ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೇರಳೆ ಮಾರ್ಗದಲ್ಲಿ ಜ.31ರಂದು ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

|
Google Oneindia Kannada News

ಬೆಂಗಳೂರು,ಜನವರಿ 29: ಜನವರಿ 31ರಂದು ನೇರಳೆ ಮಾರ್ಗದ ಟ್ರಿನಿಟಿ ಮತ್ತು ಹಲಸೂರು ಮೆಟ್ರೋ ನಿಲ್ದಾಣಗಳ ನಡುವೆ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ.

ಈ ಮಾರ್ಗದಲ್ಲಿ ದುರಸ್ತಿ ಕಾಮಗಾರಿಯನ್ನು ನಿರ್ವಹಿಸಲು ಮೆಟ್ರೋ ಸೇವೆಯನ್ನು ನೇರಳೆ ಮಾರ್ಗದಲ್ಲಿ ಬೆಳಗ್ಗೆ 7 ರಿಂದ 9 ಗಂಟೆಯವರೆಗೆ ಅಂದರೆ 2 ಗಂಟೆಗಳ ಕಾಲ ಸೇವೆ ಸ್ಥಗಿತಗೊಳಿಸಲಾಗುತ್ತದೆ.

ನಮ್ಮ ಮೆಟ್ರೋ ಆಸನಗಳ ಪೂರ್ಣ ಪ್ರಮಾಣದ ಬಳಕೆಗೆ ಅನುಮತಿ ಕೋರಿ ಬಿಎಂಆರ್‌ಸಿಎಲ್ ಪತ್ರನಮ್ಮ ಮೆಟ್ರೋ ಆಸನಗಳ ಪೂರ್ಣ ಪ್ರಮಾಣದ ಬಳಕೆಗೆ ಅನುಮತಿ ಕೋರಿ ಬಿಎಂಆರ್‌ಸಿಎಲ್ ಪತ್ರ

ಎಂಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ವಾಣಿಜ್ಯ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ.ಈ ಅವಧಿಯಲ್ಲಿ ಮೆಟ್ರೋ ಸೇವೆಯು ಪ್ರಯಾಣಿಕರಿಗೆ ಎಂಜಿ ರಸ್ತೆ ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ಲಭ್ಯವಿರುತ್ತದೆ.

Namma Metro Services On Purple Line To Be Affected On January 31

ಈ ದುರಸ್ತಿ ಕಾಮಗಾರಿ ಪೂರ್ಣಗೊಂಡ ನಂತರ ಬೆಳಗ್ಗೆ 9 ಗಂಟೆಯಿಂದ ಎಂದಿನಂತೆ ಮೆಟ್ರೋ ಸೇವೆಯು ನೇರಳೆ ಮಾರ್ಗದಲ್ಲಿ ಪ್ರಯಾಣಿಕರಿಗೆ ಪುನರಾರಂಭಗೊಳ್ಳುತ್ತದೆ. ಹಸಿರು ಮಾರ್ಗದಲ್ಲಿ ಈ ದಿನದಂದು ಮೆಟ್ರೋ ಸೇವೆ ಎಂದಿನಂತೆ ಇರುತ್ತದೆ.

ಈ ವರ್ಷ ನಮ್ಮ ಮೆಟ್ರೋ ಹಾಗೂ ಬಿಎಂಟಿಸಿಗೆ ಒಂದು ದೇಶ ಒಂದು ಕಾರ್ಡ್ ಜಾರಿಗೆ ಬರಲಿದೆ.ಈ ಕುರಿತು ರಾಜ್ಯಪಾಲ ವಿಆರ್ ವಾಲಾ ತಿಳಿಸಿದ್ದಾರೆ. ಈಗಾಗಲೇ ಉದ್ದೇಶಿಸಲಾಗಿರುವ ಒಂದು ದೇಶ ಒಂದು ಕಾರ್ಡ್ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ.

ರಾಜ್ಯ ಸರ್ಕಾರ ಬೆಂಗಳೂರು ಮೆಟ್ರೋ ರೈಲು ನಿಗಮದ ವತಿಯಿಂದ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲಾಗುವುದು, ಅಲ್ಲದೆ, ಹಂತ 2 ಹಾಗೂ ಹಂತ 2ಎ ಕಾಮಗಾರಿಗಳಿಗಳು ಪ್ರಗತಿಯಲ್ಲಿದ್ದು, 2022ರೊಳಗೆ 75 ಕಿ.ಮೀಗಳಷ್ಟು ಮೆಟ್ರೋ ಮಾರ್ಗವನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಬಿಬಿಎಂಪಿ ಅಧಿನಿಯಮವನ್ನು ಬೆಂಗಳೂರು ನಗರದ ಉತ್ತಮ ಆಡಳಿತಕ್ಕಾಗಿ ರಚಿಸಲಾಗಿದೆ. ಅಲ್ಲದೆ ನಗರದ ಜೀವನ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಬೆಂಗಳೂರು ಮಿಷನ್ 2022 ಪ್ರಾರಂಭಿಸಲಾಗಿದೆ.

English summary
Namma Metro operations on the purple line will be disrupted for two hours on January 31. Services between MG road and Byappanahalli Will be suspended fro 7 am to 9 am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X