ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ ಸ್ಮಾರ್ಟ್ ಕಾರ್ಡ್: ಯಾವ ನಗರದಲ್ಲಿ ಎಷ್ಟು ರಿಯಾಯಿತಿ?

|
Google Oneindia Kannada News

ಬೆಂಗಳೂರು, ಜನವರಿ 10: ನಮ್ಮ ಮೆಟ್ರೋ ಜನಪ್ರಿಯವಾದ ನಂತರ ಬೆಂಗಳೂರಿನಲ್ಲಿ ದೈನಂದಿನ ಕೆಲಸಗಳಿಗೆ ಸಂಚರಿಸಲು ಪ್ರಯಾಣಿಕರು ಹೆಚ್ಚಾಗಿ ಮೆಟ್ರೋ ರೈಲನ್ನು ನೆಚ್ಚಿಕೊಂಡಿದ್ದಾರೆ. ಇದಕ್ಕೆ ಕಾರಣ ನಮ್ಮ ಮೆಟ್ರೋ ತ್ವರಿತ ಪ್ರಯಾಣ ಹಾಗೂ ಅಂತಾರಾಷ್ಟ್ರೀಯ ಗುಣಮಟ್ಟದ ಸೇವೆಯನ್ನು ಪ್ರಯಾಣಿಕರಿಗೆ ನೀಡುತ್ತಿದೆ.

ಪ್ರತಿನಿತ್ಯ ಮೆಟ್ರೋದಲ್ಲಿ ಸಂಚರಿಸುವವರ ಅನುಕೂಲಕ್ಕೆ ಜಾರಿಗೆ ತಂದಿರುವ ಮೆಟ್ರೋ ಸ್ಮಾರ್ಟ್ ಕಾರ್ಡ್‌ನ ಶೇಕಡಾ ರಿಯಾಯಿತಿಯನ್ನು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಇತ್ತೀಚೆಗೆ ಶೇ 15 ರಿಂದ 5 ಕ್ಕೆ ಕಡಿತಗೊಳಿಸಿರುವುದು ಕಾರ್ಡ್ ಬಳಕೆದಾರರಿಗೆ ಬೇಸರ ತರಿಸಿದೆ. ಏಕೆಂದರೆ ಟಿಕೇಟ್ ಪಡೆದು ಪ್ರಯಾಣಿಸುವುದರಲ್ಲಿ ಹಾಗೂ ಕಾರ್ಡ್ ಪಡೆದು ಪ್ರಯಾಣಿಸುವುದರಲ್ಲಿ ಅಂತಾ ವ್ಯತ್ಯಾಸವಾಗುವುದಿಲ್ಲ. ಆದರೆ ದೇಶದ ಇತರ ಮಹಾನಗರಗಳಲ್ಲಿ ಶೇ 20 ರವೆರೆಗೂ ರಿಯಾಯಿತಿಯನ್ನು ನೀಡುತ್ತವೆ.

ಎಲ್ಲೆಲ್ಲಿ ಮೆಟ್ರೋ ಸೇವೆ?

ಎಲ್ಲೆಲ್ಲಿ ಮೆಟ್ರೋ ಸೇವೆ?

ಬೆಂಗಳೂರಿನ ಹಾಗೇ ದೇಶದ ಇತರ 9 ಮಹಾನಗರಿಗಳಲ್ಲಿ ಮೆಟ್ರೋ ರೈಲು ಸೌಲಭ್ಯವಿದೆ. ಎಲ್ಲ ಮೆಟ್ರೋಗಳು ದೈನಂದಿನ ಪ್ರಯಾಣಿಕರಿಗೆ ಅನುಕೂಲ ಆಗಲಿ ಎಂದು ಸ್ಮಾರ್ಟ್ ಕಾರ್ಡ್ ಪರಿಚಯಿಸಿವೆ. ಭಾರತದಲ್ಲಿ ಮೆಟ್ರೋ ರೈಲುಗಳನ್ನು ಹೊಂದಿರುವ ನಗರಗಳು

ಬೆಂಗಳೂರು

ಮುಂಬೈ

ದೆಹಲಿ

ಹೈದರಾಬಾದ್

ಚೆನ್ನೈ

ಗುರುಗ್ರಾಮ

ಕೊಚ್ಚಿ

ಕಲ್ಕತ್ತಾ

ಜೈಪುರ

ಲಕ್ನೋ

ಹೊಸ ವರ್ಷಕ್ಕೆ ಪ್ರಯಾಣಿಕರಿಗೆ ಆಘಾತ ನೀಡಿದ ನಮ್ಮ ಮೆಟ್ರೋಹೊಸ ವರ್ಷಕ್ಕೆ ಪ್ರಯಾಣಿಕರಿಗೆ ಆಘಾತ ನೀಡಿದ ನಮ್ಮ ಮೆಟ್ರೋ

ಎಷ್ಟೆಷ್ಟು ರಿಯಾಯಿತಿ?

ಎಷ್ಟೆಷ್ಟು ರಿಯಾಯಿತಿ?

ದೇಶದ ಎಲ್ಲ ಹತ್ತು ಮೆಟ್ರೋಗಳಲ್ಲಿಯೂ ಸ್ಮಾರ್ಟ್ ಕಾರ್ಡ್ ಸೌಲಭ್ಯವನ್ನು ನೀಡಲಾಗಿದೆ. ಇದರಿಂದ ಕಾರ್ಡ್ ಬಳಕೆದಾರರಿಗೆ ಹಣ ಉಳಿತಾಯವಾಗಲಿದೆ. ಕೊಚ್ಚಿ ಮೆಟ್ರೋ ಹೆಚ್ಚು ರಿಯಾಯಿತಿಯನ್ನು ತನ್ನ ಪ್ರಯಾಣಿಕರಿಗೆ ನೀಡಿ, ಅತಿ ಹೆಚ್ಚು ಡಿಸ್ಕೌಂಟ್ ನೀಡುವ ಮೆಟ್ರೋ ಎನಿಸಿದೆ. ಸ್ಮಾರ್ಟ್ ಕಾರ್ಡ್ ಮೇಲೆ ದೇಶದಲ್ಲೇ ಅತಿ ಕಡಿಮೆ ಡಿಸ್ಕೌಂಟ್ ನೀಡುವುದು ಬೆಂಗಳೂರು ಮೆಟ್ರೋ ಎನಿಸಿಕೊಂಡಿದೆ. ಹಾಗಾದರೆ ಯಾವ ಮೆಟ್ರೋ ಎಷ್ಟು ರಿಯಾಯಿತಿ ನೀಡುತ್ತದೆ ಎಂಬುದು ಇಲ್ಲಿದೆ ಮಾಹಿತಿ...

ಬೆಂಗಳೂರು 5%

ಮುಂಬೈ 15%

ದೆಹಲಿ 10%

ಹೈದರಾಬಾದ್ 10%

ಚೆನ್ನೈ 10%

ಗುರುಗ್ರಾಮ 10%

ಕೊಚ್ಚಿ 20%

ಕೋಲ್ಕತ್ತಾ 15%

ಜೈಪುರ 10%

ಲಕ್ನೋ 15%

ಜನಸಂದಣಿ ತಪ್ಪಿಸಲು

ಜನಸಂದಣಿ ತಪ್ಪಿಸಲು

ಶೇ 62 ರಷ್ಟು ಪ್ರಯಾಣಿಕರು

ಬೆಂಗಳೂರಿನಲ್ಲಿ ಮೆಟ್ರೋ ಜನಪ್ರಿಯವಾದ ನಂತರ ದೈನಂದಿನ ಕೆಲಸಗಳಿಗೆ ಅಡ್ಡಾಡುವ ಪ್ರಯಾಣಿಕರು ಮೆಟ್ರೋ ರೈಲು ಹೆಚ್ಚು ನೆಚ್ಚಿಕೊಂಡರು. ಹೀಗಾಗಿ ಟಿಕೆಟ್ ಕೌಂಟರ್‌ನಲ್ಲಿ ಜನಸಂದಣಿ ತಪ್ಪಿಸಲು ಮೆಟ್ರೋ ಕಾರ್ಡ್ ಜಾರಿಗೆ ಬಂತು. ಇದಕ್ಕೆ ಪ್ರಯಾಣಿಕ ಕನಿಷ್ಠ 50 ರುಪಾಯಿ ನಿಶ್ಚಿತ ಮೊತ್ತ ಪಾವತಿಸಿ, ಕಾರ್ಡ್ ಪಡೆಯಬೇಕು. ತನಗೆ ಎಷ್ಟು ಬೇಕೋ ಅಷ್ಟು ಮೊತ್ತವನ್ನು ರಿಚಾರ್ಜ್ ಮಾಡಿಸಿ, ಆ ಮೊತ್ತ ಮುಗಿಯುವವರೆಗೂ ಬಳಸಬಹುದು. ಸದ್ಯ ಶೇ 62 ರಷ್ಟು ಪ್ರಯಾಣಿಕರು ಮೆಟ್ರೋ ಸ್ಮಾರ್ಟ್ ಕಾರ್ಡ್ ಹೊಂದಿದ್ದಾರೆ.

 ಮೆಟ್ರೋ ಸ್ಮಾರ್ಟ್ ಕಾರ್ಡ್‌ ರಿಯಾಯಿತಿ ಕಡಿತ; ಪ್ರಯಾಣಿಕರು ಏನಂದ್ರು? ಮೆಟ್ರೋ ಸ್ಮಾರ್ಟ್ ಕಾರ್ಡ್‌ ರಿಯಾಯಿತಿ ಕಡಿತ; ಪ್ರಯಾಣಿಕರು ಏನಂದ್ರು?

ರಿಯಾಯಿತಿ ಕಡಿತ

ರಿಯಾಯಿತಿ ಕಡಿತ

ಮೆಟ್ರೋ ಸ್ಮಾರ್ಟ್ ಕಾರ್ಡ್ ಬಂದ ಮೇಲೆ ಕಾರ್ಡ್ ಪಡೆದು ಪ್ರಯಾಣಿಸುವವರಿಗೆ ಹಾಗೂ ಟಿಕೆಟ್ (ಕಾಯಿನ್) ತೆಗೆದುಕೊಂಡು ಪ್ರಯಾಣಿಸುವವರ ನಡುವೆ ವ್ಯತ್ಯಾಸ ಆಯಿತು. ಕಾರ್ಡ್‌ದಾರರಿಗೆ ಶೇ 15 ರಷ್ಟು ರಿಯಾಯಿತಿ ದೊರೆಯುತ್ತಿತ್ತು. ಆದರೆ ಬಿಎಂಆರ್‌ಸಿಎಲ್ ಈ ರಿಯಾಯಿತಿಯನ್ನು ಶೇ 5 ಕ್ಕೆ ಇಳಿಸಿ ಆದೇಶ ಹೊರಡಿಸಿದೆ. ಮೆಟ್ರೋ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ ಹಾಗೂ ಮೆಟ್ರೋ ಸೇವೆ ವಿಸ್ತರಣೆ ಮಾಡಲು ಈ ಕ್ರಮ ಅವಶ್ಯಕವಾಗಿತ್ತು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

4.5 ಲಕ್ಷ ಪ್ರಯಾಣಿಕರು

4.5 ಲಕ್ಷ ಪ್ರಯಾಣಿಕರು

ಯಲೇಚನಹಳ್ಳಿ-ನಾಗಸಂದ್ರ ಹಾಗೂ ಮೈಸೂರು ರಸ್ತೆ-ಬೈಯಪ್ಪನಹಳ್ಳಿ ಮಾರ್ಗದಲ್ಲಿ ಪ್ರತಿದಿನ ಸುಮಾರು 4.5 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಇದರಿಂದ ಮೆಟ್ರೋ ಲಾಭದಲ್ಲೇ ಇದೆ. ಹೀಗಿದ್ದಾಗೂ 'ದಿನನಿತ್ಯ ಸಂಚರಿಸುವ ಪ್ರಯಾಣಿಕರಿಗೆ ಕಾರ್ಡ್ ಮೇಲೆ ರಿಯಾಯಿತಿ ಕಡಿತ ಮಾಡಿರುವುದು ಸರಿಯಲ್ಲ' ಎಂಬ ಅಭಿಪ್ರಾಯವನ್ನು ಹಲವು ಪ್ರಯಾಣಿಕರು ವ್ಯಕ್ತಪಡಿಸಿದ್ದಾರೆ.

English summary
Namma Metro Smart Card: How much discount in Indias 10 Metros. Bengaluru's Namma metro is Minimum Discount On Smart Card.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X