ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ಕಾರಿನ ಮೇಲೆ ಬಿದ್ದ ನಮ್ಮ ಮೆಟ್ರೋ ಬ್ಯಾರಿಕೇಡ್‌

|
Google Oneindia Kannada News

ಬೆಂಗಳೂರು, ಜನವರಿ 23; ನಮ್ಮ ಮೆಟ್ರೋ ಕಾಮಗಾರಿ ಸ್ಥಳದಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ ಕಾರಿನ ಮೇಲೆ ಬಿದ್ದ ಘಟನೆ ನಡೆದಿದೆ. ಮೆಟ್ರೋ ಪಿಲ್ಲರ್‌ ನಿರ್ಮಾಣದ ಅವಘಡ ಪ್ರಕರಣ ನಡೆದ ಬೆನ್ನಲ್ಲೇ ಮತ್ತೊಂದು ಘಟನೆಯಾಗಿದೆ.

ದೊಡ್ಡನೆಕ್ಕುಂದಿ-ಮಹದೇವಪುರ ಮಾರ್ಗದಲ್ಲಿ ಈ ಘಟನೆ ನಡೆದಿದೆ. ನಮ್ಮ ಮೆಟ್ರೋ ಕಾಮಗಾರಿ ಸ್ಥಳದಲ್ಲಿ ಆಳವಡಿಕೆ ಮಾಡಿದ್ದ ಬ್ಯಾರಿಕೇಡ್ ಹುಂಡೈ ಐ10 ಕಾರಿನ ಮೇಲೆ ಉರುಳಿ ಬಿದ್ದಿದೆ.

Namma Metro; ವೈಟ್‌ಫೀಲ್ಡ್‌, ಕೆ. ಆರ್. ಪುರ ಮಾರ್ಗ, ಓಡಲಿವೆ 7 ರೈಲು Namma Metro; ವೈಟ್‌ಫೀಲ್ಡ್‌, ಕೆ. ಆರ್. ಪುರ ಮಾರ್ಗ, ಓಡಲಿವೆ 7 ರೈಲು

ಬ್ಯಾರಿಕೇಡ್ ಬಿದ್ದಿದ್ದರಿಂದ ಕಾರು ಜಖಂಗೊಂಡಿದೆ. ಕಾರಿನಲ್ಲಿದ್ದ ನಾಲ್ವರು ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ. ನಮ್ಮ ಮೆಟ್ರೋ ನಿರ್ಮಾಣ ಸ್ಥಳದಲ್ಲಿನ ಸುರಕ್ಷತೆ ಬಗ್ಗೆ ಮತ್ತೆ ಜನರು ಪ್ರಶ್ನೆ ಮಾಡುವಂತೆ ಆಗಿದೆ.

ವೈಟ್‌ಫೀಲ್ಡ್-ಕೆಆರ್ ಪುರಂ ಮೆಟ್ರೋ ಮಾರ್ಗ: ಯಾವ ಟೆಕ್‌ ಪಾರ್ಕ್‌ಗಳಿಗೆ ವಾಕ್‌ವೇ? ಎಲ್ಲಿ ವೆಬ್ ಗಿರ್ಡರ್? ಪರಿಶೀಲನೆ, ಮಾಹಿತಿವೈಟ್‌ಫೀಲ್ಡ್-ಕೆಆರ್ ಪುರಂ ಮೆಟ್ರೋ ಮಾರ್ಗ: ಯಾವ ಟೆಕ್‌ ಪಾರ್ಕ್‌ಗಳಿಗೆ ವಾಕ್‌ವೇ? ಎಲ್ಲಿ ವೆಬ್ ಗಿರ್ಡರ್? ಪರಿಶೀಲನೆ, ಮಾಹಿತಿ

Namma Metro Site barricade Falls On Car At Bengaluru

ಕಾರ್ತಿಕ್ ನಗರದಿಂದ ಕೆ. ಆರ್. ಪುರಂ ಕಡೆ ಸಾಗುವಾಗ ಈ ಅಪಘಾತ ನಡೆದಿದೆ. ಕಾರು ಚಾಲಕ ಸಂತೋಷ್ ಕುಟುಂಬಸ್ಥರ ಜೊತೆ ಹೋಗುವಾಗ ರಸ್ತೆಯ ಪಕ್ಕದಲ್ಲಿ ಅಳವಡಿಕೆ ಮಾಡಿದ್ದ ಬ್ಯಾರಿಕೇಡ್ ಕಾರಿನ ಮೇಲೆ ಬಿದ್ದಿದೆ.

ಮೆಟ್ರೋ ಪಿಲ್ಲರ್ ದುರಂತ: ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್‌ ಮೆಟ್ರೋ ಪಿಲ್ಲರ್ ದುರಂತ: ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್‌

ಘಟನಾ ಸ್ಥಳದಲ್ಲಿದ್ದ ಸಂಚಾರಿ ಪೊಲೀಸ್‌ ಜನವರಿ 21ರಂದು ಭಾರೀ ಗಾಳಿಯ ಹಿನ್ನಲೆ ಬ್ಯಾರಿಕೇಡ್ ಬಿದ್ದಿತ್ತು. ಬಳಿಕ ಅದನ್ನು ನಿಲ್ಲಿಸಲಾಗಿತ್ತು, ಭಾನುವಾರ ಮಧ್ಯಾಹ್ನ 3.30ರ ವೇಳಗೆ ಅದು ಮತ್ತೆ ಬಿದ್ದಿದೆ ಎಂದು ಹೇಳಿದ್ದಾರೆ.

ಇಂಜಿನಿಯರ್ ನಿರ್ಲಕ್ಷ್ಯ ಕಾರಣ; ನಮ್ಮ ಮೆಟ್ರೋ ನಿರ್ಮಾಣ ಹಂತದ ಪಿಲ್ಲರ್ ಕುಸಿದು ತಾಯಿ, ಮಗು ಪ್ರಾಣ ಕಳೆದುಕೊಂಡ ಪ್ರಕರಣದ ಕುರಿತು ಐಐಎಸ್‌ಸಿ ವರದಿ ನೀಡಿದೆ. ಇಂಜಿನಿಯರ್‌ಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಐಐಎಸ್‌ಸಿಯ ವಿಜ್ಞಾನಿ ಡಾ. ಚಂದ್ರ ಕಿಶನ್ ಹೇಳಿದ್ದಾರೆ.

ಘಟನೆ ಕುರಿತು ವರದಿ ನೀಡಲು ಐಐಎಸ್‌ಸಿಗೆ ಸೂಚನೆ ನೀಡಲಾಗಿತ್ತು. ಶೇ 80ರಷ್ಟು ತಾಂತ್ರಿಕ ತನಿಖೆಯನ್ನು ಪೂರ್ಣಗೊಳಿಸಲಾಗಿದೆ. ಇನ್ನೂ ಮೂರ್ನಾಲ್ಕು ದಿನದಲ್ಲಿ ತಜ್ಞರು ಸಂಪೂರ್ಣ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ.

English summary
Family had a narrow escape after a barricade put up at the Namma Metro construction site fell on their car at Doddanekundi junction, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X