ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ ಬಂದ್, ಆಟೋ, ಕ್ಯಾಬ್ ಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

|
Google Oneindia Kannada News

ಬೆಂಗಳೂರು, ಜುಲೈ 07 : ಗಂಡ-ಹೆಂಡರ ಜಗಳದ ಮಧ್ಯೆ ಕೂಸು ಬಡವಾಯ್ತು ಎನ್ನುವಂತೆ, ನಮ್ಮ ಮೆಟ್ರೋ ಸಿಬ್ಬಂದಿ ಹಾಗೂ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಸಿಬ್ಬಂದಿಯ ನಡುವೆ ಗುದ್ದಾಟ ಮೆಟ್ರೋ ಪ್ರಯಾಣಿಕರಿಗೆ ತೊಂದರೆ ಉಂಟುಮಾಡಿದೆ.

ಏಕಾಏಕಿ 'ನಮ್ಮ ಮೆಟ್ರೋ' ಬಂದ್ ನಡೆಯುತ್ತಿರುವುದೇಕೆ?ಏಕಾಏಕಿ 'ನಮ್ಮ ಮೆಟ್ರೋ' ಬಂದ್ ನಡೆಯುತ್ತಿರುವುದೇಕೆ?

ಇಂದು ಬೆಳಗ್ಗೆ ಮೆಟ್ರೋ ಇಲ್ಲ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಅಲ್ಲಲ್ಲಿ ಇದ್ದ ಆಟೋಗಳು ಮೆಟ್ರೋ ನಿಲ್ದಾಣಗಳ ಮುಂದೆ ಹಾಜರ್ ಆಗಿವೆ. ಆಟೋ ಡ್ರೈವರ್ ಗಳು ಇದೆ ಒಳ್ಳೇ ಸಮಯ ಅಂತ ಬಾಯಿಗೆ ಬಂದ ರೇಟ್..ಇಲ್ಲಾoದ್ರೆ ಮೀಟರ್ ಮೇಲೆ ಅಸ್ಟು ಕೊಡಿ, ಇಷ್ಟು ಕೊಡಿ ಅಂತ ಡಿಮ್ಯಾಂಡ್ ಮಾಡುತ್ತಿದ್ದಾರೆ.

'ನಮ್ಮ ಮೆಟ್ರೋ' ಬಂದ್: ಲಕ್ಷಾಂತರ ಪ್ರಯಾಣಿಕರ ಗೋಳು ಕೇಳೋರ್ಯಾರು?!'ನಮ್ಮ ಮೆಟ್ರೋ' ಬಂದ್: ಲಕ್ಷಾಂತರ ಪ್ರಯಾಣಿಕರ ಗೋಳು ಕೇಳೋರ್ಯಾರು?!

ಆಟೋ, ಬಸ್ ಹಾಗೂ ಬೈಕ್ ನಿಂದ ಹತ್ತಿರದ ಮೆಟ್ರೋ ನಿಲ್ದಾಣದವರೆಗೆ ಡ್ರಾಪ್ ತೆಗೆದುಕೊಂಡು ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದವರು ಇಂದು (ಶುಕ್ರವಾರ) ನಿರಾಸೆಗೊಳಗಾದ ದೃಶ್ಯ ಸಾಮಾನ್ಯವಾಗಿತ್ತು. ಮೆಟ್ರೋ ಮುಖ ಸಿಂಡಿರಿಸಿಕೊಂಡು ಅನಿವಾರ್ಯದಿಂದ ಮೆಟ್ರೋ ನಿಲ್ದಾಣದಿಂದ ಕ್ಯಾಬ್ ಹಾಗೂ ಆಟೋ ಹಿಡಿದು ತಮ್ಮ ಕೆಲಸಕ್ಕೆ ಹೊರಟರು.

ದಿಢೀರ್ ಮೆಟ್ರೋ ನಿಲ್ಲಿಸುವುದು ಎಷ್ಟು ಸರಿ?

ದಿಢೀರ್ ಮೆಟ್ರೋ ನಿಲ್ಲಿಸುವುದು ಎಷ್ಟು ಸರಿ?

ತಮ್ಮ-ತಮ್ಮ ನಡುವಿನ ಜಗಳಕ್ಕೆ ದಿಢೀರನೇ ಮೆಟ್ರೋ ಸ್ಥಗಿತಗೊಳಿಸಿದರೆ ಹೇಗೆ?, ತಮಗೆ ತಿಳಿದಂಗೆ ಮಾಡೋಕೆ ಮೆಟ್ರೋ ಏನ್ ಅವರ ಸ್ವಂತ ಆಸ್ತಿ ನಾ..ಪ್ರತಿಭಟನೆ ಮಾಡೋದಾದ್ರೆ ಒಂದ್ ದಿನ ಮೊದಲೇ ಸಾರ್ವಜನಿಕರಿಗೆ ತಿಳಿಸಬೇಕು, ನಾವು ಬೇರೆ ದಾರಿ ನೋಡ್ಳೋತಿರಲಿಲ್ಲವೇ ಎಂದು ಮೆಟ್ರೋ ಪ್ರಯಾಣಿಕರು ಮೆಟ್ರೋ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮೆಟ್ರೋ ಸ್ಥಗಿತದ ಬಗ್ಗೆ ಸಿಬ್ಬಂದಿಗೆ ಗೊತ್ತಿಲ್ಲ

ಮೆಟ್ರೋ ಸ್ಥಗಿತದ ಬಗ್ಗೆ ಸಿಬ್ಬಂದಿಗೆ ಗೊತ್ತಿಲ್ಲ

ಬೆಂಗಳೂರಿನಾದ್ಯಂತ ನಮ್ಮ ಮೆಟ್ರೋ ಶುಕ್ರವಾರ ದಿಢೀರನೇ ಸ್ಥಗಿತಗೊಳಿಸಿರುವ ಬಗ್ಗೆ ಸ್ವತಃ ಮೆಟ್ರೋ ಸಿಬ್ಬಂದಿಗಳಿಗಾಗಲಿ, ಸೆಕ್ಯೂರಿಟಿ ಗರ್ಡ್ ಗಳಿಗಾಲಿ ಗೊತ್ತಿಲ್ಲ. ಬಂದ ಪ್ರಯಾಣಿಕರಿಗೆ ಮೆಟ್ರೋ ಇಲ್ಲ ಸಾರ್ ಏನೋ ಟೆಕ್ನಿಕಲ್ ಪ್ರಾಬ್ಲಮ್ ಇದೆ ಎಂದು ಸಮಾಜಾಯಿಸಿ ಹೇಳಿ ಕಳುಹಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

 ನಗರದಾದ್ಯಂತ ಫುಲ್ ಟ್ರಾಫಿಕ್ ಜಾಮ್

ನಗರದಾದ್ಯಂತ ಫುಲ್ ಟ್ರಾಫಿಕ್ ಜಾಮ್

ಪ್ರತಿ ದಿನ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಲಕ್ಷಾಂತರ ಜನರು ಶುಕ್ರವಾರ ದಿಢೀರನೆ ಮೆಟ್ರೋ ಸ್ಥಗಿತವಾಗಿದ್ದರಿಂದ ಜನರು ಬಸ್, ಆಟೋ, ಕ್ಯಾಬ್, ಕಾರ್, ಬೈಕ್ ಮೂಲಕ ತಮ್ಮ-ತಮ್ಮ ಸ್ಥಳಕ್ಕೆ ತೆರಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಬೆಂಗಳೂರಿನ ಹಲವು ಕಡೆಗಳಲ್ಲಿ ಫುಲ್ ಟ್ರಾಫಿಕ್ ಜಾಮ್ ಉಲ್ಬಣಿಸಿದೆ.

ಏಕಾಏಕಿ 'ನಮ್ಮ ಮೆಟ್ರೋ' ಬಂದ್ ನಡೆಯುತ್ತಿರುವುದೇಕೆ?

ಏಕಾಏಕಿ 'ನಮ್ಮ ಮೆಟ್ರೋ' ಬಂದ್ ನಡೆಯುತ್ತಿರುವುದೇಕೆ?

ಕೈಗಾರಿಕಾ ಪಡೆ, ಮೆಟ್ರೋ ಸಿಬ್ಬಂದಿ ಜಗಳ ಅತಿರೇಕಕ್ಕೆ ಹೋಗುತ್ತಿದ್ದಂತೆಯೇ ಹಲಸೂರು ಪೊಲೀಸ್ ಠಾಣೆಯಲ್ಲಿ ಕೆಎಸ್ ಐಎಸ್ಎಫ್ ಸಿಬ್ಬಂದಿ, ನಮ್ಮ ಮೆಟ್ರೋ ಸಿಬ್ಬಂದಿಗಳ ವಿರುದ್ಧ ದೂರು ನೀಡಿದ್ದರು. ದೂರಿನನ್ವಯ ರಾಕೇಶ್ ಸೇರಿದಂತೆ ಹಲವು ಬಿಎಂಆರ್ ಸಿ ಎಲ್ ಸಿಬ್ಬಂದಿಗಳನ್ನು ಪೊಲೀಸರು ಬಂಧಿಸಿದ್ದು, ಇವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದೆ. ಈ ಕಾರಣಕ್ಕಾಗಿಯೇ ಮೆಟ್ರೋ ಬಂದ್ ಆಗಿದೆ.

'ನಮ್ಮ ಮೆಟ್ರೋ' ಸಿಬ್ಬಂದಿ ವಿರುದ್ಧ ಎಸ್ಮಾ ಜಾರಿಗೆ ಸರ್ಕಾರ ನಿರ್ಧಾರ?

'ನಮ್ಮ ಮೆಟ್ರೋ' ಸಿಬ್ಬಂದಿ ವಿರುದ್ಧ ಎಸ್ಮಾ ಜಾರಿಗೆ ಸರ್ಕಾರ ನಿರ್ಧಾರ?

'ನಮ್ಮ ಮೆಟ್ರೋ' ಸಿಬ್ಬಂದಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಶುಕ್ರವಾರ (ಜುಲೈ 7) ಮೆಟ್ರೋ ರೈಲು ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡು ಲಕ್ಷಾಂತರ ಪ್ರಯಾಣಿಕರಿಗೆ ತೊಂದರೆಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಅಗತ್ಯ ಸೇವಾ ನಿರ್ವಹಣಾ ಕಾಯ್ದೆ (ಏಸ್ಮಾ) ಜಾರಿಗೊಳಿಸಲು ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.

English summary
Namma metro services in bengaluru have stopped today, full demand to auto and cabs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X