ಪೂರ್ವ-ಪಶ್ಚಿಮ ಕಾರಿಡಾರ್‌ನ ಮೈಸೂರು ರಸ್ತೆ-ಬೈಯಪ್ಪನಹಳ್ಳಿ ಮಾರ್ಗದಲ್ಲಿ ಮಾತ್ರ ಮೆಟ್ರೋ ರೈಲು ಸಂಚಾರ ನಡೆಸಲಿದೆ. ಬೆಳಗ್ಗೆ 3 ಗಂಟೆ ಮತ್ತು ಸಂಜೆ 3 ಗಂಟೆಗಳ ಕಾಲ ಮಾತ್ರ ಮೆಟ್ರೋ ಓಡಲಿದೆ.

ಮಹಾರಾಷ್ಟ್ರ ಅನ್ ಲಾಕ್ ಮಾರ್ಗಸೂಚಿ; ಮೆಟ್ರೋ ಸಂಚಾರವಿಲ್ಲ ಮಹಾರಾಷ್ಟ್ರ ಅನ್ ಲಾಕ್ ಮಾರ್ಗಸೂಚಿ; ಮೆಟ್ರೋ ಸಂಚಾರವಿಲ್ಲ

ಮಾರ್ಚ್‌ನಲ್ಲಿ ಲಾಕ್‌ ಡೌನ್ ಘೋಷಣೆಯಾದ ಬಳಿಕ ನಮ್ಮ ಮೆಟ್ರೋ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಈಗ ಕೇಂದ್ರ ಗೃಹ ಇಲಾಖೆ ಒಪ್ಪಿಗೆ ನೀಡಿದ ಬಳಿಕ ಮೆಟ್ರೋ ಸಂಚಾರ ಆರಂಭವಾಗುತ್ತಿದೆ.

ಅನ್‌ಲಾಕ್‌ 4: ಸೆಪ್ಟೆಂಬರ್ 7 ರಿಂದ ಮೆಟ್ರೋ ರೈಲು ಸಂಚಾರಕ್ಕೆ ಕೇಂದ್ರ ಅನುಮತಿಅನ್‌ಲಾಕ್‌ 4: ಸೆಪ್ಟೆಂಬರ್ 7 ರಿಂದ ಮೆಟ್ರೋ ರೈಲು ಸಂಚಾರಕ್ಕೆ ಕೇಂದ್ರ ಅನುಮತಿ

ರೈಲು ಸಂಚಾರದ ಅವಧಿ

ರೈಲು ಸಂಚಾರದ ಅವಧಿ

ಬಿಎಂಆರ್‌ಸಿಎಲ್ ಅಧಿಕಾರಿಗಳ ಮಾಹಿತಿ ಪ್ರಕಾರ ಸೆಪ್ಟೆಂಬರ್ 7ರಿಂದ ಮೈಸೂರು ರಸ್ತೆ-ಬೈಯಪ್ಪನಹಳ್ಳಿ ಮಾರ್ಗದಲ್ಲಿ ಬೆಳಗ್ಗೆ 8ರಿಂದ 11, ಸಂಜೆ 4.30ರಿಂದ 7.30ರ ತನಕ ಮಾತ್ರ ರೈಲು ಸಂಚಾರ ನಡೆಸಲಿದೆ.

ಸೆಪ್ಟೆಂಬರ್ 9ರಿಂದ ಸಂಚಾರ

ಸೆಪ್ಟೆಂಬರ್ 9ರಿಂದ ಸಂಚಾರ

ನಾಗಸಂದ್ರ-ಯೆಲಚೇನಹಳ್ಳಿ ನಡುವಿನ ಹಸಿರು ಮಾರ್ಗದಲ್ಲಿ ಸೆಪ್ಟೆಂಬರ್ 9ರಿಂದ ರೈಲುಗಳು ಸಂಚಾರ ನಡೆಸಲಿವೆ. ಈ ಮಾರ್ಗದಲ್ಲಿ ಸಹ ಬೆಳಗ್ಗೆ 8ರಿಂದ 11, ಸಂಜೆ 4.30ರಿಂದ 7.30ರ ತನಕ ಮಾತ್ರ ರೈಲು ಓಡಲಿದೆ.

ಸೆ.11ರಿಂದ ಸಾಮಾನ್ಯ ಸೇವೆ

ಸೆ.11ರಿಂದ ಸಾಮಾನ್ಯ ಸೇವೆ

ಸೆಪ್ಟೆಂಬರ್ 11ರಿಂದ ನಮ್ಮ ಮೆಟ್ರೋ ಸೇವೆ ಸಾಮಾನ್ಯವಾಗಿರಲಿದೆ. ಬೆಳಗ್ಗೆ 7 ಗಂಟೆಯಿಂದ ರಾತ್ರಿ 9ರ ತನಕ ರೈಲು ಓಡಲಿದೆ. ಪೀಕ್ ಅವರ್‌ನಲ್ಲಿ 5 ನಿಮಿಷಕ್ಕೊಂದು, ಉಳಿದ ಸಮಯದಲ್ಲಿ 10 ನಿಮಿಷಕ್ಕೊಂದು ರೈಲು ಸಂಚಾರ ನಡೆಸಲಿದೆ.

ಟೋಕನ್ ಇರುವುದಿಲ್ಲ

ಟೋಕನ್ ಇರುವುದಿಲ್ಲ

ಪ್ರತಿ ನಿಲ್ದಾಣದಲ್ಲಿ ಒಂದು ಅಥವ ಎರಡು ದ್ವಾರಗಳನ್ನು ಮಾತ್ರ ತೆರೆಯಲಾಗುತ್ತದೆ. ಟೋಕನ್ ನೀಡುವ ವ್ಯವಸ್ಥೆ ಇರುವುದಿಲ್ಲ. ಸ್ಮಾರ್ಟ್‌ ಕಾರ್ಡ್‌ ಹೊಂದಿರುವ ಪ್ರಯಾಣಿಕರು ಮಾತ್ರ ಸಂಚಾರ ನಡೆಸಬಹುದಾಗಿದೆ.

English summary
In Bengaluru city Namma Metro rail will resume operations from September 7, 2020. Trains will run only on the purple line between for three hours morning and evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X