ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋಗೆ ಬಂದಿದ್ದ ಅನುಮಾನಾಸ್ಪದ ವ್ಯಕ್ತಿ ಶಹನಾಯಿ ವಾದಕ

|
Google Oneindia Kannada News

ಬೆಂಗಳೂರು, ಮೇ 15: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಬಂದು ಅನುಮಾನ ಸೃಷ್ಟಿಸಿ ವಾಪಸ್ ಹೋಗಿದ್ದ ಅಪರಿಚಿತ ವ್ಯಕ್ತಿ ಬಗ್ಗೆ ಕೆಲವು ಅಚ್ಚರಿಯ ಸಂಗತಿಗಳು ಲಭ್ಯವಾಗಿವೆ.

ಆತ ಯಾವುದೇ ಉಗ್ರನಲ್ಲ ಬದಲಾಗಿ ತನ್ನ ಊರಿನಲ್ಲಿ ಶಹನಾಯಿ ವಾದಕನಾಗಿ ಗುರುತಿಸಿಕೊಂಡಿದ್ದಾರೆ. ಆತನ ಮೂಲತಹ ರಾಜಸ್ಥಾನದವನಾಗಿದ್ದು ಅಲ್ಲಿ ಜೀವನೋಪಾಯಕ್ಕಾಗಿ ಶಹನಾಯಿ ನುಡಿಸುತ್ತಿದ್ದ.

ಮೇ. 6ರಂದು ಸಂಜೆ ಮೆಟ್ರೋ ನಿಲ್ದಾಣದಲ್ಲಿ ಮೆಟಲ್ ಡಿಟೆಕ್ಟರ್ ತಪಾಸಣೆ ಬಳಿಕ ಅನುಮಾನ ಉಂಟಾಗಿ ಸೆಕ್ಯುರಿಟಿ ಗಾರ್ಡ್ ಪ್ರಶ್ನೆ ಮಾಡಿದಾಗ ವಾಪಸ್ ಹೋಗಿದ್ದ ಸಾಜೀದ್ ಖಾನ್‌ನನ್ನು ಮೇ 11ರಂದು ಕಾಟನ್‌ಪೇಟೆ ಮುಖ್ಯರಸ್ತೆಯ ಲಾಡ್ಜ್‌ನಲ್ಲಿ ಪತ್ತೆ ಮಾಡಲಾಗಿತ್ತು.

Namma metro suspicious man was Shahanayi player
ಆತ ಪತ್ನಿ ಹಾಗೂ ಮಕ್ಕಳೊಂದಿಗೆ ಲಾಡ್ಜ್‌ನಲ್ಲಿ ನೆಲೆಸಿದ್ದ, ಕೊಠಡಿಯಲ್ಲಿ ಯಾವುದೇ ಸಂಶಯಾಸ್ಪದ ವಸ್ತುಗಳ ಕೂಡ ಸಿಕ್ಕಿರಲಿಲ್ಲ.

ನಮ್ಮ ಮೆಟ್ರೋ ನಿಲ್ದಾಣದ ಕಿಟಕಿಯಿಂದ ಕೆಳಗೆ ಜಿಗಿದ ವ್ಯಕ್ತಿನಮ್ಮ ಮೆಟ್ರೋ ನಿಲ್ದಾಣದ ಕಿಟಕಿಯಿಂದ ಕೆಳಗೆ ಜಿಗಿದ ವ್ಯಕ್ತಿ

ಆದರೂ ಮುಂಜಾಗ್ರತಾ ಕ್ರಮವಾಗಿ ಎಸಿಪಿ ಮತ್ತು ಓರ್ವ ಇನ್‌ಸ್ಪೆಕ್ಟರ್ ತಂಡ ಆತನ ಊರಾದ ರಾಜಸ್ಥಾನಕ್ಕೆ ತೆರಳಿತ್ತು.ಆತ ಜುನ್‌ಜುನ್ ಜಿಲ್ಲೆಯವನು ಎಂದು ತಿಳಿದು ಅಲ್ಲಿ ಹೋಗಿ ಪರಿಶೀಲನೆ ನಡೆಸಿದಾಗ ಆತ ಒಬ್ಬ ಶಹನಾಯಿ ವಾದಕ ಎಂಬುದು ತಿಳಿದುಬಂದಿದೆ.

ರಾಜಸ್ಥಾನದ ಜುನ್‌ಜುನ್ ಜಿಲ್ಲೆಯ ಸಜೀದ್ ಖಾನ್ ಎಂಬಾತನೇ ಈ ವ್ಯಕ್ತಿ. ರಂಜಾನ್ ಹಿನ್ನೆಲೆಯಲ್ಲಿ ದಾನ(ಝಕಾತ್) ಪಡೆಯಲು ಬಂದಿರುವ ಈತ ಕಾಟನ್‌ಪೇಟೆಯ ತವಕ್ಕಲ್ ಮಸ್ತಾನ್ ದರ್ಗಾ ಸಮೀಪದ ಲಾಡ್ಜ್ ಒಂದರಲ್ಲಿ ಉಳಿದುಕೊಂಡಿದ್ದ. ಹೆಂಡತಿ, ಮಕ್ಕಳ ವಿಚಾರಣೆ ನಡೆಸಲಾಗಿದೆ.ಮೆಟ್ರೋ ನಿಲ್ದಾಣಕ್ಕೆ ಬಂದಿದ್ದ ಅಪರಿಚಿತ ಇದ್ದ ಹೋಟೆಲ್‌ನ ಬಾಡಿಗೆ ಎಷ್ಟು?

ಸಾಜಿದ್ ಕಾಟನ್ ಪೇಟೆ ಮುಖ್ಯರಸ್ತೆಯಲಲ್ಇರುವ ಸಿಬಿ ಡಿಲಕ್ಸ್ ಲಾಡ್ಜ್ ನಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳ ಜೊತೆ ಉಳಿದುಕೊಂಡಿದ್ದ, ಅಂದು ಆತನ ಬಳಿ ಸುಮಾರು 5-6 ಸಾವಿರ ರೂ ಹಣ ಸಿಕ್ಕಿದೆ. ಅದರಲ್ಲಿ ಬಹುತೇಕ 5 ರೂ ಮತ್ತು 10 ರೂ ನಾಣ್ಯಗಳಾಗಿದ್ದವು.

ಸಿಬಿ ಡಿಲಕ್ಸ್ ಲಾಡ್ಜ್‌ನಲ್ಲಿ ರೂಮ್‌ಗಳ ಬಾಡಿಗೆ ಜತೆಗೆ ಡಾರ್ಮೆಟರಿಯೂ ಇದೆ. ಇಲ್ಲಿ ದಿನಕ್ಕೆ ಒಬ್ಬರಿಗೆ 50-100 ರೂ ಬಾಡಿಗೆಗೆ ಡಾರ್ಮೆಟರಿ ಸಿಗುತ್ತದೆ. ಆತನ ಡಾರ್ಮೆಟರಿಯಲ್ಲೇ ಕುಟುಂಬದವರ ಜೊತೆ ಉಳಿದುಕೊಳ್ಳುತ್ತಿದ್ದ, ಆತ ದಿನಕ್ಕೆ 100 ರೂ ಬಾಡಿಗೆ ಕಟ್ಟುತ್ತಿದ್ದ ಎಂದು ತಿಳಿದುಬಂದಿದೆ.

English summary
Bengaluru police investigation confirms that Namma metro suspicious man was Shahanai player in Rajasthan village.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X