• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಸಿರು ಮಾರ್ಗದ ನಮ್ಮ ಮೆಟ್ರೋ ಪ್ರಯಾಣಿಕರ ಗಮನಕ್ಕೆ

|

ಬೆಂಗಳೂರು, ಸೆಪ್ಟೆಂಬರ್ 23 : ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಸೆಪ್ಟೆಂಬರ್ 27 ಮತ್ತು 28ರಂದು ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ನಾಗಸಂದ್ರದಿಂದ ಹೊರಡುವ ರೈಲು ಆರ್. ವಿ. ರಸ್ತೆ ತನಕ ಮಾತ್ರ ಸಂಚಾರ ನಡೆಸಲಿದೆ.

ಬಿಎಂಆರ್‌ಸಿಎಲ್ ಈ ಕುರಿತು ಮಾಹಿತಿ ನೀಡಿದೆ. ಭಾನುವಾರ ಮತ್ತು ಸೋಮವಾರ ನಮ್ಮ ಮೆಟ್ರೋ ರೈಲು ನಾಗಸಂದ್ರ ಮತ್ತು ಆರ್. ವಿ. ರಸ್ತೆ ತನಕ ಮಾತ್ರ ಸಂಚಾರ ನಡೆಸಲಿದೆ. ಆರ್. ವಿ. ರಸ್ತೆ-ಯಲಚೇನಹಳ್ಳಿ ನಡುವೆ ರೈಲು ಓಡುವುದಿಲ್ಲ.

ಮೆಟ್ರೋ ಕಾರ್ಡ್; ಬಿಎಂಆರ್‌ಸಿಎಲ್‌ನಿಂದ ಮಹತ್ವದ ತೀರ್ಮಾನ

ಯಲಚೇನಹಳ್ಳಿ-ಅಂಜನಾಪುರ ನಡುವಿನ ಮೆಟ್ರೋ ಕೆಲಸಗಳ ಹಿನ್ನಲೆಯಲ್ಲಿ ಎರಡು ದಿನಗಳ ಕಾಲ ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಸೆ. 27 ಮತ್ತು 28ರಂದು ಬೆಳಗ್ಗೆ 7 ರಿಂದ ರಾತ್ರಿ 9ರ ತನಕ ನಾಗಸಂದ್ರ- ಆರ್. ವಿ. ರಸ್ತೆ ತನಕ ಮಾತ್ರ ರೈಲು ಸಂಚರಿಸಲಿದೆ.

ನಮ್ಮ ಮೆಟ್ರೋ ಸ್ಮಾರ್ಟ್ ಕಾರ್ಡ್‌ಗೆ ಭಾರಿ ಬೇಡಿಕೆ

ಸೆಪ್ಟೆಂಬರ್ 29ರ ಬೆಳಗ್ಗೆ 7 ಗಂಟೆಯಿಂದ ಯಲಚೇನಹಳ್ಳಿ ರೈಲು ನಿಲ್ದಾಣದಿಂದ ಮೆಟ್ರೋ ರೈಲು ಸಂಚಾರ ನಡೆಸಲಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ. ಬೈಯಪ್ಪನಹಳ್ಳಿ-ಮೈಸೂರು ರಸ್ತೆ ನಡುವಿನ ನೇರಳೆ ಮಾರ್ಗದ ಸಂಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

7 ದಿನ ಮೆಟ್ರೋ ಕಾರ್ಡ್‌ ಬಳಸಿಲ್ಲ ಎಂದರೆ ಹಣ ಕಡಿತ

ಪ್ರಾಯೋಗಿಕ ಸಂಚಾರ ನಡೆಯುತ್ತಿದೆ

ಪ್ರಾಯೋಗಿಕ ಸಂಚಾರ ನಡೆಯುತ್ತಿದೆ

ಯಲಚೇನಹಳ್ಳಿ-ಅಂಜನಾಪುರ ನಡುವೆ ನಮ್ಮ ಮೆಟ್ರೋ ಪ್ರಾಯೋಗಿಕ ಸಂಚಾರ ನಡೆಯುತ್ತಿದೆ. ನಮ್ಮ ಮೆಟ್ರೋ ಯೋಜನೆಯ 2ನೇ ಹಂತದ ಮೊದಲ ವಿಸ್ತರಿತ ಮಾರ್ಗವಿದಾಗಿದೆ. ರೀಚ್ 4ಬಿ ಮಾರ್ಗ 6.29 ಕಿ. ಮೀ. ದೂರವಿದೆ. ನವೆಂಬರ್‌ನಿಂದ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾಗಲಿದೆ.

ಒಟ್ಟು 5 ನಿಲ್ದಾಣಗಳು

ಒಟ್ಟು 5 ನಿಲ್ದಾಣಗಳು

ಈ ಮಾರ್ಗ ಪೂರ್ಣಗೊಂಡರೆ ನಾಗಸಂದ್ರದಿಂದ ಹೊರಡುವ ರೈಲು ಅಂಜನಾಪುರ ತನಕ ಸಂಚಾರ ನಡೆಸಲಿದೆ. ಯಲಚೇನಹಳ್ಳಿ ಬಳಿಕ ಕೋಣನಕುಂಟೆ ಕ್ರಾಸ್, ದೊಡ್ಡಕಲ್ಲಸಂದ್ರ, ವಜ್ರಹಳ್ಳಿ, ತಲಘಟ್ಟಪುರ ಮತ್ತು ಅಂಜನಾಪುರ ನಿಲ್ದಾಣವನ್ನು ಮಾರ್ಗ ಒಳಗೊಂಡಿದೆ.

ಅಂತಿಮ ಹಂತದ ಕಾಮಗಾರಿ

ಅಂತಿಮ ಹಂತದ ಕಾಮಗಾರಿ

ಯಲಚೇನಹಳ್ಳಿ-ಅಂಜನಾಪುರ ಮಾರ್ಗದಲ್ಲಿನ ನಿಲ್ದಾಣಗಳಲ್ಲಿನ ಟಿಕೆಟ್ ಕೌಂಟರ್, ಗ್ರಾಹಕ ಸೇವಾ ಕೇಂದ್ರಗಳ ನಿರ್ಮಾಣ ನಡೆಯುತ್ತಿದೆ. ಹಳಿಗಳ ಅಗಲ ಪರೀಕ್ಷೆ ನಂತರ ರೈಲ್ವೆ ಇಲಾಖೆಯ ಸುರಕ್ಷತಾ ಆಯುಕ್ತರು ಪರೀಕ್ಷಾರ್ಥ ಸಂಚಾರವನ್ನು ಆರಂಭಿಸಿದ್ದಾರೆ. 2016ರಲ್ಲಿ ಆರಂಭವಾದ ಕಾಮಗಾರಿ ಮುಗಿಯುತ್ತಾ ಬಂದಿದೆ.

  ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡ್ಲಿ | Oneindia Kannada
  ಪ್ರಯಾಣಿಕರ ಸಂಖ್ಯೆ ಹೆಚ್ಚಳ

  ಪ್ರಯಾಣಿಕರ ಸಂಖ್ಯೆ ಹೆಚ್ಚಳ

  5 ತಿಂಗಳ ಬಳಿಕ ಸೆಪ್ಟೆಂಬರ್ 7ರಿಂದ ನಮ್ಮ ಮೆಟ್ರೋ ರೈಲಿನ ಸಂಚಾರ ಬೆಂಗಳೂರಿನಲ್ಲಿ ಆರಂಭವಾಗಿದೆ. ಸೆಪ್ಟೆಂಬರ್ 21ರ ಸೋಮವಾರ ಮೆಟ್ರೋದಲ್ಲಿ 44,030 ಜನರು ಸಂಚಾರ ನಡೆಸಿದ್ದಾರೆ. ಮಂಗಳವಾರ 43,057 ಜನರು ಪ್ರಯಾಣ ಮಾಡಿದ್ದಾರೆ. ಮೆಟ್ರೋ ಸಂಚಾರ ಆರಂಭವಾದ ಬಳಿಕ ಅತಿ ಹೆಚ್ಚು ಜನರು ಸಂಚಾರ ನಡೆಸಿದ್ದು ಈ ವಾರದಲ್ಲಿ ಮಾತ್ರ.

  English summary
  Due to ongoing pre-commissioning works Namma Metro services between R. V. Road and Yelachenahalli stations in the green line to closed on September 27 and 28, 2020.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X