ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ ಕಾರ್ಡ್; ಬಿಎಂಆರ್‌ಸಿಎಲ್‌ನಿಂದ ಮಹತ್ವದ ತೀರ್ಮಾನ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 22: ಬೆಂಗಳೂರು ಮೆಟ್ರೋ ರೈಲು ನಿಗಮ ನಮ್ಮ ಮೆಟ್ರೋ ಸ್ಮಾರ್ಟ್‌ ಕಾರ್ಡ್‌ಗಳ ಬಗ್ಗೆ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಿದೆ. ಪ್ರಸ್ತುತ ಕೋವಿಡ್ ಪರಿಸ್ಥಿತಿಯಲ್ಲಿ ಸ್ಮಾರ್ಟ್ ಕಾರ್ಡ್ ಇದ್ದವರು ಮಾತ್ರ ಮೆಟ್ರೋದಲ್ಲಿ ಸಂಚಾರ ನಡೆಸಬಹುದಾಗಿದೆ.

ನಮ್ಮ ಮೆಟ್ರೋ ಸ್ಮಾರ್ಟ್‌ ಕಾರ್ಡ್‌ಗಳ ಅವಧಿಯನ್ನು ಒಂದು ವರ್ಷದಿಂದ 10 ವರ್ಷಕ್ಕೆ ಏರಿಕೆ ಮಾಡಲು ಬಿಎಂಆರ್‌ಸಿಎಲ್ ಮುಂದಾಗಿದೆ. ಮೆಟ್ರೋ ಬಳಕೆದಾರರು ಕಾರ್ಡ್ ಬಳಕೆ ಹೆಚ್ಚು ಮಾಡಿರುವುದರಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ.

ನಮ್ಮ ಮೆಟ್ರೋ ಸ್ಮಾರ್ಟ್ ಕಾರ್ಡ್‌ಗೆ ಭಾರಿ ಬೇಡಿಕೆ ನಮ್ಮ ಮೆಟ್ರೋ ಸ್ಮಾರ್ಟ್ ಕಾರ್ಡ್‌ಗೆ ಭಾರಿ ಬೇಡಿಕೆ

ಕಾಂಟ್ಯಾಕ್ಟ್ ಲೆಸ್ ಪ್ರಯಾಣವನ್ನು ಉತ್ತೇಜಿಸುವ ಸಲುವಾಗಿ ಬಿಎಂಆರ್‌ಸಿಎಲ್ ಕಾರ್ಡ್‌ಗಳ ವ್ಯಾಲಿಡಿಟಿ ಹೆಚ್ಚಳ ಮಾಡಲು ತೀರ್ಮಾನಿಸಿದೆ. ಕೋವಿಡ್ ಪರಿಸ್ಥಿತಿಯಲ್ಲಿ ಮೆಟ್ರೋ ಕಾರ್ಡ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ.

ನಮ್ಮ ಮೆಟ್ರೋಕ್ಕೆ ರಕ್ಷಣಾ ಇಲಾಖೆ ಭೂಮಿ: ಚರ್ಚ್‌ನ ಅಕ್ರಮ ಸಂಪತ್ತು ಮುಟ್ಟುಗೋಲು ನಮ್ಮ ಮೆಟ್ರೋಕ್ಕೆ ರಕ್ಷಣಾ ಇಲಾಖೆ ಭೂಮಿ: ಚರ್ಚ್‌ನ ಅಕ್ರಮ ಸಂಪತ್ತು ಮುಟ್ಟುಗೋಲು

ಪ್ರಸ್ತುತ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ. ಬಿಎಂಆರ್‌ಸಿಎಲ್ ವೆಬ್ ಸೈಟ್‌ಗೆ ಭೇಟಿ ನೀಡುವ ಮೂಲಕ ಮೆಟ್ರೋ ನಿಲ್ದಾಣ ತಲುಪುದ 1 ಗಂಟೆ ಮೊದಲು ಕಾರ್ಡ್ ರಿಚಾರ್ಜ್ ಮಾಡಿಕೊಳ್ಳಬಹುದು.

ಮೊದಲ ದಿನ ನಮ್ಮ ಮೆಟ್ರೋದಲ್ಲಿ ಸಂಚಾರ ನಡೆಸಿದವರೆಷ್ಟು? ಮೊದಲ ದಿನ ನಮ್ಮ ಮೆಟ್ರೋದಲ್ಲಿ ಸಂಚಾರ ನಡೆಸಿದವರೆಷ್ಟು?

2030ರ ತನಕ ಅವಧಿ ಹೆಚ್ಚಳ

2030ರ ತನಕ ಅವಧಿ ಹೆಚ್ಚಳ

ಪ್ರಸ್ತುತ ನಮ್ಮ ಮೆಟ್ರೋ ಸ್ಮಾರ್ಟ್ ಕಾರ್ಡ್‌ಗಳ ಅವಧಿ ಒಂದು ವರ್ಷದ ತನಕ ಇದೆ. ಇದನ್ನು ಸೆಪ್ಟೆಂಬರ್ 19, 2030ರ ತನಕ ವಿಸ್ತರಣೆ ಮಾಡಲು ಬಿಎಂಆರ್‌ಸಿಎಲ್ ತೀರ್ಮಾನಿಸಿದೆ. ಕಾಂಟ್ಯಾಕ್ಟ್‌ ಲೆಸ್ ಟ್ರಾವೆಲ್ ಉತ್ತೇಜಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ.

ಮೆಟ್ರೋ ಸಂಚಾರ ಆರಂಭವಾಗಿದೆ

ಮೆಟ್ರೋ ಸಂಚಾರ ಆರಂಭವಾಗಿದೆ

ಕೋವಿಡ್ ಲಾಕ್‌ ಡೌನ್ ಅವಧಿಯಲ್ಲಿ ಸ್ಥಗಿತಗೊಂಡಿದ್ದ ನಮ್ಮ ಮೆಟ್ರೋ ಸಂಚಾರ ಸೆಪ್ಟೆಂಬರ್ 7ರಿಂದ ಆರಂಭವಾಗಿದೆ. ಮೆಟ್ರೋ ನಿಲ್ದಾಣದಲ್ಲಿ ಸದ್ಯ ಟೋಕನ್ ಕೊಡುವ ವ್ಯವಸ್ಥೆ ರದ್ದುಗೊಳಿಸಲಾಗಿದೆ. ಸ್ಮಾರ್ಟ್‌ ಕಾರ್ಡ್ ಇದ್ದವರು ಮಾತ್ರ ಮೆಟ್ರೋದಲ್ಲಿ ಸಂಚಾರ ನಡೆಸಲು ಅವಕಾಶ ನೀಡಲಾಗಿದೆ.

ಸ್ಮಾರ್ಟ್‌ ಕಾರ್ಡ್‌ಗೆ ಬೇಡಿಕೆ ಹೆಚ್ಚು

ಸ್ಮಾರ್ಟ್‌ ಕಾರ್ಡ್‌ಗೆ ಬೇಡಿಕೆ ಹೆಚ್ಚು

ಪ್ರಸ್ತುತ ಕಾರ್ಡ್‌ಗಳನ್ನು ಮಾತ್ರ ಬಳಕೆ ಮಾಡಬೇಕಿದೆ. ಆದ್ದರಿಂದ, ಮೆಟ್ರೋ ಕಾರ್ಡ್‌ಗಳಿಗೆ ಬೇಡಿಕೆ ಹೆಚ್ಚಿದೆ. ಸೆಪ್ಟೆಂಬರ್ 7 ರಿಂದ 15ರ ತನಕ 15,150 ಹೊಸ ಕಾರ್ಡ್‌ಗಳ ಖರೀದಿ ಆಗಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ. ಟೋಕನ್ ಕೊಡುವ ವ್ಯವಸ್ಥೆ ಸದ್ಯಕ್ಕೆ ಆರಂಭವಾಗುವುದು ಅನುಮಾನವಾಗಿದೆ.

Recommended Video

Chahal ಎಸೆತಕ್ಕೆ Sun Risers ತತ್ತರ!! | Oneindia Kannada
ಹಲವಾರು ನಿಯಮಗಳು

ಹಲವಾರು ನಿಯಮಗಳು

ನಮ್ಮ ಮೆಟ್ರೋ ರೈಲು ಸಂಚಾರಕ್ಕೆ ಹಲವಾರು ಷರತ್ತುಗಳನ್ನು ಹಾಕಲಾಗಿದೆ. ಒಮ್ಮೆ ಮೆಟ್ರೋ ನಿಲ್ದಾಣಕ್ಕೆ 50 ಜನರು ಮಾತ್ರ ಆಗಮಿಸಬೇಕು. ರೈಲಿನಲ್ಲಿ ಒಮ್ಮೆ 400 ಜನರು ಮಾತ್ರ ಸಂಚರಿಸಬೇಕು. ಪ್ರಸ್ತುತ ಬೆಳಗ್ಗೆ 7 ರಿಂದ ರಾತ್ರಿ 9ರ ತನಕ ಮಾತ್ರ ಮೆಟ್ರೋ ರೈಲು ಓಡುತ್ತಿದೆ.

English summary
To encourage contact less BMRCL decided to extend the validity of the Namma metro smart card till September 19, 2030.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X